ಹೊಸ ವರ್ಷ ಹೊಸತನ ತರಲಿ ಎನ್ನುವುದೇ ಎಲ್ಲರ ಆಸೆ. ಅದೇ ಪ್ರಕಾರವಾಗಿ ನಿರೀಕ್ಷೆಗಳು ಹೆಚ್ಚಾಗುತ್ತದೆ, ನಂಬಿಕೆಗಳು ಗಟ್ಟಿಯಾಗುತ್ತವೆ. ಇಂತಹ ಹೊಸ ವರ್ಷವು ಎಲ್ಲರ ಬಾಳಿನಲ್ಲಿ ಬೆಳಕನ್ನು ತರಲಿ ಅವರು ಬಯಸಿದ್ದೆಲ್ಲ ಸಿಗುವ ಅದೃಷ್ಟ ತರಲಿ ಎನ್ನುವ ಇಚ್ಛೆಯೊಂದಿಗೆ ಜೀವನದಲ್ಲಿ ಅಂದುಕೊಂಡದ್ದನ್ನು ಪಡೆಯಬೇಕಾದರೆ ಮಾಡಬೇಕಾದ ಒಂದು ಕ್ಯಾಲೆಂಡರ್ ರೆಮಿಡಿ ಎನ್ನುವ ಚಮತ್ಕಾರಿ ಉಪಾಯದ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ನೀವು ಹೊಸ ವರ್ಷದ ಆರಂಭದಲ್ಲಿ ಹೊಸ ಕ್ಯಾಲೆಂಡರ್ ನೊಂದಿಗೆ ಈ ಉಪಾಯ ಮಾಡಿದರೆ ನೀವು 2024ರ ವರ್ಷದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಮೂರು ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪ್ರತಿಯೊಬ್ಬರೂ ಮಾಡಬಹುದಾದ ರೆಮಿಡಿ ಇದಾಗಿದ್ದು ಇದರ ಬಗ್ಗೆ ತಿಳಿದುಕೊಳ್ಳಲು ಅಂಕಣದ ಕೊನೆಯವರೆಗೂ ಓದಿ.
ಇದನ್ನು ಮಾಡಲು ಹೊಸ ವರ್ಷದ ಕ್ಯಾಲೆಂಡರ್ ಇದ್ದರೆ ಸಾಕು ಈಗ ನಾವು ಹೇಳುವ ಈ ವಿಧಾನದಲ್ಲಿ ಇದನ್ನು ಮಾಡಿ ಮೊದಲಿಗೆ 2024ರ ಹೊಸ ಕ್ಯಾಲೆಂಡರ್ ತೆಗೆದುಕೊಳ್ಳಿ. ಹೊಸ ವರ್ಷದ ದಿನ ಅಂದರೆ ಜನವರಿ 1ನೇ ತಾರೀಕು ಇದನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಮಾಡಿ.
ಈ ರೆಮಿಡಿ ಮಾಡುವಾಗ ನೀವು ಪೂರ್ವದ ಕಡೆ ಅಥವಾ ಉತ್ತರದ ಕಡೆಗೆ ಮುಖ ಹಾಕಿ ಕುಳಿತುಕೊಂಡರೆ ಒಳ್ಳೆಯದು. ನೀವು ಪದ್ಮಾಸನ ಅಥವಾ ಸುಖಾಸನ ಹಾಕಿ ಚಾಪೆ ಮೇಲೆ ಕುಳಿತುಕೊಳ್ಳಿ ಅಥವಾ ಚೇರ್ ಮೇಲೆ ಕುಳಿತುಕೊಳ್ಳಿ. ನಿಮಗೆ ಸಮಾಧಾನ ಆಗುವ ರೀತಿ ಹೇಗೆ ಕಂಫರ್ಟ್ ಇದೆ ಆ ರೀತಿ ಕುಳಿತುಕೊಳ್ಳಿ. ಆದರೆ ಒಂದು ಕ್ಯಾಲೆಂಡರ್ ಗೆ ನೀವು ಮೂರು ವಿಶ್ ಗಳನ್ನು (affirmation) ಮಾಡಬಹುದು ಅಷ್ಟೇ ನಿಮ್ಮ ಕುಟುಂಬದ ಬೇರೆ ಸದಸ್ಯರು ಕೂಡ ಈ ರೀತಿ ಇದೇ ಕ್ಯಾಲೆಂಡರ್ ನಲ್ಲಿ ಮಾಡಬಹುದು ಆದರೆ ಒಟ್ಟಾರೆಯಾಗಿ ಒಂದು ಕ್ಯಾಲೆಂಡರ್ ಅಲ್ಲಿ ಎಲ್ಲರಿಂದ ಮೂರು ಇಚ್ಛೆಗಳನ್ನು ಬರೆಯಬಹುದು.
