ಕರ್ನಾಟಕ ಅರಣ್ಯ ಇಲಾಖೆಯಿಂದ (Karnataka Forest Department) ಮತ್ತೊಮ್ಮೆ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಬಿದ್ದಿದೆ. ಈ ಬಾರಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಗಸ್ತು ಅರಣ್ಯ ಪಾಲಕ ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಧಿಸೂಚನೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವ ಕರ್ನಾಟಕ ರಾಜ್ಯದ ಯಾವುದೇ ಮಹಿಳಾ ಅಥವಾ ಪುರುಷ ಅಭ್ಯರ್ಥಿಯು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಗಳಿಗೆ ಒಳಪಟ್ಟು ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಅಧಿಸೂಚನೆಯಲ್ಲಿ ತಿಳಿಸಿರುವ ಕೆಲವು ಪ್ರಮುಖ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಕರ್ನಾಟಕ ಅರಣ್ಯ ಇಲಾಖೆ…
ಹುದ್ದೆ ಹೆಸರು:- ಗಸ್ತು ಅರಣ್ಯಪಾಲಕ (ಅರಣ್ಯ ರಕ್ಷಕ)
ಒಟ್ಟು ಹುದ್ದೆಗಳ ಸಂಖ್ಯೆ:- 540 ಹುದ್ದೆಗಳು.
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.23,500 ರಿಂದ ರೂ.47,650 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಇನ್ನಿತರ ಮಾನದಂಡಗಳು:-
* ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ PUC ವಿದ್ಯಾರ್ಹತೆ ಅಥವಾ PUC ವಿದ್ಯಾರ್ಹತೆಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ಶಾರೀರಿಕ ಮಾನದಂಡಗಳು (ದೇಹದಾಢ್ಯತೆ):-
1. ಎತ್ತರ ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 163cm, ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದವರಿಗೆ 152cm, ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಎತ್ತರ ಕನಿಷ್ಠ 150cm ಮತ್ತು ಕನಿಷ್ಠ ತೂಕ 40Kg ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ ಎತ್ತರ 145cm ಮತ್ತು ಕನಿಷ್ಠ ತೂಕ 38 Kg.
2. ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳಿಗೆ ಎದೆ ಸುತ್ತಳತೆ ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79cm, ಎದೆ ಕನಿಷ್ಠ ಹಿಗ್ಗುವಿಕೆ 5cm. ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಾಮಾನ್ಯ ಸ್ಥಿತಿಯಲ್ಲಿ ಎದೆ ಸುತ್ತಳತೆ 74cm, ಎದೆ ಕನಿಷ್ಠ ಹಿಗ್ಗುವಿಕೆ 5cm.
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ ವಿವರ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 27 ವರ್ಷಗಳು
* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು
* SC/ST, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 32 ವರ್ಷಗಳು.
ಅರ್ಜಿ ಶುಲ್ಕ:-
* ಸಾಮಾನ್ಯ ವರ್ಗದ ಮತ್ತು 2A, 2B, 3A, 3B ಪುರುಷ ಅಭ್ಯರ್ಥಿಗಳಿಗೆ ರೂ.220
* ಸಾಮಾನ್ಯ ವರ್ಗದ ಮತ್ತು 2A, 2B, 3A, 3B ಮಹಿಳಾ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ.120
* SC/ST ಮತ್ತು ಪ್ರವರ್ಗ -1 ರ ಪುರುಷ ಅಭ್ಯರ್ಥಿಗಳಿಗೆ ರೂ.120
* SC/ST ಮತ್ತು ಪ್ರವರ್ಗ – 1ರ ಮಹಿಳಾ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.70
* ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಇ-ಚಲನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:-
* https://aranya.gov.in/ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವ ಲಿಂಕ್ ಮಾಡಿ ವಿವರಗಳನ್ನು ತುಂಬಿಸಿ ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
* ಅಧಿಸೂಚನೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಶಾರೀರಿಕ ಮಾನದಂಡಗಳ ಪರೀಕ್ಷೆ, ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ ನಡೆಸಲಾಗುವುದು.
* ಅದರಲ್ಲಿ ತೇರ್ಗಡೆ ಆದ ಅಭ್ಯರ್ಥಿಗಳಿಗೆ ವಸ್ತುನಿಷ್ಠ ಮಾದರಿ ಅಪ್ಟಿಟ್ಯೂಡ್ ಪರೀಕ್ಷೆ ನಡೆಸಲಾಗುವುದು.
* ನಂತರ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಸದರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಡಿಸೆಂಬರ್ 01, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2023
* ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜನವರಿ 05, 2024.