ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?

 

ಈಗ ಕಾನೂನಿನಲ್ಲಿ ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ತಿದ್ದುಪಡಿ ಪ್ರಕಾರ ತಂದೆಯ ಆಸ್ತಿಯಲ್ಲಿ ಹೆಣ್ಣು ಹೆಣ್ಣು ಮಕ್ಕಳಿಗೂ ಕೂಡ ಸಮಾನ ಪಾಲು ಕೊಡಬೇಕು ಎನ್ನುವುದು ತೀರ್ಮಾನವಾಗಿದೆ. ಹೀಗಿದ್ದರೂ ಕೂಡ ಕೆಲವೊಂದು ಸನ್ನಿವೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಅವರ ತಂದೆ ಆಸ್ತಿ ಸಿಗುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳು ಈಗ ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಕೇಸ್ ಹಾಕಿಕೊಂಡು ಅಣ್ಣ-ತಮ್ಮಂದಿರ ಜೊತೆ ತಂದೆಯ ಆಸ್ತಿ ವಿಚಾರಕ್ಕೆ ಕಲಹ ಮಾಡಿಕೊಂಡಿದ್ದಾರೆ.

ಆದರೆ ಇದಕ್ಕೂ ಮುನ್ನ ಹೆಣ್ಣು ಮಕ್ಕಳು ಯಾವ ಯಾವ ಸನ್ನಿವೇಶಗಳಲ್ಲಿ ತಂದೆ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿರಬೇಕು. ಅದಕ್ಕಾಗಿ ಈ ಅಂಕಣದಲ್ಲಿ ಕಾನೂನಿನ ಬಗ್ಗೆ ಕೆಲ ಪ್ರಮುಖ ವಿಷಯಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತಿದ್ದೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಕೂಡು ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹುಟ್ಟಿದಾಗಲಿಂದಲೇ ಹಕ್ಕು ಇರುತ್ತದೆ. ಒಬ್ಬ ತಂದೆಯು ಅವರ ಸ್ವಾಧೀನದಲ್ಲಿರುವ ಆಸ್ತಿಯನ್ನು ಅವರ ತಂದೆ ಅಥವಾ ತಾತನಿಂದ ಪಡೆದಿದ್ದರೆ ಅಂತಹ ಆಸ್ತಿಗಳಲ್ಲಿ ಹೆಣ್ಣು ಮಕ್ಕಳಿಗೆ ಮನೆಯಲ್ಲಿರುವ ಗಂಡು ಮಕ್ಕಳಷ್ಟೇ ಸಮಾನ ಉತ್ತರಾಧಿಕಾರದ ಹಕ್ಕು ಇರುತ್ತದೆ.

ಆದರೆ ಹೆಣ್ಣು ಮಗಳ ತಂದೆಯು ತನ್ನ ಜೀವಿತಾವಧಿಯಲ್ಲಿ ಸ್ವಂತ ದುಡಿಮೆಯಿಂದ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅದು ಅವರ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ ಅಂತ ಆಸ್ತಿಯನ್ನು ಅವರು ಯಾವುದೇ ಅವರ ಇಷ್ಟದ ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಅಥವಾ ಇನ್ನಾರಿಗಾದರೂ ಕೊಡಬಹುದು. ಹಾಗಾಗಿ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಅವರ ಜೀವತಾವಧಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇದೆ ಎಂದು ಹೇಳಲು ಬರುವುದಿಲ್ಲ.

