ಭಾರತದ ದೇಶದಾದ್ಯಂತ ಹಲವಾರು ಭಾಷೆಗಳ ಸಿನಿಮಾಗಳಲ್ಲಿ, ಕಿರುತೆರೆಯ ಧಾರಾವಾಹಿಗಳಲ್ಲಿ ಅನೇಕ ನಟ ನಟಿಯರು, ಕಲಾವಿದರುಗಳು ಅಭಿನಯಿಸುತ್ತಾರೆ. ಆ ನಟ ನಟಿಯರಿಗೆ, ಕಲಾವಿದರುಗಳಿಗೆ ಅವರ ಅಭಿನಯ ಪ್ರದರ್ಶನಕ್ಕೆ ಒಂದಿಷ್ಟು ಸಂಭಾವನೆಯನ್ನು ನೀಡಲಾಗುತ್ತದೆ. ಅದರಲ್ಲು ದಕ್ಷಿಣ ಭಾರತದ ಸ್ಟಾರ್ ನಟಿಯರು ಒಂದು ಚಿತ್ರದಲ್ಲಿ ಅಭಿನಯಿಸಲು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
1. ಸಾಯಿ ಪಲ್ಲವಿ – ಮೂಲತಃ ತಮಿಳುನಾಡಿನವರಾದ ಸಾಯಿ ಪಲ್ಲವಿ ಅವರು ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ಇದ್ದಾರೆ. ಇವರು ಮೇ 9 1992 ರಂದು ಜನಿಸಿದ್ದು, ಕೇವಲ ನಟಿ ಮಾತ್ರವಲ್ಲದೇ ನೃತ್ಯಗಾರ್ತಿಯು ಆಗಿದ್ದಾರೆ. ಇವರು ಒಂದು ಚಿತ್ರದಲ್ಲಿ ಅಭಿನಯಿಸಲು ಸುಮಾರು 1.5 ಕೋಟಿ ರೂ. ಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.
2. ರಕುಲ್ ಪ್ರೀತ್ ಸಿಂಗ್ – ಮೂಲತಃ ನವ ದೆಹಲಿಯವರಾಗಿದ್ದು ಸಿಕ್ಕಿ ಕುಟುಂಬಕ್ಕೆ ಸೇರಿದ ಇವರು ಅಕ್ಟೋಬರ್ 10 1990 ರಂದು ಜನಿಸಿದ್ದಾರೆ. ಇವರು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಖ್ಯಾತ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ಒಂದು ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸುಮಾರು 70 ಲಕ್ಷ ರೂ. ಗಳ ಸಂಭಾವನೆ ದೊರೆಯುತ್ತದೆ. 3. ತಮನ್ನಾ ಭಾಟಿಯಾ – ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಇವರು ಮೂಲತಃ ಮುಂಬೈನವರಾಗಿದ್ದು, ಡಿಸೆಂಬರ್ 21, 1989 ರಂದು ಜನಿಸಿದ್ದಾರೆ. ಇವರುತಮ್ಮ 13 ನೆ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದವರು. ಇವರು ಒಬ್ಬ ಮಾಡೆಲ್ ಕೂಡ ಆಗಿದ್ದು, ಒಂದು ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸುಮಾರು 75 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. 4. ಖ್ಯಾತ ನಟಿ ಕಾಜಲ್ ಅಗರ್ ವಾಲ್ – ಅವರು ಮೂಲತಹ ಬಾಂಬೆ ಅವರಾದ ಇವರು ಜೂನ್ 19 1985 ರಂದು ಜನಿಸಿದ್ದಾರೆ. ಇವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದು ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಇವರು ಒಬ್ಬ ಮಾಡೆಲ್ ಕೂಡ ಆಗಿದ್ದು, ಇವರು ಅಭಿನಯಿಸುವ ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆಯನ್ನು ಪಡೆಯುತ್ತಾರೆ. 5. ಜನಪ್ರಿಯ ನಟಿ ಕೀರ್ತಿ ಸುರೇಶ್- ಇವರು ತಮಿಳು, ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಮೂಲತಃ ತಮಿಳಿನಾಡಿನ ಚೆನೈನವರಾಗಿದ್ದು, ಅಕ್ಟೋಬರ್ 17 1992 ರಂದು ಜನಿಸಿದ್ದಾರೆ. ಇವರಿಗೆ ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆ ದೊರೆಯುತ್ತದೆ.
6. ನಟಿ ರಶ್ಮಿಕಾ ಮಂದಣ್ಣ – ಭಾರತದ ರೂಪದರ್ಶಿಯಾಗಿದ್ದ ಇವರು ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಿದರು. ಇವರು ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿದ್ದು, ಏಪ್ರಿಲ್ 5 1995 ರಂದು ಜನಿಸಿದ್ದಾರೆ. ಪ್ರಸ್ತುತ ಇವರು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯು ನಟಿಸುತ್ತಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. 7. ಖ್ಯಾತ ನಟಿ ಪೂಜಾ ಹೆಗ್ಡೆ – ಭಾರತೀಯ ರೂಪದರ್ಶಿ ಹಾಗೂ ಚಲನಚಿತ್ರ ನಟಿಯಾದ ಇವರು ಮೂಲತಃ ಮುಂಬೈನವರಾಗಿದ್ದು, ಅಕ್ಟೋಬರ್ 13 1990 ರಂದು ಜನಿಸಿದ್ದಾರೆ. ಇವರು 2009 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಒಂದು ಚಿತ್ರಕ್ಕೆ ಸುಮಾರು 2 ರಿಂದ 3 ಕೋಟಿ ರೂ. ಗಳ ಹಣವನ್ನು ಪಡೆಯುತ್ತಾರೆ. 8. ಸ್ಟಾರ್ ನಟಿ ಸಮಂತಾ ಅವರು ಮೂಲತಃ ಚೆನೈನವರಾಗಿದ್ದು, ಏಪ್ರಿಲ್ 28 1987 ರಂದು ಜನಿಸಿದ್ದಾರೆ. ಇವರು ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದು ಒಂದು ಚಿತ್ರಕ್ಕೆ ಸುಮಾರು 3 ಕೋಟಿ ರೂ. ಗಳನ್ನು ಪಡೆದುಕೊಳ್ಳುತ್ತಾರೆ. ಇವರು ಒಂದು ಎನ್ ಜಿ ಓ ಅನ್ನು ಪ್ರಾರಂಭಿಸಿದ್ದು ಇವರ ನಟನೆಯಿಂದ ಬರುವ ಆದಾಯವನ್ನು ಆ ಎನ್ ಜಿ ಓ ಗೆ ಬಳಸುತ್ತಾರೆ.
9. ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದು ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ಮೂಲತಃ ಕರ್ನಾಟಕದ ಮಂಗಳೂರಿನವರಾಗಿದ್ದು ನವೆಂಬರ್ 7 1981 ರಂದು ಜನಿಸಿದ್ದಾರೆ. ಇವರು ತಮ್ಮ ನಟನೆಯ ಒಂದು ಚಿತ್ರಕ್ಕೆ 3 ಕೋಟಿ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. 10. ಸ್ಟಾರ್ ನಟಿ ನಯನತಾರ ಅವರು ಒಬ್ಬ ನಟಿ ಮಾತ್ರವಲ್ಲದೆ ರೂಪದರ್ಶಿ ಹಾಗೂ ನಿರೂಪಕಿಯಾಗಿಯು ಇದ್ದಾರೆ. ಇವರು ಮೂಲತಃ ಬೆಂಗಳೂರಿನವರಾಗಿದ್ದು, ನವೆಂಬರ್ 18 1984 ರಂದು ಜನಿಸಿದ್ದಾರೆ. ಇವರು ತಮ್ಮ ವೃತ್ತಿ ಜೀವನವನ್ನು ಮಲೆಯಾಳಂ ಭಾಷೆಯಲ್ಲಿ ಪ್ರಾರಂಭಿಸಿ ಪ್ರಸ್ತುತ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಇವರು ತಮ್ಮ ಒಂದು ಚಿತ್ರಕ್ಕೆ ಸುಮಾರು 4 ಕೋಟಿ ರೂ. ಗಳ ಸಂಭಾವನೆ ಪಡೆಯುತ್ತಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ನಿಮ್ಮ ನೆಚ್ಚಿನ ಹೀರೋಯಿನ್ ಯಾರು ಎಂದು ನಮಗೆ ತಪ್ಪದೆ ಕಾಮೆಂಟ್ ಮಾಡಿ.