ನಮ್ಮ ಹಿಂದೂ ಪಂಚಾಂಗದ ಪ್ರಕಾರವಾಗಿ ಯುಗಾದಿಯು ನಮಗೆ ಹೊಸ ವರ್ಷವಾಗಿದೆ. ಏಪ್ರಿಲ್ 9ರಂದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದ್ದು ಮುಂದಿನ ಒಂದು ವರ್ಷದವರೆಗೆ ಕಟಕ ರಾಶಿಯವರಿಗೆ ನೂತನ ವರ್ಷ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.
ಈಗಾಗಲೇ ಕಟಕ ರಾಶಿಗೆ ಕಳೆದ ಒಂದು ವರ್ಷದಿಂದ ಅಷ್ಟಮ ಶನಿ ಕಾಟ ನಡೆಯುತ್ತಿದೆ. ಒಂದು ಕಡೆ ಗುರು ಚೆನ್ನಾಗಿಲ್ಲ, ಮತ್ತೊಂದೆಡೆ ಶನಿ ಪ್ರಭಾವ. ಒಟ್ಟಾರೆಯಾಗಿ ಈ ಒಂದು ವರ್ಷ ಕಟಕ ರಾಶಿಯವರು ನಾನಾ ರೀತಿಯ ಸಂಕಷ್ಟ ಎದುರಿಸಿದ್ದಾರೆ, ಹೊಂದಾಣಿಕೆಯಲ್ಲಿ ಸಮಯ ಕಳೆದಿದ್ದಾರೆ.
ಈ ವರ್ಷವಾದರೂ ಶುಭಫಲಗಳಿವೆಯೇ ಎಂದು ನಿರೀಕ್ಷಿಸುವವರಿಗೆ ಒಂದು ಸಮಾಧಾನಕರ ಉತ್ತರ ಸಿಗಲಿದೆ, ಲೇಖನವನ್ನು ಕೊನೆಯವರೆಗೂ ಓದಿ ಕಟಕ ರಾಶಿಯವರಿಗೆ ರಾಶಿಯಿಂದ 6ನೇ ಮನೆ ಅಧಿಪತಿ ಮತ್ತು ಭಾಗ್ಯಧಿಪತಿ ಅಂದರೆ 9ನೇ ಮನೆಯ ಅಧಿಪತಿಯು ಗುರು ಆಗಿದ್ದಾರೆ.
ಆದರೆ ಗುರುವೇ ಕೆಟ್ಟಿರುವುದರಿಂದ ಈ ಕೆಟ್ಟ ಸಮಯದಲ್ಲಿ ಕಟಕ ರಾಶಿಯವರು ಅನುಭವಿಸಿರುವ ಕ’ಷ್ಟಗಳು ಅಷ್ಟಿಷ್ಟಲ್ಲ. ಯಾಕೆಂದರೆ ಸಾಲಭಾದೆ ಶತ್ರುಗಳ ಕಾಟ ಹೆಚ್ಚಾಗುವುದು, ಆರೋಗ್ಯ ಹದಗೆಡುವುದು ಕೆಲಸಗಳಲ್ಲಿ ಹಿನ್ನಡೆ ಯಾವುದೇ ಕೆಲಸ ಮಾಡಲು ಎಷ್ಟೇ ಪ್ರಯತ್ನ ಪಡಲು ಅದು ಅರ್ಧಕ್ಕೆ ನಿಲ್ಲುವುದು, ಇದೆಲಾ ಲ ಸಮಸ್ಯೆಗಳಿಗೆ ಗುರುಬಲ ಇಲ್ಲದೆ ಇರುವುದು ಅಥವಾ ಗುರು ಸೂಕ್ತ ಸ್ಥಳದಲ್ಲಿ ಇಲ್ಲದೆ ಇರುವುದೇ ಕಾರಣವಾಗಿದೆ.
ಆದರೆ ಸಮಾಧಾನದಿಂದ ಇರಿ ಯಾಕೆಂದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ ಸದ್ಯಕ್ಕೆ 10ನೇ ಮನೆಯಲ್ಲಿರುವ ಗುರುವು ಉತ್ತಮ ಫಲಗಳನ್ನು ನೀಡಲು ಅಡೆತಡೆ ಆಗುತ್ತಿದ್ದರು ಯುಗಾದಿಯ ನಂತರ ಸ್ಥಾನ ಬದಲಾವಣೆ ನಿಮ್ಮ ಹಣೆಬರಹವನ್ನು ಕೂಡ ಬದಲಾಯಿಸಲಿದೆ.
