ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಕರ್ನಾಟಕದ ಪಾಲಿಗೆ ಎರಡು ಕಣ್ಣುಗಳು ಇದ್ದಹಾಗೆ ಇಬ್ಬರೂ ಕೂಡ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಇಬ್ಬರೂ ಕೂಡ ತಮ್ಮದೇ ಆದ ವಿಶೇಷ ರೀತಿಯ ಆಕರ್ಷಣೆಯನ್ನು ಹೊಂದಿದ್ದಾರೆ ಇಬ್ಬರನ್ನು ಕೂಡ ಕರ್ನಾಟಕದಲ್ಲಿ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಒಂದು ಕಾಲದಲ್ಲಿ ಇವರಿಬ್ಬರ ಸಿನಿಮಾಗಳು ಒಟ್ಟಿಗೆ ಒಂದೇ ದಿನ ರಿಲೀಸ್ ಆದರೂ ಕೂಡ ಒಬ್ಬರ ಬಗ್ಗೆ ಒಬ್ಬರು ಎಲ್ಲೂ ನೆಗೆಟಿವ್ ಆಗಿ ಆಗಲೇ ಪಾಸಿಟಿವ್ ಆಗಿಯೇ ಆಗಲಿ ಮಾತನಾಡಿದವರಲ್ಲ. ಇಬ್ಬರು ಒಂದೇ ಸಿನಿಮಾ ಇಂಡಸ್ಟ್ರಿಯಲ್ ಇದ್ದರೂ ಕೂಡ ಹಲವು ವರ್ಷಗಳ ವರೆಗೆ ಇವರಿಬ್ಬರ ನಡುವೆ ಇದ್ದ ಸಂಬಂಧ ಏನು ಎನ್ನುವುದು ತಿಳಿಯದೇ ಎಲ್ಲರಿಗೂ ಕನ್ಫ್ಯೂಸ್ ಆಗಿತ್ತು.

ಯಾಕೆಂದರೆ ಅದೊಂದು ಇನ್ಸಿಡೆಂಟ್ ಆಗುವವರೆಗೂ ಒಬ್ಬರನ್ನೊಬ್ಬರು ಮಾತು ಸಹ ಆಡಿಸಿದ ಅಷ್ಟು ಅಪರಿಚಿತ ರೀತಿ ಇಬ್ಬರು ಇದ್ದರು ದರ್ಶನ್ ಅವರ ವೈಯಕ್ತಿಕ ಬದುಕಿನಲ್ಲಿ ನಡೆದ ಒಂದು ದುರ್ಘಟನೆ ಬಳಿಕ ದರ್ಶನ್ ಅವರ ಸಿನಿಮಾಗಳು ಸೋಲಲು ಆರಂಭಿಸುತ್ತದೆ. ದರ್ಶನ್ ಅವರ ಸಾರಥಿ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸುದೀಪ್ ಅವರು ದಚ್ಚು ಅವರ ಬೆಂಬಲಕ್ಕೆ ನಿಂತರು. ಅಲ್ಲದೆ ದರ್ಶನ್ ಅವರ ಸಿನಿಮಾ ಜರ್ನಿ ಯಲ್ಲಿ ಒಂದು ಬೆಂಚ್ ಮಾರ್ಕ್ ಎಂದು ಕರೆಯಬಹುದಾದ ಅದ್ಭುತ ಸಿನಿಮಾವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾಕ್ಕೆ ಸುದೀಪ್ ಅವರು ಪ್ರಚಾರದ ರೀತಿ ಸಿನಿಮಾ ಆರಂಭಕ್ಕೂ ಮುನ್ನ ಹಾಗೂ ಪ್ರತಿ ಹಾಡಿನ ಆರಂಭಕ್ಕೂ ತಮ್ಮ ಕಂಚಿನ ಕಂಠದಿಂದ ಸಿನಿಮಾ ಕುರಿತಾಗಿ ಪ್ರಮೋಷನ್ ನೀಡಿದ್ದರು.

