ಈ ಬರಹದಲ್ಲಿ ಸರ್ಕಾರವು ಹೊತ್ತು ತಂದಿರುವ ಹೊಸ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳ ಆಸೆ ಕನಸುಗಳು ನನಸಾಗಬೇಕು. ಮಕ್ಕಳ ಅಭಿವೃದ್ಧಿಯು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿಯೇ ಸರ್ಕಾರವು ಪಿಪಿಎಫ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಎಂದು ಕರೆಯಲಾಗುತ್ತದೆ.
ಈಗಾಗಲೇ ಕರ್ನಾಟಕ ರಾಜ್ಯದ ಜನರು ಗೃಹಲಕ್ಷ್ಮಿ ಯೋಜನೆ ಹಾಗೂ ಉಚಿತ ಬಸ್ ಪ್ರಯಾಣ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಾಸಿಕ 2000 ರೂಪಾಯಿಗಳನ್ನು ಕುಟುಂಬದ ಯಜಮಾನಿಯು ಪಡೆಯುತ್ತಾಳೆ. ಅಂತೆಯೇ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವರ್ಗದ ಮಹಿಳೆಯರಿಗಾಗಿ ರಾಜ್ಯದ ನಾಲ್ಕು ಸಾರಿಗೆ ವ್ಯವಸ್ಥೆಯಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗಿದೆ.
ಈಗ ತಿಳಿಸುತ್ತಿರುವ ಯೋಜನೆಯಿಂದ ಮಕ್ಕಳ ಭವಿಷ್ಯಕ್ಕೆ ಸಹಾಯವಾಗಲಿದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಿಂದ ಲಾಭ ಪಡೆದುಕೊಳ್ಳಲು ಮೊದಲು ನೀವು ಈ ಕೆಲಸವನ್ನು ತಪ್ಪದೆ ಮಾಡಬೇಕು. ಅದೇನೆಂದರೆ ನಿಮ್ಮ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು. ಈ ಲೇಖನದಲ್ಲಿ ಪಿಪಿಎಫ್ ಯೋಜನೆಯ ಮೂಲಕ ಲಾಭವನ್ನು ಪಡೆಯುವುದು ಹೇಗೆ?
ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವು ಯಾವುದು? ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲಾತಿಗಳು ಯಾವುವು? ಈ ಎಲ್ಲಾ ವಿಷಯಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ತಪ್ಪದೇ ಓದಿ ಮತ್ತು ಅತಿ ಹೆಚ್ಚು ಜನರಿಗೆ ಶೇರ್ ಮಾಡಿ.
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಭಾರತದಾದ್ಯಂತ ಜನಪ್ರಿಯಗೊಂಡಿದೆ. ಉಳಿತಾಯದ ಬಗ್ಗೆ ಅರಿವಿರುವ ಮತ್ತು ಅತ್ಯಂತ ಸೂಕ್ಷ್ಮವಾದ ಹೆಜ್ಜೆ ಇಡುವವರು, ಈ ಯೋಜನೆಯ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದಾರೆ ಮತ್ತು ಖಾತೆಯನ್ನು ಮಕ್ಕಳ ಹೆಸರಿನಲ್ಲಿ ತೆರೆದಿದ್ದಾರೆ.
ಈ ಯೋಜನೆಯ ವ್ಯಾಪ್ತಿಯು ವ್ಯಾಪಕವಾಗಿ ವಿಸ್ತರಿಸಲು ಪ್ರಮುಖ ಕಾರಣಗಳೆಂದರೆ ಇದರ ಸುರಕ್ಷತೆ, ಉತ್ತಮ ಆದಾಯ ಮತ್ತು ತೆರಿಗೆ ವಿನಾಯತಿ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ಅತಿ ಹೆಚ್ಚು ಜನರು ಮುಂದಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ ಈ ಯೋಜನೆಯ ಆಕರ್ಷಕ ಬಡ್ಡಿದರ. ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆದರೆ ವಾರ್ಷಿಕ ಬಡ್ಡಿ ಶೇಕಡ 7.1 ರಷ್ಟು ದೊರೆಯಲಿದೆ.
ಹೊಸ ಯೋಜನೆಯು ಹೇಗೆ ಲಾಭದಾಯಕ??
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉದ್ಯೋಗಿಗಳ ಭವಿಷ್ಯ ನಿಧಿ ನಿಯಮಗಳ ಪ್ರಕಾರ ವ್ಯಕ್ತಿಯು ಒಂದು ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ.ಆದರೆ ಇಪಿಎಫ್ಒ ಒಂದು ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಇನ್ನು ಇಬ್ಬರು ಮಕ್ಕಳನ್ನು ಪಾಲಕರು ಹೊಂದಿದ್ದರೆ ತಂದೆಯು ಒಂದು ಮಗುವಿನ ಹೆಸರಿನಲ್ಲಿ ಮೈನರ್ ಪಿಪಿಎಫ್ ಖಾತೆಯನ್ನು ಮತ್ತು ತಾಯಿಯು ಒಂದು ಮಗುವಿನ ಹೆಸರಿನಲ್ಲಿ ಮೈನರ್ ಪಿಪಿಎಫ್ ಖಾತೆಯನ್ನು ತೆರೆಯಬಹುದು.
ಆದರೆ ಇಬ್ಬರೂ ಒಂದೇ ಮಗುವಿನ ಹೆಸರಿನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಈ ಯೋಜನೆಯ ಮೇಲೆ ಹೂಡಿಕೆ ಮಾಡುವವರು ವಾರ್ಷಿಕ ರೂಪಾಯಿ 500 ರಿಂದ 1.50 ಲಕ್ಷ ರೂಪಾಯಿಗಳವರೆಗೆ ಉಳಿತಾಯ ಖಾತೆಯಲ್ಲಿ ಇಡಬಹುದು. ಪಿಪಿಎಫ್ ನ ಮ್ಯಾಚುರಿಟಿ 15 ವರ್ಷದ ಅವಧಿಯನ್ನು ಹೊಂದಿದೆ. ಅಲ್ಲದೆ ಐದು ವರ್ಷಗಳ ಅವಧಿಗೆ ವಿಸ್ತರಿಸಬಹುದು. ಸೆಕ್ಷನ್ 80 ಸಿ ಅಡಿಯಲ್ಲಿ, ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆದವರಿಗೆ 1. 50 ಲಕ್ಷ ರೂಪಾಯಿಗಳು ಲಭ್ಯವಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಖಾತೆಯನ್ನು ತೆರೆಯಲು ಇಚ್ಚಿಸುವ ಬ್ಯಾಂಕ್ನಿಂದ ಅಥವಾ ಪೋಸ್ಟ್ ಆಫೀಸ್ ನಿಂದ ಪಿಪಿಎಫ್ ಖಾತೆಗಾಗಿ ನೀಡುವ ಅರ್ಜಿ ನಮೂನೆಯನ್ನು ಪಡೆದು ಬಳಿಕ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.
ಅಗತ್ಯ ದಾಖಲಾತಿಗಳು :
ಮಗುವಿನ ಪೋಷಕರ ಪಾಸ್ಪೋರ್ಟ್ ಸೈಜ್ ಛಾಯಾಚಿತ್ರಗಳು, KYC ದಾಖಲೆ ಮತ್ತು ಮಗುವಿನ ವಯಸ್ಸಿನ ಪ್ರಮಾಣ ಪತ್ರ..
ಹಲವಾರು ಬ್ಯಾಂಕ್ಗಳಿಂದ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ಮಕ್ಕಳ ಹೆಸರಿನಲ್ಲಿ ಆನ್ಲೈನ್ ನಲ್ಲಿಯೇ ಉಳಿತಾಯ ಖಾತೆ ತೆರೆಯಲು ಸೌಲಭ್ಯವನ್ನು ಒದಗಿಸಲಾಗಿದೆಯಂತೆ.