ಆಷಾಡ ಮಾಸದ ಮೊದಲ ಮಂಗಳವಾರ ಇಂದು ದುರ್ಗಾ ದೇವಿಯ ಆಶೀರ್ವಾದ ಈ 5 ರಾಶಿಯವರ ಮೇಲಿದೆ, ಮಾಡುವ ಕೆಲಸ ಕಾರ್ಯದಲ್ಲಿ ಇಂದು ನಿರೀಕ್ಷೆಗೂ ಮೀರಿದ ಲಾಭ.!

 

ಮೇಷ ರಾಶಿ:- ಹಣದ ವಿಚಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ. ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ಖರೀದಿಸುತ್ತೀರಿ. ಬಹಳ ದಿನಗಳ ನಂತರ ನಿಮ್ಮ ಮಕ್ಕಳ ಜೊತೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ಸಂಗಾತಿ ಜೊತೆಗಿದ್ದ ಮನಸ್ಥಾಪ ಸರಿ ಹೋಗುತ್ತದೆ. ಕೆಲಸದ ವಿಚಾರದಲ್ಲಿ ಜಾಗರೂಕರಾಗಿರಲು ತಿಳಿಸಲಾಗಿದೆ.
ಅದೃಷ್ಟದ ಸಂಖ್ಯೆ – 04 ಅದೃಷ್ಟದ ಬಣ್ಣ – ಕೆಂಪು
ಉತ್ತಮ ಸಮಯ – ಮಧ್ಯಾಹ್ನ 1:40 ರಿಂದ ರಾತ್ರಿ 9:30ವರೆಗೆ.

ವೃಷಭ ರಾಶಿ:- ಇಂದು ನಿಮ್ಮ ಎಲ್ಲಾ ಪ್ರಮುಖ ಕಾರ್ಯಗಳು ಪೂರ್ತಿಗೊಳ್ಳುವ ಸಾಧ್ಯತೆ ಇದೆ ಮತ್ತು ಅದು ದೊಡ್ಡ ಲಾಭವನ್ನು ನೀಡುತ್ತದೆ. ಕೆಲಸದ ಜಾಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಹಾಗೂ ಪ್ರಶಂಸೆ ಸಿಗುತ್ತದೆ. ಸಂಗಾತಿ ಜೊತೆಗೆ ನಯವಾಗಿ ವರ್ತಿಸಿ. ಕೌಟುಂಬಿಕ ಸಮಸ್ಯೆಗಳು ಇಂದು ನಿಮ್ಮನ್ನು ಕಾಡಬಹುದು.
ಅದೃಷ್ಟದ ಸಂಖ್ಯೆ – 01 ಅದೃಷ್ಟದ ಬಣ್ಣ – ಗುಲಾಬಿ
ಉತ್ತಮ ಸಮಯ – ಬೆಳಗ್ಗೆ 5:25 ರಿಂದ ಮಧ್ಯಾಹ್ನ 2:00 ರವರೆಗೆ.

ಮಿಥುನ ರಾಶಿ:- ಮನೆಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುತ್ತದೆ. ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ಕೂಡ ನಿಮ್ಮ ಕುಟುಂಬಸ್ಥರ ಬೆಂಬಲ ಸಿಗುತ್ತದೆ. ನಿಮ್ಮ ಒಡಹುಟ್ಟಿದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಬಹಳ ದಿನಗಳಿಂದ ತಾಯಿಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ನಿಮಗೆ ಇಂದು ಸಮಾಧಾನ ಸಿಗುತ್ತದೆ ಅವರ ಆರೋಗ್ಯ ಸುಧಾರಣೆಯಾಗಲಿದೆ.
ಅದೃಷ್ಟದ ಸಂಖ್ಯೆ – 01 ಅದೃಷ್ಟದ ಬಣ್ಣ – ಹಳದಿ
ಉತ್ತಮ ಸಮಯ – ಸಂಜೆ 6:00 ರಿಂದ ರಾತ್ರಿ 10:00 ರವರೆಗೆ.

ಕರ್ಕಾಟಕ ರಾಶಿ:- ಸಂಗಾತಿ ಜೊತೆಗೆ ವಾದ ಆಗಬಹುದು, ಆದರೆ ಸಂಜೆ ವೇಳೆಗೆ ಎಲ್ಲವೂ ಸರಿ ಹೋಗಲಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ನೀಡಲು ಇದು ಉತ್ತಮ ದಿನವಾಗಿದೆ. ನಿಮ್ಮ ಜೊತೆ ಪ್ರೀತಿಯಲ್ಲಿ ಇರುವವರು ಈ ಸಂಬಂಧದ ಬಗ್ಗೆ ಕುಟುಂಬದವರ ಜೊತೆ ಮಾತನಾಡಬಹುದು. ಆರ್ಥಿಕ ಸ್ಥಿತಿ ಇಂದು ಉತ್ತಮವಾಗಿರಲಿದೆ.
ಅದೃಷ್ಟದ ಸಂಖ್ಯೆ – 09 ಅದೃಷ್ಟದ ಬಣ್ಣ – ಬಿಳಿ
ಉತ್ತಮ ಸಮಯ – ಬೆಳಗ್ಗೆ 5:50 ರಿಂದ ಮಧ್ಯಾಹ್ನ 12:20 ರವರೆಗೆ.

