ಕರ್ನಾಟಕ ಅರಣ್ಯ ಇಲಾಖೆಯಲ್ಲಿ 310 ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ ಅಧಿಸೂಚನೆ ಹೊರ ಬಿದ್ದಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಎಲ್ಲ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಹರಿರುತ್ತಾರೆ SSLC ವಿದ್ಯಾಭ್ಯಾಸ ಮುಗಿಸಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು. ಕನಿಷ್ಠ ವಯೋಮಿತಿ 18 ವರ್ಷಗಳಿದ್ದು ಗರಿಷ್ಠ ವಯೋಮಿತಿ ಆಯಾ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ನಿಮ್ಮ ಮನೆಯಲ್ಲಿರುವ ಕಂಪ್ಯೂಟರ್ ಅಥವಾ ನಿಮ್ಮ ಬಳಿ ಇರುವ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ಈ ಅಂಕಣದಲ್ಲಿ ಹಂತ ಹಂತವಾಗಿ ತಿಳಿಸಿ ಕೊಡುತ್ತಿದ್ದೇವೆ.
ಪಿತೃಪಕ್ಷದಲ್ಲಿ ಇದನ್ನು ಅಪ್ಪಿ ತಪ್ಪಿಯು ತಿನ್ನಬೇಡಿ ಕಷ್ಟ ಬೆನ್ನಟ್ಟುತ್ತೆ.!
● ಮೊದಲನೇದಾಗಿ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರಣ್ಯ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
https://www.recruitapp.in/
● ಅರ್ಜಿ ಫಾರಂ ಓಪನ್ ಆಗಿರುತ್ತದೆ ಅದರಲ್ಲಿ ನಿಮ್ಮ ವಿವರಗಳನ್ನು ಕೇಳಲಾಗಿರುತ್ತದೆ ಇದರಲ್ಲಿ ಸ್ಟಾರ್ ಮಾರ್ಕ್ ಇರುವುದು ಕಂಪಲ್ಸರಿ ಆಗಿದ್ದು, ಈ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಲೇಬೇಕು. ಮೊದಲಿಗೆ ನೀವು ಯಾವ ಸರ್ಕಲ್ ನಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರಾ ಎಂದು ಕೇಳಲಾಗುತ್ತಿದೆ ಈಗ ನೋಟಿಫಿಕೇಶನ್ ಆಗಿರುವುದರಲ್ಲಿ ನೀವು ಯಾವ ವೃತ್ತದಲ್ಲಿ ಕೆಲಸ ಮಾಡಲು ಇಚ್ಚಿಸುತ್ತೀರಾ ಅದನ್ನು ಸೆಲೆಕ್ಟ್ ಮಾಡಿ.
● ನಿಮ್ಮ SSLC ಅಂಕಪಟ್ಟಿಯಲ್ಲಿ ಇರುವಂತೆ ನಿಮ್ಮ ಹೆಸರು, ತಂದೆ ಹೆಸರು, ತಾಯಿ ಹೆಸರು, ಹುಟ್ಟಿದ ದಿನಾಂಕ ಮಾಹಿತಿಗಳನ್ನು ಭರ್ತಿ ಮಾಡಿ. ನಿಮ್ಮ ಲಿಂಗ ಸೆಲೆಕ್ಟ್ ಮಾಡಿ, ನಿಮ್ಮ ವೈವಾಹಿಕ ಸ್ಥಿತಿ ಕೇಳಲಾಗಿರುತ್ತದೆ ವಿವಾಹಿತರು ಅಥವಾ ಅವಿವಾಹಿತರು ಎನ್ನುವುದನ್ನು ಸೆಲೆಕ್ಟ್ ಮಾಡಿ.
ಬೆ-ತ್ತಲೆಯಾಗಿ ಸ್ನಾನ ಮಾಡುವವರು ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ.!
● ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕೇಳಿರುತ್ತದೆ ಇವುಗಳನ್ನು ಎಂಟ್ರಿ ಮಾಡಿದ ಮೇಲೆ ಒಂದು ಕ್ಯಾಪ್ಚಾ ಕೋಡ್ ಬರುತ್ತದೆ, ನಮೂದಿಸಿ. ಕೊನೆಯಲ್ಲಿ ಒಂದು ಘೋಷಣ ವಾಕ್ಯ ಇರುತ್ತದೆ. ನೀವು ಸಲ್ಲಿಸಿರುವ ಎಲ್ಲಾ ಮಾಹಿತಿಯು ಸರಿ ಇದೆ ಎಂದು ನೀವು ಪ್ರಮಾಣಿಕರಿಸುವುದಕ್ಕೆ ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ ಸಬ್ಮಿಟ್ ಕೊಡಿ.
