ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಅಂದಿನ ಕಾಲದಿಂದ ಹಿಡಿದು ಇಂದಿನವರೆಗೂ ಕೂಡ ಸದಾ ಕಾಲ ಸಿನಿಮಾದ ವಿಚಾರವಾಗಿ ಅಥವಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸದಾಕಾಲ ಗುರುತಿಸಿಕೊಂಡಿರುವಂತಹ ಏಕೈಕ ಕುಟುಂಬ ಎಂದರೆ ಅದು ಡಾಕ್ಟರ್ ರಾಜಕುಮಾರ್ ಅಂತಾನೆ ಕರೆಯಬಹುದು. ಹೌದು ಡಾಕ್ಟರ್ ರಾಜಕುಮಾರ್ ಆಗಿರಬಹುದು ಅಥವಾ ಅವರ ಮಕ್ಕಳು ಆಗಿರಬಹುದು ಇವರ ಮೊಮ್ಮಕ್ಕಳು ಅಂದರೆ ಸುಮಾರು ಮೂರು ತಲೆಮಾರುಗಳಿಂದಲೂ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡರು ಸಿನಿಮಾರಂಗಕ್ಕೆ ನೀಡಿರುವುದನ್ನು ನಾವು ನೋಡಬಹುದಾಗಿದೆ. ವರ ನಟ ಡಾಕ್ಟರ್ ರಾಜಕುಮಾರ್ ಅವರನ್ನು ಹೊರತು ಪಡಿಸಿದರೆ ಅವರ ಮೂರು ಜನ ಮಕ್ಕಳು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 60 ವರ್ಷವಾದರೂ ಕೂಡ ಶಿವಣ್ಣ ಅವರು ಈಗಲೂ ಕೂಡ ಬಹಳ ಆಕ್ಟಿವ್ ಆಗಿ ಎನರ್ಜಿಟಿಕ್ ಆಗಿ ನಟನೆ ಮಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ನಮಗೆ ಆಶ್ಚರ್ಯ ಅನಿಸುತ್ತದೆ.
ಇನ್ನು ಎರಡನೇ ಮಗ ಆದಂತಹ ರಾಘವೇಂದ್ರ ರಾಜಕುಮಾರ್ ಅವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಆದರೆ ಇತ್ತೀಚಿನ ದಿನದಲ್ಲಿ ಅವರು ಪೋಷಕ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸಾಕಷ್ಟು ಆರೋಗ್ಯ ಸ’ಮ’ಸ್ಯೆಗಳು ಇರುವುದರಿಂದ ಅವರು ಹೆಚ್ಚಾಗಿ ಸಿನಿಮಾ ಕ್ಷೇತ್ರದಲ್ಲಿ ನಟನೆ ಮಾಡುವಂತಹ ಕಾರ್ಯದಲ್ಲಿ ತೊಡಗಿಕೊಂಡಿಲ್ಲ, ಆದರೂ ಕೂಡ ಯಾರು ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಹಾಗೂ ಯಾರು ಪ್ರತಿಭೆ ಇರುತ್ತಾರೆ ಅಂತಹ ಯುವಕರಿಗೆ ಇವರು ತುಂಬಾನೇ ಪ್ರೋತ್ಸಾಹವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಸಾಕಷ್ಟು ಯುವ ಪ್ರತಿಭೆಗಳಿಗೆ ರಾಘಣ್ಣ ಅವರು ಸ್ಪೂರ್ತಿ ಅಂತನೇ ಹೇಳಬಹುದು. ಪುನೀತ್ ರಾಜಕುಮಾರ್ ನಿಮ್ಮೆಲ್ಲರಿಗೂ ತಿಳಿದಿರುವ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿದ್ದವು ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡಿದಂತಹ ವ್ಯಕ್ತಿ ತಮ್ಮ ಜೀವಿತಾವಧಿಯ ಕೊನೆಯ ದಿನದವರೆಗೂ ಕೂಡ ಇವರು ತೆರೆ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಇವರ ಚಿತ್ರಗಳು ಕೌಟುಂಬಿಕ ಹಿನ್ನೆಲೆಯನ್ನು ಹೊಂದಿರುವ ಕಾರಣ ಯಾರು ಕೂಡ ಮುಜುಗರಕ್ಕೆ ಒಳಗಾಗಿದೆ ಕುಟುಂಬದವರ ಸಿನಿಮಾವನ್ನು ನೋಡಿ ಸಂತಸ ಪಡುತ್ತಿದ್ದರು. ಆದರೆ ವಿಧಿಲಿಖಿತವೋ ಏನೋ ಗೊತ್ತಿಲ್ಲ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟವನ್ನು ಮಾಡಿದ್ದಾರೆ. ಶಿವಣ್ಣ ರಾಘಣ್ಣ ಅಪ್ಪು ಮೂರು ಜನರು ಕೂಡ ಡಾಕ್ಟರ್ ರಾಜಕುಮಾರ್ ಅವರ ಎರಡನೇ ತಲೆಮಾರು ಆದರೆ ಇದೀಗ ಮೂರನೇ ತಲೆಮಾರು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಘವೇಂದ್ರ ರಾಜಕುಮಾರ್ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದು ಅದರಲ್ಲಿ ಮೊದಲನೇ ಮಗ ವಿನಯ್ ರಾಜಕುಮಾರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ಅದು ಯಾವುದೂ ಕೂಡ ಇವರಿಗೆ ಅಷ್ಟೊಂದು ಅದೃಷ್ಟವನ್ನು ತಂದು ಕೊಡಲಿಲ್ಲ ಆದರೂ ಕೂಡ ವಿನಯ ರಾಜಕುಮಾರ್ ಅವರು ತಮ್ಮ ಪ್ರಯತ್ನವನ್ನು ಬಿಡದೆ ಸತತ ತಮ್ಮ ಕೆಲಸದಲ್ಲಿ ತಾವು ನಿರತರಾಗಿದ್ದು ಯಾವುದಾದರೂ ಒಂದು ಸಕ್ಸಸ್ ಸ್ಟೋರಿ ಗಾಗಿ ಕಾದು ಕೊಳ್ಳುತ್ತಿದ್ದಾರೆ.
ಇನ್ನು ವಿನಯ್ ರಾಜಕುಮಾರ್ ಅವರಿಗೆ ಒಬ್ಬ ಸಹೋದರ ಇದ್ದಾರೆ ಇವರು ರಾಘಣ್ಣ ಅವರ ಕಿರಿಯ ಪುತ್ರ ಯುವರಾಜ್ ಕುಮಾರ ಸದ್ಯಕ್ಕೆ ಅಪ್ಪು ಸ್ಥಾನವನ್ನು ತುಂಬ ಬಲ್ಲ ಏಕೈಕ ನಟ ಅಂತಾನೇ ಗುರ್ತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಗೆ ಇರುವಂತಹ ಸರಳ ವ್ಯಕ್ತಿತ್ವ ಹಾಗೂ ಸಹಜ ಗುಣಗಳು ಮತ್ತು ಹಿರಿಯರನ್ನು ಕಂಡರೆ ಗೌರವಿಸುವುದು ತಾಳ್ಮೆಯಿಂದ ಇರುವುದು ಇವೆಲ್ಲವನ್ನೂ ನೋಡುತ್ತಿದ್ದರೆ ಥೇಟ್ ಅಪ್ಪು ನಮ್ಮ ಕಣ್ಣ ಮುಂದೆ ಬಂದಿದ್ದಾರೆ ಅಂತ ನಮಗೆ ಭಾಸವಾಗುತ್ತದೆ. ಇದೀಗ ಯುವ ರಾಜ್ ಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಕುಟುಂಬಕ್ಕೆ ನಿಜಕ್ಕೂ ಕೂಡ ಒಂದು ಯುವಶಕ್ತಿ ಅಂತಾನೆ ಹೇಳಬಹುದು. ಏಕೆಂದರೆ ಮೂರನೇ ತಲೆಮಾರಿನ ಈ ವ್ಯಕ್ತಿ ಇದೀಗ ಡಾಕ್ಟರ್ ರಾಜಕುಮಾರ್ ಅವರ ಹೆಸರನ್ನು ಹಾಗೂ ಪುನೀತ್ ರಾಜಕುಮಾರ್ ಅವರ ಹೆಸರನ್ನು ಉಳಿಸುವಂತಹ ವ್ಯಕ್ತಿತ್ವವನ್ನು ಹೊಂದಿದ್ದಾರೆ ಅಂತ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಯುವರಾಜ್ ಕುಮಾರ ಅವರು ಯುವ ರಣಧೀರ ಕಂಠೀರವ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಮಾಡಬೇಕಿತ್ತು. ಆದರೆ ಇದೀಗ ಅವರು ಆ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಅಪ್ಪು ಅವರಿಗೆ ಮಾಡಿದಂತಹ ಕಥೆಯೊಂದರಲ್ಲಿ ನಾಯಕರಾಗಿ ನಟಿಸಲಿದ್ದಾರೆ. ಹೌದು ನಿರ್ಮಾಪಕ ಮತ್ತು ನಿರ್ದೇಶಕ ಆದಂತಹ ಸಂತೋಷ್ ಆನಂದ ರಾಮ್ ಅವರು ಅಪ್ಪು ಅವರು ಇದ್ದಾಗ ಅವರಿಗಾಗಿ ವಿಶೇಷವಾದಂತಹ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆದರೆ ಅವರು ಅಕಾಲಿಕ ಮ’ರ’ಣ ಹೊಂದಿದ ನಂತರ ಇದೀಗ ಅವರನ್ನು ನಾಯಕನಟರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಒಂದು ಕಾರಣಕ್ಕಾಗಿಯೇ ಯುವ ರಣಧೀರ ಕಂಠೀರವ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಇದೀಗ ಅಪ್ಪು ಅವರಿಗಾಗಿ ಸಿದ್ಧಪಡಿಸಿದಂತಹ ಕಥೆಯೊಂದರಲ್ಲಿ ಅಭಿನಯಿಸುವುದಕ್ಕೆ ಯುವರಾಜ್ ಕುಮಾರ್ ಅವರು ಸಿದ್ದರಾಗಿದ್ದಾರೆ.
ಆದರೆ ಸಿನಿಮಾದ ಹೆಸರನ್ನು ಇನ್ನು ಕೂಡ ಫಿಕ್ಸ್ ಮಾಡಿಲ್ಲ ಆದರೆ ಈ ಒಂದು ಸಿನಿಮಾವನ್ನು ಹೊಂಬಾಳೆ ಫಿಲಂ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ ಎಂದು ಸ್ವತಃ ಹೊಂಬಳೆ ಸಂಸ್ಥೆಯವರು ಹಾಗೂ ನಿರ್ಮಾಪಕ ಹಾಗೂ ನಿರ್ದೇಶಕ ಆದಂತಹ ಸಂತೋಷ ಆನಂದ ರಾಮ್ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದ ಹಾಗೆ ಅಶ್ವಿನಿ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಪತಿ ನಟನೆ ಮಾಡಬೇಕಾದಂತಹ ಸಿನಿಮಾದಲ್ಲಿ ಇದೀಗ ಅವರ ಮಗನಿಗೆ ಸಮನಾದ ಯುವರಾಜ್ ಕಮಾರ್ ಅವರ ನಟನೆ ಮಾಡುತ್ತಿರುವುದು ನಿಜಕ್ಕೂ ಕೂಡ ವಿಚಾರವೇ ಅಂತ ಹೇಳುತ್ತಿದ್ದಾರೆ. ಇದರ ಜೊತೆಗೆ “ನೀನು ಅರ್ಹನಾಗಿರುವಂತಹ ಎಲ್ಲಾ ಯಶಸ್ಸು ನಿನಗೆ ಸಿಗಲಿ ಎಂದು ಅಶ್ವಿನಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯುವರಾಜ ಕುಮಾರ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ” ಇದನ್ನೇ ಅಲ್ಲವೇ ದೊಡ್ಡಮನೆಯ ದೊಡ್ಡಗುಣ ಅಂತ ಕರೆಯುವುದು. ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ದಯವಿಟ್ಟು ತಿಳಿಸಿ ಧನ್ಯವಾದಗಳು ಸ್ನೇಹಿತರೆ.