Home Serial Loka ಧರ್ಮಸ್ಥಳದಲ್ಲಿ ಯಾರಿಗೂ ತಿಳಿಯದ ಹಾಗೇ ಗುಟ್ಟಾಗಿ ಸರಳ ವಿವಾಹವಾಗಿದ್ದ ಗೀತಾ ಧಾರಾವಾಹಿ ವಿಜಯ್ ಜೋಡಿಗೆ ಈಗ ಏನಾಗಿದೆ ಗೊತ್ತಾ.?

ಧರ್ಮಸ್ಥಳದಲ್ಲಿ ಯಾರಿಗೂ ತಿಳಿಯದ ಹಾಗೇ ಗುಟ್ಟಾಗಿ ಸರಳ ವಿವಾಹವಾಗಿದ್ದ ಗೀತಾ ಧಾರಾವಾಹಿ ವಿಜಯ್ ಜೋಡಿಗೆ ಈಗ ಏನಾಗಿದೆ ಗೊತ್ತಾ.?

0
ಧರ್ಮಸ್ಥಳದಲ್ಲಿ ಯಾರಿಗೂ ತಿಳಿಯದ ಹಾಗೇ ಗುಟ್ಟಾಗಿ ಸರಳ ವಿವಾಹವಾಗಿದ್ದ ಗೀತಾ ಧಾರಾವಾಹಿ ವಿಜಯ್ ಜೋಡಿಗೆ ಈಗ ಏನಾಗಿದೆ ಗೊತ್ತಾ.?

ತೆರೆಮೇಲೆ ಜೋಡಿ ಆಗಿ ನಟಿಸಿ ಜನಪ್ರಿಯತೆ ಗಳಿಸಿದ ನಂತರ ಆ ಜೋಡಿಗಳು ನಿಜ ಜೀವನದಲ್ಲಿ ಕೂಡ ಒಂದಾಗಿರುವ ಹಲವು ಉದಾಹರಣೆಗಳು ನಮ್ಮ ಸ್ಯಾಂಡಲ್ವುಡ್ನಲ್ಲಿ ಇದೆ. ಇದಕ್ಕೆ ಕಿರುತೆರೆಗಳು ಹೊರತೇನಲ್ಲ, ನಮ್ಮ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಜೋಡಿ ಆಗಿ ನಾಯಕ-ನಾಯಕಿಯಾಗಿ ನಟಿಸಿರುವ ಪಾತ್ರಧಾರಿಗಳು ನಿಜ ಜೀವನದಲ್ಲೂ ಸಹ ನಂತರ ಮದುವೆಯಾಗಿದ್ದಾರೆ. ಉದಾಹರಣೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಲವ್ ಮಾಕ್ಟೇಲ್ ಖ್ಯಾತಿಯ ಕೃಷ್ಣ ಹಾಗೂ ಮಿಲನ ನಾಗರಾಜ್, ಲಕ್ಷ್ಮೀಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ಹಾಗೂ ಕವಿತಾ ಗೌಡ, ರಿಯಾಲಿಟಿ ಶೋ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ರಘು ಹಾಗೂ ಅಮೃತ. ಈ ರೀತಿಯಾಗಿ ಹಲವು ಜೋಡಿಗಳನ್ನು ಉದಾಹರಣೆಯಾಗಿ ಕೊಡಬಹುದು.

