ಅಧಿತಿ ಪ್ರಭುದೇವ್ (Adhithi Prabhudev) ವರ್ಷಪೂರ್ತಿ ಒಂದಲ್ಲ ಒಂದು ಚಲನಚಿತ್ರಗಳ ವಿಷಯವಾಗಿ ಸದಾ ಪ್ರಚಲಿತದಲ್ಲಿ ಇರುವ ನಟಿ. ಈಕೆಯ ಅದೃಷ್ಟವೋ ಅಥವಾ ಟ್ಯಾಲೆಂಟೋ ಒಂದಲ್ಲ ಒಂದು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕಳೆದ ವರ್ಷ ರಿಲೀಸ್ ಆದ ಹಲವು ಸಿನಿಮಾಗಳಲ್ಲಿ ಇವರು ಪಾತ್ರ ಮಾಡಿದ್ದಾರೆ. ತೋತಾಪುರಿ, ತ್ರಿಬ್ಬಲ್ ರೈಡಿಂಗ್, ಜಮಾಲಿಗುಡ್ಡ ಇನ್ನು ಅನೇಕ ಸಿನಿಮಾಗಳು ಕಳೆದ ವರ್ಷ ತೆರೆಕಂಡಿದ್ದವು.
ಈ ವರ್ಷ ಕೂಡ ಫೆಬ್ರವರಿ ತಿಂಗಳಲ್ಲೇ ಇವರ ಚೋಸ್ (Chaos) ಚಿತ್ರ ರಿಲೀಸ್ ಗೆ ರೆಡಿ ಆಗಿದ. ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ (Akshith Shashikumar) ಅವರು ನಾಯಕನಟನಾಗಿರುವ ಈ ಸಿನಿಮಾಗೆ ನಾಯಕಿಯಾಗಿ ಇವರಿರಲ್ಲಿದ್ದಾರೆ. ಹೊಸ ಕಂಟೆಂಟ್ ಆಧರಿತ ಚಿತ್ರ ಇದಾಗಿದೆ. ಈ ಚಿತ್ರದ ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿದ್ದ ಅಧಿತಿ ಪ್ರಭುದೇವ್ ಅವರು ಈಗಾಗಲೇ ಬಿಡುಗಡೆ ಆಗಿರುವ ತಮ್ಮ ಸಿನಿಮಾ ಆಯ್ಕೆಗಳ ಕುರಿತು ಹೇಳಿಕೊಳ್ಳುತ್ತಾ ತಮ್ಮನ್ನು ಜನ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
ಕೆಲವರು ಕೇಳುತ್ತಿರುತ್ತಾರೆ ವರ್ಷಪೂರ್ತಿ ಬ್ಯುಸಿ ಆಗಿರುತ್ತೀರಾ ಇಷ್ಟೊಂದು ಸಿನಿಮಾ ಒಪ್ಪಿಕೊಳ್ಳುತ್ತಿರಲ್ಲಾ ಹೇಗೆ ಎಂದು, ಆದರೆ ನನ್ನ ಪರಿಸ್ಥಿತಿ ಹಾಗೆ ಇದೆ ನನಗೆ ಒಂದೆರಡು ವರ್ಷ ಚಿತ್ರ ಇಲ್ಲದಿದ್ದರೂ ಪರವಾಗಿಲ್ಲ ಕಾಯುತ್ತೇನೆ ಎಂದು ಹೇಳುವ ಮಟ್ಟದಲ್ಲಿ ಇರಲಿಲ್ಲ. ನನಗೆ ಬರುವ ಆಫರ್ ಗಳಲ್ಲಿ ಯಾವುದು ಬೆಸ್ಟ್ ಅದನ್ನು ಆಯ್ದುಕೊಂಡು ಮಾಡಲೇಬೇಕಾದ ಸಿಚುವೇಶನ್ ಅಲ್ಲಿ ಇದ್ದೆ. ಒಂದೊಂದು ಸಿನಿಮಾ ಒಂದೊಂದು ಕಾರಣಗಳಿಗಾಗಿ ಇಷ್ಟಾವಾಗುತ್ತಿತ್ತು ಒಂದು ಒಳ್ಳೆ ಬ್ಯಾನರ್ ಚಿತ್ರ, ಆದರೆ ಒಂದರಲ್ಲಿ ಇತರ ಕಲಾವಿದರ ತಂಡ ಅತ್ಯುತ್ತಮವಾಗಿರುತ್ತಿತ್ತು,
ಮತ್ತೊಂದು ಹಾಡುಗಳ ಕಾರಣಕ್ಕೆ, ಹೀಗೆ ಒಂದೊಂದು ಸಿನಿಮಾಗಳನ್ನು ಒಂದೊಂದು ಕಾರಣಗಳಿಗಾಗಿ ಒಪ್ಪಿಕೊಂಡೆ ಹಾಗಾಗಿ ಕಳೆದ ವರ್ಷ ಅಷ್ಟು ಸಿನಿಮಾ ಮಾಡಿದೆ. ಈ ವರ್ಷ ಕೂಡ ನನ್ನ ಇನ್ನೊಂದು ಸಿನಿಮಾ ಬರುವ ಸಾಧ್ಯತೆ ಇದೆ ಇಷ್ಟೊಂದು ಅವಕಾಶಗಳು ನನ್ನನ್ನು ಅರಸಿ ಬರುತ್ತಿರುವುದಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಾನಿರುವ ತನಕ ಚಿರರುಣಿ ಆಗಿರುತ್ತೇನೆ ಆದರೆ ಜನ ಆಡುವ ಮಾತಿಗೆ ಬೇಸರವಾಗುತ್ತದೆ.
