Home News ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!

ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!

0
ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!

 

ದುರಂತವೇನೆಂದರೆ ನಮ್ಮ ಕಿಡ್ನಿಗಳು 30% ಪರ್ಸೆಂಟ್ ಹಾಳಾಗುವವ ರೆಗೂ ಯಾವ ಲಕ್ಷಣಗಳು ತೋರಿಸುವುದಿಲ್ಲ. ಕಿಡ್ನಿ ಫೇಲ್ ಆಗಲು ಕಾರಣಗಳು ಏನು ಎಂದು ಮೊದಲೇ ತಿಳಿದಿದ್ದರೆ ನಾವು ನಮ್ಮ ಮೂತ್ರ ಪಿಂಡಗಳನ್ನು ಕಾಪಾಡಿಕೊಳ್ಳಬಹುದು.

* ಮಧುಮೇಹ :- ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ಹೆಚ್ಚಿದ್ದರೆ ಮಧುಮೇಹವು ಬೆಳೆಯುತ್ತದೆ. ಇದು ತುಂಬಾ ಹೆಚ್ಚಿನ ಮಟ್ಟದಲ್ಲಿ ಬೆಳೆದರೆ ಕಿಡ್ನಿ, ಕಣ್ಣುಗಳು ಸೇರಿದಂತೆ ಹಲವಾರು ದೇಹದಲ್ಲಿ ಅಂಗಾoಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಷ್ಟು ಕಿಡ್ನಿಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ಮಧುಮೇಹವು ನಿಯಂತ್ರಣದಲ್ಲಿರಬೇಕು.

* ತೀವ್ರ ರಕ್ತದೊತ್ತಡ (ಬಿ.ಪಿ) ಈ ತೀವ್ರ ರಕ್ತದೊತ್ತಡ ಇದ್ದರೆ ಯಾವುದೇ ತರಹ ಲಕ್ಷಣಗಳು ನಮಗೆ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಇದನ್ನ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಬಿಪಿಯು ನಮ್ಮ ಹೃದಯ ಮತ್ತು ಕಿಡ್ನಿ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುತ್ತದೆ.

* ಪೈನ್ ಕಿಲ್ಲರ್ ಮಾತ್ರೆಗಳ ಬಳಕೆ, ಹೊಟ್ಟೆ ನೋವು, ತಲೆನೋವು ಯಾವುದೇ ಗಾಯವಾದರೂ ನೋವು ನಿವಾರಣೆಯಾಗುವುದಕ್ಕೆ ಹೆಚ್ಚಾಗಿ ಮಾತ್ರೆಗಳು ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಹಾನಿ ಉಂಟು ಮಾಡುತ್ತದೆ.

* ಕಡಿಮೆ ಪ್ರಮಾಣದ ನೀರು ಕುಡಿಯುವುದರಿಂದ. ಅಂದರೆ ದಿನಕ್ಕೆ ಒಂದು ಲೀಟರ್ ಗಿಂತ ಕಡಿಮೆ ನೀರು ಕುಡಿಯುವುದರಿಂದ ಡಿ ಹೈಡೇಷನ್ ಉಂಟಾಗಿ ಕಿಡ್ನಿ ಫೇಲ್ ಆಗುತ್ತದೆ.

* ಅತೀ ಉಪ್ಪು ಸೇವನೆ:- ವಿಶ್ವ ಆರೋಗ್ಯದ ಸಂಸ್ಥೆ ಪ್ರಕಾರ ಒಂದು ದಿನಕ್ಕೆ 3 ಗ್ರಾಂ ಉಪ್ಪನ್ನು ಸೇವಿಸಬೇಕು. ಆದರೆ ನಾವು ಭಾರತೀಯರು ದಿನಕ್ಕೆ 9 ರಿಂದ 13 ಗ್ರಾಂ ಉಪ್ಪನ್ನು ಬಳಸುವುದರಿಂದ ಕಿಡ್ನಿ ಕಾಯಿಲೆಗೆ ತುತ್ತಾಗುತ್ತಿದ್ದೇವೆ.

