ಜನವರಿ 29ನೇ ತಾರೀಖು ಅಂದರೆ ಇಂದಿನ ದಿನ ಲಂಬೋದರ ಸಂಕಷ್ಟಹರ ಚತುರ್ಥಿ ಇದೆ. ಹಾಗಾಗಿ ಈ ದಿನ ನಾವು ಯಾವ ರೀತಿಯ ಗಣಪತಿಯ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು, ಯಾವ ರೀತಿಯ ಪೂಜಾ ವಿಧಾನವನ್ನು ಅನುಸರಿಸಬೇಕು ಹಾಗೂ ಈ ದಿನ ಪೂಜೆ ಮಾಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಹಾಗೂ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಂಕಷ್ಟಗಳನ್ನು ಹೇಗೆ ನಿವಾರಿಸಿ ನಮ್ಮ ಜೀವನವನ್ನು ಒಂದು ಉನ್ನತವಾದ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಹಾಗೂ ಏಕಾಗ್ರತೆಯನ್ನು ಸಾಧಿಸಿ ಹೇಗೆ ನಾವು ಯಶಸ್ಸನ್ನು ಸಾಧಿಸಬಹುದು.
ನಿಮ್ಮ ಜೀವನದ ವಿಚಾರವಾಗಿ ಏನಾದರೂ ಗೊಂದಲಗಳು ಇದ್ದರೆ ಅದನ್ನೆಲ್ಲ ಹೇಗೆ ಸರಿಪಡಿಸಿಕೊಂಡು ಮುಂದೆ ಸಾಗಬಹುದು, ಹಾಗೂ ನಿಮ್ಮ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಏನಾದರೂ ಗೊಂದಲ ಇದ್ದರೆ ಅದಕ್ಕೆ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅದರಲ್ಲೂ ಈ ಒಂದು ದಿನ ಈ ಪೂಜೆಯನ್ನು ಮಾಡುವುದರಿಂದ ಎಷ್ಟೆಲ್ಲಾ ಇನ್ನೂ ಹಲವಾರು ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||
ಮೊದಲನೆಯದಾಗಿ ಪಂಚಾಂಗವನ್ನು ನೋಡುವುದಾದರೆ ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತರುದು ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ಥಿ ಹಾಗೂ ಈ ದಿನ ಪೂರ್ವ ಪಲ್ಗುಣಿ ನಕ್ಷತ್ರದ ಯೋಗವು ಕೂಡ ಇರುವಂತದ್ದು. ಕೃಷ್ಣ ಚತುರ್ಥಿ ಜನವರಿ 29ರ ಸೋಮವಾರದ ಬೆಳಿಗ್ಗೆ 3 ಗಂಟೆ 15 ನಿಮಿಷಕ್ಕೆ ಆರಂಭವಾಗಿ ಮರುದಿನ ಅಂದರೆ ಜನವರಿ 30ನೇ ತಾರೀಖು ಮಂಗಳವಾರ ಬೆಳಿಗ್ಗೆ 5 ಗಂಟೆ 18 ನಿಮಿಷಕ್ಕೆ ಮುಕ್ತಾಯವಾಗುತ್ತದೆ.
ಹಾಗಾಗಿ ಈ ಸಮಯದ ಒಳಗೆ ನಾವು ಈ ಗಣಪತಿಯ ವ್ರತವನ್ನು ಆಚರಿಸುತ್ತೇವೆ. ಹಾಗಾದರೆ ಈಗ ಪೂಜಾ ವಿಧಾನ ಯಾವ ರೀತಿಯಾಗಿ ಮಾಡಬೇಕಾಗುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ನಾವು ಗಣಪತಿಯ ಪೂಜೆಯನ್ನು ಮಾಡುತ್ತೇವೆ ಎಂದರೆ ಹಿಂದಿನ ದಿನ ರಾತ್ರಿ ನಾವು ಫಲ ಆಹಾರವನ್ನು ಸೇವಿಸಬೇಕು ಅಥವಾ ಉಪವಾಸವನ್ನು ಮಾಡಬೇಕು.
ಈ ರೀತಿ ಮಾಡುವುದರಿಂದ ನಾವು ಪೂಜೆ ಮಾಡುವಂತಹ ಸಮಯದಲ್ಲಿ ನಮ್ಮ ಹೊಟ್ಟೆ ಖಾಲಿ ಇರುತ್ತದೆ, ಆ ಸಂದರ್ಭದಲ್ಲಿ ನಾವು ಭಕ್ತಿ ಶ್ರದ್ಧೆಯಿಂದ ಪೂಜೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಎರಡನೆಯದಾಗಿ ಮರುದಿನ ಅಂದರೆ 29ನೇ ತಾರೀಖು ಬೆಳಗಿನ ಸಮಯ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ.
ಈ ಸುದ್ದಿ ಓದಿ:-ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!
ದೇವರ ಕೋಣೆಗೆ ಬಂದು ಗಣಪತಿಯ ವಿಗ್ರಹದ ಮುಂದೆ ತುಪ್ಪದ ದೀಪ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು ಪದ್ಧತಿ. ಹಾಗೂ ನಾವು ಈ ಒಂದು ವಿಶೇಷವಾದ ದಿನ ಸಂಕಷ್ಟಹರ ಚತುರ್ಥಿ ಇರುವುದರಿಂದ ಈ ದಿನ ಬಿಳಿ ಬಣ್ಣದ ಗಣೇಶನ ವಿಗ್ರಹವನ್ನು ಬಳಸುವುದು ಅತ್ಯಂತ ಶ್ರೇಷ್ಠ ಎಂದು ತಿಳಿಸಲಾಗಿದೆ.
ಬೆಳ್ಳಿ ವಿಗ್ರಹವನ್ನು ಬಳಸಬಹುದು ಅಥವಾ ಮರದಿಂದ ಕೆತ್ತಲ್ಪಟ್ಟ ಬಿಳಿ ಬಣ್ಣವಿರುವಂತಹ ವಿಗ್ರಹ ಬಳಸಬಹುದು ಅಥವಾ ಮಾರ್ಬಲ್ ನಿಂದ ತಯಾರಿಸಿರುವಂತಹ ಗಣೇಶನ ವಿಗ್ರಹವನ್ನು ಬಳಸಬಹುದು. ಪೂಜೆ ಪ್ರಾರಂಭ ಮಾಡಿ ಪೂಜೆ ಮುಗಿಯುವ ತನಕ ನಾವು ಯಾವ ಒಂದು ಮಂತ್ರವನ್ನು ಜಪಿಸಬೇಕಾಗುತ್ತದೆ ಎಂದು ನೋಡುವುದಾದರೆ.
” ಓಂ ನಮೋ ಭಗವತೇ ಲಂಬೋದರಾಯ ಮದಮೋದಿತಾಯ ಮಮ ಸಂಕಷ್ಟ ನಾಶನಂ ಕುರು ಕುರು ಸ್ವಾಹಾ “. ಈ ಮಂತ್ರವನ್ನು ಕನಿಷ್ಠಪಕ್ಷ 3 ಬಾರಿ, 28 ಬಾರಿ, 54 ಬಾರಿ, ಅಥವಾ 108 ಬಾರಿ ಜಪಿಸುವುದು ಪ್ರಶಸ್ತವಾದುದ್ದು ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.