ಜನನ ಮತ್ತು ಮರಣ ನೋಂದಣಿ ಮಾಡಿಸುವುದು ಈಗ ಭಾರತದಲ್ಲಿ ಕಡ್ಡಾಯ ಕಾನೂನಾಗಿದೆ. ಈ ದಾಖಲೆ ಪತ್ರಗಳು ಒಂದಲ್ಲ ಒಂದು ಕಾರಣಕ್ಕಾಗಿ ಬಳಕೆ ಆಗುತ್ತವೆ. ಮಗುವಿನ ಶಾಲೆ ದಾಖಲಾತಿಯಿಂದ ಹಿಡಿದು ಹಲವಾರು ವಿಷಯಗಳಿಗೆ ಮುಖ್ಯ ಆಧಾರವಾಗಿ ಈ ಜನನ ಪ್ರಮಾಣ ಪತ್ರವನ್ನು ಪಡೆಯಲು ಜನನ ನೋಂದಣಿಯನ್ನು ಮಗು ಹುಟ್ಟಿದ ಸಮಯದಲ್ಲಿಯೇ ಪ್ರತಿಯೊಬ್ಬ ಪೋಷಕರು ಕೂಡ ಮಾಡಬೇಕು.
ಈ ರೀತಿ ಪಡೆದ ಜನನ ಪ್ರಮಾಣ ಪತ್ರದಲ್ಲಿ ಹಲವಾರು ದೋಷಗಳು ಉಂಟಾಗಿರುತ್ತವೆ. ಕೆಲವೊಮ್ಮೆ ಮಗುವಿನ ಹೆಸರನ್ನೇ ತಿದ್ದುಪಡಿ ಮಾಡಸಬೇಕಾದ ಸಂದರ್ಭ ಬರುತ್ತದೆ, ಕೆಲವೊಮ್ಮೆ ಪೋಷಕರ ಹೆಸರುಗಳು ತಪ್ಪಾಗಿ ಎಂಟ್ರಿ ಆಗಿರುತ್ತವೆ ಅಥವಾ ವಿಳಾಸವನ್ನು ಬದಲಾಯಿಸುವ ಸನ್ನಿವೇಶ ಬರುತ್ತದೆ. ಇಂತಹ ಸಮಯಗಳಲ್ಲಿ ಯಾವೆಲ್ಲಾ ತಿದ್ದುಪಡಿಗಳಿಗೆ ಕಾನೂನಿನಲ್ಲಿ ಅವಕಾಶ ಇದೆ ಮತ್ತು ಅದನ್ನು ಹೇಗೆ ಮಾಡಿಸಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಜನನ ಪ್ರಮಾಣ ಪತ್ರದಲ್ಲಿ ಈ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಬಹುದು:-
● ಮಗುವಿನ ಹೆಸರು ತಿದ್ದುಪಡಿ ಮತ್ತು ಮಗುವಿನ ಹೆಸರಿನ ಬದಲಾವಣೆ.
● ತಂದೆ ಮತ್ತು ತಾಯಿಯ ಹೆಸರು ತಿದ್ದುಪಡಿ
● ವಿಳಾಸ ತಿದ್ದುಪಡಿ
ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:-
● ಈ ಹಿಂದೆ ಮಾಡಿಸಿರುವ ಮಗುವಿನ ಹಳೆಯ ಜನನ ಪ್ರಮಾಣ ಪತ್ರ
● ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.
● ಒಂದು ಈ ಸ್ಟ್ಯಾಂಪ್ ಪೇಪರ್ ಅಫಿಡವಿಟ್ ಮಾಡಿಸಬೇಕು.
