ಕರ್ನಾಟಕ ಸರ್ಕಾರದ (Karnata government) ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Sceme) ಜುಲೈ 19 ರಿಂದ ಅರ್ಜಿ ಸಲ್ಲಿಸಲು ಸರ್ಕಾರ ಚಾಲನೆ ನೀಡಿದೆ. ಸರ್ಕಾರವೇ ಸೂಚಿಸಿರುವ ಸೇವಾಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಮೊದಲು ಸರ್ಕಾರ ಸಹಾಯವಾಣಿಯನ್ನು ನೀಡಿತ್ತು.
ಆ ಸಂಖ್ಯೆಗೆ RC ಸಂಖ್ಯೆಯನ್ನು SMS ಕಳುಹಿಸಿದವರಿಗೆ ಅರ್ಜಿ ಸಲ್ಲಿಸುವ ವೇಳಾಪಟ್ಟಿಯನ್ನು ಮರು ಸಂದೇಶವಾಗಿ ಕಳುಹಿಸಿ ಕೊಡುತ್ತಿತ್ತು. ಬಳಿಕ ಗೃಹಲಕ್ಷ್ಮಿ ಯೋಜನೆಯ ವೆಬ್ಸೈಟ್ ಗೆ ಭೇಟಿ ಕೊಟ್ಟು ವೇಳಾಪಟ್ಟಿಯನ್ನು ತಿಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು. ಒಂದು ದಿನಕ್ಕೆ ಕೇವಲ 60 ಜನರಿಗೆ ಮಾತ್ರ ಈ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿತ್ತು.
ಈ ಸುದ್ದಿ ತಪ್ಪದೆ ನೋಡಿ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ, ಈ ದಾಖಲೆಗಳು ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು.
ಆದರೆ ಕೆಲ ದಿನಗಳಾದ ನಂತರ ಈ ವೇಳಾಪಟ್ಟಿ ವಿಷಯವಾಗಿ ಗೊಂದಲವಾದ ಕಾರಣ SMS ಬರದಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು ಎಂದು ಅನುಮತಿ ನೀಡಿತು. ಆದರೆ ಈಗ ಗೃಹಜ್ಯೋತಿ ಯೋಜನೆಗೆ ಉಂಟಾದಂತೆ ಜನದಟ್ಟಣೆ ಸಮಸ್ಯೆ ಎದುರಾಗಿದೆ. ಪ್ರತಿ ಕೇಂದ್ರದಲ್ಲೂ ನೂರಕ್ಕಿಂತ ಹೆಚ್ಚು ಮಹಿಳೆಯರು ಕೆಲಸಕಾರ್ಯ ಬಿಟ್ಟು ಸರತಿಸಾಲಿನಲ್ಲಿ ನಿಂತು ದಿನಪೂರ್ತಿ ಕಾಯುತ್ತಿದ್ದಾರೆ.
ಇದರಿಂದ ಸಹಾ ಸಾಕಷ್ಟು ಸಮಸ್ಯೆ ತಲೆದೋರಿದೆ. ಇದನ್ನು ಮನಗಂಡ ಸರ್ಕಾರ ಅಂತಿಮವಾಗಿ ಮನೆಯಲ್ಲಿಯೇ ಇದ್ದುಕೊಂಡು ಪ್ರಜಾಪ್ರತಿನಿಧಿಗಳ (Citezens Representative) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದೆ. ಪ್ರಜಾಪತಿನಿಧಿಗಳ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಈ ಯೋಜನೆಗೆ ಮಾರ್ಗಸೂಚಿ ರೂಪಿಸಿದ ಸಮಯದಲ್ಲೇ ನಿರ್ಧಾರ ಆಗಿತ್ತು. ಈಗ ಅದಕ್ಕೆ ಅವಕಾಶ ನೀಡಲಾಗಿದೆ ಇದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸು ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಪ್ರತಿ 1000 ಫಲಾನುಭವಿಗಳಿಗೆ ಇಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ಆಯ್ದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿತ್ತು. ಈಗಾಗಲೇ ಹಲವರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ಸಹ ನೀಡಿದೆ. ಈಗ ಮತ್ತೊಮ್ಮೆ ಪ್ರಜಾಪ್ರತಿನಿಧಿಗಳಾಗಲು ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನ ಕೂಡ ಮಾಡಿದೆ.
