Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.

 

ಈಗಲೂ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗಿದ್ದ ಕ್ರಾಂತಿ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. ಆಗಲೇ ದರ್ಶನ್ ಅವರ ಮುಂದಿನ ಚಿತ್ರದ ರಿಲೀಸ್ ಡೇಟ್ ಹಾಗೂ ಆ ಕುರಿತ ಅಪ್ಡೇಟ್ ಹೊರ ಬಿದ್ದಿದೆ. ದರ್ಶನ್ ಅವರ ಮುಂದಿನ ಚಿತ್ರ ಕಾಟೇರದ ಬಗ್ಗೆ ಕಳೆದ ವರ್ಷ ಅದು ಸೆಟ್ಟೇರಿದ ದಿನದಿಂದಲೂ ಅಭಿಮಾನಿಗಳಿಗೆ ಬಹಳ ಕುತೂಹಲ ಇದೆ. ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ ಗುರೂಜಿ ಅವರ ಆಶ್ರಮದಲ್ಲಿ ಡಿ 56 ಎನ್ನುವ ಹೆಸರಿನಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿತ್ತು.

ಆ ದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡದೇ ಇದ್ದರೂ ಮಾಲಾಶ್ರಿ ಪುತ್ರಿ ರಾಧನ ರಾಮ್ ಸಿನಿಮಾದಲ್ಲಿ ನಾಯಕಿ ಆಗಿ ಲಾಂಚ್ ಆಗುತ್ತಿದ್ದಾರೆ, ಹಣ ಹೂಡುತ್ತಿರುವುದು ರಾಕ್ಲೈನ್ ವೆಂಕಟೇಶ್ ಅವರು ಮತ್ತು ಚಿತ್ರಕ್ಕೆ ತರುಣ್ ಸುಧೀರ್ ಅವರ ನಿರ್ದೇಶನ ಇದೆ, ಮತ್ತೊಮ್ಮೆ ರಾಬರ್ಟ್ ಸಿನಿಮಾ ತಂಡ ಮಾಡುತ್ತಿರುವ ಎರಡನೇ ಪ್ರಯತ್ನ ಇದು ಎಂದು ತಿಳಿದುಹೋಯಿತು.

ಆಗ ಇನ್ನೂ ಕ್ರಾಂತಿ ಸಿನಿಮಾದ ಕೆಲಸ ನಡೆಯುತ್ತಿದ್ದರಿಂದ ಸ್ವತಃ ದರ್ಶನ್ ಅವರೇ ಕ್ರಾಂತಿ ಸಿನಿಮಾ ರಿಲೀಸ್ ಆಗುವವರೆಗೂ ಡಿ56 ಸಿನಿಮಾ ಪ್ರಾಜೆಕ್ಟ್ ಬಗ್ಗೆ ಎಲ್ಲೂ ಪ್ರಚಾರ ಮಾಡಬಾರದು ಎಂದು ತಾಕಿತು ಮಾಡಿದ್ದರಂತೆ. ಈಗ ಕ್ರಾಂತಿ ಸಕ್ಸಸ್ ಕಂಡ ಹಿನ್ನೆಲೆ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡವು ಸಿನಿಮಾದ ಟೈಟಲ್ ಕಾಟೇರ ಎಂದು ರಿಲೀಸ್ ಮಾಡಿ ಇದರ ಜೊತೆಗೆ ದರ್ಶನ್ ಅವರ ವಿಭಿನ್ನ ಬಗೆಯ ಪೋಸ್ಟರ್ ಕೂಡ ರಿಲೀಸ್ ಮಾಡಿತ್ತು.

ದರ್ಶನ್ ಅವರ ಫಸ್ಟ್ ಲುಕ್ ನೋಡಿದ ಜನತೆ ಸಿನಿಮಾ ಹಿಟ್ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನವರು ಹಳ್ಳಿ ಹೈದನ ಲುಕ್ಕಲ್ಲಿ ಕಾಣಿಸಿಕೊಂಡಿದ್ದಿದ್ದು ನೈಜ ಕಥೆ ಆಧಾರಿತ ಚಿತ್ರ ಇದಾಗಲಿದೆ ಎಂದು ಕೂಡ ತಿಳಿದು ಬಂದಿದೆ. ಇತ್ತೀಚೆಗೆ ರಾಧನ ರಾಮ್ ಅವರ ಫೋಟೋ ಶೂಟ್ ಕೂಡ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರತಂಡ ರಾಧನ ರಾಮ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪಾತ್ರದ ಝಲಕ್ ನ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಇದರಲ್ಲಿ ಒಂದು ಕೈಯಲ್ಲಿ ಮಚ್ಚು ಹಾಗೂ ಒಂದು ಕೈಯಲ್ಲಿ ಪುಸ್ತಕ ಹಿಡಿದ ನಾಯಕಿ ಸಿನಿಮಾ ಬಗೆಗಿನ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದಾರೆ. ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಕುರಿತು ಎಲ್ಲರೂ ತಿಳಿದುಕೊಳ್ಳುವ ತವಕದಲ್ಲಿ ಇದ್ದಾರೆ. ಈ ಬಗ್ಗೆ ಸಿನಿಮಾ ತಂಡದಿಂದ ಸ್ಪಷ್ಟನೆ ಕೂಡ ಸಿಕ್ಕಿದ್ದು ಆದಷ್ಟು ಬೇಗ ದರ್ಶನ್ ಅವರ ಈ ಚಿತ್ರ ಅಭಿಮಾನಿಗಳಿಗೆ ನೋಡ ಸಿಗುತ್ತಿದೆ.

ಮೊದಲ ಭಾಗದ ಚಿತ್ರೀಕರಣ ಪೂರ್ತಿಯಾಗಿದೆ ಎನ್ನುವುದನ್ನು ಹೇಳಿಕೊಂಡ ಚಿತ್ರತಂಡ, ಐದು ಭಾಷೆಗಳಲ್ಲಿ ಕಾಟೇರ ಸಿನಿಮಾ ಡಬ್ ಆಗುತ್ತಿದೆ ಎನ್ನುವುದನ್ನು ಕೂಡ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿಯೇ ಕಾಟೇರ ಸಿನಿಮಾವನ್ನು ಥಿಯೇಟರಲ್ಲಿ ನೋಡಬಹುದು. ದರ್ಶನ್ ಅವರ ಈ ಹೊಸ ಪ್ರಾಜೆಕ್ಟ್ ಶುಭವಾಗಲಿ. ರಾಬರ್ಟ್ ಚಿತ್ತದಲ್ಲಿ ಈಗಾಗಲೇ ತರುಣ್ ಮತ್ತು ದರ್ಶನ್ ಅವರ ಕೆಮಿಸ್ಟ್ರಿ ವರ್ಕ್ ಆಗಿರುವುದರಿಂದ ಅದೇ ರೀತಿಯ ಸಕ್ಸಸ್ ಕೂಡ ಕಾಟೇರ ಸಿನಿಮಾಗೆ ಸಿಗಲಿ ಎನ್ನುವುದು ಅಭಿಮಾನಿಗಳ ಆಶಯ. ಕನ್ನಡ ಸಿನಿಮಾಗಳ ಅಭಿಮಾನಿಗಳಾಗಿ ನಾವು ಸಹ ಸಿನಿಮಾ ತಂಡಕ್ಕೆ ಶುಭ ಹರಸೋಣ.