Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

Posted on February 14, 2023 By Kannada Trend News No Comments on ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

 

ಹಿಂದೆಲ್ಲಾ ಮನರಂಜನೆ ಬದುಕಿನ ಒಂದು ಸಣ್ಣ ಭಾಗವಾಗಿತ್ತು, ದಿನಪೂರ್ತಿ ದುಡಿಯುತ್ತಿದ್ದ ಮಂದಿ ಸಂಜೆ ಊಟ ಮಾಡಿ ಪಡಸಾಲೆ ಮೇಲೆ ಕೂತು ಕ್ಷಣ ಹೊತ್ತು ಮಾತನಾಡಿದರೆ ಅದು ಅಲ್ಲಿಗೆ ಮುಗಿಯುತಿತ್ತು, ಅಥವಾ ಶುಕ್ರವಾರ ವಿಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಮಂಜರಿಯ 5 ಹಾಡುಗಳಲ್ಲಿ ಅದು ಮುಗಿದು ಹೋಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆ ಈಗ ಕಾಲ ಎಷ್ಟು ಬದಲಾಗಿ ಹೋಗಿದೆ ಎಂದರೆ ಕಳೆದ ಎರಡು ದಶಕದಲ್ಲಿ ಈ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ.

ಅದರಲ್ಲಂತೂ ಮನೋರಂಜನೆ ವಿಷಯದಲ್ಲಿ ಇದೊಂದು ದೊಡ್ಡ ಪವಾಡದಂತೆ ಜಾದು ಆಗುತ್ತಿದೆ. ಬದುಕಿನ ಒಂದು ಸಣ್ಣ ಭಾಗವಾಗಿದ್ದ ಮನೋರಂಜನೆ ಇಂದು ದಿನಪೂರ್ತಿ ಆವರಿಸಿಕೊಂಡು ಎಲ್ಲರ ಕೈ ಬೆರಳು ತುದಿಯವರೆಗೂ ಬಂದುಬಿಟ್ಟಿದೆ. ಅದರಲ್ಲಿ ಟಿವಿ ಮಾಧ್ಯಮವೂ (television) ಮನರಂಜನೆಯ (entertainment) ಸಾಧನವಾಗಿ ಕೆಲಸ ಮಾಡುತ್ತಿದೆ ಟಿವಿ ಮಾಧ್ಯಮ ಅಥವಾ ಕಿರುತೆರೆ ಎಂದ ತಕ್ಷಣ ಅದರಲ್ಲಿ ಮೊದಲಿಗೆ ಮನಸ್ಸಿಗೆ ಬರುವುದು ಧಾರವಾಹಿಗಳು (Serials).

ಈ ಧಾರಾವಾಹಿಗಳನ್ನು ಮನೆಯಲ್ಲಿರುವ ಗೃಹಿಣಿಯರ ಆಸಕ್ತಿ ಎಂದು ದೂರುತ್ತಿದ್ದಾದರೂ ಇಂದು ಮಕ್ಕಳ ಸಮೇತ ಎಲ್ಲರೂ ಸಹ ಧಾರಾವಾಹಿಗಳನ್ನು ನೋಡುತ್ತಾರೆ ಅಥವಾ ಧಾರಾವಾಹಿಗಳ ಬಗ್ಗೆ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ (Social media) ಯುಗ ಶುರುವಾದ ಮೇಲೆ ಯಾರು ಎಲ್ಲಿ ಬೇಕಾದರೂ ಅವರಿಗೆ ಇಷ್ಟ ಬಂದ ಕಾರ್ಯಕ್ರಮ ನೋಡಬಹುದಾದ ಕಾರಣ ಜೊತೆಗೆ ಎಲ್ಲಾ ವಿಷಯಗಳ ಬಗ್ಗೆ ಎಲ್ಲರೂ ಹಂಚಿಕೊಂಡು ಅದು ಎಲ್ಲರಿಗೂ ತಲುಪುತ್ತಿರುವ ಕಾರಣ ಒಂದಲ್ಲ ಒಂದು ಕಾರಣದಿಂದ ಧಾರಾವಾಹಿಯ ವಿಷಯಗಳು ಎಲ್ಲರಿಗೂ ಮುಟ್ಟುತ್ತಿದೆ.

ಈಗ ಇಂತಹದೇ ಒಂದು ಧಾರಾವಾಹಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿರುವುದು ಅಲ್ಲದೆ ಆ ಧಾರವಾಹಿಯ ಒಂದು ವಿಷಯವನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಎನ್ನುವ ಧಾರಾವಾಹಿ ಒಂದು ವಿಭಿನ್ನ ಪ್ರೇಮ ಕಥೆ ಎನ್ನುವುದು ಎಲ್ಲರಿಗೂ ತಿಳಿದಿದೆ.

