ನೀವು ಸರ್ಕಾರಿ ಉದ್ಯೋಗ ಮಾಡಬೇಕು ಎಂದು ಆಸಕ್ತಿ ಹೊಂದಿದ್ದಾರಾ? ಇದಕ್ಕಾಗಿ ಹಲವು ವರ್ಷಗಳ ಕನಸು ಕಂಡಿದ್ದೀರಾ? ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮತ್ತೊಂದು ಅವಕಾಶ ಸಿಗುತ್ತದೆ. ಈ ಬಾರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸರ್ಕಾರಿ ಹುದ್ದೆಗಟ್ಟಿಸಿಕೊಳ್ಳುವ ಅವಕಾಶ ದೊರೆಯುತ್ತಿದೆ.
ರಾಜ್ಯ ಸರ್ಕಾರದಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (Karnataka State Open University recruitments) ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಖಾಲಿ ಇರುವ ಹುದ್ದೆಗಳು, ಸಿಗುವ ವೇತನ, ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ, ನೀಡಲಾದ ವಯೋಮಿತಿ ಸಡಿಲಿಕೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಈ ಎಲ್ಲಾ ವಿಚಾರಗಳ ಬಗ್ಗೆ ಕೂಡ ವಿವರವಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅದರಲ್ಲಿ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU).
ಒಟ್ಟು ಹುದ್ದೆಗಳ ಸಂಖ್ಯೆ:- 32
ಉದ್ಯೋಗ ಸ್ಥಳ:- ಮೈಸೂರು
ಹುದ್ದೆಗಳ ವಿವರ:-
● ಪ್ರಥಮ ದರ್ಜೆ ಸಹಾಯಕ
● ಡಾಟಾ ಎಂಟ್ರಿ ಆಪರೇಟರ್
● ದ್ವಿತೀಯ ದರ್ಜೆ ಸಹಾಯಕ
● ಬೆರಳಚ್ಚುಗಾರ ಮತ್ತು ಸಹಾಯಕ
● ವಾಹನ ಚಾಲಕ
● ಎಲೆಕ್ಟ್ರಿಷಿಯನ್
● ಪ್ಲಂಬರ್
● ಪರಿಚಾರಕ
● ಗ್ಯಾಂಗ್ ಮೆನ್
● ಸೇವಕ
● ಸ್ವೀಪರ್
● ಹೆಲ್ಪರ್
ವೇತನ ಶ್ರೇಣಿ:-
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 17,000 ದಿಂದ 58,250 ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಆಯಾ ಹುದ್ದೆಗಳಿಗೆ ಅನುಸಾರವಾಗಿ 7ನೇ ತರಗತಿ, 10ನೇ ತರಗತಿ, ದ್ವಿತೀಯ PUC, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC / ST ಮತ್ತು ಪ್ರವರ್ಗ- 1 ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
ನಿಮ್ಮ ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಕೆ ಮಾಡ್ತೀರಾ.? ಹಾಗಿದ್ರೆ, ಮಿಸ್ ಮಾಡದೇ ಈ ಸುದ್ದಿ ಓದಿ.!
ಅರ್ಜಿ ಶುಲ್ಕ:-
● SC / ST ಮತ್ತು ಪ್ರವರ್ಗ- 1 ಅಭ್ಯರ್ಥಿಗಳಿಗೆ 500ರೂ.
● ಉಳಿದ ಅಭ್ಯರ್ಥಿಗಳಿಗೆ 1000ರೂ.
● ನಿಗದಿತ ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆ A/c No: 50100316845801, IFSC Code: HDFC0003733, HDFC ಬ್ಯಾಂಕ್, ಕುವೆಂಪು ನಗರ ಬ್ರಾಂಚ್, ಮೈಸೂರು ಗೆ ಇಲ್ಲಿಗೆ ಆನ್ಲೈನ್ ಮೂಲಕ ಪಾವತಿಸಬೇಕು.
● ಪಾವತಿಯಾದ ಬಳಿಕ ಇ-ರಶೀದಿಯನ್ನು ಸ್ವೀಕರಿಸಿ ಅರ್ಜಿ ನಮೂನೆ ಜೊತೆ ಲಗತ್ತಿಸಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು KSOU ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಪಡೆದುಕೊಳ್ಳಬೇಕು.
● ನಂತರ ಇವುಗಳಲ್ಲಿ ವಿವರಗಳನ್ನು ಪಟ್ಟಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ವಿಶ್ವವಿದ್ಯಾಲಯದ ವಿಳಾಸಕ್ಕೆ ನೋಂದಣಿ ಅಂಚೆ ಮೂಲಕ ಕಳುಹಿಸಬೇಕು ಅಥವಾ ಖುದ್ದಾಗಿ ಕಚೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.
ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!
ಅರ್ಜಿ ಸಲ್ಲಿಸುವ ವಿಳಾಸ:-
ಕುಲಸಚಿವರು,
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ,
ಮುಕ್ತ ಗಂಗೋತ್ರಿ,
ಮೈಸೂರು – 570006.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16.08.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30.09.2023.