ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರನ್ನು ಕಳೆದುಕೊಂಡು ಬಹಳ ದುಃ’ಖದಿಂದ ಇದ್ದಾರೆ. ಇಡೀ ಕರ್ನಾಟಕವೇ ಮನೆಮಗ ಎಂದು ಒಪ್ಪಿಕೊಂಡಿರುವ ಅಪ್ಪುವನ್ನು ಕಳೆದುಕೊಂಡಿರುವ ದುಃಖ ಅಭಿಮಾನಿಗಳಿಗೆ ಆರು ತಿಂಗಳಾದರೂ ಕೂಡ ಕೊಂಚವೂ ಕಡಿಮೆಯಾಗಿಲ್ಲ. ಹೀಗಿರುವಾಗ ಪುನೀತ್ ರಾಜಕುಮಾರ್ ಅವರ ಅಣ್ಣನಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಈ ನೋ’ವಿ’ನಿಂದ ಕುಸಿದೇ ಹೋಗಿದ್ದಾರೆ ಎನ್ನಬಹುದು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಡಿಸೆಂಬರ್ 1, 2000ರಂದು ಪ್ರೀತಿಸಿ ಮದುವೆಯಾಗಿದ್ದರು. ಎರಡು ಕುಟುಂಬದ ಒಪ್ಪಿಗೆ ಮೇರೆಗೆ ತುಂಬಾ ಅದ್ದೂರಿಯಾಗಿ ಆ ದಿನ ಈ ಮದುವೆ ನಡೆದಿತ್ತು. ನಂತರ ಈ ಜೋಡಿಗೆ ಧೃತಿ ಮತ್ತು ವಂದನಾ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದರು.
ಕುಟುಂಬ ಜೀವನದಲ್ಲೂ ಸಹ ಎಂದು ಕೂಡ ಒಂದು ಸಣ್ಣ ಗಾಸಿಪ್ ಕೂಡ ಸೃಷ್ಟಿ ಮಾಡಿಕೊಳ್ಳದೆ ಪ್ರೀತಿಯ ಅಪ್ಪನಾಗಿ ಉತ್ತಮ ಬಾಳ ಸಂಗಾತಿಯಾಗಿ ಜೀವನ ಪೂರ್ತಿ ಜೊತೆ ಇರುತ್ತೇನೆ ಎಂದಿದ್ದ ಅಪ್ಪು ದಿಢೀರ್ ಎಂದು ಕಳೆದ ವರ್ಷ ಅಕ್ಟೋಬರ್ 29 ನೇ ತಾರೀಖಿನಂದು ಹೃ’ದ’ಯಾ’ಘಾ’ತಕ್ಕೆ ಒಳಗಾದರು. ಆಸ್ಪತ್ರೆಗೆ ಸೇರಿಸುವ ಮುನ್ನವೇ ಪ್ರೀತಿಯ ಪತ್ನಿ ಅಶ್ವಿನಿ ಅವರ ಮಡಿಲಲ್ಲೇ ಕೊನೆಯುಸಿರೆಳೆದಿದ್ದರು. ಅಂದಿನ ದಿನದ ಆ ದು’ರ್ಘ’ಟ’ನೆಯನ್ನು ನೆನೆಯಲು ಯಾರಿಗೂ ಇಷ್ಟ ಇಲ್ಲ. ಒಂದು ಬಾರಿ ಆದರೂ ದೇವರು ಪುನೀತ್ ಅವರಿಗೆ ಕೊನೆಯ ಅವಕಾಶ ಕೊಡಬೇಕಿತ್ತು ಎಂದು ಮರುಗದವರಿಲ್ಲ. ಇಂದಿಗೂ ಸಹ ಪುನೀತ್ ಅವರು ಈಗ ಇಲ್ಲ ಎಂದರೆ ಯಾರಿಗೂ ಸಹ ನಂಬಲು ಅಸಾಧ್ಯ. ಅಷ್ಟೊಂದು ಆರೋಗ್ಯಕರ ಜೀವನಶೈಲಿ, ಸದೃಢ ದೇಹವನ್ನು ಹೊಂದಿದ್ದ ಪುನೀತ್ ಅವರ ಅಕಾಲಿಕ ಮರಣ ಅವರ ಕುಟುಂಬಕ್ಕೆ ದಿಕ್ಕು ತೋಚದಂತೆ ಮಾಡಿತ್ತು.