● ಇದುವರೆಗೆ ನೀವು ಸಲ್ಲಿಸಿರುವ ಎಲ್ಲ ಮಾಹಿತಿ ಸರಿ ಇದೆಯೇ ಎಂದು ಮತ್ತೊಮ್ಮೆ ಕನ್ಫರ್ಮ್ ಕೇಳಲಾಗುತ್ತದೆ ಆಗ ಅದನ್ನು ಪರಿಶೀಸಿಕೊಂಡು ತಪ್ಪಿದ್ದರೆ Edit ಮಾಡಿ ಸರಿ ಇದ್ದರೆ OK ಕ್ಲಿಕ್ ಮಾಡಿ.
● ನಿಮ್ಮ ರಿಜಿಸ್ಟ್ರೇಷನ್ ID ಮತ್ತು Password ಬರೆದಿರುತ್ತದೆ, ಅದನ್ನು ಒಂದು ಕಡೆ ಬರೆದು ಇಟ್ಟುಕೊಳ್ಳಬೇಕು.
ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು.!
● ಮುಂದಿನ ಹಂತದಲ್ಲಿ ಮತ್ತೊಂದು ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಪ್ಲೈ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
● ನಿಮ್ಮ ವೈಯುಕ್ತಿಕ ವಿವರದಿಂದ ಅದು ಆಟೋಮೆಟಿಕ್ ಫಿಲ್ ಆಗಿರುತ್ತದೆ. ಸಂಪರ್ಕಿಸಬೇಕಾದ ವಿಳಾಸದ ವಿವರವನ್ನು ಬರೆಯಿರಿ. ನಿಮ್ಮ ಖಾಯಂ ವಿಳಾಸ ಕೂಡ ಅದೇನೇ ಎಂದು ಕೇಳಲಾಗುತ್ತದೆ. ಹೌದು ಎಂದು ಸೆಲೆಕ್ಟ್ ಮಾಡಿ ಇಲ್ಲವಾದರೆ ಇಲ್ಲ ಎಂದು ಸೆಲೆಕ್ಟ್ ಮಾಡಿ ನಿಮ್ಮ ಪರ್ಮನೆಂಟ್ ಅಡ್ರೆಸ್ ಅನ್ನು ನಮೂದಿಸಿ.
● ಬಳಿಕ ನಿಮ್ಮ ರಾಷ್ಟ್ರೀಯತೆ, ಧರ್ಮ ಕೇಳಲಾಗಿರುತ್ತದೆ ಅದನ್ನು ಕೂಡ ಸೆಲೆಕ್ಟ್ ಮಾಡಿ. ನಿಮಗೆ ಕನ್ನಡ ಓದಲು ಮಾತನಾಡಲು ಬರುತ್ತದೆಯೇ ಎಂದು ಕೇಳಲಾಗಿರುತ್ತದೆ ಹೌದು ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ.
● ನಿಮ್ಮ ಭಾವಚಿತ್ರ ಸಹಿ ಕೇಳಲಾಗುತ್ತದೆ ನಿಮ್ಮ ಭಾವಚಿತ್ರವನ್ನು ಸೆಲೆಕ್ಟ್ ಮಾಡಲು ಅಪ್ಲೋಡ್ ಫೋಟೋ ಎನ್ನುವುದನ್ನು ಕ್ಲಿಕ್ ಮಾಡಿ, ಗ್ಯಾಲರಿಗೆ ಹೋಗಿ ಫೋಟೋ ಸೆಲೆಕ್ಟ್ ಮಾಡಿ, ನಿಮ್ಮ ಫೋಟೋ jpj ಅಥವಾ PNG ಫಾರ್ಮೆಟ್ ಅಲ್ಲಿ ಇರಬೇಕು, 100kb ಒಳಗೆ ಇರಬೇಕು, ನಂತರ ನಿಮ್ಮ ಆಧಾರ್ ಕಾರ್ಡ್ ಅಪ್ಲೋಡ್ ಮಾಡಲು ಕೇಳಲಾಗುತ್ತದೆ ಅದು 150kb ಇರಬೇಕು.
ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!
● SSLC Qualification details ಕೇಳಲಾಗಿರುತ್ತದೆ ಅದರಲ್ಲಿ ಮಾಹಿತಿಯನ್ನು ನಿಮ್ಮ ಅಂಕಪಟ್ಟಿಯಲ್ಲಿರುವಂತೆ ಭರ್ತಿ ಮಾಡಿ. ಅಂಕಪಟ್ಟಿ ಫೋಟೋ ಕೂಡ ಕೇಳಲಾಗುತ್ತದೆ ಅದನ್ನು ಅಪ್ಲೋಡ್ ಮಾಡಿ 150kb ಒಳಗಿರಬೇಕು.
● ನಿಮ್ಮ ಪರೀಕ್ಷಾಕೇಂದ್ರವನ್ನು ಸೆಲೆಕ್ಟ್ ಮಾಡಿ
● ಮೀಸಲಾತಿ ಕೊರುವುದಾದರೆ ಯಾವ ಕೆಟಗರಿಗೆ ಬರುತ್ತೀರಾ ಸೆಲೆಕ್ಟ್ ಮಾಡಿ.
● ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಯಾಗಿದ್ದರೆ ಅದರ ವಿವರಗಳನ್ನು ಭರ್ತಿ ಮಾಡಿ ಸರ್ಟಿಫಿಕೇಟ್ ಕೂಡ ಅಪ್ಲೋಡ್ ಮಾಡಬೇಕು.
● ಅಂಗವಿಕಲ ಅಭ್ಯರ್ಥಿಯಾಗಿದ್ದರೆ, ಮಾಜಿ ಸೈನಿಕ ಅಭ್ಯರ್ಥಿ ಅಥವಾ ಯೋಜನೆ ಅಭ್ಯರ್ಥಿಯಾಗಿದ್ದರೆ ಸೆಲೆಕ್ಟ್ ಮಾಡಿ, ವಿವರಗಳನ್ನು ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ನೋ ಎಂದು ಸೆಲೆಕ್ಟ್ ಮಾಡಬೇಕು.
ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!
● ಕೊನೆಯದಾಗಿ ಸಬ್ಮಿಟ್ ಕೊಡಿ ಮುಂದಿನ ಪುಟಕ್ಕೆ ಹೋಗುತ್ತದೆ.
● ಅದರಲ್ಲಿ ಅಪ್ಲಿಕೇಶನ್ ಎಂದು ಗ್ರೀನ್ ಬಾಕ್ಸ್ ನಲ್ಲಿ ರೈಟ್ ಮಾರ್ಕ್ ಕ್ಲಿಕ್ ಆಗಿದ್ದರೆ ಅಪ್ಲಿಕೇಶನ್ ಸಕ್ಸಸ್ ಆಗಿದೆ ಎಂದು ಅರ್ಥ, ಅದರಲ್ಲಿ ನೀವು ತುಂಬಿಸಿರುವ ಎಲ್ಲಾ ಮಾಹಿತಿಯು ಇರುತ್ತದೆ ಮತ್ತೊಮ್ಮೆ ಚೆಕ್ ಮಾಡಿಕೊಂಡು I Agree ಎನ್ನುವುದನ್ನು ಕ್ಲಿಕ್ ಮಾಡಿ.
● ಕೊನೆ ಹಂತದಲ್ಲಿ ಅರ್ಜಿ ಶುಲ್ಕ ಕಟ್ಟುವುದಕ್ಕಾಗಿ ಪ್ರಿಂಟ್ ಚಲನ್ ಎನ್ನುವುದನ್ನು ಕ್ಲಿಕ್ ಮಾಡಿ.
● ಪ್ರಿಂಟ್ ಎನ್ನುವುದರಲ್ಲಿ ಕ್ಲಿಕ್ ಮಾಡಿ ಸೇವ್ ಮಾಡಿಕೊಳ್ಳಿ.
● ನೀವು ಆ ಚಾನೆಲ್ ಗೆ ನಿಮ್ಮ ಕೆಟಗರಿಗನ್ವಯ ಹಣ ತುಂಬಿಸಿದ ನಂತರವಷ್ಟೇ ನೀವು ಅರ್ಜಿ ಸಲ್ಲಿಸುವ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ.