ಕರ್ನಾಟಕದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ಯಾಕೆಂದರೆ, ಬಿಜಾಪುರದಲ್ಲಿರುವ ಸೈನಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ಮೊತ್ತದ ಮಾಸಿಕ ವೇತನದ ಜೊತೆ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯು ಸಹ ಇರುತ್ತದೆ.
ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಅರ್ಹತೆ ಇರುವ ಎಲ್ಲಾ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಆ ಪ್ರಕಾರವಾಗಿ ಅರ್ಹತೆ ಇದ್ದವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಕೋರಲಾಗಿದೆ. ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ಈ ಅಂಕಣದಲ್ಲೂ ಸಹ ಅಧಿಸೂಚನೆಯಲ್ಲಿ ಇರುವ ಎಲ್ಲಾ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- ಸೈನಿಕ ಶಾಲೆ
ಉದ್ಯೋಗ ಸ್ಥಳ:- ಬಿಜಾಪುರ
ಒಟ್ಟು ಹುದ್ದೆಗಳ ಸಂಖ್ಯೆ:- 08
ವೇತನ ಶ್ರೇಣಿ:- 60,000 ಮಾಸಿಕವಾಗಿ…
ಹುದ್ದೆಗಳ ವಿವರ:-
● LDC – 1
● ಮ್ಯೂಸಿಕ್ ಟೀಚರ್ – 1
● PEM / PTI & Matron – 1
● ಕೌನ್ಸಲರ್ – 1
● ವಾರ್ಡ್ ಬಾಯ್ಸ್ – 4
ಶೈಕ್ಷಣಿಕ ವಿದ್ಯಾರ್ಹತೆ:-
● LDC – ದ್ವಿತೀಯ ಪಿಯುಸಿ
● ಮ್ಯೂಸಿಕ್ ಟೀಚರ್ – ದ್ವಿತೀಯ ಪಿಯುಸಿ, ಡಿಪ್ಲೋಮೋ, ಪದವಿ
● PEM / PTI & Matron – ದ್ವಿತೀಯ ಪಿಯುಸಿ
● ಕೌನ್ಸಲರ್ – ಪದವಿ ಸ್ನಾತಕೋತ್ತರ ಪದವಿ
● ವಾರ್ಡ್ ಬಾಯ್ಸ್ – ದ್ವಿತೀಯ ಪಿಯುಸಿ.
ವಯೋಮಿತಿ:- ಹುದ್ದೆಗಳಿಗನುಸಾರವಾಗಿ…
● LDC – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
● ಮ್ಯೂಸಿಕ್ ಟೀಚರ್ – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
● PEM / PTI & Matron – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
● ಕೌನ್ಸಲರ್ – ಕನಿಷ್ಠ 21 ವರ್ಷಗಳು, ಗರಿಷ್ಠ 35 ವರ್ಷಗಳು.
● ವಾರ್ಡ್ ಬಾಯ್ಸ್ – ಕನಿಷ್ಠ 18 ವರ್ಷಗಳು ಗರಿಷ್ಠ 50 ವರ್ಷಗಳು.
ಅರ್ಜಿ ಶುಲ್ಕ:-
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಕೂಡ 500ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
ಅರ್ಜಿ ಶುಲ್ಕ ಪಾವತಿ ವಿಧಾನ:- ಆಫ್ ಲೈನ್ ಮೂಲಕ…
ಅರ್ಜಿ ಸಲ್ಲಿಸುವ ವಿಧಾನ:-
● ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸವಿವರಗಳನ್ನು ತುಂಬಿಸಬೇಕು.
● ಇದರ ಜೊತೆ ಶೈಕ್ಷಣಿಕ ವಿದ್ಯಾಭ್ಯಾಸ ಮತ್ತು ವಯೋಮಿತಿ ಬಗ್ಗೆ ಕೇಳಲಾದ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಕಳುಹಿಸಬೇಕು.
ಆಯ್ಕೆ ವಿಧಾನ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆಗಳು ಹಾಗೂ ವೈದ್ಯಕೀಯ ಪರೀಕ್ಷೆಗಳು ಇರುವುದಿಲ್ಲ
● ನೇರ ಸಂದರ್ಶನ ನಡೆಸುವ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ನಡೆಸುವುದು ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:-
ಪ್ರಿನ್ಸಿಪಲ್,
ಸೈನಿಕ ಶಾಲೆ, ಬಿಜಾಪುರ
ಕರ್ನಾಟಕ – 586108.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 29 ಏಪ್ರಿಲ್, 2023.
● ಅರ್ಜಿ ಸಲ್ಲಿಕೆಗೆ ಕಡೇ ದಿನಾಂಕ – 20 ಮೇ, 2023.