ನಮ್ಮ ದೇಹ ಒಂದು ಅದ್ಭುತವಾದ ಯಂತ್ರ ಅದಕ್ಕೆ ಯಾವುದಾದರೂ ಸಮಸ್ಯೆ ಬಂದಾಗ ಯಾವುದೇ ವಾರ್ನಿಂಗ್ ಇಲ್ಲದೆ ಅದು ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಚಿಕ್ಕ ಚಿಕ್ಕ ಸಿಗ್ನಲ್ಸ್ ಗಳನ್ನು ಕೊಡುತ್ತದೆ. ಈ ಸಂಕೇತದಿಂದ ಅರ್ಥವಾಗುತ್ತದೆ ನಮ್ಮ ದೇಹದಲ್ಲಿ ಏನೋ ಸಮಸ್ಯೆ ಬಂದಿದೆ ಅಂತ ಆದರೆ ಇಲ್ಲಿ ನಾವು ತಿಳಿಯಬೇಕಾದ ವಿಷಯ ಏನು ಎಂದರೆ.
ದೇಹ ಕೊಡುವಂತಹ ಸಿಗ್ನಲ್ಸ್ ಗೆ ಅರ್ಥ ಏನು ಅಂತ. ಹಾಗಾದರೆ ಈ ದಿನ ನಮ್ಮ ದೇಹದಲ್ಲಿ ಯಾವುದಾದರೂ ತೊಂದರೆ ಆಗಿದೆ ಎಂದರೆ ನಮ್ಮ ದೇಹ ನಮಗೆ ಯಾವುದೆಲ್ಲ ರೀತಿಯ ಸಿಗ್ನಲ್ಸ್ ಗಳನ್ನು ತೋರಿಸುತ್ತದೆ ಹಾಗೂ ಆ ಸಿಗ್ನಲ್ ಗಳು ಯಾವ ಸಮಸ್ಯೆ ಇದೆ ಎನ್ನುವುದನ್ನು ತೋರಿಸುತ್ತದೆ.
* ನೀವು ಹಲ್ಲನ್ನು ಉಜ್ಜುವಂತಹ ಸಮಯದಲ್ಲಿ ರಕ್ತ ಬಂದರೆ ಹಾಗೂ ಗಟ್ಟಿ ಪದಾರ್ಥಗಳನ್ನು ತಿಂದರೆ ಹಲ್ಲುಗಳಲ್ಲಿ ರಕ್ತ ಬಂದರೆ ನಿಮ್ಮಲ್ಲಿ ಕ್ಯಾಲ್ಸಿಯಂ ಡಿಫಿಷಿಯನ್ಸಿ ಇದೆ ಎಂದು ಅರ್ಥ.
ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ತಿಳಿ ಯೋಣ. ವಿಟಮಿನ್ಸ್ ಅಂಡ್ ಮಿನರಲ್ಸ್ ನಮ್ಮ ದಿನನಿತ್ಯದ ದೇಹದ ಆರೋಗ್ಯಕ್ಕೆ ತುಂಬಾ ಮುಖ್ಯ. ಆದರೆ ಇಲ್ಲಿ ವಿಚಿತ್ರ ಏನು ಎಂದರೆ ಈಗಿನ ಜನರು ಯಾವುದರ ಬಗ್ಗೆಯೂ ಯೋಚನೆ ಮಾಡದೆ ಅವರ ದೇಹದಲ್ಲಿ ಯಾವ ವಿಟಮಿನ್ ಗಳ ಕೊರತೆ ಇದೆ ಎಂದು ತಿಳಿದುಕೊಳ್ಳದೆ ಮಲ್ಟಿ ವಿಟಮಿನ್ಸ್ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದಾರೆ.
