ಸಂಖ್ಯಾಶಾಸ್ತ್ರದ ಪ್ರಕಾರ ನಾವು ನಮ್ಮ ಮಕ್ಕಳಿಗೆ ಹೆಸರುಗಳನ್ನು ನಿಯಮ ಬದ್ಧವಾಗಿ ಇಡುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅದು ಅವರ ಜೀವನದ ಉನ್ನತವಾದ ಸ್ಥಾನಕ್ಕೆ ಕರೆದುಕೊಂಡು ಹೋಗುವ ವಿಧಾನವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅದೇ ರೀತಿ ಯಾಗಿ ಕೆಲವೊಂದಷ್ಟು ಜನ ತಮ್ಮ ಮಕ್ಕಳಿಗೆ ಹೆಸರಿಡುವ ಸಂದರ್ಭದಲ್ಲಿ ಆ ಮಗು ಹುಟ್ಟಿದಂತಹ ದಿನ ಘಳಿಗೆ ಸಮಯ ಯಾವುದೇ ವಿಷಯವನ್ನು ಸಹ ಗಮನಿಸುವುದಿಲ್ಲ. ಬದಲಿಗೆ ಯಾವ ಹೆಸರು ಅವರಿಗೆ ಇಷ್ಟವಿರುತ್ತದೆಯೋ ಆ ಹೆಸರನ್ನು ಅವರ ಮಕ್ಕಳಿಗೆ ಇಡುತ್ತಾರೆ. ಆದರೆ ಈ ರೀತಿ ಇಡುವುದು ತುಂಬಾ ಅಪಾಯಕಾರಿ ಇದು ಆ ಮಗುವಿನ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದೇ ಸಂಖ್ಯಾಶಾಸ್ತ್ರ ಹೇಳುತ್ತದೆ.
ಏಕೆಂದರೆ ನಾವು ಇಟ್ಟಂತಹ ಹೆಸರು ಆ ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಅದು ಆ ಮಗುವಿನ ವಿದ್ಯಾಭ್ಯಾಸವಾಗಿರ ಬಹುದು ಆ ಮಗುವಿನ ಆರೋಗ್ಯದ ವಿಷಯವಾಗಿರಬಹುದು ಎಲ್ಲದರ ಮೇಲೆಯೂ ಕೂಡ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.
ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!
ಆದ್ದರಿಂದ ಯಾವುದೇ ಮಗು ಜನನವಾದ ತಕ್ಷಣ ಆ ಮಗು ಹುಟ್ಟಿದಂತಹ ದಿನ, ಘಳಿಗೆ, ನಕ್ಷತ್ರ ತಿಥಿ ಆಧಾರದ ಮೇಲೆ ಹೆಸರನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಆ ಮಗು ತನ್ನ ಜೀವನದಲ್ಲಿ ಅಭಿವೃದ್ಧಿ ಪಥದತ್ತ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಿಮ್ಮ ಕಣ್ಣ ಮುಂದೆ ಆ ಮಗುವಿನ ನಾಶವನ್ನು ಕಾಣಬೇಕಾಗುತ್ತದೆ.