ಒಂದರ್ಥದಲ್ಲಿ ದರ್ಶನ್ ಅವರ ಸಿನಿ ಬದುಕಿಗೆ ಅದು ಮತ್ತೊಮ್ಮೆ ಉಸಿರು ತಂದಿತು ಎಂದೇ ಹೇಳಬಹುದು. ಇದಾದ ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳಲು ಶುರುವಾದರೂ ಸಿಸಿಎಲ್ ಅಲ್ಲಿ ಕೂಡ ಎಂದು ಆಟವಾಡದ ದರ್ಶನ್ ಸುದೀಪ್ ಇದ್ದ ಕಾರಣ ಆ ವರ್ಷದ ಸಿಸಿಎಲ್ ಅಲ್ಲಿ ಪಾಲ್ಗೊಂಡರು ಇಬ್ಬರು ಅಣ್ಣತಮ್ಮಂದಿರಿಗಿಂತ ಹೆಚ್ಚಾಗಿ ಒಬ್ಬರ ಜೊತೆ ಒಬ್ಬರು ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೆ ಕಾರ್ಯಕ್ರಮ ಒಂದರಲ್ಲಿ ಇಬ್ಬರು ಕುಚಿಕು ಕುಚಿಕು ಎಂದು ಹಾಡಿಗೆ ಹೆಜ್ಜೆ ಹಾಕುತ್ತಾ ಸ್ಟೇಜ್ ಮೇಲೆ ವಿಜೃಂಭಿಸಿದ್ದರು. ಆದರೆ ಅದ್ಯಾವ ಕೆಟ್ಟ ದೃಷ್ಟಿ ಈ ಸ್ನೇಹದ ಮೇಲೆ ಬಿತ್ತೋ ಗೊತ್ತಿಲ್ಲ. ಇಬ್ಬರು ಈಗ ಬದ್ಧ ವೈರಿಗಳ ರೀತಿ ವರ್ತಿಸುತ್ತಿದ್ದಾರೆ.

ಅದರಲ್ಲೂ ದರ್ಶನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮಿಬ್ಬರ ನಡುವೆ ಏನು ಇಲ್ಲ ಇಬ್ಬರು ಒಂದೇ ಇಂಡಸ್ಟ್ರಿಯ ನಾಯಕರು ಅಷ್ಟೇ ಎಂದು ಹೇಳುವ ಮೂಲಕ ಸುದೀಪ್ ಅವರು ತನಗೆ ಏನೇನು ಅಲ್ಲ ಎಂದು ಹೇಳಿಬಿಟ್ಟಿದ್ದಾರೆ. ಇದರ ನಡುವೆ ಸ್ಟಾರ್ ವಾರ್ ಕೂಡ ತಾರಕಕ್ಕೇರಿ ಇಬ್ಬರ ನಡುವೆ ಬಾಂಧವ್ಯ ಬೆಸೆಯ ಬೇಕಾಗಿದ್ದ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಇಬ್ಬರ ನಡುವೆ ದ್ವೇಷ ಹೆಚ್ಚಾಗುವ ರೀತಿ ಕೆಲಸ ಮಾಡುತ್ತಿದ್ದಾರೆ. ಈ ಬೇಸರ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅಂಬಿ ಏರ್ಪಡಿಸಿದ್ದ ಒಂದು ಔತಣಕೂಟದಲ್ಲಿ ಪಕ್ಕಪಕ್ಕದಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡಿ ನಂತರ ಇಬ್ಬರು ಒಟ್ಟಿಗೆ ದರ್ಶನ್ ಅವರಿಗೆ ಅವರ ಪತ್ನಿ ಗಿಫ್ಟ್ ಕೊಟ್ಟಿದ್ದ ಜಾಗ್ವಾರ್ ಕಾರಿನಲ್ಲಿ ತೆರಳಿದ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ನೀವು ಡಿ ಬಾಸ್ ಮತ್ತೆ ಕಿಚ್ಚ ಬಾಸ್ ಒಂದಾಗುವುದನ್ನು ಬಯಸುವುದಾದರೆ ಕಾಮೆಂಟ್ ಮಾಡಿ.

Leave a Comment

WhatsApp Group Join Now
Telegram Group Join Now