ನಟಿಯಾಗಿರುವುದರ ಜೊತೆಗೆ ಇನ್ನು ಒಂದು ಹೆಜ್ಜೆ ಮುಂದೆ ನಡೆದ ಮೇಘನಾ ರಾಜ್.
ಮೇಘನಾ ರಾಜ್ ಅವರು ಬಾಲ್ಯದಿಂದಲೂ ಅಭಿನಯದಲಿ ತೊಡಗಿಕೊಂಡಿದ್ದು ರಂಗಭೂಮಿ ಕಲಾವದೆ ಆಗಿ ಮತ್ತು ಈಗ ಕನ್ನಡ ಚಲನಚಿತ್ರರಂಗದ ಫೇಮಸ್ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲೂ ಅಭಿನಯಿಸಿರುವ ಇವರು ಕನ್ನಡ ಮತ್ತು ಮಲಯಾಳಂ ಚಲನಚಿತ್ರ ರಂಗದ ಬೇಡಿಕೆಯ ನಟಿ.
ಮೇಘನಾ ರಾಜ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ರಾಜಾಹುಲಿ, ಬಹುಪರಾಕ್, ಆಟಗಾರ ಮತ್ತು ಇರುವುದೆಲ್ಲವ ಬಿಟ್ಟು ಹಾಗೂ ಎಂಎಂಸಿಎಚ್ ಈ ಸಿನಿಮಾಗಳ ಇವರ ಪಾತ್ರಗಳು ಇವರಿಗೆ ಬಹಳ ಫೇಮಸ್ ತಂದು ಕೊಟ್ಟಿವೆ. ಗ್ಲಾಮರ್ ಮಾತ್ರ ಅಲ್ಲದೆ ಪಾತ್ರಕ್ಕೂ ಮಹತ್ವ ಇರುವ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುವವರು ಮೊದಲು ಮೇಘನಾ ರಾಜ್ ಅವರನ್ನು ಸೂಚಿಸುತ್ತಾರೆ ಅಷ್ಟರಮಟ್ಟಿಗೆ ಪಾತ್ರಕ್ಕೆ ನ್ಯಾಯ ದಕ್ಕಿಸುತ್ತಾರೆ ಮೇಘನಾ ರಾಜ್.
ಕಲಾವಿದರ ಕುಟುಂಬದಲ್ಲಿ ಬಂದ ಇವರಿಗೆ ರಕ್ತಗತವಾಗಿಯೇ ಈ ವಿದ್ಯೆ ಬಂದಿದೆ. ಕೆರಿಯರಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದಾಗಲೇ ತಮ್ಮದೇ ಕ್ಷೇತ್ರದ ಚಿರಂಜೀವಿ ಅವರ ಪ್ರೀತಿಯಲ್ಲಿ ಬಿದ್ದು 10 ವರ್ಷಗಳ ಪ್ರೀತಿ ನಂತರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ವಿವಾಹವಾದರು. ಆದರೆ ದುರಾದೃಷ್ಟವಶಾತ್ ಮೇಘನ ಗರ್ಭಿಣಿ ಆಗಿರುವಾಗಲೇ ಪತಿ ಅಗಲಿಕೆ ನೋವನ್ನು ಅನುಭವಿಸಬೇಕಾಯಿತು.
ಈಗಲೂ ಸಹ ಮೇಘನಾ ರಾಜ್ ಆ ಶಾಕ್ ಇಂದ ಹೊರ ಬಂದಿಲ್ಲ ಎನಿಸುತ್ತದೆ. ಆದರೂ ಮಗ ರಾಯಲ್ ಸರ್ಜ ಅವರ ಆರೈಕೆ ಮಾಡುತ್ತಾ ಮತ್ತು ಮತ್ತೆ ಸಿನಿಮಾ ರಂಗದಲ್ಲಿ ತೊಡಿಸಿಕೊಳ್ಳುವತ್ತ ಮನಸ್ಸು ಮಾಡುತ್ತಾ ಸಹಜ ಜೀವನ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಮೇಘನಾರಾಜ್ ಅವರ ಕಮ್ ಬ್ಯಾಕ್ ಗಾಗಿ ಸ್ಯಾಂಡಲ್ವುಡ್ ಕಾಯುತ್ತಿದ್ದು ಈಗಾಗಲೇ ಹಲವು ಸಿನಿಮಾ ಆಫರ್ ಗಳು ಅವರನ್ನು ಅರಸಿ ಹೋಗಿದೆ.