ಈಗ ಯಾವ ರೀತಿ ಮಾಡಬೇಕು ಎಂದರೆ ನೀವು ಮೊದಲೇ ನಿಮ್ಮ ವಿಶ್ ಏನು ಎಂದು ಡಿಸೈಡ್ ಮಾಡಿಕೊಳ್ಳಬೇಕು. ಡಿಸೈಡ್ ಆದಮೇಲೆ ಮೌನವಾಗಿ ಎರಡು ನಿಮಿಷ ಕುಳಿತುಕೊಳ್ಳಿ ಈಗ ಒಂದು ತಿಂಗಳಲ್ಲಿ ಬರುವ ಎಲ್ಲಾ ಡೇಟ್ ಗಳನ್ನು ವಿಷುವಲೈಸ್ (Vitualize) ಮಾಡಿ ಇದರಲ್ಲಿ ಯಾವುದೋ ಒಂದು ಸಂಖ್ಯೆ ನಿಮಗೆ ಪದೇಪದೇ ಅಟ್ರಾಕ್ಟ್ ಆಗುತ್ತದೆ.
ಆ ಸಂಖ್ಯೆಯನ್ನು ನಿರ್ಧರಿಸಿ ಉದಾಹರಣೆಗೆ, 14ನೇ ತಾರೀಕು ಎಂದುಕೊಳ್ಳೋಣ ಕ್ಯಾಲೆಂಡರ್ ತೆಗೆದು ಎಲ್ಲಾ ತಿಂಗಳುಗಳನ್ನು ನೋಡಿ 12 ತಿಂಗಳಲ್ಲಿ ಯಾವುದೋ ಒಂದು ತಿಂಗಳು ನಿಮಗೆ ಮತ್ತೆ ಅಟ್ರಾಕ್ಟಿವ್ ಆಗಿ ಕಾಣುತ್ತದೆ. ಉದಾಹರಣೆಗೆ ಏಪ್ರಿಲ್ ಎಂದುಕೊಳ್ಳೋಣ, ಕೆಂಪು ಬಣ್ಣದ ಸ್ಕೆಚ್ ಇಂದ ಏಪ್ರಿಲ್ ತಿಂಗಳ 14ನೇ ತಾರೀಖಿಗೆ ಇಂಟು ಮಾರ್ಕ್ ಹಾಕಿ.
ಈಗ ಕ್ಯಾಲೆಂಡರ್ ಪಕ್ಕಕ್ಕಿಟ್ಟು ಯೂನಿವರ್ಸ್ ಜೊತೆ ಕನೆಕ್ಟ್ ಆಗಿ ಪ್ರಾರ್ಥನೆ ಮಾಡಿಕೊಳ್ಳಿ. ನೀವು ಕೆಲಸ ಹುಡುಕುತ್ತಿದ್ದೀರಾ ಕೆಲಸ ಸಿಗಲಿ ಎನ್ನುವುದು ನಿಮ್ಮ ಅಫರ್ಮೇಷನ್ ಆಗಿದ್ದರೆ ಏಪ್ರಿಲ್ 14ನೇ ತಾರೀಕು ಮಾರ್ಕ್ ಹಾಕಿರುವುದರಿಂದ ಈ ರೀತಿ ಕೇಳಿಕೊಳ್ಳಬೇಕು. ಏಪ್ರಿಲ್ 14 ರ ಒಳಗಡೆ ನನಗೆ ಕೆಲಸ ಸಿಗುತ್ತದೆ, ಹೆಚ್ಚು ಸಂಬಳದ ಕೆಲಸ ಸಿಗುತ್ತದೆ, ಆ ಕೆಲಸ ಸಿಕ್ಕ ಮೇಲೆ ನಾನು ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
ನಾನು ಹೊಸ ಮನೆ ಕಟ್ಟಿಸುತ್ತೇನೆ ನನ್ನ ಕೈಲಾದಷ್ಟು ಅಸಹಾಯಕರಿಗೆ ಸಹಾಯ ಮಾಡುತ್ತೇನೆ ನನಗೆ ಕೆಲಸ ಸಿಗುತ್ತದೆ ಎಂದು ಹೇಳಿ ಕ್ಯಾಲೆಂಡರ್ ಗೋಡೆಗೆ ಹಾಕಿ. ಪ್ರತಿ 15-20 ದಿನಕ್ಕೊಮ್ಮೆ ನಿಮಗೆ ಯಾವಾಗ ಕ್ಯಾಲೆಂಡರ್ ನೋಡುತ್ತೀರಾ ಆಗ ಆ ಏಪ್ರಿಲ್ 14 ಎನ್ನುವ ಮಾರ್ಕ್ ಮಾಡಿರುವ ದಿನಾಂಕವನ್ನು ಪದೇ ಪದೇ ನೋಡುತ್ತಿರಿ. ನಿಮ್ಮ ವಿಶ್ ನೆನಪಿಸಿಕೊಳ್ಳಿ. ಅದು ನೀವು ಯೂನಿವರ್ಸ್ ಗೆ ಕೊಟ್ಟಿರುವ ಗಡುವು, ಅಷ್ಟರೊಳಗಡೆ ನೀವು ಅಂದುಕೊಂಡಿದ್ದು ಆಗುತ್ತದೆ.