ಕೆಲವೊಂದಷ್ಟು ಜನರಿಗೆ ಯಾವುದೇ ಸಿಹಿ ಪದಾರ್ಥವನ್ನು ತಿಂದರೆ ಸಾಕು, ತಕ್ಷಣವೇ ಹಲ್ಲು ನೋವಿನ ಸಮಸ್ಯೆ ಬರುತ್ತದೆ. ಹೌದು ಹಲ್ಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ರಾತ್ರಿ ಹೊತ್ತು ಹಾಗಾಗಿ ಆ ಸಮಯದಲ್ಲಿ ಹಲ್ಲು ನೋವು ಬಂದರೆ ಯಾವ ಒಂದು ವಿಧಾನವನ್ನು ಅನುಸರಿಸಿ ಅದನ್ನು ದೂರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ಕೆಲವೊಂದಷ್ಟು ಜನಕ್ಕೆ ತಿಳಿಯುವುದಿಲ್ಲ.
ಅದರಲ್ಲೂ ಕೆಲವೊಂದಷ್ಟು ಜನ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಈ ಹಲ್ಲು ನೋವಿನ ಸಮಸ್ಯೆ ಬರಬಾರದು ಎಂದು ಸಹ ಹೇಳುವಂತಹ ಮಾತನ್ನು ನೀವೆಲ್ಲರೂ ಕೇಳಿರುತ್ತೀರಿ. ಅಷ್ಟರಮಟ್ಟಿಗೆ ಇದು ಪ್ರತಿಯೊಬ್ಬರಿಗೂ ನೋವನ್ನು ಕೊಡುತ್ತದೆ. ಹಾಗಾಗಿ ಈ ಒಂದು ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡುವುದು ತಪ್ಪು.
2 ರೂ ಯಲ್ಲಿ ಕಿಡ್ನಿ ಸ್ಟೋನ್ ಮಂಗಮಾಯ.!
ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಹಲ್ಲು ನೋವಿನ ಸಮಸ್ಯೆ ಬಂದ ತಕ್ಷಣ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿದರೆ ಸಾಕು ನಿಮ್ಮ ಹಲ್ಲು ನೋವಿನ ಸಮಸ್ಯೆ ದೂರವಾಗುತ್ತದೆ ಜೊತೆಗೆ ಬಾಯಿಂದ ಬರುವಂತಹ ದುರ್ವಾಸನೆಯೂ ಕೂಡ ದೂರವಾಗುತ್ತದೆ.
ಅದರಲ್ಲೂ ಹೆಚ್ಚಿನ ಜನ ಆಸ್ಪತ್ರೆಗಳಿಗೆ ಹೋಗಿ ಎಷ್ಟೇ ಹಲ್ಲಿನ ಚಿಕಿತ್ಸೆಯನ್ನು ಪಡೆದುಕೊಂಡರು ಸಹ ಸ್ವಲ್ಪ ದಿನದವರೆಗೆ ಸರಿಯಿದ್ದು ಆನಂತರ ಮತ್ತೆ ಹಲ್ಲು ನೋವಿನ ಸಮಸ್ಯೆ ಉಂಟಾಗುತ್ತದೆ ಈ ಒಂದು ಸಮಸ್ಯೆ ಬೆನ್ನು ಹತ್ತಿದ ಬೇತಾಳದಂತೆ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದೇ ಹೇಳಬಹುದು.
ಹಾಗಾದರೆ ಹಲ್ಲು ನೋವಿನ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಒಂದು ಮನೆ ಮದ್ದನ್ನು ಮಾಡುವುದು ಹಾಗೂ ಆ ಮನೆಮದ್ದನ್ನು ಮಾಡುವುದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ನೋಡುವುದಾದರೆ.
* ಅರಿಶಿನದ ಪುಡಿ
* ಸ್ಪಟಿಕದ ಪುಡಿ
ಇವೆರಡು ಪದಾರ್ಥಗಳು ಇದ್ದರೆ ಸಾಕು ನಿಮ್ಮ ಹಲ್ಲು ನೋವಿನ ಸಮಸ್ಯೆ ಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.
ಹೌದು ಅರಿಶಿನದಲ್ಲಿ ಆಂಟಿ ಇಂಫ್ಲಾಮೇಟರಿ, ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್ ಇದ್ದು ಇದು ನಮ್ಮ ಹಲ್ಲಿನಲ್ಲಿರುವಂತಹ ಎಲ್ಲಾ ಸೂಕ್ಷ್ಮ ಕೀಟಾಣುಗಳನ್ನು ನಾಶಪಡಿಸುವಲ್ಲಿ ಬಹಳ ಅದ್ಬುತವಾಗಿ ಕಾರ್ಯನಿರ್ವ ಹಿಸುತ್ತದೆ. ಹಾಗೂ ಇದು ನಮ್ಮ ಹಲ್ಲಿನ ಹೊಳಪನ್ನು ಹೆಚ್ಚಿಸುವಂತಹ ಕೆಲಸವನ್ನು ಸಹ ಮಾಡುತ್ತದೆ ಒಟ್ಟಾರೆಯಾಗಿ ಹಲ್ಲಿನಲ್ಲಿ ಬರುವಂತಹ ಹುಳಗಳನ್ನು ಇದು ನಾಶಪಡಿಸುತ್ತದೆ.
ನಿಮ್ಮ ಮನೆಯನ್ನು ಸುಂದರವಾಗಿಡಲು ಮತ್ತು ಅಡುಗೆ ಮನೆಗೆ ಉಪಯೋಗವಾಗುವಂತಹ ಸೂಪರ್ ಟಿಪ್ಸ್..!
• ಅದೇ ರೀತಿಯಾಗಿ ಸ್ಪಟಿಕದ ಪುಡಿಯು ಹಲ್ಲಿನಲ್ಲಿ ಕಾಣಿಸಿಕೊಳ್ಳುವ ಹುಳಗಳನ್ನು ಇದು ನಾಶ ಮಾಡುತ್ತದೆ.
* ಜೊತೆಗೆ ಬಾಯಿಯಲ್ಲಿ ಬರುವಂತಹ ದುರ್ವಾಸನೆಯನ್ನು ಸಹ ಇದು ದೂರಮಾಡುತ್ತದೆ.
* ಹಾಗೂ ಒಂದು ಹಲ್ಲಿನಿಂದ ಮತ್ತೊಂದು ಹಲ್ಲಿಗೆ ಹುಳುಕು ಆಗದೇ ಇರುವ ಹಾಗೆ ಇದು ತಡೆಯುತ್ತದೆ.
ಹಾಗಾದರೆ ಇವೆರಡನ್ನು ಉಪಯೋಗಿಸಿ ಹೇಗೆ ಇದನ್ನು ಉಪಯೋಗಿಸು ವುದು ಎಂದು ನೋಡುವುದಾದರೆ ಕಾಲು ಚಮಚ ಅರಿಶಿಣದ ಪುಡಿ ಹಾಗೂ ಕಾಲು ಚಮಚ ಸ್ಪಟಿಕದ ಪುಡಿಯನ್ನು ಹಾಕಿ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಕಹಿಬೇವಿನ ಕಡ್ಡಿಯನ್ನು ತೆಗೆದುಕೊಂಡು ಅದರಲ್ಲಿ ಇದನ್ನು ಅದ್ದಿ ವಸಡುಗಳನ್ನು ನಿಧಾನವಾಗಿ ಉಜ್ಜುವುದರಿಂದ ಹಲ್ಲಿನಲ್ಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆಗಳು ದೂರವಾಗುತ್ತದೆ.
ತಲೆ ಸುತ್ತು ಸಮಸ್ಯೆ ಇದ್ದರೆ ಹೀಗೆ ಮಾಡಿ ಕೂಡಲೇ ಕಮ್ಮಿ ಆಗುತ್ತೆ.!
ಬಹಳ ಹಿಂದಿನ ದಿನದಿಂದಲೂ ಕೂಡ ಈ ಒಂದು ವಿಧಾನ ವನ್ನು ಅನುಸರಿಸುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಪ್ಲಾಸ್ಟಿಕ್ ವಸ್ತುವಿನಿಂದ ತಯಾರಿಸಿದ ಬ್ರಷ್ ಗಳನ್ನು ಉಪಯೋ ಗಿಸುತ್ತೇವೆ. ಆದರೆ ಅದು ನಮ್ಮ ಹಲ್ಲಿನ ಆರೋಗ್ಯವನ್ನು ಹಾಳುಮಾಡುತ್ತದೆ ಎಂದೇ ಹೇಳಬಹುದು.
ಆದರೆ ಕಹಿಬೇವಿನ ಕಡ್ಡಿಯನ್ನು ಉಪಯೋಗಿಸಿ ಹಲ್ಲನ್ನು ಉಜ್ಜುವುದ ರಿಂದ ಯಾವುದೇ ರೀತಿಯ ಹಲ್ಲಿನ ಸಮಸ್ಯೆಗಳಿದ್ದರೂ ಅದು ದೂರ ವಾಗುತ್ತದೆ. ಅದರಲ್ಲೂ ಯಾವುದೇ ಬ್ಯಾಕ್ಟೀರಿಯಾಗಳಿದ್ದರೂ ಅವೆಲ್ಲ ವೂ ಸಂಪೂರ್ಣವಾಗಿ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.