ನಾಳೆ ಜೂನ್ 15 ರಂದು ಮಹಾಪ್ರದೋಷ, ಈ ಐದು ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಶೆ.! ಅಂದುಕೊಂಡ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ

 

ನಮ್ಮ ಹಿಂದೂ ಪಂಚಾಂಗದ ಪ್ರಕಾರ ನೋಡುವುದಾದರೆ ಪ್ರತಿಯೊಂದು ದಿನವೂ ಕೂಡ ಇಲ್ಲಿ ವಿಶೇಷವೇ. ಇಲ್ಲಿ ಪ್ರತಿಯೊಂದು ದಿನವು ಆಗುವ ಗ್ರಹಗಳ ಚಲನೆ, ಅವುಗಳ ರಾಶಿ ಸಂಚಾರ ಇವುಗಳ ಆಧಾರದ ಮೇಲೆ ರಾಜ್ಯಗಳ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಕೆಲ ರಾಶಿಗಳಿಗೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಮುಂಚೆಯೇ ಸೂಚನೆಯನ್ನು ಕೂಡ ಕೊಡಲಾಗುತ್ತದೆ.

ಅಂತಹದೇ ಒಂದು ವಿಶೇಷತೆಯ ದಿನ ಇನ್ನೇನು ಸಮೀಪವಿದೆ. ಇದು ಮಹಾಪ್ರದೋಷದ ದಿನವಾಗಿದೆ. ಈ ಬಾರಿ ಪ್ರದೋಷ ಗುರುವಾರ ಬಿದ್ದಿದೆ. ಆದರೂ ಕೂಡ ಗುರುವಾರ ಇದ್ದರೂ ಈ ಮಹಾಪ್ರದೋಷದ ದಿನ ಬಹಳ ಶುಭಕರವಾದ ಫಲಗಳನ್ನು ನೀಡುತ್ತಿದೆ. ಮಹಾದೇವ ಹಾಗೂ ಪಾರ್ವತಿ ತಾಯಿಯ ಸಂಪೂರ್ಣ ಅನುಗ್ರಹವು ಈ ದಿನ ಅವರನ್ನು ಪೂಜೆ ಮಾಡುವವರಿಗೆ ಲಭಿಸುತ್ತದೆ.

ಪ್ರದೋಷದ ದಿನದಂದು ಶಿವಲಿಂಗ ಪೂಜೆಗೆ ವಿಶೇಷ ಸ್ಥಾನ. ತ್ರಿಜನ್ಮ ಪಾಪಸಂಹಾರ ಏಕಭಿಲ್ವಂ ಶಿವಾಾರ್ಪಣಂ ಎನ್ನುವ ಶ್ಲೋಕವೇ ಹೇಳುವಂತೆ ಈ ಒಂದು ದಿನ ಬಿಲ್ವಾರ್ಚನೆಯಿಂದ ಶಿವಲಿಂಗವನ್ನು ಪೂಜೆ ಮಾಡಿದರೆ ಸಾಕು ಸರ್ವ ಪಾಪಗಳು ಕೂಡ ಪರಿಹಾರ ಆಗುತ್ತವೆ. ಅವರಿಗೆ ಪುಣ್ಯ ಪ್ರಾಪ್ತಿ ಆಗುತ್ತದೆ ಏನೇ ಬೇಡಿಕೆಗಳು ಇದ್ದರೂ, ಕೋರಿಕೆಗಳು ಇದ್ದರು ಈ ದಿನ ಭಕ್ತಿಯಿಂದ ಪರಶಿವನನ್ನು ಪ್ರಾರ್ಥಿಸಿ, ಪಾರ್ವತಿ ತಾಯಿಯನ್ನು ಆರಾಧಿಸಿದರೆ ಸಾಕು ಅವು ಪ್ರಾಪ್ತಿ ಆಗುತ್ತದೆ.

