ಶಿವನ ಕೃಪೆ ಇಂದು ಈ 4 ರಾಶಿಯವರಿಗೆ ಇರಲಿದೆ, ಅಂದುಕೊಂಡ ಕೆಲಸದಲ್ಲಿ ಜಯ, ಅನಿರೀಕ್ಷಿತ ಧನಲಾಭ.!

 

ಮೇಷ ರಾಶಿ:- ಸದಾ ಚುರುಕಿನ ಸ್ವಭಾವದಿಂದ ಕೂಡಿರುವ ನೀವು ಇಂದು ನೀವು ಹಾಕಿಕೊಂಡ ಪ್ಲಾನ್ ಪ್ರಕಾರ ಕೆಲಸ ನಡೆಯದಿದ್ದರೆ ಚಿಂತಾಕ್ರಾಂತರಾಗುವಿರಿ. ಆತ್ಮ ವಿಶ್ವಾಸದಿಂದ ನಿಮ್ಮ ಕೆಲಸಗಳನ್ನು ಮುಂದುವರಿಸಿ ಎಲ್ಲಾ ಕೆಲಸದಲ್ಲೂ ಕೂಡ ನಿಮಗೆ ಯಶಸ್ಸು ಸಿಗಲಿದೆ. ಯಾರೊಂದಿಗೂ ವಿವಾದ ಬೇಡ.
ಶುಭ ಸಂಖ್ಯೆ – 05

ವೃಷಭ ರಾಶಿ:- ನೀವು ಕೂಡಿಟ್ಟ ಕಾಸೆಲ್ಲಾ ಇಂದು ಖರ್ಚಾಗುತ್ತದೆ. ಯಾವುದರ ಮೇಲೂ ದುರಾಸೆ ಪಡದೆ ಬಂದದ್ದನ್ನು ಸಂತಸದಿಂದ ಸ್ವೀಕರಿಸಿ. ನಿಮ್ಮನ್ನು ಬಳಸಿಕೊಳ್ಳುವ ಜನರ ಬಗ್ಗೆ ಎಚ್ಚರಿಕೆಯಿಂದಿರಿ. ಆಡುವ ಮಾತುಗಳ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವಿರಿ.
ಶುಭ ಸಂಖ್ಯೆ – 09

ಮಿಥುನ ರಾಶಿ:- ಮನೆಯನ್ನು ಕೊಳ್ಳುವ ಅವಕಾಶ ಸಿಗಲಿದೆ ಆದರೆ ಮನೆ ಅಥವಾ ಭೂಮಿಯನ್ನು ಕೊಳ್ಳುವ ನಿರ್ಧಾರಕ್ಕೆ ಸದ್ಯಕ್ಕೆ ಕೈ ಹಾಕಬೇಡಿ. ವಿದ್ಯಾರ್ಥಿಗಳು ಓದಿನಲ್ಲಿ ಮುಂದೆ ಇರುತ್ತಾರೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಶತ್ರುಗಳ ಕಾಟ ಹೆಚ್ಚಾಗಿರುತ್ತದೆ.
ಶುಭ ಸಂಖ್ಯೆ – 07

ಕಟಕ ರಾಶಿ:- ಆಭರಣ ತಯಾರಿಕೆ ವೃತ್ತಿ ಮಾಡುವವರಿಗೆ ಲಾಭದ ದಿನವಾಗಿದೆ. ಆತ್ಮವಿಶ್ವಾಸ ಕಡಿಮೆ ಆಗುವ ಸನ್ನಿವೇಶಗಳು ಬಂದರೂ ಕೂಡ ಆತ್ಮೀಯರ ಭರವಸೆಯ ಸಾಂತ್ವನ ಸಿಗುತ್ತದೆ. ದೈಹಿಕ ಆರೋಗ್ಯದ ಸಮಸ್ಯೆ ಇರುವುದಿಲ್ಲ. ಇದೇ ರೀತಿ ಮುಂದುವರೆದರೆ ಕೀರ್ತಿ ಪ್ರತಿಷ್ಠೆ ಲಭಿಸುತ್ತದೆ.
ಶುಭ ಸಂಖ್ಯೆ – 02

ಸಿಂಹ ರಾಶಿ:- ಆರ್ಥಿಕ ವಿಷಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಹಣದ ಕೊರತೆ ಕಡಿಮೆಯಾಗುತ್ತದೆ. ಮಾನಸಿಕ ಸದೃಢತೆ ಇರುತ್ತದೆ. ನಿಮ್ಮಲ್ಲಿ ನಾಯಕತ್ವದ ಗುಣ ವಿಶೇಷವಾಗಿರುತ್ತದೆ. ಸ್ವಂತ ಗೃಹ ಮತ್ತು ವಾಹನ ಖರೀದಿಸುವ ಭಾಗ್ಯವಿರುವ ದಿನವಾಗಿದೆ. ದಿನ ಪೂರ್ತಿ ಸಂತೋಷವಾಗಿರುತ್ತೀರಿ.
ಶುಭ ಸಂಖ್ಯೆ – 01

