ಎಳನೀರು ಹಳ್ಳಿಗಾಡಿನವರ ತಂಪು ಪಾನೀಯ. ಕೃಷಿ ಪ್ರಧಾನವಾದ ದೇಶದ ರೈತನ ಒಂದು ಆದಾಯದ ಮೂಲ ಎಳನೀರು. ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ ಹಾಗೂ ಪೂಜಿಸುತ್ತೇವೆ. ಕಾರಣ ಇಷ್ಟೇ ತೆಂಗಿನ ಮರದಲ್ಲಿರುವ ಪ್ರತಿಯೊಂದು ಭಾಗವು ಕೂಡ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಹಾಗೆ ತೆಂಗಿನ ಮರದ ಉತ್ಪನ್ನಗಳಾದ ತೆಂಗಿನಕಾಯಿ, ತೆಂಗಿನ ಎಣ್ಣೆ, ಎಳನೀರು ಇತ್ಯಾದಿಗಳು ಕೂಡ ಮನುಷ್ಯನ ದೇಹದ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು.
ಎಳನೀರು ಕುಡಿಯುವುದು ಒಂದು ಒಳ್ಳೆಯ ಅಭ್ಯಾಸ. ಸಾಮಾನ್ಯವಾಗಿ ಬೇಸಿಗೆಗಳಲ್ಲಿ ಎಲ್ಲರೂ ಎಳನೀರು ಬಯಸುತ್ತಾರೆ ಆದರೆ ಫ್ಯಾಶನ್ ಲೋಕಕ್ಕೆ ಮಾರುಹೋಗಿರುವ ಜನತೆ ಸ್ಟೈಲ್ ಆಗಿ ಫ್ಯಾಕ್ಟರಿಗಳಲ್ಲಿ ತಯಾರಾಗಿರುವ ಕೂಲ್ ಡ್ರಿಂಕ್ ಗಳನ್ನು ಕುಡಿಯುತ್ತಾರೆ. ಅದರ ಬದಲು ಆ ಜಾಗಕ್ಕೆ ಒಮ್ಮೆ ಎಳನೀರು ಬದಲಾಯಿಸಿ ನೋಡಿ ನಂತರ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ಗಮನಿಸಿ.
ಎಳನೀರಿನಲ್ಲಿ ವಿಟಮಿನ್ ಗಳು, ಮಿನರಲ್ಸ್ ಗಳು ಮತ್ತು ಮೆಗ್ನೀಷಿಯಂನಂತಹ ಅಂಶಗಳು ತುಂಬಿದೆ. ದೇಹದ ಎಲ್ಲಾ ಭಾಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ. ಆದರೆ ಪಟ್ಟಣದವರು ಕುಡಿಯುವ ತಂಪು ಪಾನಿಯಗಳಿಂದ ಹಣವು ಹಾಳು, ಆರೋಗ್ಯಕ್ಕೂ ಕೇಡು. ಎಳನೀರಿಂದ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ. ಎಳನೀರು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ರಕ್ತ ಹೆಪ್ಪುಗಟ್ಟುವುದನ್ನು ಇದು ತಡೆಯುತ್ತದೆ, ಇದರಿಂದ ಬ್ಲಡ್ ಪ್ರೆಶರ್ ಕೂಡ ಕಡಿಮೆ ಆಗುತ್ತದೆ.
ನಿಯಮಿತವಾಗಿ ಎಳನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಅಂತಹ ಸಮಸ್ಯೆಗಳು ಬರುವುದು ಕಡಿಮೆ. ಮೂತ್ರಕೋಶದ ಸೋಂಕು ಅಥವಾ ಮೂತ್ರ ವಿಸರ್ಜನೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಇದ್ದರೂ ಕೂಡ ಎಳನೀರು ಕುಡಿಯುವುದರಿಂದ ಅದು ಬಹುಬೇಗ ಕಂಟ್ರೋಲಿಗೆ ಬರುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೊಸ ಚೈತನ್ಯ ತುಂಬುತ್ತದೆ.
