ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲಾ ಒಂದು ಸಮಸ್ಯೆ ಇರುತ್ತದೆ. ಕೆಲವೊಮ್ಮೆ ನಮ್ಮ ತಪ್ಪಿನಿಂದ ನಾವು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತೇವೆ ಇದಕ್ಕೆ ಬೇಗ ಪರಿಹಾರ ಸಿಗುತ್ತದೆ ಸಹ ಇದನ್ನು ಹೇಗಾದರೂ ಮಾಡಿ ಪರಿಹಾರ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ತಪ್ಪುಗಳು ಏನು ಇಲ್ಲದಿದ್ದರೂ ಕೂಡ ಸಮಸ್ಯೆಗಳು ಬಂದು ಬಾಧಿಸುತ್ತವೆ. ಕೆಲವು ಸಮಸ್ಯೆಗಳಿಗೆ ಎಷ್ಟೇ ಪರಿಹಾರ ಹುಡುಕಿದರೂ ಕೂಡ ಅದು ಸಾಲ್ವ್ ಆಗುವುದಿಲ್ಲ.
ಬದಲಾಗಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ ಈ ರೀತಿ ಪದೇ ಪದೇ ಸಮಸ್ಯೆಗಳು ನಮ್ಮನ್ನು ಕಾಡಿ ನಮ್ಮ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಎಂದರೆ ಅದು ಹಿತಶತ್ರುಗಳ ದೃಷ್ಟಿಯಿಂದ ಆಗಿರುತ್ತದೆ. ಜೀವನದಲ್ಲಿ ನಾವು ಒಳ್ಳೆಯ ಹಂತಕ್ಕೆ ಬೆಳೆದಾಗ ಕುಟುಂಬದ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ. ಇದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ, ಕುಟುಂಬದಲ್ಲಿ ಸಂಬಂಧಗಳು ಹಾಳಾಗಿ ಕಿರಿಕಿರಿ ಶುರು ಆಗುತ್ತದೆ.
ಗಂಡ ಹೆಂಡತಿ ನಡುವೆ ಜಗಳ ಆಗುತ್ತದೆ. ಮಕ್ಕಳಿಗೆ ಓದುವ ಆಸಕ್ತಿ ಹೋಗುತ್ತದೆ, ಸಾಲ ಭಾದೆ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ವಿಪರೀತ ಕಾಡುತ್ತವೆ. ಈ ರೀತಿ ದೃಷ್ಟಿ ದೋಷಗಳಿಂದ ಆದ ಸಮಸ್ಯೆಗಳಿಗೆ ಮನೆಯಲ್ಲಿ ನಾವು ಸರಳ ತಂತ್ರಗಳನ್ನು ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಸರಳ ಪರಿಹಾರಗಳನ್ನು ಮಾಡಿ ಸಮಸ್ಯೆಯಿಂದ ಆಚೆ ಬರಬಹುದು.
ಆದರೆ ನೂರಕ್ಕೆ ನೂರರಷ್ಟು ನಂಬಿಕೆಯಿಂದ ದೇವರ ಮೇಲೆ ಹೊಣೆ ಹಾಕಿ ನಮಗೆ ಬಂದ ಕಷ್ಟವನ್ನು ಎದುರಿಸುತ್ತೇವೆ ಇದನ್ನು ಪರಿಹಾರ ಮಾಡಿಕೊಳ್ಳುವ ಶಕ್ತಿ ಕೊಡು, ಮಾರ್ಗ ತಿಳಿಸಿ ಎಂದು ಪ್ರಾರ್ಥಿಸಿ ನಂತರ ಈ ತಂತ್ರವು ಫಲಿಸುವಂತೆ ಮಾಡಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿ ಇದನ್ನು ಮಾಡಬೇಕು. ಈ ರೀತಿ ನಿಮ್ಮ ಕುಟುಂಬದಲ್ಲೂ ಕೂಡ ಪದೇಪದೇ ಇಲ್ಲ ಸಲ್ಲದ ವಿಷಯಕ್ಕೆ ಸಮಸ್ಯೆ ಹಾಕಿ ನೆಮ್ಮದಿ ಹಾಳಾಗುತ್ತಿದ್ದರೆ ನಿಮ್ಮ ಕುಟುಂಬಕ್ಕಾಗಿರುವ ಕೆಟ್ಟ ದೃಷ್ಟಿಯನ್ನು ಕಳೆಯಲು ಈ ಒಂದು ತಂತ್ರವನ್ನು ಪಾಲಿಸಿ.
ಒಂದು ದಿನ ಮನೆಯನ್ನು ಶುದ್ಧ ಮಾಡಿ ನೀವು ಮಡಿ ಉಟ್ಟುಕೊಂಡು ದೇವರ ಪೂಜೆ ಮಾಡಿ ನಂತರ ಒಂದು ಕೆಂಪುವಸ್ತ್ರವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಲೋಟ ಉಪ್ಪನ್ನು ಹಾಕಿ ನಂತರ ಐದು ನಾಣ್ಯಗಳನ್ನು ಹಾಕಿ ಜೊತೆಗೆ ಮೂರು ರೀತಿಯ ಹೂವನ್ನು ಇಟ್ಟು ಅರಿಶಿನ ಕುಂಕುಮ ಕೂಡ ಹಾಕಿ ಒಂದು ತುಳಸಿ ಎಲೆಯನ್ನು ಕೂಡ ಹಾಕಿ.
ನಂತರ ಇದನ್ನು ಗಂಟು ಕಟ್ಟಿ ದೇವರಕೋಣೆಯಲ್ಲಿ ಇಟ್ಟು ಭಕ್ತಿಯಿಂದ ಪ್ರತಿದಿನವೂ ಕೂಡ ಮೂರು ವಾರಗಳವರೆಗೆ ಹೂವ ನೀರು ಇಟ್ಟು ಪೂಜೆ ಮಾಡಿ. ಮೂರು ವಾರಗಳವರೆಗೆ ದೇವರ ಕೋಣೆಯಲ್ಲಿ ಅಥವಾ ನೀವು ನಿಮ್ಮ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟು ಪ್ರತಿನಿತ್ಯವೂ ಕೂಡ ತಪ್ಪಿದೇ ಹೂವ ನೀರು ಇಟ್ಟು ಪೂಜೆ ಮಾಡಿ.
ಮೂರುವಾರ ಆದ ಬಳಿಕ ಇದನ್ನು ತೆಗೆದು ಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಟ್ಟು ಬನ್ನಿ. ಇಷ್ಟು ಮಾಡಿದರೆ ನಿಮ್ಮ ಮನೆಗಾಗಿರುವ ಕೆಟ್ಟ ದೃಷ್ಟಿ ಪರಿಹಾರವಾಗಲು ಆರಂಭಿಸುತ್ತದೆ. ಹೆಚ್ಚಿನ ಜನರು ಹಣಕಾಸಿನ ಸಮಸ್ಯೆ ಇದ್ದಾಗ ಅದರ ಪರಿಹಾರಕ್ಕಾಗಿ ಈ ತಂತ್ರವನ್ನು ಮಾಡುತ್ತಾರೆ. ಮನೆಯ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ನಿವಾರಣೆ ಆದರೆ ಕುಟುಂಬದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654