ಸಾಮಾನ್ಯವಾಗಿ ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಅಡುಗೆ ಮನೆಯ ವಿಚಾರವಾಗಿ ಸಂಬಂಧಿಸಿದಂತೆ ಯಾವ ಕೆಲವು ವಿಧಾನ ಗಳನ್ನು ಅನುಸರಿಸುವುದರಿಂದ ಅಡುಗೆ ಮನೆಯಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿ ಸುವುದರಿಂದ ಹೇಗೆ ಕಡಿಮೆ ಸಮಯದಲ್ಲಿ ಬೇಗ ಕೆಲಸ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.
ಆದರೆ ಅವರಿಗೆ ಕೆಲವೊಂದಷ್ಟು ಮಾಹಿತಿಗಳು ತಿಳಿದಿರುವುದಿಲ್ಲ ಬದಲಿಗೆ ಬೇರೆಯವರಿಂದ ಕೇಳಿ ಅನುಸರಿಸುತ್ತಿರುತ್ತಾರೆ ಆದರೆ ಈ ದಿನ ನಾವು ಮನೆ ಹಾಗೂ ಅಡುಗೆ ಮನೆಯ ವಿಚಾರವಾಗಿ ಸಂಬಂಧಿಸಿದಂತೆ ಕೆಲವೊಂದಷ್ಟು ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ ಹಾಗಾದರೆ ಆ ಟಿಪ್ಸ್ ಗಳು ಯಾವುದು ಎನ್ನುವುದನ್ನು ತಿಳಿದುಕೊಳ್ಳುತ್ತಾ ಹೋಗೋಣ.
ತಲೆ ಸುತ್ತು ಸಮಸ್ಯೆ ಇದ್ದರೆ ಹೀಗೆ ಮಾಡಿ ಕೂಡಲೇ ಕಮ್ಮಿ ಆಗುತ್ತೆ.!
* ಮನೆಯೊಳಗೆ ಇರುವೆಗಳ ಕಾಟ ಇದೆಯೋ ತಿಂಗಳಿಗೊಂದು ಶೋಕೇಸ್ ಗೋಡೆ ಮತ್ತು ನೆಲವನ್ನು ಸ್ವಚ್ಛ ಮಾಡಿ ಬಳಿಕ ಒಂದು ಬಟ್ಟ ಲು ನೀರಿಗೆ 10 ತೊಟ್ಟು ಬೇವಿನೆಣ್ಣೆಯನ್ನು ಬೆರೆಸಿ ಬಟ್ಟೆಯೊಂದರಲ್ಲಿ ಅದ್ದಿ ಒರೆಸಿರಿ ಆಗಾಗ್ಗ ಹೀಗೆ ಮೂಡುತ್ತಾ ಇದ್ದರೆ ಇರುವೆಗಳು ಮನೆಯೊಳಗ ತಲೆಹಾಕುವುದಿಲ್ಲ.
* ಬಟ್ಟೆ ಒಗೆದ ನಂತರ ಉಳಿಯುವ ಸಾಬೂಡಿನ ನೀರನ್ನು ಬಚ್ಚಲಿನಲ್ಲಿ ಚೆಲ್ಲುವ ಬದಲು ಸದುಪಯೋಗಪಡಿಸಿಕೊಳ್ಳಿ ಆ ಸಾಬೂನಿನ ನೀರನ್ನು ಕಿಟಕಿ, ಪ್ಲಾಸ್ಟಿಕ್, ಚಾಪೆ, ಚಪ್ಪಲಿ ಇತ್ಯಾದಿಗಳನ್ನು ತೊಳೆಯಲು ಬಳಸ ಬಹುದು. ಈ ರೀತಿ ಮಾಡುವುದರಿಂದ ಅದನ್ನು ಮತ್ತೆ ಪುನರ್ ಬಳಕೆ ಮಾಡಿಕೊಂಡಂತೆ ಆಗುತ್ತದೆ. ಅದರಲ್ಲೂ ಸಾಬೂನಿನ ನೀರನ್ನು ಬಚ್ಚಲಿ ನಲ್ಲಿ ಹಾಕುವುದರಿಂದ ಜಿರಳೆಗಳ ಸಂತತಿಯು ಕೂಡ ಹೆಚ್ಚಾಗುತ್ತದೆ. ಹೌದು ಆ ನೀರಿನ ವಾಸನೆಗೆ ಜಿರಳೆಗಳು ಹೆಚ್ಚಾಗುತ್ತದೆ ಅದರ ಬದಲು ಈ ವಿಧಾನ ಅನುಸರಿಸುವುದರಿಂದ ಜರಳೆಗಳ ಕಾಟದಿಂದಲೂ ಕೂಡ ಮುಕ್ತಿ ಪಡೆಯಬಹುದು.
* ಕೊಚ್ಚೆ ಮಣ್ಣು ಮೆತ್ತಿಕೊಂಡ ದ್ವಿಚಕ್ರ ವಾಹನಗಳಿಗೆ ಈ ನೀರನ್ನು ಚೆನ್ನಾಗಿ ಸುರಿದು, ಕೆಲವು ನಿಮಿಷಗಳ ಬಳಿಕ ಹಳೆಯ ಹಲ್ಲುಜ್ಜುವ ಬ್ರಷ್‌ನಿಂದ ಉಜ್ಜಿದರ ಮೆತ್ತಿಕೊಂಡ ಮಣ್ಣು ಉದುರುತ್ತದೆ. ಬಳಿಕ ಸ್ವಚ್ಛ ನೀರಿನಿಂದ ಇನ್ನೊಮ್ಮೆ ತೊಳೆಯ ಬಹುದು.
