ಪ್ರತಿಯೊಬ್ಬರಿಗೂ ಕೂಡ ತಲೆ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಇರಬೇಕು ಎಂದು ಇಷ್ಟ ಆದರೆ ಎಲ್ಲರಿಗೂ ಕೂಡ ಇದೇ ರೀತಿಯಾಗಿ ಇರುವುದಿಲ್ಲ. ಅದರಲ್ಲಂತೂ ಹೆಣ್ಣು ಮಕ್ಕಳಿಗೆ ತಲೆ ಕೂದಲು ಉದ್ದ ವಾಗಿ ದಪ್ಪವಾಗಿ ಕಪ್ಪಾಗಿ ಇರಬೇಕು ಎಂದು ಇಷ್ಟಪಡುತ್ತಾರೆ ಅದಕ್ಕಾ ಗಿಯೇ ಕೆಲವೊಂದಷ್ಟು ಜನ ಈ ರೀತಿಯಾಗಿ ಇಲ್ಲ ಎಂದರೆ ಮಾರುಕಟ್ಟೆ ಗಳಲ್ಲಿ ಸಿಗುವ ತೈಲಗಳನ್ನು ತಂದು ಹಚ್ಚಿಕೊಂಡು ತಲೆಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಾಡುತ್ತಾರೆ.
ಆದರೆ ಈ ರೀತಿಯಾಗಿ ಉಪಯೋಗಿಸುವುದರಿಂದ ಸರಿಯಾದ ಪ್ರತಿಫಲ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೌದು ಅವೆಲ್ಲ ಕೆಲವೊಮ್ಮೆ ನಮಗೆ ಅಡ್ಡ ಪರಿಣಾಮಗಳನ್ನು ಸಹ ಉಂಟು ಮಾಡಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಉದ್ದವಾದoತಹ ದಪ್ಪವಾಗಿರುವಂತಹ ಕಪ್ಪು ಕೂದಲನ್ನು ಹೊಂದಬೇಕು ಎಂದರೆ ನಾವು ತಿನ್ನುವಂತಹ ಆಹಾರ ದಿಂದ ಹಿಡಿದು ನಮ್ಮ ಜೀವನ ಶೈಲಿಯವರೆಗೂ ಕೂಡ ಬಹಳ ಮುಖ್ಯ ವಾಗಿರುತ್ತದೆ.
ಹೌದು ನಾವು ಉತ್ತಮವಾದಂತಹ ಆಹಾರ ಶೈಲಿ ಜೀವನ ಶೈಲಿಯನ್ನು ಅನುಸರಿಸಿದಾಗ ಮಾತ್ರ ಅದರಲ್ಲಿ ಸಿಗುವ ಪೌಷ್ಟಿಕಾಂಶ ದಿಂದ ನಮ್ಮ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಇರುತ್ತ ದೆಯೇ ಹೊರತು ಯಾವುದೇ ರೀತಿಯ ತೈಲಗಳನ್ನು ಹಚ್ಚುವುದರಿಂದ ಯಾವುದೇ ಶಾಂಪು ಹಾಕಿ ತಲೆ ಸ್ನಾನ ಮಾಡುವುದರಿಂದ ದಪ್ಪವಾಗಿ ಬೆಳೆಯುವುದಿಲ್ಲ. ನಮ್ಮ ತಲೆ ಕೂದಲು ಸೊಂಪಾಗಿ ಬೆಳೆಯ ಬೇಕು ಸದಾ ಕಾಲ ಕಪ್ಪಾಗಿರಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ಅದನ್ನು ಹೇಗೆ ನಾವು ಅನುಸರಿಸಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆಕೂದಲು ಸೊಂಪಾಗಿ ಬೆಳೆಯುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು.
* ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೇಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ. ನಿಮ್ಮ ಕೂದಲು ಫಳ ಫಳನೆ ಹೊಳೆಯುತ್ತಾ ಸುಂದರವಾಗಿ ಕಾಣಿಸುತ್ತದೆ.
* ತಲೆಗೂದಲು ಹಸಿಯಾಗಿರುವಾಗ ಬಾಚಬಾರದು ನಿತ್ಯದಲ್ಲಿ ತಲೆ ಯನ್ನು ಎರಡು ಬಾರಿ ಬಾಚಿಕೊಳ್ಳಿ ತೊಡಕಾಗಿರುವ ಕೂದಲುಗಳನ್ನು ಕೈ ಬೆರಳುಗಳಿಂದ ನಿಧಾನವಾಗಿ ಬಿಡಿಸಿ. ಕೂದಲನ್ನು ಕೀಳಬೇಡಿ.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುವುದು ಖಂಡಿತ…!