ಕನ್ಯಾ ರಾಶಿ:- ಕಂಕಣ ಭಾಗ್ಯ ಕೂಡಿ ಬರುವ ದಿನವಾಗಿದೆ. ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಈ ದಿನ ಉದ್ಯೋಗವನ್ನು ಬದಲಾಯಿಸುವ ಮನಸು ಮಾಡುತ್ತೀರಿ. ಈ ದಿನದ ಆದಾಯ ವ್ಯಯ ಸರಿ ಸಮಾನವಾಗಿರುತ್ತದೆ. ಅಧಿಕಾರವರ್ಗಕ್ಕೆ ವಿಶೇಷ ಸವಲತ್ತು ದೊರೆಯುತ್ತದೆ.
ಶುಭ ಸಂಖ್ಯೆ – 3

ತುಲಾ ರಾಶಿ:- ಸಾರ್ವಜನಿಕ ವೃತ್ತಿಪರರು ನಷ್ಟ ಅನುಭವಿಸುವ ದಿನವಾಗಿರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ ಇಲ್ಲವಾದಲ್ಲಿ ನಿಮ್ಮ ಹೆಸರು ಹಾಳಾಗುತ್ತದೆ. ಆತುರ ಪಡದೆ ಶಾಂತಿ ಸಂಯಮದಿಂದಿದ್ದರೆ ಯಶಸ್ಸು ಲಭಿಸುತ್ತದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ.
ಶುಭ ಸಂಖ್ಯೆ- 07

ವೃಶ್ಚಿಕ ರಾಶಿ:- ಬೇರೆಯವರ ಸಾಲದ ವಿಚಾರದಲ್ಲಿ ಮಧ್ಯವರ್ತಿ ಆಗದಿರಿ. ಈ ದಿನ ಸಾಲ ಪಡೆದುಕೊಳ್ಳುವ ಅಥವಾ ಸಾಲ ನೀಡುವ ನಿರ್ಧಾರ ಮಾಡಬೇಡಿ. ಸಂಗಾತಿಯ ಜೊತೆಗೆ ವಾದ ವಿವಾದಗಳು ಇರುತ್ತವೆ. ಬೇಡದ ವಿಚಾರಗಳಿಗೆ ತಲೆ ಹಾಕಬೇಡಿ. ಊಹಿಸಿರದ ಜವಾಬ್ದಾರಿಗಳು ನಿಮ್ಮ ಪಾಲಿಗೆ ಬರಲಿವೆ.
ಶುಭ ಸಂಖ್ಯೆ – 04

ಧನಸ್ಸು ರಾಶಿ:- ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಎದುರಿಸುವಿರಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಒಳ್ಳೆಯದು. ಸದಾ ಚುರುಕುತನದಿಂದ ಇರುತ್ತೀರಿ. ಇಂದು ರುಚಿಕರ ಊಟ ಹಾಗೂ ಒಳ್ಳೆಯ ನಿದ್ದೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೀರಿ.
ಶುಭ ಸಂಖ್ಯೆ – 3

ಮಕರ ರಾಶಿ:- ಆತ್ಮಸ್ಥೈರ್ಯ, ಆತ್ಮವಿಶ್ವಾಸದ ಕೊರತೆ ಇದ್ದರೂ ಕೂಡ ಮಾನಸಿಕ ಸದೃಢತೆ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಸ್ಥಾನಕ್ಕೆ ಚ್ಯುತಿ ಬರದಂತೆ ವರ್ತಿಸಿ. ಕ್ರಮೇಣವಾಗಿ ಜೀವನದಲ್ಲಿ ನೀವು ಒಳ್ಳೆಯ ಸ್ಥಾನವನ್ನು ತಲುಪುತ್ತೀರಿ.
ಶುಭ ಸಂಖ್ಯೆ – 9

ಕುಂಭ ರಾಶಿ:- ನಿಮ್ಮ ಪ್ಲಾನ್ ಪ್ರಕಾರ ಇಂದಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆಗಳಿವೆ. ಅದೃಷ್ಟದ ಬಲವಿದೆ. ಆದಾಯವನ್ನು ಹೆಚ್ಚಿಸಿಕೊಳ್ಳಿ. ದುಡುಕುತನದಲ್ಲಿ ಮಾತನಾಡಿ ತೊಂದರೆ ಮಾಡಿಕೊಳ್ಳಬೇಡಿ. ಕುಟುಂಬ ಸೌಖ್ಯವಿರುತ್ತದೆ.
ಶುಭ ಸಂಖ್ಯೆ – 09

ಮೀನ ರಾಶಿ:- ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿಯುತ್ತಾರೆ. ದಂಪತಿಗಳಿಗೆ ಸಂತಾನ ಲಾಭವಿದೆ. ನಿಮ್ಮ ಮಕ್ಕಳ ಹೆಸರಿನಲ್ಲಿ ವ್ಯಾಪಾರವನ್ನು ಆರಂಭಿಸಿದರೆ ಲಾಭ ಬರುತ್ತದೆ. ಇಂದು ನಿಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ.
ಶುಭ ಸಂಖ್ಯೆ – 07

Leave a Comment