ಆದರೆ ಸದ್ಯಕ್ಕೆ ಈಗ ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿರುವ ಇವರು ಕಥೆ ಕೇಳಿ ನಿರ್ಧಾರ ಮಾಡುತ್ತಿದ್ದಾರೆ. ಈ ನಡುವೆ ಬಹಳ ದಿನಗಳ ಹಿಂದೆ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಫೋಟೋ ಒಂದು ಶೇರ್ ಆಗಿದ್ದು, ಮೇಘನಾ ರಾಜ್ ಪನ್ನಾಗಭರಣ, ವಿಶಾಲ್ ಹಾಗೂ ವಾಸಕಿ ವೈಭವ್ ಅವರು ಒಟ್ಟಿಗಿರುವ ಫೋಟೋ ಅದಾಗಿತ್ತು. ಇದು ಅವರ ಮುಂದಿನ ಸಿನಿಮಾದ ಅಪ್ಡೇಟ್ಸ್ ಎಂದು ಸೂಚನೆ ಕೂಡಾ ಕೊಟ್ಟಿದ್ದರು.
ಆದರೆ ಹಲವು ಜನ ಇದು ಜಾಹೀರಾತುಗೆ ಸಂಬಂಧಪಟ್ಟ ಫೋಟೋ ಇರಬೇಕು ಎಂದು ಅಂದುಕೊಂಡಿದ್ದರು ಮತ್ತೆ ಈಗ ಆ ಹಳೆ ವಿಷಯ ಮತ್ತೆ ಸುದ್ದಿ ಆಗುತ್ತಿದೆ ಮೇಘನಾ ಇದೀಗ ತನ್ನದೇ ಹೋಂ ಪ್ರೊಡಕ್ಷನ್ ಅಲ್ಲಿ ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಸಂಬಂಧಪಟ್ಟ ಫೋಟೋ ಇದಾಗಿದ್ದು ಗಾಂಧಿನಗರದ ಸುದ್ದಿಗಳ ಪ್ರಕಾರ ಪನ್ನಗಾಭರಣ ಮತ್ತು ಮೇಘನಾ ರಾಜ್ ಅವರು ಮೇಘನಾ ಅವರ ಮುಂದಿನ ಸಿನಿಮಾ ಗೆ ಹಣ ಹೂಡುತ್ತಿದ್ದಾರಂತೆ.
ಹೀಗಾಗಿ ಮೇಘನಾ ಕೂಡ ಪ್ರೊಡಕ್ಷನ್ ಹೌಸ್ ಶುರು ಮಾಡಿದ ಮೊದಲ ನಟಿ ಎನ್ನುವ ಖ್ಯಾತಿಗೆ ಒಳಗಾಗಲಿದ್ದಾರೆ. ಈ ಸಿನಿಮಾ ಗೆ ವಿಶಾಲ್ ಅವರು ನಿರ್ದೇಶನ ಮಾಡಲಿದ್ದು, ವಾಸುಕಿ ವೈಭವ್ ಅವರ ಸಂಗೀತ ಚಿತ್ರಕ್ಕಿರಲಿದೆ. ಸದ್ಯದಲ್ಲೇ ಸಿನಿಮಾ ಚಿತ್ರೀಕರಣ ಕೂಡ ಆರಂಭ ಆಗಲಿದ್ದು ಇದು ಮಹಿಳಾ ಪ್ರಧಾನ ಕಥೆ ಹೊಂದಿರುವ ಸಿನಿಮವಾಗಿರಲಿದೆಯಂತೆ. ಸದ್ಯಕ್ಕೆ ಇಷ್ಟು ಸುದ್ದಿಗಳು ಹೊರ ಬಂದಿದ್ದು ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಗುವುದಷ್ಟೇ ಬಾಕಿ ಇದೆ.