ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನಿದ್ದೆ ಬಲ್ಲವನಿಗೆ ರೋಗ ವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವಂತಹ ಗಾದೆ ಮಾತನ್ನು ಕೇಳಿರುತ್ತೀರಿ. ಹೌದು ಈ ಒಂದು ಗಾದೆ ಮಾತು ಪ್ರತಿಯೊಬ್ಬರಿಗೂ ಕೂಡ ಅನ್ವಯವಾಗುತ್ತದೆ ಈ ಗಾದೆಯ ಅರ್ಥ ನೋಡುವುದಾದರೆ ನಿದ್ದೆ ಬಲ್ಲವನಿಗೆ ರೋಗವಿಲ್ಲ ಎಂದರೆ ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವವರಿಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ಬದಲಿಗೆ ಸರಿಯಾದ ಸಮಯದಲ್ಲಿ ನಿದ್ರೆ ಮಾಡದೆ ಇಡೀ ರಾತ್ರಿ ಮಲಗದೆ ಇರುವವರಿಗೆ ಒಂದಲ್ಲ ಒಂದು ರೋಗ ಇದ್ದೇ ಇರುತ್ತದೆ. ಆದ್ದರಿಂದ ನಿದ್ದೆ ಸರಿಯಾಗಿ ಯಾರು ಮಾಡುತ್ತಾರೋ ಅವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಬರುವುದಿಲ್ಲ ಎಂದರ್ಥ ಹಾಗೂ ಮಾತು ಬಲ್ಲವನಿಗೆ ಜಗಳವಿಲ್ಲ ಅಂದರೆ ಉತ್ತಮವಾದಂತಹ ಮಾತುಗಾರರು.
ತಂದೆ ತಾಯಂದಿರಿಗೆ ಬಹಳ ವಿಶೇಷವಾದ ಸಲಹೆ.! ಮಕ್ಕಳನ್ನು ಹೆತ್ತವರು ತಪ್ಪದೆ ನೋಡಿ.
ಯಾರು ಯಾವುದೇ ಮಾತನ್ನು ಹೇಳಿದರೆ ಅದಕ್ಕೆ ಸರಿಯಾದಂತಹ ಉತ್ತರವನ್ನು ಕೊಡುತ್ತಾರೆ. ಬದಲಿಗೆ ಅವರು ಯಾರ ಮುಂದೆಯೂ ಸೋಲುವುದಿಲ್ಲ. ಹಾಗಾಗಿ ಯಾರು ಸರಿಯಾದ ರೀತಿಯಲ್ಲಿ ಮಾತನ್ನು ಕಲಿತಿರುತ್ತಾರೋ ಅವರಿಗೆ ಯಾವುದೇ ರೀತಿಯ ವಿಷಯಗಳನ್ನು ಕೇಳಿದರು ಅವರು ಅದರ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಇವರು ಯಾವ ವಿಚಾರವಾಗಿಯೂ ಕೂಡ ಯಾರ ಬಳಿಯೂ ಜಗಳವನ್ನು ಮಾಡಿಕೊಳ್ಳುವುದಿಲ್ಲ.
ಬದಲಿಗೆ ಆ ಒಂದು ಸನ್ನಿವೇಶದಲ್ಲಿ ಯಾವ ಮಾತುಗಳನ್ನು ಹೇಳಬೇಕೋ ಆ ಮಾತುಗಳನ್ನು ಹೇಳುವ ಮೂಲಕ ಎಲ್ಲರ ಮುಂದೆ ಹೆಚ್ಚು ಬುದ್ಧಿವಂತರು ಚಾಣಾಕ್ಷತನವನ್ನು ಹೊಂದಿರುವ ವರು ಎನ್ನುವಂತಹ ಒಳ್ಳೆಯ ಮಾತುಗಳನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಈ ಒಂದು ಗಾದೆ ಬಹಳ ಅರ್ಥಪೂರ್ಣವಾಗಿರುವಂತಹ ಮಾಹಿತಿಯನ್ನು ಒಳಗೊಂಡಿದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿದ್ದೆ ಬಲ್ಲವನಿಗೆ ರೋಗವಿಲ್ಲ ಎನ್ನುವಂತಹ ಗಾದೆ ಮಾತಿನ ವಿವರಗಳನ್ನು ಈ ಕೆಳಗೆ ತಿಳಿಯೋಣ.
45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯವಾಗಿರಲು 20 ಸರಳ ಮಾರ್ಗಗಳು.!
* ಮಲಗುವ ಕೋಣೆ ಪ್ರಶಾಂತವಾಗಿರಬೇಕು, ಕತ್ತಲೆ ಅಥವಾ ಮಂದ ಬೆಳಕಿನಲ್ಲಿ ಮಲಗುವುದು.
* ಸೊಳ್ಳೆ, ತಿಗಣೆ ಅಥವಾ ಕ್ರಿಮಿಕೀಟಗಳ ತೊಂದರೆ ಇರಬಾರದು.
* ಮುಖ್ಯವಾಗಿ ನಾವು ಮಲಗುವ ಹಾಸಿಗೆಯು ಮಲಗುವ ಭಂಗಿಗೆ ಅನುಕೂಲವಾಗಿರಬೇಕು.
* ಮಲಗುವ ಮುನ್ನ ಎರಡು ಗಂಟೆ ಮುಂಚಿತವಾಗಿ ಊಟ ಮಾಡಿ.
* ಮಲಗುವ ಮೊದಲು ಲಘು ಉಪಹಾರ ಮತ್ತು ಹಣ್ಣು ಹಂಪಲು ಸೇವಿಸಿದರೆ ಹಲ್ಲುಜ್ಜಿ ಬಾಯಿ ಸ್ವಚ್ಛಗೊಳಿಸಬೇಕು.
* ಮಲಗಿದ ಕೆಲ ಸಮಯದಲ್ಲೇ ಎಚ್ಚರವಾದರೆ, ಚಿಂತೆ ಕಾಡತೊಡಗಿದರೆ ಸಂಗೀತ ಕೇಳುವುದು, ಓದುವುದು ಮುಂತಾದ ಕೆಲಸಗಳಲ್ಲಿ ತೊಡಗಬೇಕು.
* ನಿಯಮಿತ ವ್ಯಾಯಮ ಅಥವಾ ಯೋಗಾಭ್ಯಾಸ ಸುಖನಿದ್ರೆಯ ಗುಟ್ಟು.
* ಅತಿಯಾದ ಆಯಾಸದ ವ್ಯಾಯಾಮ ನಿದ್ದೆಗೆಡಿಸುತ್ತದೆ.
ಮೂರನೇ ಕಂತಿನ ಅಕ್ಕಿ ಜಣ ಜಮಾ ಆಗಿದೆ.! ಈ ರೀತಿ ಚೆಕ್ ಮಾಡಿ.!
* ಕುಡಿಯುವುದನ್ನು ಬಿಡಬೇಕು. ಧೂಮಪಾನವೂ ಸುಖನಿದ್ರೆಗೆ ತುಂಬಾ ತೊಂದರೆ ಕೊಡುತ್ತದೆ.
* ಶಿಶುವಿಗೆ ಕನಿಷ್ಠ 12 ಗಂಟೆಗಳು ನಿದ್ರೆ ಬೇಕು.
* ಆದರೆ ಇಳಿವಯಸ್ಸಿನಲ್ಲಿ ನಿದ್ರಾಹೀನತೆ ಸಾಮನ್ಯವಾಗಿರುತ್ತದೆ. ಅಂಥ ವರು ಯೋಗಾಭ್ಯಾಸ ಮೂಡುವುದರಿಂದ ನಿದ್ರೆಯ ತೊಂದರೆಯನ್ನು ಸರಿಪಡಿಸಿ ಕೊಳ್ಳಬಹುದು.
* ಮಲಗುವಾಗ ಧ್ಯಾನ, ಮಂತ್ರ ಪಠಣೆ ಕ್ರಮಗಳಿಂದ ಸುಖನಿದ್ರೆ ಬರು ತ್ತದೆ. ಹಾಗೊಮ್ಮೆ ನಿದ್ರೆ ಬಾರದಿದ್ದಲ್ಲಿ ಈ ಕಳಗೆ ಕೊಟ್ಟಿರುವ ಅಂಶಗಳ ನ್ನು ಪಾಲಿಸುವುದು ಒಳ್ಳೆಯದು.
* ಹಸಿ ಅಲಸಂದೆ ಕಾಳನ್ನು ಬೆಲ್ಲದೊಂದಿಗ ಅಗಿದು ತಿಂದರ ನಿದ್ರೆ ಚೆನ್ನಾಗಿ ಬರುವುದು
* ಸೌತೆಕಾಯಿ ತಿರುಳನ್ನು ಅಂಗಾಲಿಗೆ ಚೆನ್ನಾಗಿ ಉಜ್ಜಿಕೊಂಡರೆ ನಿದ್ರೆ ಚೆನ್ನಾಗಿ ಬರುವುದು.
* ಹುರುಳಿಕಾಳು ಮೊಳಕೆ ಸಾರನ್ನು ಸೇವಿಸುವುದರಿಂದ ನಿದ್ರೆಯೂ ಚೆನ್ನಾಗಿ ಬರುವುದು.
* ನಿದ್ರೆ ಬರಲು ಗಸಗಸೆ ಪಾಯಸ ಮೂಡಿಕೊಂಡು ಸೇವಿಸುವುದು ಒಳ್ಳೆಯದು.
* ಹರಳೆಣ್ಣೆಯ ಅಭ್ಯಂಜನ ಸ್ನಾನ ಮಾಡುವುದರಿಂದ ನಿದ್ರಾಹೀನತೆ ಯನ್ನು ತೊಲಗಿಸಬಹುದು.