ಅಂಚೆ ಕಚೇರಿಗಳಲ್ಲಿ (Post office) ಈಗ ಹಲವಾರು ಯೋಜನೆಗಳು ಲಭ್ಯವಿದೆ ಈ ಯೋಜನೆಗಳಲ್ಲಿ ನಾಗರಿಕರು ಹಣವನ್ನು ಹೂಡಿಕೆ (invest) ಮಾಡುವುದರಿಂದ ನೂರಕ್ಕೆ ನೂರರಷ್ಟು ಆ ಹಣಕ್ಕೆ ಭದ್ರತೆ ಇರುತ್ತದೆ. ಜೊತೆಗೆ ಅಂಚೆ ಕಚೇರಿಯಲ್ಲಿ ಯೋಜನೆಗಳಿಗೆ ಅನುಸಾರವಾಗಿ ಆಕರ್ಷಣೀಯ ಬಡ್ಡಿದರಗಳು ಇವೆ. ಹಾಗಾಗಿ ಹೆಚ್ಚು ರಿಸ್ಕ್ ಇಲ್ಲದೆ ಖಚಿತ ಆದಾಯ ಮತ್ತು ಸುರಕ್ಷತೆ ಪಡೆಯಲು ಬಯಸುವವರು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ.
ಅಂಚೆ ಕಚೇರಿಯಲ್ಲಿ POMIS, NSP, PPF, KVP, SSY, FD, RD Scheme ಇನ್ನು ಮುಂತಾದ ಅನೇಕ ವಿಭಾಗದ ಯೋಜನೆಗಳಿವೆ. ಇವುಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಬಹಳ ವಿಶೇಷ. ಯಾಕೆಂದರೆ ಈ ಯೋಜನೆಯಡಿ ಹಣವನ್ನು ಹೂಡಿಕೆ ಮಾಡಿದರೆ ಅದು ಡಬಲ್ ಆಗುತ್ತದೆ ಈ ಯೋಜನೆ ಕುರಿತು ಪ್ರಮುಖ ವಿವರ ಇಲ್ಲಿದೆ ನೋಡಿ.
ಬಾತ್ರೂಮ್ ನಲ್ಲಿರೋ ಬಕೆಟ್ ಹಾಗೂ ಮಗ್ ಬಣ್ಣ ಬದಲಾಯಿಸಿದರೆ ಈ ಸಲಹೆಯನ್ನ ಪಾಲಿಸಿ ಮತ್ತೆ ಹೊಸತರಂತೆ ಫಳಫಳ ಎನ್ನುತ್ತದೆ.!
● ಇದೊಂದು ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ಆಗಿದೆ,
ಈ ಯೋಜನೆಯನ್ನು ಭಾರತದ ನಾಗರಿಕರುವ ಮಾತ್ರ ಖರೀದಿಸಬಹುದು.
● ಈ ಯೋಜನೆ ಖರೀದಿಸಲು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ, ಆದರೆ 18 ವರ್ಷ ವಯಸ್ಸಿನ ಒಳಗಿರುವವರ ಹೆಸರಿನಲ್ಲಿ ಪೋಷಕರು ಜಂಟಿಯಾಗಿ ಖರೀದಿಸಬಹುದು,
ಯಾವುದೇ ಇಬ್ಬರು ವಯಸ್ಕ ವ್ಯಕ್ತಿ ಜಂಟಿಯಾಗಿ ಖರೀದಿಸಬಹುದು ಅಥವಾ ಯಾವುದೇ ಒಂದು ಟ್ರಸ್ಟ್ ಕೂಡ ಈ ಯೋಜನೆಯನ್ನು ಖರೀದಿಸಬಹುದು.
● ಕನಿಷ್ಠ 1,000ರೂ. ನಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ.
● ಈ ಯೋಜನೆ ಮೆಚ್ಯುರಿಟಿ ಅವಧಿ 124 ತಿಂಗಳು ಅಂದರೆ 10 ವರ್ಷ 4 ತಿಂಗಳು.
● ಈ ಯೋಜನೆಯಲ್ಲಿ ನೀವು ಉದಾಹರಣೆಗೆ 50,000 ಹಣವನ್ನು ಹೂಡಿಕೆ ಮಾಡಿದರೆ ಇನ್ನೂ 124 ತಿಂಗಳಿಗೆ ನಿಮಗೆ ಒಂದು ಲಕ್ಷ ರಿಟರ್ನ್ಸ್ ಬರುತ್ತದೆ.