ಸಂಕಟಗಳ ನಿವಾರಣೆಗೆ ಸಂಕಷ್ಟಗಳ ನಿವಾರಣೆಗೆ ಮತ್ತು ಇಷ್ಟಾರ್ಥಸಿದ್ದಿಗೆ ಈ ದಿನದ ಪೂಜೆ ವಿಶೇಷ. ಈ ದಿನದಂದು ಶಿವ ಹಾಗೂ ಪಾರ್ವತಿ ಆರಾಧನೆ ಮಾಡುವುದರಿಂದ ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನ ವ್ಯವಹಾರ, ಆರೋಗ್ಯ, ಸಂತಾನ, ಕುಟುಂಬ ಇನ್ನು ಮುಂತಾದ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಪರಿಹಾರಕ್ಕಾಗಿ ಅಥವಾ ಒಳಿತಿಗಾಗಿ ಪ್ರಾರ್ಥಿಸಿದರು ಕೂಡ ಅದು ಬಹಳ ಬೇಗ ಫಲವನ್ನು ಕೊಡುತ್ತದೆ.

ಈ ಬಾರಿ ಜೂನ್ 15ನೇ ತಾರೀಕಿನಂದು ಮಹಾ ಪ್ರದೋಷವಿದ್ದು, ದ್ವಾದಶ ರಾಶಿಗಳಲ್ಲಿ 5 ರಾಶಿಯವರಿಗೆ ವಿಶೇಷ ಫಲವನ್ನು ಕೊಡುತ್ತಿದೆ. ಈ ಐದು ರಾಶಿಯವರಿಗೆ ಇಂದು ತಮ್ಮ ಕನಸು ನನಸಾಗುವ ಕಾಲ ಆಗಿರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯ ಜೊತೆಗೆ ಆರೋಗ್ಯ ಸಮಸ್ಯೆ ಇದ್ದಾಗ ಅವುಗಳು ಕೂಡ ಪರಿಹಾರ ಆಗುತ್ತದೆ. ವಿದ್ಯಾಭ್ಯಾಸದ ವಿಷಯದಲ್ಲಿ ಕೂಡ ಆಸಕ್ತಿ ಹೆಚ್ಚಾಗುತ್ತದೆ.

ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ ಬರುತ್ತದೆ ಹಾಗೆ ಕೆಲಸ ಕಾರ್ಯಗಳು ಕೂಡ ಸರಾಗವಾಗಿ ಸಾಗುತ್ತವೆ. ಹಣಕಾಸಿನ ಸಮಸ್ಯೆಗಳು ಪರಿಹಾರ ಆಗಿ ಮುಟ್ಟಿದ್ದೆಲ್ಲಾ ಬಂಗಾರವಾಗುವಂತಹ ಸುಸಮಯ ಇದಾಗಿದೆ. ಇಂತಹ ಒಂದು ವಿಶೇಷ ಅನುಗ್ರಹವು ಬಹಳ ಅಪರೂಪವಾಗಿ ಲಭಿಸುತ್ತದೆ. ಅಂತಹ ಗಜಕೇಸರಿ ಯೋಗವನ್ನು ಪಡೆದ ಐದು ರಾಶಿಗಳು ಇವೇ ಆಗಿವೆ.

ಮೇಷ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿಯವರಿಗೆ ಈ ಪ್ರದೋಷ ಅದೃಷ್ಟ ತರಲಿದೆ. ಈ ಮಹಾಪ್ರದೋಷದ ಸಮಯವೂ ಇವರ ಬದುಕಿನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲಿದೆ. ನಿರೀಕ್ಷೆಗೂ ಮೀರಿದ ಘಟನೆಗಳು ಜರಗಿ ಬದುಕು ಬಂಗಾರವಾಗುತ್ತದೆ.

ನಿಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿ ಯಾರಾದರೂ ಈ ರಾಶಿಯವರು ಇದ್ದರೆ ಅವರಿಗೆ ಈ ಶುಭ ಸುದ್ದಿಯನ್ನು ಹಂಚಿಕೊಳ್ಳಿ. ಯಾವುದಾದರೂ ಕಾರ್ಯಕ್ಕಾಗಿ ಶುಭ ಸಮಯವನ್ನು ಕಾಯುತ್ತಿದ್ದರೆ ಈ ಸಮಯ ಬಹಳ ಒಳಿತಾಗಿದೆ ಈ ಶುಭಕಾಲದ ಉಪಯೋಗವನ್ನು ಐದು ರಾಶಿಯ ಎಲ್ಲರೂ ಕೂಡ ಪಡೆದುಕೊಳ್ಳಿ.

Leave a Comment