ಸಿಂಹ ರಾಶಿ:- ಕೆಲಸದಲ್ಲಿ ಈ ದಿನವು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮ ಭವಿಷ್ಯವು ಒಳ್ಳೆಯ ರೀತಿಯಲ್ಲಿ ಬದಲಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಯಾವುದಾದರೂ ಸಂದರ್ಶನಕ್ಕೆ ಹೋಗಿದ್ದರೆ ಸಕರಾತ್ಮಕವಾದ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯಮಿಗಳಿಗೂ ಕೂಡ ಉತ್ತಮ ಲಾಭವಾಗುವ ಸಾಧ್ಯತೆಗಳಿವೆ.
ಅದೃಷ್ಟದ ಸಂಖ್ಯೆ – 03 ಅದೃಷ್ಟದ ಬಣ್ಣ – ಹಳದಿ
ಉತ್ತಮ ಸಮಯ – ಸಂಜೆ 4:30 ರಿಂದ ರಾತ್ರಿ 10:05 ರವರೆಗೆ.

ಕನ್ಯಾ ರಾಶಿ:- ನೀವು ಜೀವನದಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತಿದ್ದರೆ ಅದಕ್ಕಾಗಿ ಹೆಚ್ಚು ಶ್ರಮಿಸಬೇಕು. ಸೋಮಾರಿಗಳಾಗಿರುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ನಿರಂತರವಾಗಿ ವಿಷಾದಿಸುತ್ತೀರಿ. ಈ ದಿನದ ಎಲ್ಲಾ ಕೆಲಸಗಳಿಗೆ ಹಿರಿಯರ ಬೆಂಬಲವಿರುತ್ತದೆ. ನೀವು ಉದ್ಯಮಿಗಳಾಗಿದ್ದರೆ ಕೆಲಸದ ಕಾರಣಕ್ಕಾಗಿ ಅನಗತ್ಯವಾಗಿ ತಿರುಗಾಡಬೇಕು.
ಅದೃಷ್ಟದ ಸಂಖ್ಯೆ – 08 ಅದೃಷ್ಟದ ಬಣ್ಣ – ಹಸಿರು
ಉತ್ತಮ ಸಮಯ – ಸಂಜೆ 6:00 ರಿಂದ 10:45 ರವರೆಗೆ.

ತುಲಾ ರಾಶಿ:- ಇಂದು ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣಕಾಸಿನ ನಿರ್ಧಾರ ಮಾಡುವುದಕ್ಕೆ ಈ ದಿನ ಉತ್ತಮವಾಗಿರುವುದಿಲ್ಲ. ನೌಕರರು ತಮ್ಮ ಸಭೆಯ ಬಗ್ಗೆ ಹೆಚ್ಚು ಗಮನಹರಿಸುತ್ತಿರುವುದರಿಂದ ನೌಕರರಿಗೆ ಕಚೇರಿಯಲ್ಲಿ ಬಹಳ ಕಾರ್ಯನಿರತವಾದ ಕಾರ್ಯನಿರತವಾದ ದಿನವಾಗಿರುತ್ತದೆ.
ಅದೃಷ್ಟದ ಸಂಖ್ಯೆ – 02 ಅದೃಷ್ಟದ ಬಣ್ಣ – ನೇರಳೆ
ಉತ್ತಮ ಸಮಯ – ಬೆಳಿಗ್ಗೆ 9:55 ರಿಂದ ಮಧ್ಯಾಹ್ನ 2:25 ವರೆಗೆ.

ವೃಶ್ಚಿಕ ರಾಶಿ:- ವಿದ್ಯಾರ್ಥಿಗಳಿಗೆ ಈ ದಿನವೂ ತುಂಬಾ ಶುಭಕರವಾಗಿದೆ. ಇಂದು ನೀವು ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆ ಇದೆ. ಗುರುಗಳ ಆಶೀರ್ವಾದ ಮತ್ತು ಬೆಂಬಲವು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಉದ್ಯಮಿಗಳಿಗೆ ಈ ದಿನವೂ ಪ್ರಯೋಜನಕಾರಿಯಾಗಿದೆ. ದೀರ್ಘ ಕಾಲದಿಂದ ಸಿಲುಕಿಕೊಂಡಿದ್ದ ಕಾನೂನು ಸಮಸ್ಯೆಯಲ್ಲಿ ಇಂದು ನೀವು ಯಶಸ್ವಿಯಾಗುವ ಅವಕಾಶಗಳಿದೆ.
ಅದೃಷ್ಟದ ಸಂಖ್ಯೆ – 08 ಅದೃಷ್ಟದ ಬಣ್ಣ – ಕಂದು
ಉತ್ತಮ ಸಮಯ – ಮಧ್ಯಾಹ್ನ 12:00 ರಿಂದ ರಾತ್ರಿ 8:00 ರವರೆಗೆ.