ಯಾವುದೇ ಅನಾರೋಗ್ಯಕ್ಕೆ ಪೀಡಿತರಾದವರಿಗೂ ಕೂಡ ಎಳನೀರು ಕೊಟ್ಟ ಸುಧರಿಸಿಕೊಳ್ಳಲು ಹೇಳುತ್ತಾರೆ. ಎಳನೀರಿಗೆ ಗ್ಲೂಕೋಸ್ ಹಾಕಿ ಕುಡಿಯುವುದರಿಂದ ಕೂಡ ದೇಹಕ್ಕೆ ಎನರ್ಜಿ ಬರುತ್ತದೆ. ರುಚಿ ಕೂಡ ಸಿಹಿಯಾಗಿದ್ದು, ಕುಡಿದ ನಂತರ ಒಂದು ರೀತಿಯ ತೃಪ್ತಿಯ ಅನುಭವ ನೀಡುತ್ತದೆ. ಹೊಟ್ಟೆಯಲ್ಲಿರುವ ಟಾಕ್ಸಿನ್ ಅಂಶಗಳನ್ನೆಲ್ಲಾ ಹೊರ ಹಾಕುತ್ತದೆ. ಹೀಗಾಗಿ ಹೊಟ್ಟೆ ನೋವು ಬಂದಾಗ ಕೂಡ ಎಳನೀರು ಕುಡಿಯುತ್ತಾರೆ ಮತ್ತು ದೇಹವು ದೇಹ ಡಿ ಹೈಡ್ರೇಶನ್ ಗೆ ಒಳಗಾದಾಗ ಎಳನೀರು ಕುಡಿವಂತೆ ವೈದ್ಯರೇ ಸಲಹೆ ನೀಡುತ್ತಾರೆ.
ಆದರೆ ಕೆಲವರಿಗೆ ಶುಗರ್ ಇರುವವರು ಎಳನೀರಿನ್ನು ಸೇವಿಸಬಹುದಾ ಎನ್ನುವ ಅನುಮಾನ ಇದೆ. ಎಳನೀರು ಶುಗರ್ ಇರುವವರಿಗೆ ಒಂದು ಇನ್ಸುಲಿನ್ ರೀತಿ ಕೆಲಸ ಮಾಡುತ್ತದೆ. ದೇಹವನ್ನು ಗ್ಲುಕೋಸ್ ಇಂದ ಗ್ಲೈಕೋಸ್ ಮಾಡಲು ಇನ್ಸುಲೇನ್ ಮುಖ್ಯವಾಗಿರುವುದರಿಂದ ಎಷ್ಟು ಹೇರಳವಾಗಿ ಎಳನೀರು ಸೇರಿಸಿದರು ಕೂಡ ಶುಗರ್ ಇರುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬದಲಾಗಿ ಅವರ ದೇಹದ ಇನ್ಸುಲಿನ್ ಪ್ರಮಾಣ ಹೆಚ್ಚಾಗಿ ಅವರಿಗೆ ಅನುಕೂಲವೇ ಆಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸುವುದು ಇನ್ನೂ ಉತ್ತಮ. ಹಾಗೆ ಧಣಿವಾದಾಗ ಮತ್ತು ಬಿಸಿಲಿನ ತಾಪ ಹೆಚ್ಚಾದಾಗ ಕೂಡ ಎಳನೀರಿನ ಸೇವನೆ ಅವಶ್ಯಕ. ಇದು ದೇಹದ ನೀರಿನ ಅಂಶವನ್ನು ಹೆಚ್ಚಿಸಿ ಚರ್ಮ ಹೊಳೆಯುವಂತೆ ಮಾಡಿ ಚರ್ಮದ ಆರೋಗ್ಯವನ್ನು ಶುಷ್ಕವಾಗಿಡುತ್ತದೆ. ಜೊತೆಗೆ ಇದನ್ನು ಹೆಚ್ಚು ಸೇವನೆ ಮಾಡುವುದರಿಂದ ಭಾರತದ ಆರ್ಥಿಕತೆಯ ಬೆನ್ನೆಲುಬು ಆಗಿರುವ ರೈತನಿಗೂ ಅನುಕೂಲ ಆಗುತ್ತದೆ. ದೇಶದ ಆರ್ಥಿಕತೆಗೂ ಕೂಡ ಸಹಾಯ ಆಗುತ್ತದೆ.