ಜೀವನದಲ್ಲಿ ಎಲ್ಲರಿಗೂ ಕನಸುಗಳು ಇರುತ್ತವೆ. ಆದರೆ ಕಂಡ ಕನಸನ್ನು ನನಸು ಮಾಡಿಕೊಳ್ಳುವ ಅದೃಷ್ಟ ಹಾಗೂ ಕಂಡ ಕನಸಿಗಾಗಿ ಅದನ್ನು ಪಡೆಯುವ ಸಲುವಾಗಿ ಎಷ್ಟು ಕಷ್ಟದ ಹಾದಿಯನ್ನು ಕೂಡ ತುಳಿದು ತನ್ನ ಗುರಿಯನ್ನು ತಲುಪುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳು ಈ ರೀತಿ ಸಾಧನೆ ಮಾಡಬೇಕು ಎಂದರೆ ಅವರಿಗೆ ಧೈರ್ಯ ಹಾಗೂ ಕುಟುಂಬದ ಸಹಕಾರ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ನಮ್ಮಲ್ಲಿ ಅನೇಕ ಮಹಿಳಾ ಮಣಿಯರು ಈ ರೀತಿ ಸಾಧನೆ ಮಾಡಿ ಈ ಮೂಲಕ ಹಲವಾರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಅದೇ ರೀತಿ ಈಗಿನ ಕಾಲಕ್ಕೆ ಹೆಣ್ಣುಮಕ್ಕಳಿಗೆ ಒಂದು ಇನ್ಸ್ಪಿರೇಶನ್ ಆಗಿ ಆಂಕರ್ ಅನುಶ್ರೀ ಅವರನ್ನು ಕೂಡ ಹೆಸರಿಸಬಹುದು. ಯಾಕೆಂದರೆ ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ನಂಬರ್ ಆಂಕರ್ ಎಂದು ಅನುಶ್ರೀ ಅವರ ಹೆಸರು ಮಾಡಿದ್ದಾರೆ.
ಅನುಶ್ರೀ ಅವರು ಜನಿಸಿದ್ದು ಮಂಗಳೂರಿನಲ್ಲಿ. ಇವರ ತಾಯಿಯ ಹೆಸರು ಶಶಿಕಲಾ ಮತ್ತು ತಂದೆ ಹೆಸರು ಸಂಪತ್. ಜನವರಿ 25, 1988 ರಲ್ಲಿ ಜನಿಸಿದ ಅನುಶ್ರೀ ಅವರು ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೇ ಮುಗಿಸಿದ್ದರು. ಅವರ ವಿದ್ಯಾಭ್ಯಾಸ ಮುಗಿಸುವುದರ ಒಳಗೆ ಅವರ ಮೇಲೆ ಕುಟುಂಬದ ಜವಾಬ್ದಾರಿ ಬಿದ್ದಿರುತ್ತದೆ. ಇವರಿಗೆ ಅಭಿಜಿತ್ ಎನ್ನುವ ಹೆಸರಿನ ತಮ್ಮ ಕೂಡ ಇದ್ದಾನೆ. ಅನುಶ್ರೀ ಅವರ ತಂದೆ ಅನುಶ್ರೀ ಅವರು ಚಿಕ್ಕವರಿದ್ದಾಗ ಅವರನ್ನೆಲ್ಲ ಬಿಟ್ಟು ಹೋಗಿದ್ದರಿಂದ ತಮ್ಮನ ಜವಾಬ್ದಾರಿ ಹಾಗೂ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಅನುಶ್ರೀ ಅವರ ಮೇಲೆ ಬೀಳುತ್ತದೆ. ಇವರ ತಾಯಿ ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇವರ ತಾಯಿಗೆ ಸಹಾಯ ಮಾಡಲೆಂದು ಅನುಶ್ರೀ ಅವರು ಮೊದಲಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಪಾಯಿಂಟ್ಮೆಂಟ್ ಕೊಡಿಸುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ತದನಂತರ ಒಂದರ ಹಿಂದೆ ಒಂದರಂತೆ ಸಿಕ್ಕಸಿಕ್ಕ ಹಲವು ಚಿಕ್ಕ ಪುಟ್ಟ ಕೆಲಸವನ್ನು ಮಾಡಿಕೊಂಡೇ ಭವಿಷ್ಯದ ಕನಸನ್ನು ಕಾಣುತ್ತಿರುತ್ತಾರೆ. ಚಾಕಲೇಟ್ ಫ್ಯಾಕ್ಟರಿಯಲ್ಲಿ ಕೂಡ ಕೆಲಸ ಮಾಡಿರುವ ಇವರು ಮೊದಲು ನಿರೂಪಕಿಯಾಗಿ ಕೆಲಸ ಶುರುಮಾಡಿದ್ದು ಮಂಗಳೂರು ಒಂದು ಖಾಸಗಿ ವಾಹಿನಿಯಲ್ಲಿ. ಈ ವಾಹಿನಿಯಲ್ಲಿ ಅಂತ್ಯಕ್ಷರಿ ಎನ್ನುವ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಸೇರಿಕೊಂಡ ನಂತರ ಅವರ ಬದುಕು ಬದಲಾಯಿತು ಎಂದು ಹೇಳಬಹುದು. ಅವರಿಗೆ ಸಿಗುತ್ತಿದ್ದ ಚಿಕ್ಕಪುಟ್ಟ ಅವಕಾಶಗಳನ್ನು ಅದ್ಭುತವಾಗಿ ಬದಲಾಯಿಸಿಕೊಂಡವರು ಇಂದು ಕರ್ನಾಟಕದ ಮನೆಮಗಳು ಎಂದು ಕರೆಸಿಕೊಳ್ಳುವ ಅಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಅನುಶ್ರೀ ಅವರು ಮೊದಲು ನಿರೂಪಕಿಯಾಗಿ ಕೆಲಸ ಮಾಡಿದಾಗ ಅವರು ತೆಗೆದುಕೊಂಡಿದ್ದ ಸಂಭಾವನೆ 250 ರೂಪಾಯಿಗಳು ಮಾತ್ರ. ಆದರೆ ಇಲ್ಲಿಯತನಕ ಕಳೆದ ಒಂದು ದಶಕದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅನುಶ್ರೀ ಅವರು ಈಗ ಒಂದು ಕಾರ್ಯಕ್ರಮಕ್ಕಾಗಿ ತೆಗೆದುಕೊಳ್ಳುವ ಸಂಭಾವನೆ 12 ಲಕ್ಷ.
ಆದರೆ ಅವರು ಈ ಮಟ್ಟಕ್ಕೆ ಬೆಳೆಯುವ ತನಕ ಹಲವಾರು ಕಷ್ಟದ ಹಾದಿಯನ್ನು ತುಳಿದು ಬಂದಿದ್ದಾರೆ. ಹೆಚ್ಚಿನ ಅವಕಾಶಕ್ಕಾಗಿ ಬೆಂಗಳೂರಿಗೆ ಬಂದ ಅವರು ಅನೇಕ ಇವೆಂಟ್ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅದಾದಮೇಲೆ ಜೀ ಕನ್ನಡ ವಾಹಿನಿಯ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಕಿಯಾಗಿ ನಡೆಸಿಕೊಟ್ಟರು. ಇಂದಿಗೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವು ಕಾರ್ಯಕ್ರಮಗಳಿಗೆ ಇವರೇ ನಿರೂಪಕಿ. ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಬರುವ ಇವರನ್ನು ಟಿವಿಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಇವರ ಮಾತುಗಳನ್ನು ಕೇಳಿ ನಕ್ಕು ನಲಿಯಲು ವಾರಾಂತ್ಯಕ್ಕಾಗಿ ಕಿರುತೆರೆಯ ಪ್ರೇಕ್ಷಕರು ಕಾಯುತ್ತಿರುತ್ತಾರೆ. ಅನುಶ್ರೀ ಅವರು ಬಿಗ್ ಬಾಸ್ ಸೀಸನ್ 1 ಅಲ್ಲಿ ಕಂಟೆಸ್ಟೆಂಟ್ ಆಗಿ ಕೂಡ ಭಾಗಿಯಾಗಿದ್ದರು.
ಹಲವು ದಿನಗಳವರೆಗೆ ದೊಡ್ಮನೆ ಒಳಗೆ ಇದ್ದ ಇವರು ಆ ಮೂಲಕ ಕನ್ನಡಿಗರ ಮನಸಲ್ಲಿ ಜಾಗ ಪಡೆದುಕೊಂಡರು. ನಾಯಕ ನಟಿಯಾಗಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡ ಇವರಿಗೆ ಅದ್ಯಾಕೋ ಅಲ್ಲಿ ಸಕ್ಸಸ್ ಹಾಗೂ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಹಾಗಾಗಿ ನಿರೂಪಣೆಯನ್ನು ತಮ್ಮ ಐಡೆಂಟಿಟಿ ಮಾಡಿಕೊಂಡಿರುವ ಆಂಕರ್ ಅನುಶ್ರೀ ಅವರು ಈಗ ಕರ್ನಾಟಕದಾದ್ಯಂತ ಮಾತಿನಮಲ್ಲಿ ಎಂದು ಫೇಮಸ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವ ಅನುಶ್ರೀ ಅವರು ಅವರದೇ ಆದ ಒಂದು ಖಾಸಗಿ ಯೂಟ್ಯೂಬ್ ಚಾನಲ್ ಅನ್ನು ಕೂಡ ಓಪನ್ ಮಾಡಿದ್ದಾರೆ. ಈ ಯುಟ್ಯೂಬ್ ಚಾನೆಲ್ ಗೆ ಅವರ ನೆಚ್ಚಿನ ನಟನ ಲೋಗೋವನ್ನೇ ಹಾಕಿಕೊಂಡು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಇವರ ಯುಟ್ಯೂಬ್ ಚಾನಲ್ ಮೂಲಕ ಹಲವಾರು ಕಾರ್ಯಕ್ರಮಗಳು ಮೂಡಿಬರುತ್ತಿದೆ.
ಕಳೆದ ವಾರವಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ ಮತ್ತು ರಕ್ಷಿತ್ ಶೆಟ್ಟಿ ಅವರ ಅಭಿನಯ ಹಾಗೂ ನಿರ್ದೇಶನದ ಚಾರ್ಲಿ 777 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿರುವುದರಿಂದ ಇಬ್ಬರನ್ನು ಕೂಡ ಒಂದೇ ವೇದಿಕೆಯಲ್ಲಿ ಕರೆಸಿ ಅಪೂರ್ವ ಸಂಗಮ ಎನ್ನುವ ಹೆಸರಲ್ಲಿ ಕಾರ್ಯಕ್ರಮವನ್ನು ನಡೆಸಿದ್ದರು. ಈ ಕಾರ್ಯಕ್ರಮವು ಬಿಡುಗಡೆಯಾದ ಮೊದಲ ದಿನವೇ ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆದಿದ್ದು ಇನ್ನು ಮುಂದೆ ಇದೇ ರೀತಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೇವೆ ಎಂದು ಕನ್ನಡದ ಜನತೆ ಹೇಳಿಕೊಂಡಿದ್ದಾರೆ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಹಾಗೂ ಅನುಶ್ರೀ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.