ಚಂದ್ರ-ಗುರುವಿನಿಂದ ಗಜಕೇಸರಿ ರಾಜಯೋಗ. ಈ ರಾಶಿಯವರ ಒಳ್ಳೆಯ ಟೈಮ್ ಶುರು ಇಂದು ವಿಶೇಷವಾದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗದ – ಕಾರಣದಿಂದ ಕೆಲ ರಾಶಿಯವರಿಗೆ ವೈಭೋಗಗಳು ಹೆಚ್ಚಾಗುತ್ತದೆ ಹಾಗಾದರೆ ಯಾವ ರಾಶಿ ಯವರಿಗೆ ಗಜಕೇಸರಿ ಯೋಗದಿಂದ ಅದೃಷ್ಟ ಒಲಿಯಲಿದೆ ಎಂಬುದು ಇಲ್ಲಿದೆ.
ಎಲ್ಲರಿಗೂ ಗೊತ್ತಿರುವಂತೆ ಗ್ರಹಗಳು ಒಂದೊಂದು ರಾಶಿಗೆ ಆಗಾಗ ಸಂಚಾರ ಮಾಡುತ್ತವೆ. ಅದಕ್ಕೆ ಒಂದು ನಿರ್ದಿಷ್ಟವಾದ ಸಮಯದಲ್ಲಿ ಆಗುತ್ತದೆ. ಹಾಗೆಯೇ ಚಂದ್ರ ಸಹ ತನ್ನ ರಾಶಿ ಬದಲಾವಣೆ ಮಾಡುತ್ತದೆ. ಆದರೆ ಅದು 2 ದಿನಗಳಿಗೊಮ್ಮೆ ಅಥವಾ 3 ದಿನಗಳಿಗೊಮ್ಮೆ ಹೀಗೆ ತನ್ನ ರಾಶಿಯನ್ನು ಬದಲಾವಣೆ ಮಾಡುತ್ತದೆ. ಅದರಿಂದ ಶುಭ ಹಾಗೂ ಅಶುಭ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!
ಇನ್ನು ಏಪ್ರಿಲ್ 9, 2024 ರಂದು ಸಂಜೆ 7:32 ಕ್ಕೆ ಇದರಿಂದ ಏಪ್ರಿಲ್ 11, 2024 ರಂದು ಅಂದರೆ ಚಂದ್ರ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ ಇಂದು ರಾತ್ರಿ 8:40 ಕ್ಕೆ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗ ಬಹಳ ವಿಶೇಷವಾಗಿದೆ. ಈ ಯೋಗ ಯಾರ ಜಾತಕದಲ್ಲಿ ಇರುತ್ತದೆಯೋ ಅವರಿಗೆ ಎಲ್ಲಾ ರೀತಿಯಿಂದ ಅದೃಷ್ಟದ ಮಳೆ ಹರಿಯುತ್ತದೆ. ಹಾಗಾದಈ ಯಾವ ರಾಶಿಯವರಿಗೆ ಈ ಗಜಕೇಸರಿ ರಾಜಯೋಗ ಅದೃಷ್ಟವನ್ನು ಹೊತ್ತು ತರುತ್ತದೆ ಎಂಬುದು ಇಲ್ಲಿದೆ.
* ಮೇಷ ರಾಶಿ :-ಈ ರಾಶಿಯವರು ಗಜ ಕೇಸರಿ ಯೋಗದ ಕಾರಣದಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಘಳಿಸಬಹುದು. ವೈಯಕ್ತಿಕ ಜೀವನದಲ್ಲಿ ಬದಲಾವಣೆ ಇರುತ್ತದೆ. ಈ ಸಮಯದಲ್ಲಿ ಮನೆ ಸಂತೋಷದಿಂದ ತುಂಬಿರುತ್ತದೆ. ಕೌಟುಂಬಿಕ ಜೀವನ ಶಾಂತಿಯುತವಾಗಿರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಲಿದೆ. ಉದ್ಯೋಗಿಗಳು ಬಡ್ತಿ ಮತ್ತು ಹೆಚ್ಚಳದ ಅವಕಾಶಗಳನ್ನು ಪಡೆಯಬಹುದು. ಈ ಸಮಯ ದಲ್ಲಿ ನಿಮ್ಮ ಕನಸುಗಳು ಸಹ ನನಸಾಗುತ್ತದೆ.
ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
* ವೃಷಭ ರಾಶಿ :- ಈ ರಾಶಿಯವರಿಗೆ ಸಹ ಗಜಕೇಸರಿ ರಾಜಯೋಗ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ಉದ್ಯಮಿಗಳು ತಮ್ಮ ವ್ಯವ ಹಾರವನ್ನು ವಿಸ್ತರಿಸುವ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇದರಿಂದ ವ್ಯಾಪಾರ ಪ್ರವಾಸಗಳು ಇರಬಹುದು. ಈ ಪ್ರವಾಸಗಳು ನಿಮಗೆ ಲಾಭದಾಯಕವಾಗಿರುತ್ತದೆ. ಈ ಯೋಗದ ಸಮಯದಲ್ಲಿ ನೀವು ಯಾವುದೇ ಹೂಡಿಕೆಯನ್ನು ಮಾಡಿದರೂ ಸಹ ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇದು ನಿಮಗೆ ಬಹಳ ವಿಶೇಷ ಎನ್ನಲಾಗುತ್ತದೆ.
* ಕಟಕ ರಾಶಿ :- ಈ ಯೋಗದ ಕಾರಣದಿಂದ ನಿಮಗೆ ಅಷ್ಟಶ್ವರ್ಯಗಳು ಸಿಗುತ್ತದೆ. ಈ ಸಮಯದಲ್ಲಿ ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ನಿಮ್ಮ ವ್ಯಾಪಾರ ಪಾಲುದಾರ ಅಥವಾ ಸಂಗಾತಿಯಿಂದ ನೀವು ಆಶ್ಚರ್ಯಕರ ಸುದ್ದಿಯನ್ನು ಸ್ವೀಕರಿಸುತ್ತೀರಿ. ವ್ಯಾಪಾರಾಭಿವೃದ್ಧಿಗೆ ಅವಕಾಶಗಳು ದೊರೆಯಲಿವೆ. ಈ ಅವಕಾಶವನ್ನು ನೀವು ಚೆನ್ನಾಗಿ ಬಳಸಿಕೊಂಡರೆ ಶ್ರೀಮಂತಿಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅಲ್ಲದೇ ಅನೇಕ ಹಳೆಯ ನಿಂತು ಹೋಗಿದ್ದ ಕೆಲಸಗಳು ಈ ಸಮಯ ದಲ್ಲಿ ಆರಂಭವಾಗಿ ಯಶಸ್ಸನ್ನು ಪಡೆಯಬಹುದು.
ಈ ಸುದ್ದಿ ಓದಿ:- ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ಸಿಂಹ ರಾಶಿ :- ಈ ಯೋಗವು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಸಂಬಳ ಹೆಚ್ಚಾಗಲಿದೆ. ಮುಖ್ಯವಾಗಿ ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿನ ತೊಂದರೆಗಳು ದೂರವಾಗುತ್ತವೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕುಟುಂಬ ಸದಸ್ಯರ ನಡುವಿನ ಜಗಳಗಳು ಪರಿಹಾರವಾಗುತ್ತದೆ. ಸಂಬಂಧಿಕರ ನಡುವಿನ ಸಾಮರಸ್ಯವು ಸುಧಾರಿಸುತ್ತದೆ.
* ಧನಸ್ಸು ರಾಶಿ :- ಈ ರಾಶಿಯ ಜನರು ತಮ್ಮ ವೃತ್ತಿಯಲ್ಲಿ ಏಳಿಗೆ ಹೊಂದುತ್ತಾರೆ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಾದ ಅವಕಾಶಗಳನ್ನು ನೀವು ಪಡೆಯುತ್ತೀರಿ. ದತ್ತಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.