ಅದೇ ನಮ್ಮ ದೇಹದಲ್ಲಿ ಇರುವಂತಹ ಒಳ್ಳೆಯ ವಿಷಯ ಏನು ಎಂದರೆ ವಿಟಮಿನ್ ಗಳ ಕೊರತೆ ಏನಾದರೂ ಬಂದರೆ ಅದು ಕೆಲವು ಸಿಗ್ನಲ್ಸ್ ಗಳನ್ನು ಕೊಡುತ್ತದೆ. ಹಾಗಾದರೆ ಆ ಸಿಗ್ನಲ್ಸ್ ಯಾವುದು ಎನ್ನುವುದನ್ನು ಈಗ ತಿಳಿಯೋಣ. * ನೀವು ಕೆಳಗೆ ಕೂರುವಾಗ ನಿಮ್ಮ ಮೊಣಕಾಲಿನಲ್ಲಿ ಕಟ್ ಕಟ್ ಎಂದು ಶಬ್ದ ಬಂದರೆ ಇದನ್ನು ಕ್ಯಾಲ್ಸಿಯಂ ಡಿಫಿಷಿಯನ್ಸಿ ಎನ್ನುತ್ತಾರೆ. ಈ ಕ್ಯಾಲ್ಸಿಯಂ ನಮ್ಮ ಮೂಳೆಗಳಿಗೆ ಮತ್ತು ನಮ್ಮ ಹಲ್ಲುಗಳಿಗೆ ತುಂಬಾ ಮುಖ್ಯವಾದದ್ದು.
* ಈ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದರೆ ಆರ್ಥ ರೈಟಿಸ್ ಕೂಡ ಬರಬಹುದು. ಇದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದರೆ ಹಾಲು ಮತ್ತು ಹಾಲಿನಿಂದ ತಯಾರಿಸಿದಂತಹ ಪದಾರ್ಥಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಅದೇ ರೀತಿಯಾಗಿ ಕಿವಿ ಹಣ್ಣು, ಕಿತ್ತಳೆ ಹಣ್ಣು, ಬ್ಲೂ ಬೆರ್ರಿ, ಪರಂಗಿ ಹಣ್ಣು ಇಂಥವುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಸಿಗುತ್ತದೆ.
* ಹಾಗಾಗಿ ಇದನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಮೇಲೆ ಹೇಳಿದಂತೆ ಕಿವಿ ಹಣ್ಣು, ಕಿತ್ತಳೆ ಹಣ್ಣು, ಬ್ಲೂ ಬೆರ್ರಿ, ಇವುಗಳನ್ನು ಹೇರಳವಾಗಿ ತಿನ್ನಬೇಕು 20 ಕಿತ್ತಳೆ ಹಣ್ಣನ್ನು ತಿನ್ನುವುದರ ಬದಲು ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನುವುದು ಸೂಕ್ತ ಎಂದು ಹೇಳಬಹುದು. ಹೌದು ಬೆಟ್ಟದ ನೆಲ್ಲಿ ಕಾಯಿಯಲ್ಲಿ ಯಥೇಚ್ಛವಾಗಿ ಕ್ಯಾಲ್ಸಿಯಂ ಅಂಶ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.
* ಕೆಲವೊಂದಷ್ಟು ಜನರಿಗೆ ಬೆರಳುಗಳಲ್ಲಿ ಉಗುರು ಸರಿಯಾಗಿ ಬರುವು ದಿಲ್ಲ ಹಾಗೂ ಬೆಳೆದರು ಅದು ಅರ್ಧಕ್ಕೆ ಬೀಳುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ತಲೆ ಕೂದಲು ಯಥೇಚ್ಛವಾಗಿ ಉದುರುತ್ತಿರು ತ್ತದೆ ಇದಕ್ಕೆ ಕಾರಣ ಏನು ಎಂದರೆ ನಿಮ್ಮ ದೇಹದಲ್ಲಿ ಬಯೋಟಿನ್ ಕಡಿಮೆಯಾಗಿದೆ ಎಂದರ್ಥ. ಈ ಬಯೋಟಿನ್ ನಮ್ಮ ಹೊಟ್ಟೆಯಲ್ಲಿರು ವಂತಹ ಗುಡ್ ಬ್ಯಾಕ್ಟೀರಿಯಾದಿಂದ ತಯಾರಾಗುತ್ತದೆ. ಹಾಗೇನಾದರೂ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾದರೆ ಮೇಲೆ ಹೇಳಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.