ಮೊದಲಿನಿಂದಲೂ ಕ್ಯಾಮೆರಾ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಅಶ್ವಿನಿ ಅವರು ಎಂದು ಸಹ ಕ್ಯಾಮರಾ ಮುಂದೆ ಬಂದು ಮಾತನಾಡಿದವರೆಲ್ಲ. ಅಂದು ಕೂಡ ಪುನೀತ್ ಅವರ ಪಾರ್ಥಿವ ಶರೀರದ ಎದುರು ಮೌನವಾಗಿ ತಲೆ ತಗ್ಗಿಸಿ ಕೂತಿದ್ದ ಅಶ್ವಿನಿ ಅವರ ಮುಖವನ್ನು ಕಂಡರೆ ಕರುಳು ಕತ್ತರಿಸುವಂತಿತ್ತು. ಅವರ ಕಣ್ಣುಗಳಿಂದ ಉಕ್ಕಿಬರುತ್ತಿದ್ದ ಕಣ್ಣೀರು, ಹಾಗೂ ಅವರ ಅಸಾಧಾರಣ ದುಃ’ಖ ಮರೆಮಾಚಲು ತಲೆತಗ್ಗಿಸಿ ಮಾಸ್ಕ್ ಹಾಕಿ ಕುಳಿತಿದ್ದ ಅವರನ್ನು ಸಮಾಧಾನಗೊಳಿಸುವ ಧೈರ್ಯ ಯಾರಿಗೂ ಇರಲಿಲ್ಲ. ಅಮ್ಮನ ಪಕ್ಕದಲ್ಲೇ ಒರಗಿ ಕುಳಿತಿದ್ದ ಮಗಳು ಸುತ್ತಮುತ್ತ ಏನಾಗುತ್ತಿದೆ ಎನ್ನುವ ಕನ್ಫ್ಯೂಷನ್ ಅಲ್ಲೇ ಇದ್ದಳು. ಪ್ರತಿರಾತ್ರಿ ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ ಅಪ್ಪ ಇಂದು ಯಾಕೆ ಇಷ್ಟೊತ್ತಾದರೂ ಏಳುತ್ತಿಲ್ಲ ಎನ್ನುವ ಗೊಂದಲ ಮಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಮತ್ತೊಬ್ಬ ಮಗಳು ವಿದೇಶದಲ್ಲಿ ಇದ್ದ ಕಾರಣ ಅಪ್ಪನ ಸಾ’ವಿ’ನ ಸುದ್ದಿ ಕೇಳಿ ಒಬ್ಬಳೇ ಅಲ್ಲಿ ಅನುಭವಿಸಿದ ಸಂ’ಕ’ಟ ಎಷ್ಟಿತ್ತೋ ಏನೋ? ನಿಜಕ್ಕೂ ಅಂದು ಎಲ್ಲರೂ ದೇವರಲ್ಲಿ ಈ ರೀತಿ ಸಂ’ಕ’ಟ ಮಾತ್ರ ಮತ್ತೊಮ್ಮೆ ಯಾರಿಗೂ ಕೊಡಬೇಡ ಎಂದು ಕೇಳಿಕೊಂಡಿದ್ದರು. ಇಂದಿಗೂ ಸಹ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಸ’ಮಾ’ಧಿ ಬಳಿ ಹೋಗಿ ಪೂಜೆ ಮಾಡಿ ಬರುತ್ತಿದ್ದಾರೆ ಹಾಗೂ ಪದ್ಧತಿಯ ಪ್ರಕಾರ ಇದುವರೆಗೆ ಎಲ್ಲಾ ಪೂಜೆ-ಪುನಸ್ಕಾರಗಳನ್ನು ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿದ್ದಾರೆ. ಹಾಗೂ ನಿಧಾನವಾಗಿ ಸುಧಾರಿಸಿಕೊಳ್ಳುತ್ತಾ ಪುನೀತ್ ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಅವರು ಕಂಡಿದ್ದ ಕನಸುಗಳಿಗೆ ನೆರವಾಗಲು ಸಿದ್ಧರಾಗಿದ್ದಾರೆ. ಪುನೀತ್ ಅವರಿಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮವಿದ್ದರೂ ಭಾಗವಹಿಸುವ ಅಶ್ವಿನಿ ಅವರು ಎಲ್ಲೂ ಕೂಡ ಮನಸ್ಸು ಬಿಚ್ಚಿ ದುಃ’ಖ’ವನ್ನು ಕ್ಯಾಮರಾ ಮುಂದೆ ತೋಡಿಕೊಂಡಿಲ್ಲ ಬಹುಶಃ ಇದಕ್ಕೆ ದೊಡ್ಡಮನೆಯ ಸೊಸೆಯ ದೊಡ್ಡಗುಣ ಎನ್ನುವುದು.
ಅಪ್ಪು ಅವರಂತೆಯೇ ಅಶ್ವಿನಿ ಮತ್ತು ಅವರ ಮಕ್ಕಳ ನಡೆಗಳು ಕೂಡ ತುಂಬಾ ಪ್ರಬುದ್ಧವಾಗಿದೆ. ಪುನೀತ್ ಅವರು ಇನ್ನಿಲ್ಲ ಎನ್ನುವ ನೋವನ್ನು ತಡೆದುಕೊಳ್ಳಲಾಗದೆ ಇದ್ದರು ವಾಸ್ತವವನ್ನು ಒಪ್ಪಿಕೊಂಡು ಮುಂದಿನದನ್ನು ನೋಡುವ ಮನಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಫೋಟೋಗಳು ವೈರಲ್ ಆಗಿವೆ. ಇಷ್ಟು ಬೇಗ ಅಶ್ವಿನಿ ಅವರು ನೋ’ವಿ’ನಿಂ’ದ ಸುಧಾರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆಯೇ ಎಂದರೆ ಇಲ್ಲ ಅದು ಅವರ ಹಳೆಯ ಫೋಟೋಗಳು. ಈ ಫೋಟೋಗಳನ್ನು ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪೂರ್ತಿ ಅವರು ಪುನೀತ್ ಅವರ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಭಾವನಾತ್ಮಕ ನುಡಿಗಳನ್ನು ಬರೆದು ನಂತರ ಅಶ್ವಿನಿ ಅವರ ಜೊತೆ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪೂರ್ತಿ ಇದ್ದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋಗಳು ಶಿವಣ್ಣನ ಮಗಳ ಮದುವೆಯ ಫೋಟೋಗಳು ಹಾಗೂ ರಾಜ್ ಕುಟುಂಬದ ಸಂಭ್ರಮದ ದಿನದ ಹಳೆಯ ಫೋಟೋಗಳು ಆಗಿದ್ದವು.
ಈ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ವಿಜಯ ರಾಘವೇಂದ್ರ ಅವರು ಪುನೀತ್ ಅವರ ಬಗ್ಗೆ ಮಾಮ ನೀವು ನನಗೆ ಸೈಕಲ್ ಓಡಿಸುವುದನ್ನು ಹೇಳಿಕೊಟ್ಟಿದ್ದಿರಿ, ಡ್ಯಾನ್ಸಿಂಗ್ ನಲ್ಲಿ ಮೂನ್ವಾಕ್ ಮಾಡುವುದನ್ನು ಹೇಳಿಕೊಟ್ಟಿದ್ದಿರಿ ಹೀಗೆ ನನಗೆ ಯಾವಾಗಲೂ ಒಂದು ಸಪೋರ್ಟಿವ್ ಸಿಸ್ಟಮ್ ಆಗಿ ನೀವಿದ್ದೀರಿ. ಆದರೆ ನೀವು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಎಂದೂ ಬಾಡದ ಬೆಟ್ಟದ ಹೂವು ನೀವು. ನಿಮ್ಮ ಮುಗ್ಧ ನಗುವಿನ ಜೊತೆ ಸದಾ ಒಂದು ಶಕ್ತಿಯಾಗಿ ನೀವು ನಮ್ಮ ಜೊತೆ ಇರುತ್ತೀರಿ ಎಂದು ನಂಬುತ್ತೇನೆ. ಅಪ್ಪು ಎನ್ನುವ ಹೆಸರಿಗೆ ಹೊಸ ಅರ್ಥ ತಂದುಕೊಟ್ಟಿರಿ ನೀವು ಅಪ್ಪು ಎಂದರೆ ನಗು, ಅಪ್ಪು ಎಂದರೆ ಕುಟುಂಬ, ಅಪ್ಪು ಎಂದರೆ ಅಭಿಮಾನ, ಅಪ್ಪು ಎಂದರೆ ವಿಶ್ವಾಸ, ಅಪ್ಪು ಎಂದರೆ ವಿನಯ ಈ ರೀತಿ ನಿಮ್ಮ ಬಗ್ಗೆ ಎಷ್ಟೇ ಹೇಳಿದರೂ ಕೂಡ ಕಡಿಮೆಯೇ ಎಂದು ಇನ್ನೂ ಮುಂತಾಗಿ ಬರೆದುಕೊಂಡಿದ್ದಾರೆ. ನೋಡಿದ್ರಲ್ಲ ಅಪ್ಪು ಅವರ ಮೇಲೆ ಕುಟುಂಬದವರು ಎಷ್ಟು ಅಭಿಮಾನವನ್ನು ಹೊಂದಿದ್ದಾರೆ ಅಂತ ಈ ಪ್ರೀತಿಯನ್ನು ನೀವು ಮೆಚ್ಚುವುದಾದರೆ ಈ ಲೇಖನಕ್ಕೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.