* ಸಕ್ಕರೆ ಡಬ್ಬದಲ್ಲಿ ಇರುವೆ ಬರುತ್ತಿದ್ದರೆ ಆ ಡಬ್ಬಿಯಲ್ಲಿ 2 ರಿಂದ 3 ಲವಂಗವನ್ನು ಹಾಕಿ ಇಡಿ.
* ಉಪ್ಪಿನ ಪುಡಿ ಡಬ್ಬದಲ್ಲಿ ಒಂದೆರಡು ಅಕ್ಕಿ ಕಾಳು ಹಾಕಿ ಇಡಿ. ಇದರಿಂದ ಉಪ್ಪು ಒದ್ದೆಯಾಗುವುದಿಲ್ಲ.
* ಆಲೂಗಡ್ಡೆ ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ ಆಗ ಸಿಪ್ಪೆ ತೆಗೆಯುವುದು ಸುಲಭ.
* ಕಾಳುಗಳು ಹಾಗೂ ಬೆಳೆಗಳು ಬೇಯಿಸಲು ಸಮಯ ಆಗುತ್ತದೆ. ಹಾಗಾಗಿ ಅವುಗಳನ್ನು ನೆನೆಸಿಟ್ಟು ನಂತರ ಬೇಯಿಸಿದರೆ ಬೇಗ ಬೇಯುತ್ತದೆ.
* ತುರಿದ ಕಾಯಿ ತುರಿಯನ್ನು ದೀರ್ಘಕಾಲ ತಾಜವಾಗಿರಲು ಅದಕ್ಕೆ ಕರಿಬೇವನ್ನು ಸೇರಿಸಿ ಇಡಿ.
* ನೀರನ್ನು ಕಾಯಿಸುವಾಗ ಮೇಲೆ ಒಂದು ತಟ್ಟೆಯನ್ನು ಮುಚ್ಚಿ ಇಟ್ಟರೆ ನೀರು ಬೇಗ ಕುದಿಯುತ್ತದೆ.
* ಹಸಿಮೆಣಸಿನ ಕಾಯಿಯನ್ನು ಕತ್ತರಿಸುವಾಗ ಕತ್ತರಿಯನ್ನು ಬಳಸಿ ಇದರಿಂದ ಕೈ ಉರಿಯುವುದನ್ನು ತಪ್ಪಿಸಬಹುದು.
* ಒಡೆದ ತೆಂಗಿನಕಾಯಿ ಬೇಗ ಕೆಡದಿರಲು ಅದಕ್ಕೆ ಸ್ವಲ್ಪ ಉಪ್ಪು ಸವರಿ ಇಡುವುದು ಉತ್ತಮ.
ನಿಮ್ಮ ಮನೆಯನ್ನು ಸುಂದರವಾಗಿಡಲು ಮತ್ತು ಅಡುಗೆ ಮನೆಗೆ ಉಪಯೋಗವಾಗುವಂತಹ ಸೂಪರ್ ಟಿಪ್ಸ್..!
* ಶುಂಠಿಯ ಸಿಪ್ಪೆಯನ್ನು ತೆಗೆಯಲು ಒಂದು ಚಮಚವನ್ನು ಬಳಸಿ. ಇದರಿಂದ ಆ ಕೆಲಸ ಸುಲಭವಾಗಿ ಆಗುತ್ತದೆ. ಅದರಲ್ಲೂ ಶುಂಠಿಯನ್ನು ತೊಳೆದು ಆನಂತರ ಚಮಚದ ಸಹಾಯದಿಂದ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು
* ಬಿಸಿ ಮೊಟ್ಟೆಯ ಸಿಪ್ಪೆ ತೆಗೆಯುದು ಕಷ್ಟ. ಆದ್ದರಿಂದ ಅದನ್ನು ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ಹಾಕಿ ನಂತರ ತೆಗಿಯಿರಿ. ಆಗ ಸಿಪ್ಪೆ ಸುಲಭವಾಗಿ ಬರುತ್ತದೆ.
* ಮನೆಯಲ್ಲಿ ಇರುವ ಹಿಟ್ಟಿಗೆ ಹುಳು ಬೀಳುವುದು ಸಹಜ. ಆದ್ದರಿಂದ ಅದಕ್ಕೆ ಒಂದು ಪಲಾವ್ ಎಲೆ ಸೇರಿಸಿ ಇಡಿ, ಇದು ಹುಳು ಬೀಳದಂತೆ ತಡೆಯುತ್ತದೆ.