ಕೋರ್ಟಿನಲ್ಲಿ ಕೇಸ್ ಹಾಕಿ ಆಸ್ತಿ ಕೇಳುವ ಅವಕಾಶವೂ ಇರುವುದಿಲ್ಲ. ಇದೇ ನಿಯಮ ಗಂಡು ಮಕ್ಕಳಿಗೂ ಕೂಡ ಅನ್ವಯಿಸುತ್ತದೆ. ಇದರ ಜೊತೆಗೆ ಅವಿಭಜಿತ ಕುಟುಂಬದಲ್ಲಿ ತಂದೆಯ ಆಸ್ತಿಯು ಕುಟುಂಬದ ಸದಸ್ಯರ ನಡುವೆ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಹೆಣ್ಣು ಮಕ್ಕಳು ತಮಗಿರುವ ಪಾಲನ್ನು ಪ್ರೀತಿ ವಿಶ್ವಾಸಕ್ಕಾಗಿ ಅಣ್ಣನ ತಮ್ಮನಿಗೆ ಬಿಟ್ಟುಕೊಟ್ಟಿದ್ದರೆ ಆಸ್ತಿಯ ಹಕ್ಕಿನ ಮೇಲಿರುವ ವರ್ಗಾವಣೆಯನ್ನು ರಿಲೀಸ್ ಡೀಡ್ ಮಾಡುವ ಮೂಲಕ ಬಿಡುಗಡೆ ಮಾಡಿಕೊಟ್ಟಿದ್ದರೆ.

ಅಥವಾ ಆಸ್ತಿಗೆ ಸಮಾನವಾದ ಬೇರೊಂದು ಆಸ್ತಿಯನ್ನು ಉಡುಗೊರೆ ರೂಪದಲ್ಲಿ ಪಡೆದು ಹಕ್ಕು ಪತ್ರ ಬಿಡುಗಡೆ ಮಾಡಿ ಕೊಟ್ಟಿದ್ದರೆ ಅಂತಹ ಸಮಯದಲ್ಲೂ ಕೂಡ ಮರಳಿ ಅವರು ತಮ್ಮ ಪಾಲಿನ ಆಸ್ತಿಯನ್ನು ಕೇಳಲು ಬರುವುದಿಲ್ಲ. 2005ಕ್ಕೂ ಮೊದಲೇ ಆಸ್ತಿ ಪಾರ್ಟಿಷನ್ ಆಗಿದ್ದರೆ ಕುಟುಂಬ ಸದಸ್ಯರ ನಡುವೆ ತಂದೆ ಆಸ್ತಿಯು ವಿಭಾಗ ಆಗಿ ಹೋಗಿದ್ದರೆ ಈಗ ಅದರ ಮೇಲೆ ಹೆಣ್ಣು ಮಕ್ಕಳು ಕೇಸ್ ಹಾಕಿ ಆಸ್ತಿ ಕೇಳಲು ಆಗುವುದಿಲ್ಲ.

2005ಕ್ಕೂ ಮೊದಲು ತಂದೆಯ ಆಸ್ತಿಯು ಅಣ್ಣ ತಮ್ಮಂದಿರಗಳ ನಡುವೆ ವಿಭಾಗವಾಗಿ ಈಗ ಅವರ ಹೆಸರಿನಲ್ಲಿ ಅದು ರಿಜಿಸ್ಟರ್ ಕೂಡ ಆಗಿ ಹೋಗಿದ್ದರೆ, ಮತ್ತು ಆಗ ವಿಭಾಗ ಆಗುವ ಸಮಯದಲ್ಲಿ ಹೆಣ್ಣು ಮಕ್ಕಳು ಬಾಯಿಮಾತಿನಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಕೂಡ ಈಗ ಅದನ್ನು ತಿರುಗಿಸುವಂತಿಲ್ಲ. ಈಗ ಅದರ ಮೇಲೆ ಅವರು ಕೇಸ್ ಹಾಕಿದರೂ ಕೂಡ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಹಾಗಾಗಿ ಈ ರೀತಿ ಯಾವುದಾದರೂ ಕಾನೂನಿನ ತೊಡಕು ನಿಮಗೆ ಉಂಟಾಗಿದ್ದರೆ ನಿಮ್ಮ ಪರಿಚಯದ ವಕೀಲರನ್ನು ಸಂಪರ್ಕಿಸುವ ಮೂಲಕ ಸಮಸ್ಯೆಯ ಬಗ್ಗೆ ಚರ್ಚಿಸಿ, ನಂತರ ಕಾನೂನಿನ ನೆರವು ಪಡೆದುಕೊಳ್ಳಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

Leave a Comment