* ತಲೆಯಲ್ಲಿ ಹೊಟ್ಟು ಹಾಚ್ಚಾಗಿದೆಯೇ ? ಹುಮಸೇ ನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೊಟ್ಟು ನಿವಾರಣೆ ಆಗುವುದು.
* ಕೇಶದ ತುದಿಗಳು ಸೀಳಿದ್ದರೆ ತುದಿಯನ್ನು ಕತ್ತರಿಸಿ ಇತರ ಉಪಚಾರ ವನ್ನು ಮಾಡಿರಿ ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳಬೇಡಿ.
* ಕಡಲೆಹಿಟ್ಟು ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆಕೂದಲನ್ನು ತೊಳೆಯಿರಿ. ಕೂದಲಿನ ಕಾಂತಿ ಹೆಚ್ಚುತ್ತದೆ.
* ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟಾ ಬಿಸಿ ನೀರಿನಲ್ಲಿ ಹಾಕಿ ಕಲಸಿ ಸೋಸಿ, ಹಾಲು ಮತ್ತು ನಿಂಬೆ ರಸ ಸೇರಿಸಿ, ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ, ತುಸು ಸಮಯದ ನಂತರ ತಲೆ ಸ್ನಾನ ಮಾಡಿರಿ. ಇದರಿಂದ ಉದುರುವ ಕೂದಲು ನಿಲ್ಲುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ.
ಬಾತ್ರೂಮ್ ನಲ್ಲಿರೋ ಬಕೆಟ್ ಹಾಗೂ ಮಗ್ ಬಣ್ಣ ಬದಲಾಯಿಸಿದರೆ ಈ ಸಲಹೆಯನ್ನ ಪಾಲಿಸಿ ಮತ್ತೆ ಹೊಸತರಂತೆ ಫಳಫಳ ಎನ್ನುತ್ತದೆ.!
* ತಲೆ ಕೂದಲು ಗಟ್ಟಿಯಾಗಿ ನೆಲೆವೂರಲು ತಲೆಯನ್ನು ನಿತ್ಯವೂ ಮುಸಾಜ್ ಮಾಡಬೇಕು. ಇದೊಂದು ರೀತಿಯ ವ್ಯಾಯಾಮ ಕೂದಲಿನ ಬೇರಿಗೆ ರಕ್ತ ಸರಾಗವಾಗಿ ಹರಿಯುತ್ತದೆ.
* ನಿತ್ಯ ಉಪಯೋಗಿಸುವ ಬಾಚಣಿಗೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪು ದಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಒಡೆದ ಹಾಲನ್ನು ಚೆಲ್ಲದೇ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ. ಇದೊಂದು ಪ್ರೊಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿದೆ.
* ಬಳಸದೇ ಇರುವ ಒಣಗಿದ ಕರಿಬೇವು, ನೆಲ್ಲಿಕಾಯಿ ಮುಂತಾದವು ಗಳನ್ನು ಎಸೆಯದೇ ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ, ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.
ಸಕ್ಕರೆ ಕಾಯಿಲೆ 400 ರಿಂದ 90 ಕ್ಕೆ ಇಳಿಯುತ್ತದೆ ಈ ರೀತಿ ಒಮ್ಮೆ ಮಾಡಿ ನೋಡಿ.! ಮಧುಮೇಹಿಗಳಿಗೆ ರಾಮಬಾಣ ಈ ಜ್ಯೂಸ್
* ಒಂದು ಲೋಟ ಬಿಸಿ ನೀರಿನಲ್ಲಿ ಹಿಡಿಯುವಷ್ಟು ತುಳಸಿ ಎಲೆಯನ್ನು ಹಾಕಿ ಕುದಿಸಿರಿ. ಇದಕ್ಕೆ 2 ಚಮಚ ಚಹಾದ ಸೊಪ್ಪನ್ನು ಹಾಕಿ ಪುನಃ 2-3 ನಿಮಿಷ ಕುದಿಸಿ ನಂತರ ಶೋಧಿಸಿ. ಈ ತಯಾರಿಕೆಯನ್ನು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿರಿ.