ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ ಬರುತ್ತದೆ ಎನ್ನುವುದು ಆ ಸಮಯದ ಕಲ್ಪನೆಯಲ್ಲೂ ಇರಲಿಲ್ಲ. ಯಾಕೆಂದರೆ ಆಗ ತಾನೆ ಕನ್ನಡ ಚಿತ್ರರಂಗ ಕಣ್ಣು ಬಿಡುತ್ತಿದ್ದ ಕಾಲ ಅದು. ಅಂತಹ ಸಮಯದಲ್ಲಿ ಈ ಮಾದರಿಯ ಸಿನಿಮಾಗಳು ಕನ್ನಡದಲ್ಲಿ ಆಗಿದ್ದು ನಮ್ಮ ಕನ್ನಡಿಗರ ಆಸಕ್ತಿಗಳ ಆಳ ಎಷ್ಟಿದೆ ಮತ್ತು ಇಲ್ಲಿನ ಪ್ರತಿಭೆಗಳು ಯಾವ ರೇಂಜಿಗೆ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಆಗಿತ್ತು. ಮೊಟ್ಟಮೊದಲ ಬಾರಿಗೆ ದೊರೈ ಮತ್ತು ಭಗವಾನ್ ಇಬ್ಬರು ಜೋಡಿಯಾಗಿ ಜೇಡರ ಬಲೆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಆ ಸಿನಿಮಾ ಕೂಡ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಯೋಗ ಆಗಿತ್ತು, ಆ ಸಿನಿಮಾದ ಸಕ್ಸಸ್ ಅದೇ ರೀತಿಯ ಮತ್ತಷ್ಟು ಸಿನಿಮಾಗಳನ್ನು ಮಾಡಲು ಸ್ಪೂರ್ತಿಯಾಯಿತು. ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ನಂತರ 2013ರಲ್ಲಿ ಇದರ ಹೆಚ್ ಡಿ ವರ್ಷನ್ ಬಂದಾಗಲೂ ಕೂಡ ಅಷ್ಟೇ ದೊಡ್ಡ ಸಕ್ಸಸ್ ಪಡೆಯಿತು. ಇದರ ಬಗ್ಗೆ ಅದರ ವಿತರಕರಾಗಿದ್ದ ಆರ್ ಪಿ ಮುನಿರಾಜ್ ಅವರು ಹೇಳಿಕೊಂಡಿದ್ದಾರೆ. ಕನ್ನಡ ಮಾಣಿಕ್ಯ ಎಂಬ ಯುಟ್ಯೂಬ್ ಚಾನೆಲ್ ಗೆ ಕೊಟ್ಟ ಸಂದರ್ಶನದಲ್ಲಿ ಆರ್.ಪಿ ಮುನಿರಾಜು ಅವರು ಎಷ್ಟು ಕಷ್ಟಪಟ್ಟು ಅದನ್ನು ಮತ್ತೆ ತೆರೆ ಮೇಲೆ ತಂದರು ಎನ್ನುವ ಕಥೆಯನ್ನು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಕಲಾಸಿಪಾಳ್ಯ ಬಳಿ ಥಿಯೇಟರ್ ಒಂದರಲ್ಲಿ ತಮಿಳು ನಟ ಎಂಟಿಆರ್ ಅವರ ಹಳೆ ಸಿನಿಮಾವನ್ನು ಇದೇ ರೀತಿ ಎಚ್ ಡಿ ಮಾಡಿ ಹಾಕಿದರಂತೆ. ಎತ್ತರದ ಕಟೌಟ್ಗಳು ದೊಡ್ಡ ದೊಡ್ಡ ಹಾರಗಳು ಎಲ್ಲವನ್ನು ನೋಡಿ ಈ ಸಿನಿಮಾ ಇಷ್ಟು ಸದ್ದು ಮಾಡುತ್ತಿದ್ದೆ, ಕನ್ನಡ ಸಿನಿಮಾ ಯಾಕೆ ಈ ರೀತಿ ಆಗಬಾರದು ಎಂದು ನಿರ್ಧಾರ ಮಾಡಿ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಮತ್ತೆ ರಿಲೀಸ್ ಮಾಡಬೇಕು ಎಂದು ನಿರ್ಧರಿಸಿದರಂತೆ.
ತಕ್ಷಣವೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ಕೊಟ್ಟು ಆ ಸಿನಿಮಾದ ಯಾರ ಬಳಿ ಇದೆ ಮತ್ತು ಅದರ ಮೆಟೀರಿಯಲ್ಗಳು ಎಲ್ಲಿದೆ ಎನ್ನುವ ವಿಷಯವನ್ನೆಲ್ಲ ಕಲೆ ಹಾಕಿದರಂತೆ. ಕೊನೆಗೆ ಮೈಸೂರಿನ ಆನಂದ್ ಪಿಚ್ಚರ್ಸ್ ಅವರ ಬಳಿ ಮೆಟೀರಿಯಲ್ ಇದೆ ಎನ್ನುವುದನ್ನು ತಿಳಿದುಕೊಂಡ ಅವರು ಆನಂದ್ ಪಿಚ್ಚರ್ಸ್ ಅಲ್ಲಿ ಜಯರಾಮ್ ಎನ್ನುವವರನ್ನು ಭೇಟಿಯಾಗಿ ಕೇಳಿದಾಗ ಅವರು ಅದನ್ನೆಲ್ಲ ಕಸದ ರೀತಿ ಒಂದು ಗೋಡನ್ ಗೆ ಹಾಕಿಬಿಟ್ಟಿದ್ದಾರೆ ಅದು ಯೂಸ್ ಆಗಲ್ಲ ಅನಿಸುತ್ತದೆ ಬಿಟ್ಟು ಬಿಡಿ ಎಂದರಂತೆ.
ಆದರೂ ಕೂಡ ಇಲ್ಲ ಬೇಕೇ ಬೇಕು ಕೊಡಿ ಎಂದು ಕೇಳಿ ಎಂಟು ಕ್ಯಾನ್ ಮೆಟೀರಿಯರ್ ಇತ್ತಂತೆ ಅದನ್ನು ಚೆನ್ನೈ ಪ್ರಸಾದ್ ಲ್ಯಾಬ್ ಗೆ ಕಳುಹಿಸಿ ಪರೀಕ್ಷಿಸಿದಾಗ ತುಂಬಾ ಹಾಳಾಗಿದೆ ಬಹಳ ಕಷ್ಟ ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದರಂತೆ. ಕೊನೆಗೆ ಅವರೆಲ್ಲರನ್ನು ಒಪ್ಪಿಸಿ ರೆಡಿ ಮಾಡಿಸುವಷ್ಟರಲ್ಲಿ ನಾಲ್ಕು ದಿನಗಳು ಕಳೆದವು ಎಂದು ಹೇಳಿಕೊಳ್ಳುತ್ತಾರೆ. ದನ್ನೆಲ್ಲ ತಂದು ಮಸ್ತಾನ್ ಅವರ ಕಡೆ ಕೊಟ್ಟು ಕೋಟ್ ಪೇಜ್ ಮಾಡಿಸಿ ಕೊನೆಗೆ ಸಿನಿಮಾ ಪೂರ್ತಿ ಗೊಳಿಸಿ ಅನೌನ್ಸ್ ಮಾಡಿದಾಗ ಬಹಳಷ್ಟು ಜನ ಫೋನ್ ಮಾಡಿ ನೆಗೆಟಿವ್ ಆಗಿ ಹೇಳಿದ್ದರಂತೆ.
ಅವರ ಆತ್ಮೀಯರಲ್ಲಿ ಒಬ್ಬರಾದ ಗೋಕುಲ್ ದಾಸ್ ಅವರು ಎಲ್ಲಾ ಹಣ ವ್ಯರ್ಥ ಮಾಡಿ ಸಾಲ ಹೊತ್ತುಕೊಂಡು ಗಾಂಧಿನಗರ ಬಿಟ್ಟು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರಂತೆ. ಆದರೆ ಮನಸಲ್ಲಿ ಇದ್ದ ಆಸೆಯನ್ನು ಇಷ್ಟು ಹಂತಕ್ಕೆ ತಂದು ಅರ್ಧಕ್ಕೆ ಬಿಡಲು ಒಪ್ಪದ ಇವರು ಏನಾಗುತ್ತದೆ ನೋಡೋಣ ಎಂದು ಧೈರ್ಯ ಮಾಡಿ ಥಿಯೇಟರ್ ಗೆ ತಂದರಂತೆ. ಅಂತಿಮವಾಗಿ ಸಿನಿಮಾ ಮತ್ತೆ ಎಲ್ಲಾ ಕಡೆ 100 ದಿನಗಳ ಪ್ರದರ್ಶನ ಆಗಿ 13 ಲಕ್ಷ ಬಜೆಟ್ಟಿಗೆ 77 ಲಕ್ಷ ಆದಾಯ ತಂದು ಕೊಡುವ ಮೂಲಕ ಮತ್ತೊಮ್ಮೆ ದಾಖಲೆಯನ್ನು ಸೃಷ್ಟಿಸಿತ್ತು ಎಂದು ಆ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.