ಎರಡೇ ನಿಮಿಷಗಳಲ್ಲಿ ಹಲ್ಲು ನೋವು, ಬಾಯಿ ದುರ್ವಾಸನೆ, ಮಾಯ ಮಾಡುವ ಅದ್ಭುತ ಮನೆ ಮದ್ದು.!
● ಪ್ರಸ್ತುತವಾಗಿ ಯೋಜನೆಯಲ್ಲಿ 7% ಬಡ್ಡಿದರ ನಿಗದಿಯಾಗಿದೆ.
● ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಸ್ಕೀಮ್ ಆಗಿರುತ್ತದೆ, ನೀವು ಒಂದೇ ಬಾರಿಗೆ ಹಣವನ್ನು ಹೂಡಿಕೆ ಮಾಡಬೇಕು. ಪ್ರೀಮಿಯಂ ರೀತಿಯಲ್ಲಿ ಪ್ರತಿ ತಿಂಗಳು ಕಟ್ಟುವ ಅವಕಾಶ ಇರುವುದಿಲ್ಲ.
● ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳುವುದಿಲ್ಲ.
● ಒಂದು ಬಾರಿ ಈ ಯೋಜನೆಯನ್ನು ಖರೀದಿಸಿದ ಮೇಲೆ ಅವಧಿ ಮುಗಿಯುವವರೆಗೂ ಕೂಡ ಅದನ್ನು ಮುರಿಯಲು ಸಾಧ್ಯವಿಲ್ಲ. ಆದರೆ ವ್ಯಕ್ತಿಯ ಮೃ’ತಪಟ್ಟಲ್ಲಿ ಇದು ಕ್ಲೈಮ್ ಆಗುತ್ತದೆ, ನಾಮಿನಿಗೆ ಹಣ ಹೋಗುತ್ತದೆ ಅಥವಾ ಕೋರ್ಟ್ ಎಮರ್ಜೆನ್ಸಿ ಗಳು ಇದ್ದ ಸಂದರ್ಭದಲ್ಲಿ ಮಾತ್ರ ಕೋರ್ಟ್ ಅನುಮತಿಯೊಂದಿಗೆ ಇದನ್ನು ಮುರಿಯಬಹುದು.
ನಿಮ್ಮ ಮನೆಯನ್ನು ಸುಂದರವಾಗಿಡಲು ಮತ್ತು ಅಡುಗೆ ಮನೆಗೆ ಉಪಯೋಗವಾಗುವಂತಹ ಸೂಪರ್ ಟಿಪ್ಸ್..!
● ನೀವು ಈಗ ಒಂದು ವರ್ಷದ ಹಿಂದೆ 50 ಲಕ್ಷಕ್ಕೆ ಕಿಸಾನ್ ವಿಕಾಸ್ ಪತ್ರ ಯೋಜನೆ ಖರೀದಿಸಿದ್ದೀರಿ ಎಂದುಕೊಳ್ಳೋಣ, ಮತ್ತೆ ಈಗ ನಿಮ್ಮ ಬಳಿ 10 ಲಕ್ಷ ಹಣ ಇರುತ್ತದೆ ಈ ಹಣವನ್ನು ಕೂಡ ಅದಕ್ಕೆ ಸೇರಿಸಬಹುದೇ ಎಂದರೆ ಖಂಡಿತ ಸಾಧ್ಯವಿಲ್ಲ ನೀವು ಮತ್ತೊಂದು ಕಿಸಾನ್ ವಿಕಾಸ್ ಪತ್ರವನ್ನು ಖರೀದಿಸಬೇಕಾಗುತ್ತದೆ.
● 10 ಲಕ್ಷ ರೂಗಿಂತ ಹೆಚ್ಚು ಹಣ ಹೂಡಿಕೆ ಮಾಡಿದರೆ ITR, ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
● ಪೋಸ್ಟ್ ಆಫೀಸ್ ಉಳಿದ ಯೋಜನೆಗೆ ಅನ್ವಯವಾಗುವ ಎಲ್ಲಾ ಕಂಡಿಷನ್ ಗಳು ಕೂಡ ಅಪ್ಲೈ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಭೇಟಿ ಕೊಡಿ ಅಥವಾ ಸರ್ಕಾರದ ಅಫೀಷಿಯಲ್ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ಪಡೆಯಿರಿ.