ಹನುಮ ಜಯಂತಿ ಎನ್ನುವುದು ಒಂದು ಬಹಳ ಪವಿತ್ರವಾದ ದಿನ. ಈ ವರ್ಷ ಡಿಸೆಂಬರ್ 23 ವೈಕುಂಠ ಏಕಾದಶಿ ಇದ್ದು ಇದು ಕೂಡ ಬಹಳ ಶ್ರೇಷ್ಠವಾದ ದಿನವಾಗಿದೆ. ಇದಾದ ಮರುದಿನವೇ ಹನುಮ ಜಯಂತಿ ಕೂಡ ಬಂದಿರುವುದು ಆಸ್ತಿಕರ ಪಾಲಿಗೆ ಅಪಾರ ಸಂತೋಷವನ್ನುಂಟು ಮಾಡಿದೆ.
ಸದಾ ತಮ್ಮದೇ ಆದ ಜೀವನ ಜಂಜಾಟಗಳಲ್ಲಿ ಮುಳುಗಿ ಹೋಗಿರುವ ಜನತೆಗೆ ಈ ರೀತಿ ಹಬ್ಬ ಹರಿದಿನಗಳ ಆಚರಣೆಗಳು ತಮ್ಮ ಒತ್ತಡಗಳನ್ನೆಲ್ಲ ಕಡಿಮೆ ಮಾಡಿ ಭಗವಂತನ ಸ್ಮರಣೆಗೆ ಸ್ವಲ್ಪ ಕಾಲ ಮೀಸಲಿಡಿದ ಸಮಯವಾಗಿದೆ ಆದ್ದರಿಂದ ಪ್ರತಿಯೊಬ್ಬರು ಸಾಧ್ಯವಾದಷ್ಟು ಇವುಗಳಿಗೆ ತಪ್ಪದೆ ನಡೆದುಕೊಂಡು ಭಗವಂತನ ಕೃಪ ಕಟಾಕ್ಷಕ್ಕೆ ಪಾತ್ರರಾಗಿ ಜೀವನದಲ್ಲಿ ಏಳಿಗೆ ಪಡೆಯುತ್ತಾರೆ.
ಅದೇ ರೀತಿಯಾಗಿ ಹನುಮ ಜಯಂತಿಯನ್ನು ಆಚರಣೆ ಕೆಲ ರಾಶಿಯವರ ಭವಿಷ್ಯವನ್ನು ಬದಲಾಯಿಸಲಿದೆ ಈ ವರ್ಷದ ಹನುಮ ಜಯಂತಿ ನಂತರ ಯಾವ ರಾಶಿಯವರ ಅದೃಷ್ಟ ಬದಲಾಗಿದೆ ಮಾಹಿತಿ ಇಲ್ಲಿದೆ ನೋಡಿ. ಹನುಮ ಜಯಂತಿ ದಿನ ತಪ್ಪದೇ ಆಂಜನೇಯನ ಸನ್ನಿಧಾನಕ್ಕೆ ಹೋಗಿ ಸ್ವಾಮಿಯ ದರ್ಶನವನ್ನು ಮಾಡಬೇಕು ಮತ್ತು ಈ ದಿನ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮಾಯಣ ರಾಮ ರಕ್ಷಾ ಸ್ತೋತ್ರ ಇತ್ಯಾದಿಗಳ ಪಠಣೆ ಮಾಡಬೇಕು.
ಇವುಗಳನ್ನು ಹನುಮಾನ್ ಜಯಂತಿಯಂದು ಓದುವುದರಿಂದ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಕೇಸರಿ ತಿಲಕವನ್ನು ತಪ್ಪದೆ ಹಣೆಗೆ ಹಚ್ಚಿ ಸಾಧ್ಯವಾದರೆ ಮನೆ ಮೇಲೆ ಕೇಸರಿ ಧ್ವಜವನ್ನು ಕೂಡ ಆರಿಸಬಹುದು. ಆಂಜನೇಯ ಎಂದರೆ ಶಕ್ತಿವಂತ, ಧೈರ್ಯವಂತ, ಸಾಹಸವಂತ ಹಾಗೆ ಅಷ್ಟೇ ತೀಕ್ಷ್ಣ ಬುದ್ಧಿ ಉಳ್ಳವರು ಕೂಡ ಹೌದು ಮತ್ತು ಕಲಿಯುಗದಲ್ಲಿ ಬಹಳ ಬೇಗ ಒಲಿಯುವ ಭಗವಂತ ಎಂದರೆ ಅದು ಆಂಜನೇಯ.
ಆಂಜನೇಯನಿಗೆ ಮೀಸಲಾದ ಮಂಗಳವಾರ, ಶನಿವಾರ, ಹನುಮ ಜಯಂತೋತ್ಸವ ಹಾಗೂ ಹನುಮ ಜಯಂತಿಗಳಲ್ಲಿ ಬಡಜನರ ಮತ್ತು ರೋಗಿಗಳ ಸೇವೆ ಮಾಡಬೇಕು. ಇದರಿಂದ ಆಂಜನೇಯ ಸ್ವಾಮಿಯು ನಿಮ್ಮನ್ನು ಕಾಯುತ್ತಾರೆ ಮತ್ತು ನಿಮ್ಮ ಪಾಲಿಗೆ ಅದೃಷ್ಟ ಹಾಗೂ ಆರೋಗ್ಯ ಎರಡನ್ನು ಕೂಡ ನೀಡುತ್ತಾರೆ.
ಇದರ ಜೊತೆಗೆ ಹನುಮ ಜಯಂತಿ ನಂತರ ಅದರ ಬೆನ್ನೆಲ್ಲೇ ಈ ಬಾರಿ ಹೊಸ ವರ್ಷ ಕೂಡ ಇದೆ ಹೊಸ ವರ್ಷವು ಕೆಲ ರಾಶಿಯವರಿಗೆ ಅವರ ಬದುಕು ಬದಲಾಗುವ ಘಟ್ಟವಾಗಿರುತ್ತದೆ. ಇದರ ಬಗ್ಗೆ ನಿರೀಕ್ಷೆ ಎಲ್ಲರಿಗೂ ಸಹಜವಾಗಿ ಇರುತ್ತದೆ ಆದರೆ ಈ 50 ರಾಶಿಯವರಿಗೆ ಮಾತ್ರ ಬಹಳ ವಿಶೇಷ ಲಾಭಗಳು ಸಿಗುತ್ತಿದೆ ಮತ್ತಿದು ಮುಂದಿನ ನಾಲ್ಕು ವರ್ಷಗಳಿಗೂ ಕೂಡ ವಿಸ್ತರಿಸಿ ಅವರ ಪಾಲಿಗೆ ಅತ್ಯುತ್ತಮ ಸಮಯವಾಗುತ್ತಿದೆ.
ಈ ಐದು ರಾಶಿಯವರು ಈ ವರ್ಷ ಆರೋಗ್ಯ, ವಿದ್ಯಾಭ್ಯಾಸ, ವ್ಯಾಪಾರ, ವಹಿವಾಟು, ವಿವಾಹ, ಸಂತಾನ, ವಿದೇಶ ಪ್ರಯಾಣ ಇವುಗಳಿಗೆ ಸಂಬಂಧಪಟ್ಟ ಹಾಗೆ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಇದುವರೆಗೂ ಈ ವಿಚಾರಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಹಾಗೂ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿದ್ದರೂ ಕೂಡ ಮನಸ್ತಾಪಗಳಿದ್ದರೂ ಕೂಡ ಅದಕ್ಕೆ ಪರಿಹಾರವನ್ನು ಪಡೆಯಲಿದ್ದಾರೆ.
ಅದರಲ್ಲೂ ಹಣದ ವಿಚಾರದಲ್ಲಂತೂ ಈ ಐದು ರಾಶಿಗಳ ಅದೃಷ್ಟ ಬಹಳ ಚೆನ್ನಾಗಿ ಬದಲಾಗುತ್ತಿತ್ತು ಇವರು ಕೋಟ್ಯಾಧಿಪತಿಗಳಾಗುವ ಯೋಗವು ಕೂಡ ಈ ವರ್ಷಗಳಲ್ಲಿ ಇವೆ. ಇಷ್ಟೆಲ್ಲಾ ಅದೃಷ್ಟ ಹೊಂದಿರುವ ರಾಶಿಗಳು ಯಾವುವೆಂದರೆ ವೃಷಭ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಹಾಗೂ ಸಿಂಹ ರಾಶಿಯವರಿಗೆ ಇಂತಹ ರಾಜಯೋಗ ಲಭಿಸುತ್ತಿದೆ. ಇದನ್ನು ತಪ್ಪದೆ ಸದುಪಯೋಗ ಪಡಿಸಿಕೊಳ್ಳಿ.