● ಪ್ರಜಾಪ್ರತಿನಿಧಿಗಳಾಗಲು ಆಸಕ್ತಿ ಇರುವವರು ಸೇವಾ ಸಿಂಧು ಲಾಗಿನ್ ಐಡಿ (Sevasindhu log in ID) ಮತ್ತು ಪಾಸ್ವರ್ಡ್ (Password) ಪಡೆದು ಯೋಜನೆ ಅಧಿಕೃತ ವೆಬ್ಸೈಟ್ (Sevasindhu website) ಗೆ ಭೇಟಿ ಕೊಟ್ಟು ಗೃಹಲಕ್ಷ್ಮಿ ಯೋಜನೆ ಸೆಲೆಕ್ಟ್ ಮಾಡಿ ಪ್ರಜಾಪತಿನಿಧಿಯಾಗಲು ಫಾರಂ ಫಿಲ್ (Form) ಮಾಡಿ ದಾಖಲೆಗಳನ್ನು (Proof) ಸಲ್ಲಿಸಿ ಪ್ರಕ್ರಿಯೆ ಪೂರೈಸುವ ಮೂಲಕ ಅರ್ಜಿ (Apply) ಸಲ್ಲಿಸಬಹುದು. ಆಯ್ಕೆ ಆದವರಿಗೆ ಸರ್ಕಾರದಿಂದ ಗುರುತಿನ ಚೀಟಿ (Citezens Representative ID Card ) ಕೂಡ ಸಿಗುತ್ತದೆ.
● ಪ್ರಜಾಪ್ರತಿನಿಧಿಗಳು ಪ್ರತಿ ಮನೆಗೂ ಭೇಟಿಕೊಟ್ಟು ಅವರಿಗೆ ನೀಡಿರುವ ಮೊಬೈಲ್ ಆಪ್ (Mobile app) ಮೂಲಕ ನಿಮ್ಮ ಮಾಹಿತಿ ಪಡೆದು ನಿಮಗೆ ಅರ್ಜಿ ಸಲ್ಲಿಸಿ ಕೊಡುತ್ತಾರೆ.
● ಅರ್ಜಿ ಸಲ್ಲಿಕೆಯಾದ ಬಳಿಕ ಸ್ವೀಕೃತಿ ಪ್ರತಿಯನ್ನು ಕೂಡ ಅವರೇ ತಂದು ನಿಮಗೆ ಕೊಡುತ್ತಾರೆ ಅಥವಾ ಪೋಸ್ಟ್ ಮೂಲಕ ಅದು ನಿಮ್ಮ ಮನೆ ವಿಳಾಸಕ್ಕೆ ಬರುವಂತೆ ಮಾಡುತ್ತಾರೆ.
● ಜೊತೆಗೆ ಈ ರೀತಿ ಪ್ರಜಾಪ್ರತಿನಿಧಿಗಳಿಂದ ಅರ್ಜಿ ಸಲ್ಲಿಸಿದರೂ ಅಥವಾ ಸೇವಾ ಸಿಂಧು ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರಣಕ್ಕಾಗಿ ಅರ್ಜಿ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸರ್ಕಾರ ಇದನ್ನು ಉಚಿತವಾಗಿ (Free cost) ಮಾಡಿಕೊಡುತ್ತಿದೆ ಮತ್ತು ಸೇವಾ ಕೇಂದ್ರಗಳಿಗೆ ಮತ್ತು ಪ್ರಜಾಪ್ರತಿನಿಧಿಗಳಿಗೆ ಒಂದು ಅರ್ಜಿ ಸಲ್ಲಿಕೆಗೆ 12 ರೂಪಾಯಿಗಳಂತೆ ಹಣ ಪಾವತಿ ಮಾಡುತ್ತಿದೆ.
● ಮೊದಲಿಗೆ ಗ್ರಾಮೀಣ ಭಾಗದಲ್ಲಿ ಈ ಪ್ರಜಾಪ್ರತಿನಿಧಿಗಳ ಮೂಲಕ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಒಟ್ಟಿನಲ್ಲಿ ಸರ್ಕಾರ ನೀಡಿರುವ ನಿಗದಿತ ಸಮಯದ ಒಳಗೆ ರಾಜ್ಯದ ಎಲ್ಲಾ ಅರ್ಹ ಫಲಾನುಭವಿಗಳಿಂದಲೂ ಕೂಡ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ. ಈ ಬಗ್ಗೆ ಫಲಾನುಭವಿಗಳು ಚಿಂತೆ ಮಾಡುವ ಅವಶ್ಯಕತೆ ಇಲ್ಲ.