ಅಭಿಮಾನಿಗಳೇ ನಮ್ಮ ಮನೆ ದೇವರೆಂದ ದೇವರು ನಮ್ಮನ್ನು ಅ’ಗ’ಲಿ 8 ಮಾಸಗಳು ಉರುಳಿವೆ ಹೌದು ಅಭಿಮಾನಿ ದೇವರುಗಳಿಗೆ ದೇವರಾಗಿದ್ದರು ನಮ್ಮ ಅಪ್ಪು. ಇಂದು ಅವರ ಅಗಲಿಕೆಯ ನೆನಪು ಪ್ರತಿಯೊಬ್ಬ ಕನ್ನಡಿಗನ ಹೃದಯ ಮಿಡಿಯುವಿಕೆಗೆ ಸಾಕ್ಷಿಯಾಗಿದೆ. ನವೀನ್ ಸಜ್ಜು ರವರ ಗಾಯನದಂತೆ ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತು ಮೌನತಪಸ್ವಿಯಾಗಿದ್ದಾರೆ ನಮ್ಮ ಅಪ್ಪು. ಅಪ್ಪು ರವರು ಅಭಿಮಾನಿಗಳಿಗಷ್ಟೇ ಸೀಮಿತವಾಗಿರದೆ ಕರ್ನಾಟಕದ ಪ್ರತಿಯೊಂದು ಮನೆ-ಮನಗಳನ್ನು ತಲುಪಿದ್ದರು. ಇವರ ಅಗಲಿಕೆಯ ನಂತರ “ಜೊತೆಗಿರದ ಜೀವ ಎಂದಿಗಿಂತ ಜೀವಂತ” ಎಂಬ ನಾಣ್ಣುಡಿ ಬೆಳಕಿಗೆ ಬಂದಿದೆ. ಅಪ್ಪು ಅವರು ಅವರ ಸಮಾಜ ಸೇವೆ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಜನಮಾನಸಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದುಕೊಂಡಿದ್ದಾರೆ. ಆದರೆ ಅವರು ತಮ್ಮ ಕನಸುಗಳ ಜೊತೆಗೆ ನಮ್ಮನ್ನು ಅಗಲಿದ್ದಾರೆ.
ಹೌದು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆ ಸ್ಥಾಪಿಸಿದ್ದ ಅಪ್ಪು ರವರು ಇದರ ಮೂಲಕ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಹಾಗೂ ಇನ್ನಷ್ಟು ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಕನಸುಗಳು ಕನಸುಗಳಾಗಿಯೆ ಉಳಿದಿರುವುದು ಕನ್ನಡಿಗರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಇದಲ್ಲದೆ ಅಪ್ಪು ರವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಲ್ಲೀನರಾಗಿದ್ದರು. ಅನೇಕ ಅನಾಥಾಶ್ರಮಗಳು ಹಾಗೂ ಶಾಲೆಗಳನ್ನು ನಡೆಸುತ್ತಿದ್ದರು. ಆದರೆ ಇಷ್ಟೆಲ್ಲಾ ಕನಸುಗಳನ್ನು ಹೊಂದಿದ್ದ ಅಪ್ಪು ರವರು ಇಂದು ವಿಧಿಯಾಟಕ್ಕೆ ಶರಣಾಗಿದ್ದಾರೆ. ಆದರೂ ಸಹ ಅಪ್ಪು ಅವರ ಕನಸುಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಅಶ್ವಿನಿ ಪುನೀತ್ ರವರ ಕಾರ್ಯವೈಖರಿಯಿಂದ ಅಪ್ಪು ಅಭಿಮಾನಿಗಳಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಅಪ್ಪುವಿನ ಅಗಲಿಕೆಯನ್ನು ಮರೆಸಲು ಅಶ್ವಿನಿ ಪುನೀತ್ ರವರು ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಸನ್ನದ್ಧರಾಗಿದ್ದಾರೆ.
ಅಶ್ವಿನಿ ಪುನೀತ್ ರವರು ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯನ್ನು ಮುನ್ನಡೆಸಲು ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಡಾಕ್ಟರ್ ರಾಜ್ ಕುಟುಂಬದ ಕಿರಿಯ ಸೊಸೆಯಾಗಿ ಹಾಗೂ ಅಪ್ಪು ರವರ ಮಡದಿಯಾಗಿ ಕರ್ತವ್ಯಗಳನ್ನು ನಿಭಾಯಿಸಿಕೊಂಡು ಬಂದಿದ್ದರು. ಇದೀಗ ಅಪ್ಪು ರವರ ಕನಸುಗಳಲ್ಲಿ ಒಂದಾದ ಪಿ ಆರ್ ಕೆ ಪ್ರೊಡಕ್ಷನ್ ಅನ್ನು ಮುನ್ನಡೆಸುವ ಹೊಣೆಯನ್ನು ಹೊತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಡಾಕ್ಟರ್ ಪಾರ್ವತಮ್ಮ ರಾಜಕುಮಾರ್ ಅವರೂ ಸಹ ಪತಿಗೆ ಬೆನ್ನೆಲುಬಾಗಿ ಪೂರ್ಣಿಮಾ ಎಂಟರ್ಪ್ರೈಸಸ್ ಸಂಸ್ಥೆ ಮೂಲಕ ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.ಇತ್ತೀಚಿಗೆ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರವರ ಫೋಟೋ ಮುಂದೆ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಕ್ಲಿಕ್ಕಿಸಿಕೊಂಡ ಫೋಟೋ ಒಂದು ವೈರಲ್ ಆಗಿತ್ತು. ಇದೇ ರೀತಿ ಅಶ್ವಿನಿ ಅವರು ಸಹ ಅತ್ತೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಆಫೀಸಿಗೆ ಪ್ರತಿದಿನವೂ ಹಾಜರಾಗಿ ಸಿನಿಮಾ ಸಂಬಂಧಿ ಚಟುವಟಿಕೆಗಳಲ್ಲಿ ಅಶ್ವಿನಿ ಅವರು ಭಾಗಿಯಾಗುತ್ತಾರೆ. ಹಾಗೆಯೇ ಅನೇಕ ನಿರ್ದೇಶಕರು ಗಳನ್ನು ಭೇಟಿಯಾಗಿ ಚರ್ಚಿಸಿ ಅಪ್ಪು ಅವರ ಕನಸುಗಳ ಸಾಕಾರಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದಾರೆ. ಆಫೀಸಿನಲ್ಲಿರುವ ಪಾರ್ವತಮ್ಮ ರಾಜಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇರಿಸಿಕೊಂಡಿದ್ದು ಇದನ್ನು ಡಾಕ್ಟರ್ ರಾಜ್ ಕುಟುಂಬದ ಅಭಿಮಾನಿಗಳು ಸೊಸೆ ಆಫ್ ಪಾರ್ವತಮ್ಮ ಎಂಬ ಟ್ಯಾಗ್ ಲೈನ್ನಲ್ಲಿ ವೈರಲ್ ಮಾಡಿದ್ದಾರೆ. ಹೀಗೆ ನಮ್ಮ ಅಪ್ಪು ಅವರ ಕನಸುಗಳಿಗೆ ಅಶ್ವಿನಿ ಅವರು ಬೆಂಗಾವಲಾಗಿ ನಿಂತು ಪುನೀತ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಣತೊಟ್ಟು ಸಾಗುತ್ತಿದ್ದಾರೆ. ಅಶ್ವಿನಿ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ. ಲೈಕ್ & ಶೇರ್ ಮಾಡುವುದನ್ನು ಮರೆಯಬೇಡಿ.