ಭಾರತೀಯ ಆಹಾರ ನಿಗಮ ಮಂಡಳಿಯಲ್ಲಿ ಈ ಒಂದು ಹುದ್ದೆ ಖಾಲಿ ಇದ್ದು. ಇಲ್ಲಿ ಗ್ರೂಪ್ B, ಗ್ರೂಪ್ C ಹಾಗೂ ಗ್ರೂಪ್ D, ಹುದ್ದೆಗಳು ಖಾಲಿ ಇದೆ, ಒಟ್ಟಾರೆಯಾಗಿ ಇಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಖ್ಯೆ ನೋಡುವುದಾದರೆ 4710 ಹುದ್ದೆಗಳು. ಹೌದು ಇಷ್ಟು ಹುದ್ದೆಗಳು ಖಾಲಿ ಇದೆ. ಹಾಗಾಗಿ ನಿಮಗೆ ಯಾವ ಹುದ್ದೆ ಬೇಕೋ ಅದನ್ನು ಆಯ್ಕೆ ಮಾಡಿ ಕೊಂಡು ನೀವು ಆನ್ಲೈನ್ ಮೂಲಕ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾರೆಲ್ಲ ಅರ್ಹರು ಹಾಗೂ ಯಾವ ದಿನಾಂಕ ದಂದು ಈ ಅರ್ಜಿ ಪ್ರಾರಂಭವಾಗುತ್ತದೆ ಹಾಗೂ ಕೊನೆಯ ದಿನಾಂಕ ಯಾವುದು ಹಾಗೂ ಅರ್ಜಿ ಶುಲ್ಕ ಎಷ್ಟು ಇರುತ್ತದೆ ಹಾಗೂ ಅರ್ಜಿಯನ್ನು ಹಾಕಬೇಕು ಎಂದರೆ ಯಾವ ವಿದ್ಯಾರ್ಹತೆಯನ್ನು ಪಡೆದು ಕೊಂಡಿರಬೇಕು ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾ ಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ತಿಳಿಯೋಣ.
ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!
* ಮೊದಲನೆಯದಾಗಿ ಈ ಒಂದು ಅರ್ಜಿಯನ್ನು ನೀವು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ.
* ಇಲ್ಲಿ SC ಹಾಗೂ ST ಹಾಗೂ PWD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಬದಲಿಗೆ OBC / UR / EWS ಇತರೆ ವರ್ಗದವರಿಗೆ 1000 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.
* ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 35 ವರ್ಷ ಒಳಗಿನವರು ಇದಕ್ಕೆ ಅರ್ಜಿಯನ್ನು ಸಲ್ಲಿಸ ಬಹುದು.
* ಈ ಒಂದು ಹುದ್ದೆಗೆ ಪುರುಷರು ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.
* ಈ ಒಂದು ಹುದ್ದೆಗೆ ವಯಸ್ಸಿನ ಸಡಿಲಿಕೆ ನೋಡುವುದಾದರೆ
• PWD – ಜನರಲ್ ವರ್ಗದವರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
• SC ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
• ಹಾಗೂ OBC, PWD ಅಭ್ಯರ್ಥಿಗಳಿಗೆ 13 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
• ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಯಾವ ರೀತಿಯಾಗಿ ಇರುತ್ತದೆ ಎಂದು ನೋಡುವುದಾದರೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅಂದರೆ ಆನ್ಲೈನ್ ಕಂಪ್ಯೂಟರ್ ಪರೀಕ್ಷೆ ಮೂಲಕ ಹಾಗೂ ನೇರವಾಗಿ ಸಂದರ್ಶನದ ಮೂಲಕ ಹಾಗೂ ತರಬೇತಿ ಯನ್ನು ಕೊಡುವುದರ ಮೂಲಕ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
• ಹಾಗೂ ಇಲ್ಲಿ ಯಾವ ವಿಷಯದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ನೋಡುವುದಾದರೆ.
* ಸಂಖ್ಯಾತ್ಮಕ, ಯೋಗ್ಯತೆ ಇದು 35 ಅಂಕಗಳಿಗೆ ಇರುತ್ತದೆ.
* ತಾರ್ಕಿಕ ಸಾಮರ್ಥ್ಯ ಇದು ಕೂಡ 35 ಅಂಕಗಳಿಗೆ ಇರುತ್ತದೆ.
* ಆಂಗ್ಲ ಭಾಷೆ 30 ಅಂಕಗಳಿಗೆ ಇರುತ್ತದೆ.
ಒಟ್ಟು ಇಲ್ಲಿ 100 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಒಟ್ಟು 60 ನಿಮಿಷಗಳ ಕಾಲ ಈ ಒಂದು ಪರೀಕ್ಷೆ ನಡೆಯುತ್ತದೆ.
• ಇಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ ನೋಡುವುದಾದರೆ 04/10/2023.
• ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನೋಡುವುದಾದರೆ 28/10/2023.
• ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಇಲಾಖೆಯ ಮೂಲ ವೆಬ್ಸೈಟ್ ನಲ್ಲಿ ಹೋಗಿ ಸಂಪೂರ್ಣವಾಗಿ ಆನ್ಲೈನ್ ಮೂಲಕ ನೀವು ಇಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಬದಲಿಗೆ ಯಾವುದೇ ರೀತಿಯ ಆಫ್ಲೈನ್ ಅರ್ಜಿ ಸಲ್ಲಿಕೆ ಇರುವುದಿಲ್ಲ.