ಸಂಜನಾ ಗರ್ಲಾನಿ ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಾಯಕ ನಟಿಯಾಗಿ ಸಹ ಕಲಾವಿದೆಯಾಗಿ ಅಭಿನಯಿಸಿದ್ದರೆ ಆದರೆ ಕಳೆದ ಎರಡು ಮೂರು ವರ್ಷಗಳಿಂದಲೂ ಆಗಾಗ ಯಾವುದಾದ್ರೂ ಒಂದು ವಿಚಾರಕ್ಕೆ ಟ್ರೊಲ್ ಗೆ ಒಳಗಾಗುತ್ತಲೇ ಇರುತ್ತಾರೆ. ಕಳೆದ ಬಾರಿ ಡ್ರ’ಗ್ಸ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಟ್ರೋಲ್ ಆಗಿದ್ದರೂ ಅಷ್ಟೇ ಅಲ್ಲದೆ ಕೆಲವು ದಿನಗಳ ಕಾಲ ಜೈ’ಲು ವಾಸವನ್ನು ಕೂಡ ಅನುಭವಿಸಿ ಬಂದಿದ್ದರು. ಇನ್ನು ಸಂಜನ ಗಲ್ರಾನಿ ಅವರು ಮದುವೆಯಾಗಿದ್ದಾರೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ ಆದರೂ ಕೂಡ ಇವರು 2020ರಲ್ಲಿ ಮುಸ್ಲಿಂ ಯುವಕ ಅಜೀಜ್ ಎಂಬುವರನ್ನು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾದರು. ಸಂಜನ ಮದುವೆಯಾದ ಬಹಳ ದಿನದ ನಂತರ ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ವಿಚಾರ ಹೊರ ಬಂತು.
ಮದುವೆಯಾದ ನಂತರ ತಮ್ಮ ಹೆಸರನ್ನು ಕೂಡ ಬದಲಿಸಿಕೊಂಡಿದ್ದರು ಆದರೂ ಕೂಡ ಸದ್ಯಕ್ಕೆ ಎಲ್ಲರೂ ಇವರನ್ನು ಸಂಜನಾ ಗಲ್ರಾನಿ ಅಂತಾನೆ ಗುರುತಿಸುತ್ತಾರೆ. ಅಜೀಜ್ ಸಂಜನಾ ಅವರ ಫ್ಯಾಮಿಲಿ ಡಾಕ್ಟರ್ ಆಗಿರುತ್ತಾರೆ ಬಹಳ ದಿನದಿಂದಲೂ ಕೂಡ ಇವರಿಬ್ಬರ ನಡುವೆ ಸ್ನೇಹ ಇರುತ್ತದೆ ತದ ನಂತರ ಒಬ್ಬರಲ್ಲೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈಗಿನ ಕಾಲದ ನಟ ನಟಿಯರಿಗೆ ಮುಸ್ಲಿಂ ಯುವಕರ ಜೊತೆ ಮದುವೆ ಯಾಗುವುದು ಹೊಸದೇನಲ್ಲ ಏಕೆಂದರೆ ದಕ್ಷಿಣ ಭಾರತದ ಪಂಚಭಾಷಾ ಖ್ಯಾತ ನಟಿ ಪ್ರಿಯಾಮಣಿ ಅವರು ಕೂಡ ಮುಸ್ಲಿಂ ಯುವಕ ಮುಸ್ತಫ ಅವರ ಜೊತೆಗೆ ಮದುವೆಯಾಗಿದ್ದರು ಇದಾದ ನಂತರ ಇದೀಗ ಸಂಜನಾ ಕೂಡ ಅಜಿಜ್ ಎಂಬವರನ್ನು ಮದುವೆಯಾಗಿದ್ದಾರೆ.