ಏಪ್ರಿಲ್ 9 ರಿಂದ ಮುಂದಿನ 21 ದಿನಗಳ ಕಾಲ ಅಂದರೆ ಏಪ್ರಿಲ್ 30, 2024ರ ವರೆಗೆ ಮಾತ್ರ ಹೊಸ ವರ್ಷದಲ್ಲಿ ನಿಮಗೆ ಒಂದಷ್ಟು ಸಮಸ್ಯೆಗಳು ಇರುತ್ತವೆ. ಮೇ 1, 2024 ರಿಂದ ಮುಂದಿನ ವರ್ಷದ ಯುಗಾದಿವರೆಗೂ ಕೂಡ ನೀವು ಯಾವುದೇ ಭ’ಯಪಡುವ ಅಗತ್ಯವೇ ಇಲ್ಲ.
ಯಾಕೆಂದರೆ ಮೇ 1, 2024 ರಂದು ಗುರು ತಮ್ಮ ಸ್ಥಾನ ಬದಲಾವಣೆ ಮಾಡುತ್ತಿದ್ದಾರೆ 11ನೇ ಮನೆಯಲ್ಲಿ ನೆಲೆಸುವ ಗುರು ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಬಗೆಹರಿಸಿ ಜೀವನದಲ್ಲಿ ನೆಮ್ಮದಿ ತರುತ್ತಾರೆ. ಗುರು ಬಲದಿಂದಾಗಿ ನಿಮಗೆ ಶನಿಪ್ರಭಾವದ ಕಷ್ಟಗಳನ್ನು ಸುಧಾರಿಸಿಕೊಳ್ಳುವ ಶಕ್ತಿ ಬರುತ್ತದೆ ನೀವು ಮಾಡುವ ಎಲ್ಲಾ ಕೆಲಸಕ್ಕೂ ಗುರುವಿನ ಬಲ ಆಶೀರ್ವಾದ ಕೃಪಾಕಟಾಕ್ಷ ಸಿಗುತ್ತದೆ.
ಹಾಗಾಗಿ ಒಂದು ರೀತಿಯಲ್ಲಿ ಅಷ್ಟಮ ಶನಿ ಕಾಟ ಇದ್ದರೂ ಗುರುಬಲದ ಪ್ರಭಾವದಿಂದಾಗಿ ಕಟಕ ರಾಶಿಯರು ಒಂದಷ್ಟು ಈ ಸಮಯದಲ್ಲಿ ಧೈರ್ಯದಿಂದ ಇರಬಹುದು ಎನ್ನುವ ಭರವಸೆ ಕೊಡಬಹುದು. ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆ, ಹಣಕಾಸಿನಲ್ಲಿ ಸ್ಥಿರತೆ, ಸಾಲಬಾಧೆಯಿಂದ ಮುಕ್ತಿ ಆರೋಗ್ಯ ಸುಧಾರಣೆ, ವ್ಯಾಪಾರ ವ್ಯವಹಾರ ತಕ್ಕಮಟ್ಟಿಗೆ ಅಭಿವೃದ್ದಿ, ಇದೆಲ್ಲಾ ಫಲವೂ ಕೂಡ ಮುಂದಿನ ಒಂದು ವರ್ಷದವರೆಗೆ ನಿಮಗೆ ಸಿಗಲಿದೆ.
ಇನ್ನು ಹೆಚ್ಚಿನ ಪ್ರಭಾವಕ್ಕಾಗಿ ಗುರುವಿನ ಆರಾಧನೆ ಮಾಡಿ. ಗುರುವಾರದಂದು ಹಳದಿ ವಸ್ತ್ರ ಫಲ ಇವುಗಳನ್ನು ಧಾನ ಮಾಡಿ ಧರ್ಮ ಗ್ರಂಥಗಳ ಪಠಣೆ ಮಾಡಿ ಧರ್ಮ ಮಾರ್ಗದಲ್ಲಿ ನಡೆದು ಗುರುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಕಟಕ ರಾಶಿಯ ಇನ್ನಷ್ಟು ಫಲಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.