20 ವರ್ಷದ ಹುಡುಗಿ 40ರ ವಯೋಮಾನದ ವಯಸ್ಕರನ್ನು ಪ್ರೀತಿಸಿ ಮದುವೆ ಆಗುವ ಈ ಕಥೆ ಶುರುವಾದ ದಿನದಿಂದ ನಂಬರ್ ಒನ್ ಸ್ಥಾನದಲ್ಲಿದ್ದು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅನಿರುದ್ಧ್ (Actor Anirudh) ಅವರು ಆರ್ಯವರ್ಧನ (Aryavardhan role) ಆಗಿ ಈ ಧಾರಾವಾಹಿ ನಲ್ಲಿ ಅಭಿನಯಿಸುತ್ತಿದ್ದರು, ಆದರೆ ಕೆಲ ಕಾರಣಗಳಿಂದ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಗೆ ಅ.ಪ.ಘಾ.ತ.ವಾಗಿ ಅವರು ಸ.ತ್ತು ಹೋದರು ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಅದೇ ದಿನ ನಾಯಕಿ ಅನು ಸಿರಿಮನೆ (role Anusirimane) ಗರ್ಭಿಣಿ (pregnant) ಆಗಿದ್ದಾಳೆ ಎನ್ನುವುದು ಎಲ್ಲರಿಗೂ ಶಾಕ್ ನೀಡಿತ್ತು. ಅನು ಸಿರಿಮನೆಯಾಗಿ ಮೇಘ ಶೆಟ್ಟಿ (Megha Shetty)ಅವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅನು ಸಿರಿಮನೆ ಪಾತ್ರದ ಬಗ್ಗೆ ಜೋರಾಗಿರುವುದು ಯಾಕೆಂದರೆ ಅವರು ಗರ್ಭಿಣಿ ಎನ್ನುವ ವಿಷಯ ಹೇಳಿ ಅನೇಕ ತಿಂಗಳುಗಳೇ ಕಳೆದಿವೆ. ಆದರೂ ಕೂಡ ಇನ್ನೂ ಸಹ ಅನು ಸಿರಿಮನೆಯನ್ನು ಮೊದಲಿನಂತೆ ತೋರಿಸಲಾಗುತ್ತಿದೆ, ಆಕೆ ಗರ್ಭಿಣಿ ಎನ್ನುವುದಕ್ಕೆ ಹೊಟ್ಟೆ ಕಾಣುತ್ತಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ಇದೇ ವಿಷಯವನ್ನು ಇಟ್ಟುಕೊಂಡು ಈಗ ಅವರನ್ನು ಟ್ರೋಲ್ (troll) ಸಹಾ ಮಾಡಲಾಗುತ್ತಿದೆ. ಒಂದರ್ಥದಲ್ಲಿ ಜನರು ಧಾರಾವಾಹಿಗಳನ್ನು ಎಷ್ಟು ಗಮನಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ಯಾಕೆಂದರೆ ದಿನವೂ ತಪ್ಪದೆ ಟಿವಿಯಲ್ಲಿ ಬರುವ ಇವರುಗಳು ತಮ್ಮ ಜೀವನದ ಅವಿಭಾಜ್ಯ ಅಂಗವೆನ್ನುವಂತೆ ಜನ ಭಾವಿಸುತ್ತಾರೆ. ಅವುಗಳು ಪಾತ್ರವೇ ಆಗಿದ್ದರೂ ಪ್ರತಿದಿನ ನೋಡುವುದರಿಂದ ಆ ಪಾತ್ರಗಳ ಜೊತೆಗೆ ಒಂದು ಭಾವನಾತ್ಮಕ ಸಂಬಂಧವನ್ನು ಆ ಪಾತ್ರಗಳೊಂದಿಗೆ ಬೆಸೆದುಕೊಂಡಿರುತ್ತಾರೆ.

ಅದನ್ನು ಇಷ್ಟು ಚೆನ್ನಾಗಿ ಗಮನಿಸಿರುವ ಕಾರಣವಾಗಿಯೇ ಇಂದು ನಾಯಕಿ ಪ್ರೆಗ್ನೆಂಟ್ ವಿಷಯ ಟ್ರೋಲ್ ಆಗುತ್ತಿರುವುದು. ಕಥೆಯಲ್ಲಿ ಈಗಾಗಲೇ ನಾನಾ ಬಗೆಯ ತಿರುವುಗಳು ತೆರೆದುಕೊಂಡಿದೆ, ಈಗ ಅನುಸಿರಿಮನೆ ಹೊಟ್ಟೆಯಲ್ಲಿರುವ ಮಗುವಿನಿಂದ ಧಾರಾವಾಹಿಗೆ ಇನ್ನೊಂದು ಟ್ವಿಸ್ಟ್ ಸಿಗಲಿದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

Serial Loka Tags:Anusirimane, Jothe jotheyali
WhatsApp Group Join Now
Telegram Group Join Now

Post navigation

Previous Post: ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.
Next Post: ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore