Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeNewsಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ...

ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.

ಯಶ್ ಕ್ರೇಜ್

ಇಂಡಿಯಾದ ಗೋಲ್ಡನ್ ಗೈಸ್ ಎಂದೇ ಕರೆಸಿಕೊಂಡಿರುವ ಸನ್ನಿ ಅಲಿಯಾಸ್ ಸನ್ನಿ ನಾನ ಸಾಹೇಬ್ ಹಾಗೂ ಬಂಟಿ ಅಲಿಯಾಸ್ ಸಂಜಯ್ ಗುಜ್ಜಾರ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲರಿಗೂ ಗೊತ್ತಿದೆ.ತಮ್ಮ ಗೋಲ್ಡ್ ಕ್ರೇಝ್ ಇಂದಲೇ ಫೇಮಸ್ ಆಗಿರುವ ಇವರು ಸದ್ಯಕ್ಕೆ ಯಾವ ಸೆಲೆಬ್ರಿಟಿ ಗಳಿಗೂ ಕಡಿಮೆ ಇಲ್ಲ. ಇವರು ಹೋದಲ್ಲೆಲ್ಲಾ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಜನ ಕಾಯುತ್ತಿರುತ್ತಾರೆ.

ಇವರ ಕುರಿತ ಸಣ್ಣ ವಿಷಯಗಳು ಕೂಡ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ. ಅಷ್ಟು ಫೇಮಸ್ ಆಗಿರುವ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಾರಿ ಆಕ್ಟಿವ್ ಆಗಿದ್ದಾರೆ. ಸ್ವತಃ ಇವರೇ ಸೆಲೆಬ್ರಿಟಿಗಳು ಆಗಿದ್ದರೂ ಕೂಡ ಇವರಿಗೂ ಸಹ ಬೇರೆ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಹಂಚಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಅದೇ ರೀತಿ ಮಾಡಲು ಹೋಗಿ ಈಗ ಸುದ್ದಿಯಾಗಿದ್ದಾರೆ.

ಸನ್ನಿ ಹಾಗೂ ಬಂಟಿ ಇಬ್ಬರು ಸ್ನೇಹಿತರಾಗಿದ್ದು ಹೆಚ್ಚಾಗಿ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಹಾಗಾಗಿ ಇವರನ್ನು ಜೋಡಿ ಎಂದು ಕರೆಯಲಾಗುತ್ತದೆ ಮತ್ತು ಇವರಿಬ್ಬರು ಹಲವಾರು ಬಿಸಿನೆಸ್ ಗಳನ್ನು ಹೊಂದಿದ್ದು ಮುಖ್ಯವಾಗಿ ಬಾಲಿವುಡ್ ಅಲ್ಲಿ ಸಿನಿಮಾಗಳಿಗಾಗಿ ಫೈನಾನ್ಸ್ ಕೊಡುತ್ತಾರೆ ಮತ್ತು ಫರ್ನಿಚರ್ ಶೋರೂಮ್ ಸೇರಿದಂತೆ ಹಲವಾರು ಬ್ಯುಸಿನೆಸ್ ಗಳನ್ನು ಹೊಂದಿದ್ದಾರೆ.

ಇವರಿಗೆ ಚಿನ್ನದ ಮೇಲಿರುವ ವ್ಯಾಮೋಹದಿಂದ ಗೋಲ್ಡನ್ ಗೈಗಳು ಎಂದು ಹೆಸರು ಪಡೆದಿದ್ದಾರೆ. ಇವರು ಹಾಕಿಕೊಳ್ಳುವ ಒಡವೆಯಿಂದಲೇ ಜನರನ್ನು ತಮ್ಮತ್ತ ಆಕರ್ಷಿಸುತ್ತಿದ್ದಾರೆ ಎಂದು ಕೂಡ ಹೇಳಬಹುದು. ಆದರೆ ಯಾರಿಗೆ ಆದರೂ ಇವರನ್ನ ನೋಡಿದ ತಕ್ಷಣ ಫೋಟೋ ತೆಗೆದು ಇಟ್ಟುಕೊಳ್ಳಬೇಕು ಎನಿಸುವಷ್ಟು ವಿಶೇಷ ವ್ಯಕ್ತಿಗಳಾಗಿದ್ದರೆ ಇವರು. ಜನ ಸಾಮಾನ್ಯರು ಈ ಚಿನ್ನದ ಹುಡುಗರ ಜೊತೆ ಫೋಟೋ ತೆಗೆದುಕೊಳ್ಳಲು ಆಸೆ ಪಟ್ಟರೆ ಇವರು ಕೆಜಿಎಫ್ ಒಡೆಯನ ಹಿಂದೆ ಫೋಟೋಗಾಗಿ ಸುತ್ತಿದ್ದಾರೆ.

ಮುಂಬೈ ಹೋಟೆಲ್ ಒಂದರಲ್ಲಿ ಯಶ್ ಅವರ ಸುತ್ತ ಜನ ಸುತ್ತುಕೊಂಡು ಫೋಟೋ ತೆಗೆಸಿಕೊಳ್ಳಲು ಆಸೆ ಪಡುತ್ತಿರುತ್ತಾರೆ. ಅವರ ಜೊತೆ ಫೋಟೋ ಗಾಗಿ ಆಸೆ ಪಟ್ಟ ಪ್ರತಿಯೊಬ್ಬರಿಗೂ ಕೂಡ ಯಶ್ ಅವರು ತಾಳ್ಮೆಯಿಂದ ಹಾಗೂ ಖುಷಿಯಿಂದ ಜೊತೆಗೆ ನಿಂತು ಫೋಟೋ ತೆಗೆದುಕೊಳ್ಳುವ ಅವಕಾಶ ನೀಡಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಸಾಕಷ್ಟು ಮಂದಿ ಇವರ ಹಿಂದೆ ಓಡಾಡುತ್ತಿರುತ್ತಾರೆ‌.

ಆ ಗುಂಪಿನಲ್ಲಿಯೇ ಈ ಗೋಲ್ಡನ್ ಜೋಡಿ ಕೂಡ ಹೋಗಿ ಫೋಟೋ ತೆಗೆದುಕೊಳ್ಳಲು ನೋಡುತ್ತಾರೆ. ಆದರೆ ಹಲವು ಸಮಯದವರೆಗೆ ಯಶ್ ಅವರು ಅವರ ಕಡೆ ಗಮನವೇ ಕೊಟ್ಟಿರುವುದಿಲ್ಲ ಮತ್ತು ಯಶ್ ಅವರು ಮುಂದೆ ಹೋಗುತ್ತಲೇ ಇರುತ್ತಾರೆ ಆಗಲು ಸಹ ಅವರ ಹಿಂದೆ ಹಿಂದೆ ಫೋಟೋ ಗಾಗಿ ಸನ್ನಿ ಹಾಗೂ ಬಂಟಿ ಹೋಗುತ್ತಾರೆ.

ಯಶ್ ಅವರು ಹಿಂದೆ ತಿರುಗಿ ನೋಡದ ಕಾರಣ ಅವರು ಅಲ್ಲಿದ್ದಾರೆ ಎಂದು ಯಶ್ ಅವರಿಗೂ ತಿಳಿಯುವುದಿಲ್ಲ ಮತ್ತು ಇವರು ಸಹ ಹೇಗೆ ಹೋಗಿ ಸೆಲ್ಫಿ ಕೇಳುವುದು ಎನ್ನುವ ಮುಜುಗರದಿಂದ ಅವರೇ ನೋಡಲಿ ಎಂದುಕೊಂಡೆ ಕಾಯ್ದುಬಿಡುತ್ತಾರೆ ಕೊನೆಗೂ ಅವರಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿತ್ತೋ ಇಲ್ಲವೋ ಗೊತ್ತಿಲ್ಲ.

ಆದರೆ ಸಾವಿರಾರು ಕೋಟಿ ಒಡೆಯರಾದ ಇವರು ಸಾಮಾನ್ಯರಂತೆ ಸ್ಟಾರ್ ಹೀರೋಗೆ ಕಾದಿರುವುದು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ. ಯಶ್ ಅಭಿಮಾನಿಗಳು ಇದು ಕೆಜಿಎಫ್ ಗೆ ಇರುವ ತಾಕತ್ತು ಹಾಗೂ ಯಶ್ ಅಂದರೆ ಹೀಗೇನೆ ಸಾಮಾನ್ಯರು ಹಾಗೂ ಶ್ರೀಮಂತರ ನಡುವೆ ಭೇದ ಮಾಡದೆ ಎಲ್ಲರನ್ನೂ ಒಂದೇ ರೀತಿ ಕಾಣುತ್ತಾರೆ ಎಂದು ಯಶ್ ಪರ ಬ್ಯಾಟ್ ಬೀಸುತ್ತಿದ್ದಾರೆ.