ನೀವು ರೈತನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಕೋಟ್ಯಾಧೀಶ್ವರನನ್ನು ಮದುವೆ ಆಗಿದ್ದೀರಾ ಎಂದು ಕೇಳುತ್ತಾರೆ ಅದು ಅವರ ದುಡ್ಡು ನನಗೆ ಮೊದಲಿನಿಂದಲೂ ನಾನು ದುಡಿದು ತಿಂದೆ ಅಭ್ಯಾಸ ಅದೇ ಒಳ್ಳೆಯದು ನನ್ನ ತಂದೆ ದುಡ್ಡಿದೆ ಮಜಾ ಮಾಡಿಬಿಡೋಣ, ನನ್ನ ಗಂಡನ ದುಡ್ಡು ಇದೆ ಉಡಾಯಿಸೊಣ ಎಂದು ಯೋಚನೆ ಮಾಡುವವಳು ನಾನಲ್ಲ.
ನಾನು ದುಡಿಯಬೇಕು ನನ್ನಿಂದ ಎಷ್ಟು ಆಗುತ್ತದೆ ಅಷ್ಟು ಮಾಡಬೇಕು. ಇದೆಲ್ಲ ನನ್ನ ತಲೆಯಲ್ಲಿ ಓಡುತ್ತಿರುತ್ತದೆ ಅದಕ್ಕಾಗಿ ನಾನು ಇನ್ನು ಸಿನಿಮಾಗಳನ್ನು ಮಾಡುತ್ತಿದ್ದೇನೆ ಎಂದು ಉತ್ತರ ಕೊಟ್ಟಿದ್ದಾರೆ. ಜನ ಹಿಟ್ ಮತ್ತು ಫ್ಲಾಫ್ ಗಳ ಬಗ್ಗೆ ತಪ್ಪು ತಿಳಿದುಕೊಂಡಿರುತ್ತಾರೆ. ಸಿನಿಮಾ 25 ದಿನ ಓಡಿದರೆ ಮಾತ್ರ ಅಥವಾ 50 ದಿನ ಒಡಿದ್ರೆ ಮಾತ್ರ ಹಿಟ್ ಎಂದುಕೊಳ್ಳುತ್ತಾರೆ ಆದರೆ ನಮ್ಮ ಪ್ರಕಾರ ಒಂದು ವಾರ ಥಿಯೇಟರಲ್ಲಿ ಓಡಿದರೆ ಸಾಕು.
ಅದರ ಆಡಿಯೋ ರೈಟ್ ಸಿಗುತ್ತದೆ, ಚಾನಲ್ ರೇಟ್ ಸಿಗುತ್ತದೆ ಡಬ್ಬಿಂಗ್ ರೇಟ್ ಸಿಗುತ್ತದೆ ಹೇಗೋ ನಮ್ಮನ್ನು ಹಾಕಿಕೊಂಡ ನಿರ್ಮಾಪಕರಿಗೆ ಅವರ ಬಜೆಟ್ ಕಿಂತ ಹೆಚ್ಚಿನ ಹಣ ದೊರೆತರೆ ಅದು ನಮಗೆ ಸಮಾಧಾನ. ಆ ದೃಷ್ಟಿಯಲ್ಲಿ ನೋಡುವುದಾದರೆ. ನನ್ನ ಎಲ್ಲಾ ಚಿತ್ರಗಳು ಕೂಡ ಒಳ್ಳೆ ಗುಣಮಟ್ಟದಲ್ಲಿವೆ ಹಾಗಾಗಿ ಯಾವ ಸಿನಿಮಾ ಒಪ್ಪಿಕೊಂಡಿರುವುದರ ಬಗ್ಗೆಯೂ ನನಗೆ ಬೇಸರವಾಗಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.
https://youtu.be/vZPnS7aiJjo