ಧರ್ಮಸ್ಥಳ ಸಂಘ(Dharmasthala sangha)ದಲ್ಲಿ ಇದ್ದಂತವರಿಗೆ ಇಲ್ಲಿದೆ ಖುಷಿ ವಿಚಾರ. ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿದವರಿಗೆ ಇದು ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲೇ ಸಾಲ ಮನ್ನಾ ಮಾಡುವ ವಿಚಾರವನ್ನ ಸಂಸ್ಥೆ ನೀಡಬಹುದು ಎನ್ನಲಾಗಿದೆ. ಧರ್ಮ ನೆಲೆಸಿರುವ ಸ್ಥಳವೇ ʻಧರ್ಮಸ್ಥಳʼವೆಂಬುದು ಭಕ್ತರ ನಂಬಿಕೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವಭಕ್ತರು ಭೇಟಿ ನೀಡುವಂತಹ ಸ್ಥಳ ಇದಾಗಿದೆ. ಇದು ಬಹಳ ಪ್ರಾಚೀನವಾದದ್ದು ಹಾಗೂ ತುಂಬಾ ಖ್ಯಾತಿ ಹೊಂದಿರುವ ದೇವಸ್ಥಾನ.
ಧರ್ಮಸ್ಥಳ ಕ್ಷೇತ್ರವು ಭಕ್ತಿ ಪ್ರಧಾನ ಕೇಂದ್ರ ಈ ದೇವಸ್ಥಾನಕ್ಕೆ ಜನಸಾಗರವೇ ಹರಿದು ಬರುತ್ತದೆ. ಸಾವಿರಾರು ಭಕ್ತಾದಿಗಳು ಶಿವನ ದರ್ಶನ ಪಡೆಯಲು ಬರುತ್ತಾರೆ. ಇದರ ಜೊತೆಗೆ ಧರ್ಮಸ್ಥಳ ಟ್ರಸ್ಟ್ ನಡೆಸುವ ಜನಸ್ನೇಹಿ ಕೆಲಸಗಳಿಂದ ಕೂಡ ಧರ್ಮಸ್ಥಳ ಕ್ಷೇತ್ರದ ಹೆಸರು ದೇಶದಾದ್ಯಂತ ಪಸರಿಸುತ್ತಿದೆ. ಧರ್ಮಸ್ಥಳದ ಟ್ರಸ್ಟ್ ವತಿಯಿಂದ ಯುವಕರಿಗೆ/ ಯುವತಿಯರಿಗೆ ಕಂಪ್ಯೂಟರ್ ಆಪರೇಟಿಂಗ್, ಟೈಲರಿಂಗ್, ಬ್ಯೂಟಿ ಪಾರ್ಲರ್ ಇತ್ಯಾದಿ ತರಬೇತಿ ನೀಡಿ ಅವರಿಗೆ ಸ್ವಯಂ ಉದ್ಯೋಗ ಮಾಡುವ ಅವಕಾಶವನ್ನು ನೀಡುತ್ತಿದೆ.
ಅದೇ ರೀತಿ ಗ್ರಾಮೀಣ ಭಾಗದಲ್ಲಿರುವವರಿಗೆ ಧರ್ಮಸ್ಥಳ ಸಂಘ ನಡೆಸುತ್ತಾರೆ. ಇದು ಕಷ್ಟದಲ್ಲಿದ್ದವರಿಗೆ ಧರ್ಮಸ್ಥಳ ಸಂಘದ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವ ಸೌಕರ್ಯ ಕೂಡ ಇದೆ. ಈ ಯೋಜನೆಯಲ್ಲಿ ಇರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುವುದರಿಂದ ಕೃಷಿ ಚಟುವಟಿಕೆಗೆ ಸಾಲವನ್ನು ಪಡೆಯುತ್ತಾರೆ.
ಸರಿಯಾದ ಮಳೆ, ಬೆಳೆಯಾಗದೆ ರೈತರು ನಷ್ಟದಲ್ಲಿ ಬಿದ್ದು ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಪ್ರತಿನಿತ್ಯ ನೋಡಬಹುದು. ಅಷ್ಟು ಕಷ್ಟ ಇರುವ ಅಂತಹ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಕೆಲಸ ಈ ಧರ್ಮಸ್ಥಳ ಸಂಘ ಮಾಡುತ್ತಿದೆ. ಮಳೆ ಬೆಳೆ ಸರಿಯಾಗಿ ಆಗದೆ ಇರುವ ಕಾರಣ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ.
ಈ ವರ್ಷ ರಾಜ್ಯದಲ್ಲಿ ಮುಂಗಾಳೆ ಮಳೆ ಸುರಿಯದೆ ಬರ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಧರ್ಮಸ್ಥಳ ಸಹಕಾರ ಸಂಘಗಳಲ್ಲಿ ಜನರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಅಥವಾ ಸಾಲ ಪಾವತಿ ಮುಂದೂಡಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಸಂಘದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗಡೆ ಅವರಿಗೆ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಎಂ.ಎಲ್ ಬಹಿರಂಗ ಪತ್ರ ಬರೆದಿದ್ದಾರೆ.
ಹೌದು, ಸಾಲ ಪಡೆದಿರುವ ರೈತರಿಗೆ ಮರುಪಾವತಿಸಲು ಕಷ್ಟವಾಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಧರ್ಮಾಧಿಕಾರಿಗಳು ಸಾಲಮನ್ನಾ ಮಾಡಬೇಕು ಎಂದು ಒಬ್ಬ ರೈತ ಪತ್ರ ಬರೆದಿದ್ದಾನೆ. ಅಷ್ಟು ಕಷ್ಟ ಇರುವಂತಹ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಕೆಲಸ ಧರ್ಮಸ್ಥಳ ಸಂಘ ಮಾಡುತ್ತಿದೆ.
ಒಂದು ವೇಳೆ ಸಾಲ ಮನ್ನಾ ಮಾಡದೆ ಇದ್ದರೆ ಸಾಲವನ್ನು ಮರುಪಾವತಿಸಲು ಒಂದು ವರ್ಷದ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಅಥವಾ ಬಡ್ಡಿಯನ್ನಾದರೂ ಕಡಿಮೆ ಮಾಡಿ ಎಂದು ಕೋರಿದರು. ಈಗ ಧರ್ಮಧಿಕಾರಿಗಳು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ. ಅದೇ ಇರಲಿ ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿದವರಿಗೆ ಸಾಲ ಮನ್ನಾ ಆಗುತ್ತೆ ಅನ್ನೋ ಸುದ್ದಿ ಇದೀಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿರೋದಂತು ನಿಜ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಶ್ರೀಧರ್ಮಸ್ಥಳ ಸಂಘ ಸಂಸ್ಥೆ ಅಥವಾ ವೀರೇಂದ್ರ ಹೆಗ್ಗಡೆಯವರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತೆ ಅನ್ನೋದನ್ನ ನೋಡಬೇಕಾಗಿದೆ.