ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಗಜಕರ್ಣ ಅಂದರೆ ಕಜ್ಜಿ, ತುರಿಕೆ, ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಈ ಸಮಸ್ಯೆ ಬಂದರೆ ಅವರಿಗೆ ಜೀವನವೇ ಸಾಕಾಗಿದೆ ಎನ್ನುವ ರೀತಿ ಆಗಿರುತ್ತದೆ. ಹೌದು ಎಲ್ಲೆಂದರಲ್ಲಿ ಎಲ್ಲರ ಮುಂದೆ ಈ ರೀತಿಯ ಸಮಸ್ಯೆ ಕಂಡು ಬಂದರೆ ಅವರಿಗೆ ಒಂದು ರೀತಿಯ ಮನಸ್ಸು ಬೇಜಾರಾಗುತ್ತದೆ.
ಆದ್ದರಿಂದ ಈ ಸಮಸ್ಯೆ ಬಹಳ ತೊಂದರೆಯನ್ನು ಉಂಟುಮಾಡುವಂತಹ ಸಮಸ್ಯೆ ಎಂದೇ ಹೇಳಬಹುದು ಹೌದು ಹೆಚ್ಚಿನ ಜನಕ್ಕೆ ಈ ಸಮಸ್ಯೆ ಬಂದು ಅವರು ಎಲ್ಲೂ ಕೂಡ ಆಚೆ ಹೋಗಲು ಇಷ್ಟಪಡುವುದಿಲ್ಲ. ಕಜ್ಜಿ ತುರಿಕೆ ಆಗಿರುವ ಸ್ಥಳದಲ್ಲಿ ಯಥೇಚ್ಛವಾದ ನವ ಬಂದು ಮತ್ತೆ ಮತ್ತೆ ಅದನ್ನು ಕೆರೆಯುವುದರ ಮೂಲಕ ಆ ಸ್ಥಳದಲ್ಲಿ ರಕ್ತವು ಕೂಡ ಕಾಣಿಸಿಕೊಳ್ಳು ತ್ತಿರುತ್ತದೆ.
ಇದಕ್ಕಾಗಿ ಹೆಚ್ಚಿನ ಜನ ಆಸ್ಪತ್ರೆಗಳಿಗೆ ಹೋಗಿ ಹಲವಾರು ರೀತಿಯ ಕ್ರೀಮ್, ಮಾತ್ರೆ, ಇಂಜೆಕ್ಷನ್, ಇನ್ನೂ ಹಲವಾರು ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಎಷ್ಟೇ ಔಷಧಿ ತೆಗೆದುಕೊಂಡರು ಕೂಡ ಈ ಸಮಸ್ಯೆ ದೂರವಾಗುವುದಿಲ್ಲ. ಹೌದು ಈ ಸಮಸ್ಯೆ ಉಲ್ಬಣವಾಗಿರುವ ಕಾರಣದಿಂದ ಇದು ಎಷ್ಟು ಚಿಕಿತ್ಸೆ ಪಡೆದು ಕೊಂಡರು ದೂರವಾಗುವುದಿಲ್ಲ.
ಕೆಲವೊಂದಷ್ಟು ಜನರಿಗೆ ಈ ಸಮಸ್ಯೆಗೆ ಔಷಧಿ ತೆಗೆದುಕೊಂಡ ನಂತರ ಸ್ವಲ್ಪ ದಿನಗಳವರೆಗೆ ಗುಣವಾಗುತ್ತದೆ. ಆನಂತರ ಮತ್ತೆ ಅದೇ ಸ್ಥಿತಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ದಿನ ಕಜ್ಜಿ, ತುರಿಕೆ, ಈ ಸಮಸ್ಯೆ ಕಾಣಿಸಿಕೊಳ್ಳಲು ಬಹಳ ಪ್ರಮುಖವಾದಂತಹ ಕಾರಣಗಳೇನು ಹಾಗು ಇದನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾವ ಕೆಲವು ಮನೆಮದ್ದುಗಳನ್ನು ಉಪಯೋಗಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
ಮೊದಲು ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ. ಅಜೀರ್ಣ, ಮಲಬದ್ಧತೆ, ರಕ್ತದ ಅಶುದ್ಧಿ, ವಿರುದ್ಧ ಆಹಾರವನ್ನು ಸೇವನೆ ಮಾಡುವುದು, ಮಾಂಸಾಹಾರ ಸೇವನೆ, ಬಿಡಿ, ಸಿಗರೇಟು, ಇವುಗಳ ದುಶ್ಚಟಗಳಿಂದ ಗಜಕರ್ಣ ಕಾಣಿಸಿಕೊಳ್ಳುತ್ತದೆ.
ಹಾಗಾದರೆ ಇದನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ಮನೆಮದ್ದನ್ನು ಬಳಸಬೇಕಾಗುತ್ತದೆ ಎಂದು ನೋಡುವುದಾದರೆ. ನಿಂಬೆ ಹಣ್ಣು ಹೌದು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಿಗುವಂತಹ ಈ ಒಂದು ಪದಾರ್ಥದಿಂದ ಕೇವಲ ಮೂರೇ ಮೂರು ದಿನದಲ್ಲಿ ನೀವು ಗಜಕರ್ಣ, ಕಜ್ಜಿ, ತುರಿಗೆ ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.
ನಿಂಬೆಹಣ್ಣನ್ನು ಚೆನ್ನಾಗಿ ಹಿಂಡಿ ಅದರ ರಸವನ್ನು ತೆಗೆದುಕೊಂಡು ಅದನ್ನು ಗಜಕರ್ಣ ಆಗಿರುವ ಜಾಗಕ್ಕೆ 3 ದಿನಗಳ ಕಾಲ ಹಚ್ಚುತ್ತಾ ಬರಬೇಕು ಈ ರೀತಿ ಮಾಡುವುದ ರಿಂದ 3 ದಿನದಲ್ಲಿಯೇ ಈ ಸಮಸ್ಯೆ ದೂರವಾಗುತ್ತದೆ. ಹಾಗೂ ಈ ಸಮಸ್ಯೆ ಯಾವುದೇ ಸಮಯದಲ್ಲೂ ಬರಬಾರದು ಎಂದರೆ ಮಣ್ಣಿನ ಸ್ನಾನ ಮಾಡಬೇಕು. ಹೌದು ಇಡೀ ದೇಹಕ್ಕೆ ಮಣ್ಣನ್ನು ಹಚ್ಚಿ ಎಳೆ ಬಿಸಿಲಿನಲ್ಲಿ ನಿಂತು ಆನಂತರ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ.
ಜೊತೆಗೆ ಸಾದ್ವಿಕ ಆಹಾರವನ್ನು ಯಥೇಚ್ಛವಾಗಿ ಸೇವನೆ ಮಾಡಬೇಕು ಹೌದು. ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಹಣ್ಣುಗಳು ಇವುಗಳನ್ನು ನಮ್ಮ ಆಹಾರ ಕ್ರಮದಲ್ಲಿ ಯಥೇಚ್ಛವಾಗಿ ಸೇವನೆ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವು ದಿಲ್ಲ. ಹೀಗೆ ಮೇಲೆ ಹೇಳಿದ ಈ ವಿಧಾನಗಳನ್ನು ನೀವು ಮಾಡುವುದ ರಿಂದ ಕಜ್ಜಿ, ತುರಿಕೆ, ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.