ಈಗ ಮತ್ತೊಂದು ಜನಪ್ರಿಯ ಜೋಡಿಯು ನಿಜಜೀವನದಲ್ಲಿಯೂ ಜೋಡಿ ಆಗಲಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಈ ರೀತಿ ಜೋಡಿ ಆಗಿ ನಟಿಸುವ ನಾಯಕ-ನಾಯಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಬರುವುದು ಸಹಜ, ಆದರೆ ಅದನ್ನೆಲ್ಲ ಮೀರಿ ಅವರಿಬ್ಬರು ಮದುವೆ ಆಗಿದ್ದಾರೆ ಅಥವಾ ಮದುವೆ ಆಗುತ್ತಾರೆ ಎನ್ನುವಷ್ಟರ ಮಟ್ಟಿಗೆ ಜನರು ಜೋಡಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ತೆರೆ ಮೇಲೆ ಆ ಜೋಡಿಯ ಕೆಮಿಸ್ಟ್ರಿ ಅಷ್ಟು ವರ್ಕ್ ಆಗುತ್ತಿದೆ ಎಂದೇ ಅರ್ಥ ಎನ್ನಬಹುದು. ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುವ ಈ ಜೋಡಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರವಾಹಿಯ ಜೋಡಿಗಳು. ಗೀತಾ ಧಾರಾವಾಹಿಯ ನಾಯಕ-ನಾಯಕಿಯಾಗಿ ಗೀತಾ ಮತ್ತು ವಿಜಯ್ ಇವರಿಬ್ಬರ ಜೋಡಿ ಸಾಕಷ್ಟು ಜನರ ಮೆಚ್ಚಿನ ಜೋಡಿಯಾಗಿದೆ. ಇವರಿಬ್ಬರನ್ನು ತೆರೆಮೇಲೆ ಒಟ್ಟಿಗೆ ನೋಡಲು ಕಿರುತೆರೆ ಅಭಿಮಾನಿಗಳ ತುಂಬಾ ಖುಷಿ ಪಡುತ್ತಾರೆ.

ಧಾರಾವಾಹಿ ಶುರುವಿನಿಂದಲೂ ಒಂದಲ್ಲ ಒಂದು ಕಾರಣದಿಂದ ಈ ಜೋಡಿಗಳ ನಡುವೆ ಬಿರುಕು ಏರ್ಪಡುತ್ತಲೇ ಇದೆ. ಈ ಬಗ್ಗೆ ಅಭಿಮಾನಿಗಳಿಗೆ ತುಂಬಾ ಬೇಸರ ಇದೆ. ಆದಷ್ಟು ಬೇಗ ಈ ಜೋಡಿಗಳು ಒಂದಾಗಲಿ ಎಂದು ಎಷ್ಟೋ ಅಭಿಮಾನಿಗಳು ಹರಿಸುತ್ತಲೇ ಇದ್ದಾರೆ. ಇನ್ನೂ ಮುಂದುವರೆದು ಇವರು ತೆರೆ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ಜೋಡಿ ಆದರೆ ಎಷ್ಟು ಚಂದ ಎಂದು ಹೇಳುವ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುವ ಧಾರಾವಾಹಿಗಳ ಲೀಸ್ಟ್ ನಲ್ಲಿ ತುಂಬಾನೇ ಫೇಮಸ್ ಆಗಿರುವ ಧಾರಾವಾಹಿ ಗೀತಾ. ಗೀತಾ ಧಾರಾವಾಹಿಯಲ್ಲಿ ಗೀತಾಳ ಧೈರ್ಯ, ಗೀತಾ ಮತ್ತು ವಿಜಯ್ ವಿಚಾರ ಈ ರೀತಿಯಾಗಿ ಇನ್ನೂ ಅನೇಕ ವಿಷಯಗಳನ್ನು ತೆಗೆದುಕೊಂಡು ಜನರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಟ್ರೋಲ್ ಮಾಡಿದ್ದಾರೆ. ಈ ರೀತಿ ಟೋಲ್ ಆಗುತ್ತಲೇ ಫೇಮಸ್ ಆದ ಜೋಡಿ ಇದು ಎಂದೇ ಹೇಳಬಹುದು.

ಈಗ ಅದೆಲ್ಲಾ ಕಳೆದು ಅಭಿಮಾನಿಗಳು ಇವರಿಬ್ಬರು ಧರ್ಮಸ್ಥಳದಲ್ಲಿ ಹೋಗಿ ಸರಳವಾಗಿ ಮದುವೆಯಾಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಗೀತಾ ಮತ್ತು ವಿಜಯ್ ಜೋಡಿ ಮದುವೆ ಆಗುತ್ತಿರುವ ಮತ್ತು ಮಧುಮಕ್ಕಳ ವಸ್ತ್ರದಲ್ಲಿ ಫೋಟೋಶೂಟ್ ಒಂದರಲ್ಲಿ ಕಾಣಿಸಿಕೊಂಡಿದ್ದ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇವರಿಬ್ಬರು ಗುಟ್ಟಾಗಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಈ ಫೋಟೋ ಗೀತಾ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಸನ್ನಿವೇಶಕ್ಕೆ ಅನಿವಾರ್ಯ ಇದ್ದಿದ್ದರಿಂದ ತೆಗೆಸಿದ ಫೋಟೋ ಆಗಿದೆ. ಇವರಿಬ್ಬರು ನಿಜ ಜೀವನದಲ್ಲಿ ಇನ್ನು ಸಿಂಗಲ್ ಆಗಿಯೇ ಇದ್ದಾರೆ. ಈ ಬಗ್ಗೆ ಗೀತಾ ಧಾರಾವಾಹಿಯ ಚಿತ್ರತಂಡವೇ ದೃಢಪಡಿಸಿದೆ. ಈ ಮದುವೆ ಧಾರಾವಾಹಿಯಲ್ಲಿ ನಡೆದಿದ್ದರೂ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವ ಬಗ್ಗೆ ಆಗಾಗ ಗಾಳಿಸುದ್ದಿ ಹಬ್ಬುತ್ತಲೇ ಇರುತ್ತದೆ.

ಗೀತಾ ಧಾರಾವಾಹಿಯ ಸಂದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ ನಿರೂಪಕ ರೊಬ್ಬರು ನಾಯಕಿಯಾದ ಗೀತಾರನ್ನು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಅವಳ ತಂದೆಯ ಪಾತ್ರ ನಿರ್ವಹಿಸುತ್ತಿರುವವರ ಬಗ್ಗೆ ಕೇಳಿದಾಗ ಗೀತಾ ಅವರು ಪಿ ಬಿ ಶ್ರೀನಿವಾಸ್ ಅವರು ನನ್ನ ತಂದೆಯ ಪಾತ್ರ ಮಾಡುತ್ತಿದ್ದಾರೆ. ಅವರು ಈ ಹಿಂದೆಯೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ನಾವು ಹೊಸಬರಾದ ಕಾರಣ ನಮ್ಮಲ್ಲಿ ಏನೇ ತಪ್ಪುಗಳಾದರೂ ಹೇಳಿ ಕೊಡುತ್ತಾರೆ. ಇವರು ನನ್ನನ್ನು ಶೂಟಿಂಗ್ ಸೆಟ್ ಅಲ್ಲಿ ಮಗಳೇ ಮಗಳೇ ಎಂದು ಕರೆಯುತ್ತಿರುತ್ತಾರೆ ಹಾಗೂ ಅದರಿಂದ ಆಚೆಯೂ ಸಹ ಅದೇ ರೀತಿ ಕರೆಯುತ್ತಾರೆ. ಸ್ವಂತ ಮಗಳಂತೆ ಪ್ರೀತಿ ತೋರಿಸುತ್ತಾರೆ. ನಿಜಕ್ಕೂ ಇವರ ಮಗಳಾಗಿ ಪಾತ್ರ ಮಾಡೋದು ನನಗೆ ಸಿಕ್ಕ ಅದೃಷ್ಟ ಎಂದುಕೊಳ್ಳುತ್ತೇನೆ ಎಂದು ಹೇಳಿದರು. ಹಾಗೆಯೇ ಇವರ ಜೊತೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಧನುಷ್ ಗೌಡ ಅವರ ಬಗ್ಗೆ ಕೇಳಿದಾಗ ನಾಚೀ ನೀರಾದರು ಗೀತಾ ಅವರು.

ಮೊದಮೊದಲು ನಮ್ಮಿಬ್ಬರ ನಡುವೆ ತುಂಬಾ ಕಿರಿಕಿರಿ ಇತ್ತು ಆದರೆ ದಿನಕಳೆದಂತೆ ನಾವಿಬ್ಬರು ಈಗ ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿದರು. ಮತ್ತು ನಿರೂಪಕಿ ಮುಂದುವರೆದು ನಿಜಜೀವನದಲ್ಲೂ ಜೋಡಿ ಆಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಕೂಡ ಇಲ್ಲ ಎಂದು ಉತ್ತರಿಸಿದ್ದಾರೆ ಒಳ್ಳೆಯ ಸ್ನೇಹಿತರಾಗಿದ್ದೇವೆ ಹಾಗೆ ಇರುತ್ತೇವೆ ಎಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ ಧನ್ಯವಾದಗಳು ಸ್ನೇಹಿತರೆ

LEAVE A REPLY

Please enter your comment!
Please enter your name here