● ಆ ಅಫಿಡವಿಟ್ ಅಲ್ಲಿ ತಿದ್ದುಪಡಿ ಯಾವ ಕಾರಣಕ್ಕಾಗಿ ಮಾಡಿಸುತ್ತಿದ್ದೀರಾ ಈ ಹಿಂದೆ ಜನನ ಪ್ರಮಾಣ ಪತ್ರದಲ್ಲಿ ಅದು ಯಾವ ರೀತಿ ಇತ್ತು ಈಗ ಅದರಲ್ಲಿ ಏನೇನು ತಿದ್ದುಪಡಿ ಆಗಬೇಕು ಎನ್ನುವುದೆಲ್ಲವನ್ನು ಕೂಡ ಸರಿಯಾಗಿ ಬರೆಯಬೇಕು, ಅದರಲ್ಲೂ ಮುಖ್ಯವಾಗಿ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗದಂತೆ ನೋಡಿಕೊಳ್ಳಬೇಕು
● ಪುರಸಭೆ ಅಥವಾ ಸಿವಿಲ್ ಕೋರ್ಟ್ ಬಳಿ ಇರುವ ಅಂಗಡಿಗಳಲ್ಲಿ ಈ ಅಫಿಡವಿಟ್ ಮಾಡಿಕೊಡುತ್ತಾರೆ.
● ಜನನ ಪ್ರಮಾಣ ಪತ್ರ ತಿದ್ದುಪಡಿಗಾಗಿಯೇ ಒಂದು ಅರ್ಜಿ ಸಿಗುತ್ತದೆ ಅದನ್ನು ಸಹ ಭರ್ತಿ ಮಾಡಿ ಇವುಗಳ ಜೊತೆ ಸಲ್ಲಿಸಬೇಕು. ಈ ಅರ್ಜಿಯೂ ಸಹ ಪುರಸಭೆ ಅಥವಾ ನಗರಸಭೆಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳಲ್ಲಿ ಸಿಗುತ್ತದೆ.
ತಿದ್ದುಪಡಿ ಪ್ರಕ್ರಿಯೆ:-
● ಈ ರೀತಿ ಭರ್ತಿ ಮಾಡಿದ ಅರ್ಜಿ ಹಾಗೂ ಅದಕ್ಕೆ ಪೂರಕವಾಗಿ ಬೇಕಾದ ದಾಖಲೆಗಳನ್ನು ತೆಗೆದುಕೊಂಡು ನೀವು ಎಲ್ಲಿ ಜನನ ಪ್ರಮಾಣ ಪತ್ರ ಮಾಡಿಸಿದ್ದೀರಿ ಆ ಕಚೇರಿಗೆ ಹೋಗಬೇಕು.
● ಆ ಕಚೇರಿಯಲ್ಲಿಯೇ ಬರ್ತ್ ಸರ್ಟಿಫಿಕೇಟ್ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಕೆ ಆದ ಬಳಿಕ ಪುರಸಭೆ ಆಗಿದ್ದರೆ ನಿಮಗೆ ತಿದ್ದುಪಡಿ ಆದ ಜನನಪ್ರಮಾಣ ಪತ್ರವು ಬೇಗ ಸಿಗುತ್ತದೆ, ಮಹಾನಗರ ಪಾಲಿಕೆಯ ಆಗಿದ್ದರೆ ಸ್ವಲ್ಪ ವಿಳಂಬವಾಗಿ ನಿಮ್ಮ ಜನನ ಪ್ರಮಾಣ ಪತ್ರ ಸಿಗುತ್ತದೆ.
● ನೀವು ಅರ್ಜಿ ಸಲ್ಲಿಸಿದ ಏಳು ದಿನದ ಒಳಗೆ ನಿಮಗೆ ತಿದ್ದುಪಡಿ ಆಗಿ ಹೊಸ ಜನನ ಪ್ರಮಾಣ ಪತ್ರ ಸಿಗುತ್ತದೆ.
● ಪ್ರತಿಪುಟಕ್ಕೂ 5 ರಿಂದ 7 ರೂಪಾಯಿ ಸರ್ಕಾರದಿಂದ ಶುಲ್ಕ ವಿಧಿಸುತ್ತಾರೆ. ನಿಮಗೆ ಎಷ್ಟು ಪ್ರತಿ ಬೇಕು ಅಷ್ಟು ಹಣ ಪಾವತಿ ಮಾಡಿ ಜನನ ಪ್ರಮಾಣ ಪತ್ರಗಳ ಪ್ರತಿ ಪಡೆದುಕೊಳ್ಳಬಹುದು.
ಜನನ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಿಸುವ ಪ್ರಕ್ರಿಯೆಯು ಈ ರೀತಿ ಇರುತ್ತದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.