ಆದ್ದರಿಂದ ನಿಮ್ಮ ಮಗುವಿಗೆ ಹೆಸರಿಡುವಂತಹ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸರಿಯಾದ ವಿಧಾನದಲ್ಲಿ ಹೆಸರಿಡುವುದು ಒಳ್ಳೆಯದು. ಇದರ ಜೊತೆ ಹೆಣ್ಣು ಮಕ್ಕಳಿಗೆ ಯಾವುದೇ ಒಂದು ಅಕ್ಷರ ಬಂದಿದೆ ಎಂದರೆ ಆ ಹೆಸರಿನಲ್ಲಿ ಪ್ರಥಮವಾಗಿ ಮ್ಯಾನ್ ಎನ್ನುವಂತಹ ಸಂಖ್ಯೆ ಅಥವಾ ಅಕ್ಷರ ಬರಬಾರದು
ಈ ರೀತಿ ಬಂದರೆ ಆ ಮಗುವಿನ ಆರೋಗ್ಯ ದಲ್ಲಿ ತೊಂದರೆ ಉಂಟಾಗುತ್ತದೆ ಹಾಗೂ ಆ ಮಗು ತನ್ನ ಭವಿಷ್ಯದಲ್ಲಿ ಏನಾಗಬೇಕು ಎಂದು ಕನಸು ಕಂಡಿರುತ್ತದೆಯೋ ಅದೆಲ್ಲವೂ ಕೂಡ ನಾಶವಾಗುತ್ತದೆ. ಯಾವುದೇ ಹೆಣ್ಣು ಮಕ್ಕಳ ಹೆಸರಿನಲ್ಲಿ ಮ್ಯಾನ್ ಎನ್ನುವಂತಹ ಶಬ್ದ ವರುವಂತಹ ಹೆಸರುಗಳನ್ನು ಇಡಬಾರದು ಉದಾಹರಣೆಗೆ ಮಂಜುಳಾ, ಮನಸ್ವಿ, ಹೀಗೆ ಈ ರೀತಿಯಾದಂತಹ ಹೆಸರುಗಳು ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಶುಭವನ್ನು ತಂದು ಕೊಡುವುದಿಲ್ಲ.
ಈ ಸುದ್ದಿ ಓದಿ:- ಜನ್ಮ ರಾಶಿ ಮುಖ್ಯನಾ.? ಹೆಸರಿನ ರಾಶಿ ಮುಖ್ಯನಾ.? ತಪ್ಪದೆ ತಿಳಿದುಕೊಳ್ಳಿ.!
ಬದಲಿಗೆ ಈ ಹೆಸರು ಅವರಿಗೆ ಅಶುಭವಾಗಿ ಪರಿಣಮಿಸುತ್ತದೆ. ಆದ್ದರಿಂದ ಇದರ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸುವುದು ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಗಂಡು ಮಕ್ಕಳ ಹೆಸರಿನಲ್ಲಿ ಕೊನೆಯಲ್ಲಿ ಶ್, ಶು, ಶಿ ಹೀಗೆ ಈ ಅಕ್ಷರಗಳು ಕೊನೆಗೊಂಡಿದ್ದರೆ ಇದು ಅವರಿಗೆ ಅಶುಭವಾಗಿ ಪರಿಣಮಿಸುತ್ತದೆ.
ಗಂಡು ಮಕ್ಕಳ ಹೆಸರಿನಲ್ಲಿ ಶ್ರೀ ಎನ್ನುವಂತಹ ಸಂಖ್ಯೆ ಅಥವಾ ಅಕ್ಷರ ಬರಬಾರದು ಇದು ಅವರಿಗೆ ಎಲ್ಲದರಲ್ಲಿಯೂ ನಷ್ಟವನ್ನು ತಂದು ಕೊಡುತ್ತದೆ. ಕೆಲವೊಂದಷ್ಟು ಜನ ಯಾವುದೋ ಒಂದು ಹೊಸ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕಿರುತ್ತಾರೆ ಇನ್ನೇನು ಅದರಲ್ಲಿ ನಮಗೆ ಲಾಭ ಬರುತ್ತದೆ ಎನ್ನುವಷ್ಟರಲ್ಲಿ ಅದರಲ್ಲಿ ನಷ್ಟವನ್ನು ಅನುಭವಿಸುವ ಸಂದರ್ಭದಲ್ಲಿ ಕೂಡ ಬರಬಹುದು.
ಉದಾಹರಣೆಗೆ ಯಾವ ಹೆಸರುಗಳನ್ನು ಇಟ್ಟುಕೊಳ್ಳಬಾರದು ಎಂದರೆ ರಾಜೇಶ್, ಮಂಜೇಶ್, ಸುರೇಶ್, ರೂಪೇಶ್, ಇಂತಹ ಹೆಸರುಗಳನ್ನು ಯಾವುದೇ ಕಾರಣಕ್ಕೂ ಗಂಡು ಮಕ್ಕಳಿಗೆ ಇಡಬೇಡಿ, ಇದು ಅವರಿಗೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಇವುಗಳ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಿ ಸೂಕ್ತವಾದಂತಹ ಹೆಸರುಗಳನ್ನು ಇಡುವುದು ಒಳ್ಳೆಯದು.