* ನಿದ್ರೆಯ ಕೊರತೆ:- ನಿದ್ದೆಗೆ ಸ್ವಲ್ಪ ಕೊರತೆ ಉಂಟಾಗಿ, ಪ್ರತಿದಿನವೂ ಇದೇ ಅಭ್ಯಾಸವಾಗಿ ಬಿಪಿ ಮತ್ತು ಶುಗರ್ ಬರುವ ಸಾಧ್ಯತೆ ಹೆಚ್ಚಾಗಿರು ತ್ತದೆ. ನಿದ್ರಿಸುವಾಗ ದೇಹದಲ್ಲಿ ಸಾಕಷ್ಟು ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ನಿದ್ರೆಯ ಕೊರತೆ ಉಂಟಾದರೆ ಮನುಷ್ಯನಿಗೆ ರಕ್ತ ಸಂಚಾರದಲ್ಲಿ ಏರುಪೇರಾಗಿ ಹೃದಯ ಮತ್ತು ಕಿಡ್ನಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ.

ಅದರಲ್ಲೂ ಬೆಳಗಿನ ಸಮಯ ಬೇಗ ಏಳುವುದು ರಾತ್ರಿ ಸಮಯ ಬೇಗ ಮಲಗುವುದು ತುಂಬಾ ಒಳ್ಳೆಯ ಅಭ್ಯಾಸ ಎಂದೇ ಆಯುರ್ವೇದದ ಪ್ರಕಾರ ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ರಾತ್ರಿ ಇಡೀ ಕೆಲಸ ಮಾಡುವಂತಹ ಸನ್ನಿವೇಶ ಗಳು ಇದೆ ಆದ್ದರಿಂದ ಈ ರೀತಿ ಮಾಡುವವರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ.

* ಒತ್ತಡ ಮತ್ತು ಅತಿಯಾದ ಕೋಪ. ಅತಿಯಾದ ಕೋಪ ಮತ್ತು ಮಾನಸಿಕ ಒತ್ತಡ ಹೊಂದಿದವರು ಖಂಡಿತವಾಗಿ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವರು ಚಿಕ್ಕ ಚಿಕ್ಕ ವಿಷಯಕ್ಕೂ ಕೂಡ ಹೆಚ್ಚು ಕೋಪ ಮಾಡಿಕೊಳ್ಳು ವುದರಿಂದ ಅವರ ಮೆದುಳಿನಲ್ಲಿರುವಂತಹ ನರ ಸಂಪೂರ್ಣವಾಗಿ ಹಾಳಾಗುತ್ತದೆ. ಇದರಿಂದ ಅವರ ರಕ್ತದೊತ್ತಡ ಏರುಪೇರಾಗಿ ಅವರ ಕಿಡ್ನಿಗೆ ಹಲವಾರು ತೊಂದರೆಗಳು ಉಂಟಾಗುತ್ತದೆ.

* ಧೂಮಪಾನ :- ಧೂಮಪಾನ ಮತ್ತು ಮಧ್ಯಪಾನ ಮಾಡುವ ಜನರಿಗೆ ಕಿಡ್ನಿ ಖಾಯಿಲೆಯ ಅಪಾಯವು ಹೆಚ್ಚುತ್ತದೆ. ಹೌದು ಉಸಿರಾಡು ವಂತಹ ಶ್ವಾಸಕೋಶ ಸಂಪೂರ್ಣವಾಗಿ ಹಾಳಾಗುತ್ತದೆ. ಇದರಿಂದ ಅವರ ಕಿಡ್ನಿಯು ದಿನೇ ದಿನೇ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ಕಾರಣಗಳಿಂದ ನಮ್ಮ ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ವಿಚಾರಗಳ ಬಗ್ಗೆ ಹೆಚ್ಚು ಆಲೋಚನೆ ಯನ್ನು ಮಾಡಿ ನೀವೇನಾದರೂ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇದನ್ನು ತಕ್ಷಣವೇ ನಿಲ್ಲಿಸಿ ಇಲ್ಲವಾದರೆ ಮುಂದಿನ ದಿನದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here