ಅನುಶ್ರೀ ಅವರು ಕಿರುತೆರೆಯ ಫೇಮಸ್ ವ್ಯಕ್ತಿ ಕನ್ನಡದಲ್ಲಿ ಆಂಕರಿಂಗ್ ಅಲ್ಲಿ ನಂಬರ್ ವನ್ ಎನಿಸಿಕೊಂಡಿರುವ ಅನುಶ್ರೀ ಅವರು ಮೂಲತಃ ಮಂಗಳೂರಿನವರು. ಚಿಕ್ಕ ವಯಸ್ಸಿಗೆ ತಂದೆಯಿಂದ ದೂರವಾದ ಈ ಕುಟುಂಬವು ಬಹಳ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಮಂಗಳೂರಿನಲ್ಲೇ ವಿದ್ಯಾಭ್ಯಾಸವನ್ನು ಮುಗಿಸಿದ ಅನುಶ್ರೀ ಅವರು ಮೊದಲಿಗೆ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ತಾಯಿಗೆ ಸಹಾಯ ಮಾಡುತ್ತಿದ್ದರು. ಕಾಲೇಜು ದಿನಗಳಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಾಯಿಗೆ ಮತ್ತು ತಮ್ಮನ ವಿದ್ಯಾಭ್ಯಾಸಕ್ಕೆ ಅನುಶ್ರೀ ಅವರು ನೆರವಾಗುತ್ತಿದ್ದರು. ಯಾವುದೇ ಕೆಲಸ ಮಾಡುತ್ತಿದ್ದರು ಕೂಡ ಅನುಶ್ರೀ ಅವರ ಮನಸ್ಸು ಮಾತ್ರ ನಿರೂಪಣೆ ಕಡೆಗೆ ತುಡಿಯುತ್ತಿತ್ತು. ನಂತರ ಮಂಗಳೂರಿನ ಖಾಸಗಿ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಸೇರಿಕೊಂಡ ಅನುಶ್ರೀ ಅವರು ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡಿದ್ದು ಅಂತಾಕ್ಷರಿ ಎನ್ನುವ ಕಾರ್ಯಕ್ರಮದ ಮೂಲಕ.
ನಂತರ ಬೆಂಗಳೂರಿನ ಕಡೆ ಬಂದ ಅನುಶ್ರೀ ಅವರ ಅದೃಷ್ಟವೇ ಇಲ್ಲಿ ಬದಲಾಯಿತು ಎಂದು ಹೇಳಿದರೆ ತಪ್ಪಲ್ಲ ಅನುಶ್ರೀ ಅವರು ಡ್ಯಾನ್ಸಿಂಗ್ ಕಾರ್ಯಕ್ರಮವೊಂದರಲ್ಲಿ ನಿರೂಪಕಿ ಆಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಮೊದಲನೇ ಸೀಸನ್ನಿನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಇರುವ ಅದೃಷ್ಟ ಒಲಿದು ಬಂದಿತ್ತು. ತಮಗೆ ಸಿಕ್ಕ ಅದೃಷ್ಟವನ್ನು ಒಳ್ಳೆಯ ರೀತಿ ಬದಲಾಯಿಸಿಕೊಂಡ ಅನುಶ್ರೀ ಅವರು ಬಿಗ್ ಬಾಸ್ ಮನೆ ಒಳಗೆ ಇದ್ದುಕೊಂಡು ತಮ್ಮ ಟ್ಯಾಲೆಂಟ್ ಏನು ಎನ್ನುವುದನ್ನು ನಿರೂಪಿಸಿದರು. ಹಾಗೂ ಹಲವು ದಿನಗಳವರೆಗೆ ಮನೆಯಲ್ಲಿದ್ದುಕೊಂಡು ಅಲ್ಲಿದ್ದ ಮನೆಮಂದಿಯ ಜೊತೆ ಕರುನಾಡಿನ ಹಲವಾರು ಜನರ ಪ್ರೀತಿಗೆ ಪಾತ್ರರಾದರು. ನಂತರ ದಿನಗಳಲ್ಲಿ ಅನುಶ್ರೀ ಅವರು ಅವರ ವೃತ್ತಿಯನ್ನು ಅದ್ಭುತವಾಗಿ ಬದಲಾಯಿಸಿಕೊಂಡ ಪರಿಯೇ ಒಂದು ರೋಚಕ ಕಥೆ ಎನ್ನಬಹುದು. ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 1 ರಿಂದ 18 ರವರೆಗೆ ಇವರೇ ನಿರೂಪಕಿಯಾಗಿ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.
ಇದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಜೀ ಕನ್ನಡದ ಅವಾರ್ಡ್ ಕಾರ್ಯಕ್ರಮಗಳನ್ನು ಕೂಡ ಮತ್ತು ಇನ್ನಿತರ ಜೀ ಕನ್ನಡಕ್ಕೆ ಸಂಬಂಧಪಟ್ಟ ಪ್ರತಿ ಇವೆಂಟ್ ಗಳಲ್ಲಿ ಕೂಡ ನಿರೂಪಣೆ ಮಾಡುವ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಜೊತೆಗೆ ಸ್ಟಾರ್ ಹೀರೋಗಳ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮದೇ ಆದ ಒಂದು ಯುಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿರುವ ಅನುಶ್ರೀ ಅವರು ಈಗಾಗಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಮತ್ತು ಫಾಲವರ್ಸ್ ಅನ್ನು ಹೊಂದಿದ್ದಾರೆ. ಅತ್ಯುತ್ತಮ ಯುಟ್ಯೂಬ್ ಚಾನಲ್ ಮೂಲಕ ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಕನ್ನಡಿಗರ ಪಾಲಿಗೆ ನೀಡುತ್ತಿದ್ದಾರೆ ಮತ್ತು ಹಲವಾರು ಜಾಹೀರಾತುಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ ಜೊತೆಗೆ ಕೆಲವು ಸಿನಿಮಾಗಳಲ್ಲಿ ಕೂಡ ನಟಿಯಾಗಿ ಮತ್ತು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಕಿ ಪಟ್ನಾ ಮತ್ತು ರಿಂಗ್ ಮಾಸ್ಟರ್ ಎನ್ನುವ ಸಿನಿಮಾಗಳಲ್ಲಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಕೊಂಡಿರುವ ಅನುಶ್ರೀ ಅವರಿಗೆ ನಾಯಕಿಯಾಗುವ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಮತ್ತು ಇವರಿಗೆ ಒಬ್ಬ ಯಶಸ್ವಿ ನಿರೂಪಕಿಯಾಗಿ ಸಿಕ್ಕ ಗೆಲುವು ನಾಯಕಿಯಾಗಿ ಸಿಗಲಿಲ್ಲ ಎನ್ನಬಹುದು. ಹೀಗಾಗಿ ಸಿನಿಮಾ ಕಡೆಗಿಂತ ಕಿರುತೆರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬ್ಯುಸಿ ಆಗಿರುವ ಅನುಶ್ರೀ ಅವರು ಶೂಟಿಂಗ್ ಸೆಟ್ಗಳಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿರುವ ಸಹ ಕಲಾವಿದರ ಜೊತೆ ರೀಲ್ಸ್ ಮಾಡುತ್ತಾ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಖುಷಿ ಪಡುತ್ತಾರೆ. ಎಲ್ಲರ ಜೊತೆ ನಗುನಗುತ್ತ ಬೆರೆಯುವ ಲವಲವಿಕೆಯಿಂದ ದಿನಪೂರ್ತಿ ಕಳೆಯುವ ಪಟಪಟ ಎಂದು ಹರಳು ಉರಿಯುವಂತೆ ಮಾತನಾಡಿ ಎಲ್ಲರ ಮನಸ್ಸನ್ನು ಮಾತಿನ ಮೂಲಕವೇ ಗೆಲ್ಲುವ ಮಾತಿನಮಲ್ಲಿ ಅನುಶ್ರೀ ಅವರ ಸಾಧನೆಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಸ್ಪೂರ್ತಿಯಾಗಿ ತೆಗೆದುಕೊಳ್ಳಲೇಬೇಕು. ಆದರೆ ಒಬ್ಬ ಮಹಿಳೆಯಾಗಿ ಯಾರದೇ ನೆರವು ಇಲ್ಲದೆ ತಮ್ಮ ಪರಿಶ್ರಮದಿಂದ ಹಾಗೂ ಶ್ರದ್ಧೆಯಿಂದ ಇಷ್ಟೆಲ್ಲಾ ಸಾಧನೆ ಮಾಡಿರುವ ಅನುಶ್ರೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತ್ರ ಹಲವಾರು ಪ್ರಶ್ನೆಗಳು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಹಾಗೇ ಉಳಿದಿದೆ.
ಅದರಲ್ಲಿ ಪ್ರಮುಖವಾಗಿ ಅವರ ಮದುವೆಯ ವಿಷಯವಾಗಿ ಯಾವಾಗಲೂ ಅಭಿಮಾನಿಗಳು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅನುಶ್ರೀ ಅವರು ಇಷ್ಟು ಸುಂದರವಾಗಿದ್ದರೂ ಕೂಡ 36 ವರ್ಷಗಳು ಕಳೆದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದು ಅಭಿಮಾನಿಗಳು ಅನುಶ್ರೀ ಅವರನ್ನು ಯಾವಾಗಲೂ ಕೇಳುವ ಪ್ರಶ್ನೆ. ಇತ್ತೀಚೆಗಷ್ಟೇ ಅನುಶ್ರೀ ಅವರು ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇಷ್ಟು ದಿನ ತಾವು ಜೀವನದಲ್ಲಿ ಸೆಟಲ್ ಆಗಬೇಕು ಮತ್ತು ತಾವೂ ಏನಾದರೂ ಸಾಧನೆ ಮಾಡಬೇಕು ಎನ್ನುವುದರ ಕಡೆ ಗಮನ ಹರಿಸುತ್ತಿದ್ದ ಅನುಶ್ರೀ ಅವರು ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲವಂತೆ. ಈಗ ಎಲ್ಲರೂ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ ಹಾಗಾಗಿ ನಾನು ಮದುವೆ ಆದರೆ ನನ್ನ ತಾಯಿ ಒಪ್ಪಿರುವ ಹುಡುಗನನ್ನೇ ಮದುವೆಯಾಗುತ್ತೇನೆ. ನಾನೇ ಯಾರನ್ನಾದರೂ ಒಪ್ಪಿಕೊಂಡರೆ ನನ್ನ ಆಯ್ಕೆಗಳು ಯಾವಾಗಲೂ ಸರಿಯಾಗಿರುವುದಿಲ್ಲ ಆದಕಾರಣ ಈ ಜವಾಬ್ದಾರಿಯನ್ನು ನನ್ನ ತಾಯಿಗೆ ಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