ಧನಸ್ಸು ರಾಶಿ:- ನಿಮ್ಮ ವಿರೋಧಿಗಳು ಇಂದು ಸಕ್ರಿಯರಾಗಿರುವುದರಿಂದ ಜಾಗರೂಕರಾಗಿರಿ. ಇಂದು ಅವರಿಂದ ತೊಂದರೆಗಳಾಗುವ ಸಾಧ್ಯತೆಗಳಿವೆ. ಇಂದು ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಹಣಕಾಸಿನ ಖರ್ಚಿನ ವಿಚಾರವಾಗಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆಗಳಿವೆ. ಇದು ನಿಮ್ಮ ಮುಂದಿನ ಎಲ್ಲಾ ಯೋಜನೆಗಳನ್ನು ಹಾಳು ಮಾಡುತ್ತದೆ. ಪೋಷಕರ ಜೊತೆಗಿನ ಸಂಬಂಧಗಳು ಉತ್ತಮವಾಗಿರುತ್ತದೆ.
ಅದೃಷ್ಟದ ಸಂಖ್ಯೆ – 05 ಅದೃಷ್ಟದ ಬಣ್ಣ – ನೇರಳೆ
ಉತ್ತಮ ಸಮಯ – ಬೆಳಿಗ್ಗೆ 10:05 ರಿಂದ ರಾತ್ರಿ 10:45 ರವರೆಗೆ.

ಮಕರ ರಾಶಿ:- ಇಂದು ನೀವು ನಿಮ್ಮ ಸಂಗಾತಿ ಜೊತೆ ಸೈಧ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂತಹ ಸನ್ನಿವೇಶಗಳಲ್ಲಿ ನೀವು ಆಡುವ ಪದಗಳನ್ನು ಎಚ್ಚರಿಕೆಯಿಂದ ಬಳಸಿ. ಇಂತಹ ಪರಿಸ್ಥಿತಿ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಹಣದ ಕೊರತೆಯಿಂದಾಗಿ ನಿಮ್ಮ ಕೆಲವು ಯೋಜನೆಗಳಿಗೆ ಅಡ್ಡಿಯಾಗಬಹುದು.
ಅದೃಷ್ಟದ ಸಂಖ್ಯೆ – 05 ಅದೃಷ್ಟದ ಬಣ್ಣ – ಕಿತ್ತಳೆ
ಉತ್ತಮ ಸಮಯ – ಸಂಜೆ 05:15 ರಿಂದ ರಾತ್ರಿ 9:20ರವರೆಗೆ.

ಕುಂಭ ರಾಶಿ:- ನಿಮ್ಮ ಜೀವನ ಸಂಗಾತಿಯಿಂದ ಸಂಪೂರ್ಣ ಪ್ರೀತಿ ಹಾಗೂ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಹೆತ್ತವರ ಸಹಕಾರದಿಂದ ಕುಟುಂಬಕ್ಕೆ ಸಂಬಂಧಿಸಿದ ಒಂದು ಪ್ರಮುಖ ಕಾರ್ಯವು ಪೂರ್ಣಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಖರ್ಚು ಹೆಚ್ಚಾಗುತ್ತಿದ್ದರೂ ಹಣಕಾಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಬರುವುದಿಲ್ಲ. ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ.
ಅದೃಷ್ಟದ ಸಂಖ್ಯೆ – 03 ಅದೃಷ್ಟದ ಬಣ್ಣ – ಕೇಸರಿ
ಉತ್ತಮ ಸಮಯ – ಮಧ್ಯಾಹ್ನ 02:15 ರಿಂದ ಸಂಜೆ 07:20ರವರೆಗೆ.

ಮೀನ ರಾಶಿ:- ಇಂದು ನಿಮ್ಮ ಪ್ರಣಯ ಜೀವನದಲ್ಲಿ ಸ್ವಲ್ಪ ನಿರಾಶೆಯನ್ನು ಎದುರಿಸಬಹುದು. ನಿಮ್ಮ ಸಂಗಾತಿಯ ಆಕ್ರಮಣಕಾರಿ ಸ್ವಭಾವವು ನಿಮ್ಮಿಬ್ಬರ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇಂದು ನಿಮ್ಮ ನಿರೀಕ್ಷೆಯಂತೆ ಸಂಗಾತಿಯ ವರ್ತನೆ ಇರುವುದಿಲ್ಲ. ವಿವಾಹಿತ ದಂಪತಿಗಳಿಗೆ ಸಾಮಾನ್ಯ ದಿನವಾಗಿರುತ್ತದೆ. ಕೆಲಸದ ವಿಚಾರದಲ್ಲಿ ಇಂದು ಕಾರ್ಯನಿರತರಾಗಿರುತ್ತೀರಿ.
ಅದೃಷ್ಟದ ಸಂಖ್ಯೆ – 02 ಅದೃಷ್ಟದ ಬಣ್ಣ – ನೀಲಿ
ಉತ್ತಮ ಸಮಯ – ಮಧ್ಯಾಹ್ನ 02:15 ರಿಂದ ರಾತ್ರಿ 9:18 ರವರೆಗೆ.

Leave a Comment