* ಹೂವಿನ ಕುಂಡಕ್ಕೆ ಸ್ವಲ್ಪ ಸಕ್ಕರೆ ಅಥವಾ ಗ್ಲೂಕೋಸನ್ನು ದಿನಲೂ ಹಾಕುತ್ತಾ ಬಂದರೆ ಹೂಗಳು ಸೊಂಪಾಗಿ ಅರಳುತ್ತದೆ.
* ನಂದಾದೀಪ ಹೊತ್ತಿಸುವ ಮುನ್ನ ಬತ್ತಿಯ ತುದಿಗೆ ಸ್ವಲ್ಪ ಕರ್ಪೂರ ವನ್ನು ಮೆತ್ತಿದರ, ದೀಪ ಥಟ್ಟನೆ ಹೊತ್ತಿಕೊಳ್ಳುತ್ತದೆ.
* ಬಿಳಿ ಬಟ್ಟೆಗಳನ್ನು ಶರಾಯಿ ಬೆರೆಸಿದ ವಿನಿಗರ್ ನಲ್ಲಿ ನೆನಸಿಟ್ಟು ಒಗೆದರೆ ಬೆಳ್ಳಗೆ ಪ್ರಜ್ವಲಿಸುತ್ತದೆ.
* ಎಲೆಕೋಸಿನ ಗಿಡವನ್ನು ಕಿತ್ತು ಬೇರೆಡೆ ನಾಟಿ ಮೂಡುವ ಮುನ್ನ ಸ್ವಲ್ಪ ಹೊತ್ತು ಹವಾನಿಯಂತ್ರಿತ ಕೋಣೆಯಲ್ಲಿರಿಸಬೇಕು. ಸ್ವಲ್ಪ ಸಮಯದ ನಂತರ ನೆಟ್ಟರೆ ಗಿಡ ಬಹಳ ಬೇಗ ಬೆಳೆಯುತ್ತದೆ. ಹೆಚ್ಚಿನ ಫಸಲನ್ನೂ ನೀಡುತ್ತದೆ.
* ಮನೆಯಲ್ಲಿ ಹೆಗ್ಗಣಗಳೇನಾದರೂ ಓಡಾಡುತ್ತಿದ್ದರೆ ಅದು ಓಡಾಡಬಹು ದಾದ ಸ್ಥಳಗಳಲ್ಲಿ ಬೇವಿನಲೆಗಳನ್ನು ಇರಿಸಿದರ ಅವು ಅಲ್ಲಿ ಸುಳಿಯು ವುದಿಲ್ಲ.
* ಬಟ್ಟೆಯ ಮೇಲೆ ಟೀ ಅಥವಾ ಕಾಫಿ ಚೆಲ್ಲಿ ಕಲೆಯಾದರೆ ಅದರ ಮೇಲೆ ಮುಖಕ್ಕೆ ಬಳಸುವ ಪೌಡರನ್ನು ಹಾಕಿ ನಂತರ ಒಗೆದರೆ ಕಲೆ ಮಾಯವಾಗುತ್ತದೆ.
ಸಕ್ಕರೆ ಕಾಯಿಲೆ 400 ರಿಂದ 90 ಕ್ಕೆ ಇಳಿಯುತ್ತದೆ ಈ ರೀತಿ ಒಮ್ಮೆ ಮಾಡಿ ನೋಡಿ.! ಮಧುಮೇಹಿಗಳಿಗೆ ರಾಮಬಾಣ ಈ ಜ್ಯೂಸ್
* ಹಿತ್ತಾಳೆ ಪಾತ್ರೆಗಳನ್ನು ತೊಳೆದು ನಂತರ ಅದರ ಸಿಪ್ಪೆ ತಗೆದು ಆಲೂ ಗಡ್ಡೆಯಿಂದ ಉಜ್ಜಿದರೆ 7 ದಿನಗಳ ಕಾಲ ಹೊಳಪನ್ನು ಕಳೆದುಕೊಳ್ಳುವುದಿಲ್ಲ.
* ಗೋಡೆಗೆ ಮೊಳ ಹೂಡೆಯುವ ಮುನ್ನ ಆ ಸ್ಥಳದಲ್ಲಿ ಸಲೋಫಿನ್ ಟೇಪನ್ನು ಅಂಟಿಸಿ ನಂತರ ಮೊಳೆ ಹೊಡೆದರೆ ಆ ಜಾಗದಲ್ಲಿನ ಸುಣ್ಣ ಅಥವಾ ಬಣ್ಣ ಉದುರುವುದಿಲ್ಲ.
* ನೈಲಾನ್ ಹಗ್ಗವನ್ನು ಕೊಂಡನಂತರ ಅದನ್ನು ಸಾಬೂನಿನ ನೀರಿನಲ್ಲಿ ನೆನೆಸಿಟ್ಟು ಬಳಸಿದರೆ ದೀರ್ಘ ಕಾಲ ಬಾಳಿಕೆ ಬರುತ್ತದೆ.