ಮದವೆಯಾಗಿ ಮೂರು ವರ್ಷದ ನಂತರ ಸಂಜನಾ ಅವರು ಗಂಡು ಮಗು ಒಂದಕ್ಕೆ ಜನ್ಮ ಜನ್ಮ ನೀಡಿದ್ದಾರೆ ತಮ್ಮ ಮಗುವಿನ ಮೊದಲ ಫೋಟೋವನ್ನು instagram ಖಾತೆಯಲ್ಲಿ ಹಾಕಿಕೊಂಡಿದ್ದರು. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇನ್ನು ಕೆಲವು ನೆಟ್ಟಗರು ನಮ್ಮ ಹಿಂದೂ ಧರ್ಮದಲ್ಲಿ ಯಾವ ಯುವಕನು ಇರಲಿಲ್ಲವ ಎಂದು ಕಟುವಾಗಿ ಕಾಮೆಂಟ್ ಕೂಡ ಮಾಡಿದ್ದರು. ಆದರೆ ಸಂಜನ ಅವರು ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ ಸಂಜನ ಹಿಂದು ಆಗಿದ್ದರು ಕೂಡ ಮುಸ್ಲಿಂ ಸಂಪ್ರದಾಯದಂತೆ ಉಪವಾಸ ಮಾಡುವುದು ಕುರಾನ್ ಓದುವುದು ಇನ್ನಿತರ ಎಲ್ಲಾ ಕಾರ್ಯವನ್ನು ಕೂಡ ಮಾಡುತ್ತಿದ್ದರು. ಸದ್ಯಕ್ಕೆ ಸಂಜನಾ ಗರ್ಲಾನಿ ಅವರು ಸುದ್ದಿಯ ಬಂದಿರುವ ವಿಚಾರ ಯಾವುದಕ್ಕೆ ಅಂದರೆ ತಮ್ಮ ಮಗುವಿಗೆ ನಾಮಕರಣ ಮಾಡಿರುವ ಬಗ್ಗೆ.
ಸಂಜನಾ ಅವರು ತಮ್ಮ ಮಗುವಿಗೆ ‘ಅಲಾರಿಕ್” ಎಂಬ ಹೆಸರನ್ನು ಇಟ್ಟಿದ್ದಾರೆ ಕೆಲವು ಅಭಿಮಾನಿಗಳು ಅಲಾರಿಕ್ ಎಂದರೆ ಏನು ಈ ಪದದ ಅರ್ಥವೇನು ಎಂದು ಇನ್ಸ್ಟಾಗ್ರಾಮ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದಂತಹ ಸಂಜನಾ ಗರ್ಲಾನಿ ಮತ್ತು ಅಜಿಜ್ ದಂಪತಿಗಳು ಅಲಾರಿಕ್ ಎಂಬ ಹೆಸರು “ಉದತ್ತ ಆಡಳಿತಗಾರ, ಒಳ್ಳೆಯ ನಿಪುಣ” ಎಂಬ ಅರ್ಥವನ್ನು ಇದು ಸೂಚಿಸುತ್ತದೆ ಎಂದು ಸಂಜನಾ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸಂಜನ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದು ತಮ್ಮ ಪತಿ ಮನೆ ಮಕ್ಕಳು ಎಂದು ಕಾಲ ಕಳೆಯುತ್ತಿದ್ದಾರೆ. ಮಗುವಿನ ಲಾಲನೆ ಮತ್ತು ಪಾಲನೆಯಲ್ಲಿ ನಿರತರಾಗಿರುವ ಸಂಜನ ಅವರು ಮುಂದೆ ಸಿನಿಮಾರಂಗಕ್ಕೆ ಬರುತ್ತಾರ ಅಥವಾ ಇಲ್ಲ ಎಂಬುದು ತಿಳಿದಿಲ್ಲ. ಕೆಲವು ನೆಟ್ಟಿಗರು ನೀವು ಮತ್ತೆ ಚಿತ್ರರಂಗಕ್ಕೆ ಬರಬೇಡಿ ಎಂದು ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಂಜನಾ ತಮ್ಮ ಮಗುವಿಗೆ ಇಟ್ಟಿರುವ ಈ ಹೆಸರಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