* ಮಿಕ್ಸಿ ಜಾರ್ ಗಳು ಶಾರ್ಪ್ ಆಗಲು ಕಲ್ಲುಪ್ಪನ್ನು ಹಾಕಿ ಗ್ರೆಂಡ್ ಮಾಡಿ ಇದು ಜಾರ್ ಗಳ ಬ್ಲೇಡ್ ಶಾರ್ಪ್ ಆಗುವುದಕ್ಕೆ ಸಹಾಯ ಮಾಡುತ್ತದೆ.
* ಕಬ್ಬಿಣದ ತವಾ ಹಾಗೂ ಪಾತ್ರೆಗಳು ತುಕ್ಕು ಹಿಡಿದಿದ್ದರೆ ಅಡುಗೆ ಸೋಡಾವನ್ನು ತೆಗೆದುಕೊಂಡು ಬ್ರಷ್ ನಿಂದ ಉಜ್ಜಿರಿ ಆಗ ಕಬ್ಬಿಣದ ತವ ಮೇಲೆ ಇರುವಂತಹ ಎಲ್ಲಾ ತುಕ್ಕು ಹಿಡಿದಿರುವಂತಹ ಕಲೆ ಸಂಪೂರ್ಣವಾಗಿ ದೂರವಾಗುತ್ತದೆ.
ತಲೆ ಸುತ್ತು ಸಮಸ್ಯೆ ಇದ್ದರೆ ಹೀಗೆ ಮಾಡಿ ಕೂಡಲೇ ಕಮ್ಮಿ ಆಗುತ್ತೆ.!
* ಕರಿಬೇವು ಹಾಗೂ ಇನ್ನಿತರ ಸೊಪ್ಪುಗಳು ತಾಜವಾಗಿ ಇಡಲು ಸೊಪ್ಪುಗಳನ್ನು ಬಿಡಿಸಿ ಒಂದು ಕವರ್ ಗೆ ಹಾಕಿ ಇಡಿ. ಈ ರೀತಿ ಇಡುವುದರಿಂದ ಮೂರ್ನಾಲ್ಕು ದಿನದವರೆಗೆ ತಾಜವಾಗಿ ಇಡಬಹುದು.
* ಇಡ್ಲಿ ಮೃದುವಾಗಿ ಬರಲು ರುಬ್ಬುವಾಗ ಅರ್ಧ ಕಪ್ ಅನ್ನವನ್ನು ಸೇರಿಸಿ ರುಬ್ಬಿ. ಆನಂತರ ಇಡ್ಲಿ ಮಾಡಿದರೆ ತುಂಬಾ ಮೃದುವಾಗಿ ಬರುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಟಿಪ್ಸ್ ಗಳು ನಿಮ್ಮ ಅಡುಗೆ ಮನೆಯ ವಿಚಾರವಾಗಿ ಸಂಬಂಧಿಸಿದ ಮಾಹಿತಿಗಳಾಗಿದ್ದು.
ಇದನ್ನು ಅನುಸರಿಸುವುದರಿಂದ ನೀವು ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಹುದು ಹಾಗೂ ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬಹುದು. ಯಾವುದೇ ರೀತಿಯ ಪದಾರ್ಥವನ್ನು ನೀವು ಹಾಳಾಗದಂತೆ ನೋಡಿ ಕೊಳ್ಳಬಹುದು. ಅದರಲ್ಲೂ ಯಾವುದೇ ಹಿಟ್ಟಿನಲ್ಲಿ ಬರುವಂತಹ ಹುಳವನ್ನು ಹೇಗೆ ತಡೆಯುವುದು ಎನ್ನುವುದನ್ನು ಸಹ ನೀವು ಮೇಲೆ ತಿಳಿದು ಕೊಂಡಿರಿ.
• ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಮನೆಯಲ್ಲಿರುವ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಇಂತಹ ಕೆಲ ವೊಂದಷ್ಟು ಮಾಹಿತಿಗಳು ತುಂಬಾ ಅನುಕೂಲವನ್ನು ಉಂಟುಮಾಡು ತ್ತದೆ. ಅದರ ಜೊತೆಗೆ ಯಾರಿಗೂ ಇಂತಹ ಕೆಲವೊಂದಷ್ಟು ಟಿಪ್ಸ್ ಗಳು ತಿಳಿದಿರುವುದಿಲ್ಲ. ಅವರು ಕೂಡ ಇದನ್ನು ತಿಳಿದು ಈ ರೀತಿ ಅನುಸರಿಸು ವುದರಿಂದ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಂಡಂತೆ ಆಗುತ್ತದೆ ಎಂದೇ ಹೇಳಬಹುದು.