ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮಾಡಬೇಕು ಎಂದು ಆಸಕ್ತಿ ಹೊಂದಿರುವ ಆಕಾಂಕ್ಷಿಗಳಿಗೆ ಜೊತೆಗೆ ದೇಶದ ಎಲ್ಲಾ ನಿರುದ್ಯೋಗಿಗಳಿಗೂ ಕೂಡ ಇದೊಂದು ಸಿಹಿ ಸುದ್ದಿ. ಯಾಕೆಂದರೆ ಪೋಲಿಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ನಡೆಯುತ್ತಿದೆ. 914 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ.
ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುತೇಕ ಆಕಾಂಕ್ಷಿಗಳಿಗೆ ಹುದ್ದೆ ಸಿಗುವ ಸಾಧ್ಯತೆ ಇದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಿ, ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯಬಹುದು. ಈ ಅಂಕಣದಲ್ಲಿ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಉದ್ಯೋಗದ ಕುರಿತಂತೆ ತಿಳಿಸಿರುವ ಪ್ರಮುಖ ಅಂಶಗಳನ್ನು ತಿಳಿಸಿ ಕೊಡುತ್ತಿದ್ದೇವೆ.
ಸಂಸ್ಥೆಯ ಹೆಸರು:- ಸಶಸ್ತ್ರ ಸೀಮಾ ಬಾಲ್ SSB.
ಹುದ್ದೆಗಳ ಸಂಖ್ಯೆ:- 914
ಉದ್ಯೋಗ ಸ್ಥಳ:- ಭಾರತದಾತ್ಯಂತ
ಹುದ್ದೆ:- ಹೆಡ್ ಕಾನ್ಸ್ಟೇಬಲ್
ವೇತನ ಶ್ರೇಣಿ:- 25,500 ರಿಂದ 81,000 ಮಾಸಿಕವಾಗಿ…
ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಐಟಿಐ ಉತ್ತಿರ್ಣರಾಗಿರಬೇಕು.
ವಯಸ್ಸಿನ ಮಿತಿ:-
● ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ 18 ವರ್ಷ ಪೂರೈಸಿರಬೇಕು.
● ಗರಿಷ್ಠ 27 ವರ್ಷಗಳನ್ನು ಮೀರಿದಬಾರದು.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
ಅರ್ಜಿ ಶುಲ್ಕ:-
● UR, EWS, OBC ಅಭ್ಯರ್ಥಿಗಳಿಗೆ 100ರೂ.
● SC/ST, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕಗಳಿರುವುದಿಲ್ಲ.
ಆಯ್ಕೆ ವಿಧಾನ:-
● ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಒಂದು ನಿಗದಿತ ದಿನಾಂಕದಂದು ದೈಹಿಕ ದಕ್ಷತೆ ಪರೀಕ್ಷೆ ನಡೆಸಲಾಗುತ್ತದೆ.
● ಇದರಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
● ನಂತರ ಸಂದರ್ಶನ ನಡೆಸಲಾಗುತ್ತದೆ.
● ಅಂತಿಮವಾಗಿ ದಾಖಲಾತಿಗಳ ಪರಿಶೀಲನೆ ಮೂಲಕ ಫೈನಲ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಛೆ ಇರುವ ಅಭ್ಯರ್ಥಿಗಳು ಮೊದಲು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಬೇಕು, ಅರ್ಹತೆ ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸಲು SSB ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲ ಅರ್ಜಿ ಫಾರಂ ಅನ್ನು ಸವಿವರಗಳೊಂದಿಗೆ ಭರ್ತಿ ಮಾಡಬೇಕು.
● ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನದ ಕುರಿತಂತೆ ಕೇಳಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಶುಲ್ಕ ಪಾವತಿ ಮಾಡಿ ರಶೀದಿ ಸ್ವೀಕರಿಸಬೇಕು.
● ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು. ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಮುಂತಾದವುಗಳನ್ನು ಬರೆದಿಟ್ಟುಕೊಳ್ಳಬೇಕು.
ಕೇಳಲಾಗುವ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಇನ್ನಿತ್ಯಾದಿ ಪ್ರಮುಖ ದಾಖಲೆಗಳು
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 09.05.2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ:- 07.06.2023.