ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಂಬಂಧಗಳು ಕೂಡ ಹಣ ಆಸ್ತಿಗೆ ಮೀಸಲಾಗಿವೆ ಎಂದು ಭಾವಿಸುವಷ್ಟು ಎಲ್ಲ ಸಂಬಂಧಗಳು ತೀರಾ ಹಳಸಿವೆ. ಮುಖ್ಯವಾಗಿ ಹಣ ಮತ್ತು ಸಾ’ಲ’ದ ವಿಚಾರವಾಗಿಯೇ ಸಂಬಂಧಿಕರ ನಡುವೆ ರಕ್ತ ಸಂಬಂಧದ ನಡುವೆ ವೈ ಮನಸ್ಸು ಉಂಟಾಗುತ್ತಿದೆ. ಕಾನೂನಿನ ಪ್ರಕಾರ ಒಂದು ಅವಿಭಜಿತ ಕುಟುಂಬದಲ್ಲಿ ಯಾರ್ಯಾರಿಗೆ ಯಾವ್ಯಾವ ಹಕ್ಕು ಹಾಗೂ ಹೊಣೆಗಾರಿಕೆ ಇರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದು ಕೊಂಡಿರಲೇಬೇಕು.
ಇದನ್ನು ಅರಿತುಕೊಂಡು ಅದರ ಪ್ರಕಾರ ನಡೆದುಕೊಂಡಾಗ ಸಮಸ್ಯೆ ಸುಧಾರಿಸಬಹುದು. ಅದಕ್ಕಾಗಿ ಈ ಅಂಕಣದಲ್ಲಿ ಅದೇ ರೀತಿಯ ಒಂದು ವಿಷಯದ ಬಗ್ಗೆ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ತಂದೆಯ ಆಸ್ತಿ ಪಡೆದ ಮೇಲೆ ಆತನ ಸಾಲದಲ್ಲೂ ಕೂಡ ಮಕ್ಕಳು ಹೊಣೆಗಾರರಾಗುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಉದಾಹರಣೆಗೆ ಹೇಳುವುದಾದರೆ ಒಬ್ಬ ತಂದೆಗೆ ಇಬ್ಬರು ಹೆಂಡತಿಯರು ಇರುತ್ತಾರೆ. ಮೊದಲ ಹೆಂಡತಿಗೆ ಒಬ್ಬ ಗಂಡು ಮಗ ಹಾಗೂ ಎರಡನೇ ಹೆಂಡತಿಗೆ ಒಬ್ಬ ಗಂಡು ಮಗ ಇರುತ್ತಾರೆ. ಈಗ ತಂದೆ ತೀ’ರಿ’ಕೊಂಡ ಬಳಿಕ ಆತನ ಆಸ್ತಿಯು, ಇಬ್ಬರ ಪಾಲಾಗುತ್ತದೆ ಆದರೆ ತಂದೆ ಕೈ ಸಾಲ ಮಾಡಿಕೊಂಡಿರುವುದರಿಂದ ಹೆಚ್ಚಿನ ಜನರು ಮೊದಲ ಹೆಂಡತಿ ಹಾಗೂ ಮೊದಲ ಹೆಂಡತಿಯ ಮಗನೇ ಹಿರಿಯನಾಗಿರುವುದರಿಂದ ತಂದೆ ಸಾ’ಲ ತೀರಿಸುವಂತೆ ಒತ್ತಡ ಹೇರುತ್ತಾರೆ.
ಹಾಗಾದರೆ ಎರಡನೇ ಹೆಂಡತಿಯ ಮಗನು ನನಗೆ ಏನು ಗೊತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಬಹುದೇ ಇಂತಹ ಪ್ರಶ್ನೆ ಅಥವಾ ಇಂತಹ ಸಮಸ್ಯೆ ಖಂಡಿತವಾಗಿಯೂ ಸಾಕಷ್ಟು ಕಡೆ ಎದುರಾಗಿರುತ್ತದೆ. ಆದರೆ ಈ ಬಗ್ಗೆ ಕಾನೂನು ಈ ರೀತಿ ಹೇಳುತ್ತದೆ. ತಂದೆ ಮಾಡಿದ ಸಾ’ಲ’ವನ್ನು ತೀರಿಸುವುದು ಹೊಣೆಗಾರಿಕೆ ಮಾತ್ರ ಅಲ್ಲದೇ ನೈತಿಕತೆಯೂ ಕೂಡ ಹೌದು.
ಆ ವ್ಯಕ್ತಿ ಅಥವಾ ಆ ತಂದೆ ಸ’ತ್ತ ಬಳಿಕ ಆತನ ಪಾಲಿನಲ್ಲಿ ಇದ್ದ ಆಸ್ತಿಯನ್ನು ಯಾರು ಭಾಗ ಮಾಡಿಕೊಳ್ಳುತ್ತಾರೋ ಆ ವಾರಸುದಾರರೆಲ್ಲರೂ ಕೂಡ ಆತ ಮಾಡಿದ ಸಾ’ಲದ ಋಣಕ್ಕೂ ಹೊಣೆಗಾರರಾಗಿರುತ್ತಾರೆ. ತಂದೆಯು ನಿ’ಧ’ನ ಹೊಂದಿದ ಬಳಿಕ ಆ ಆಸ್ತಿಯ ಹಕ್ಕು ಇಬ್ಬರು ಹೆಂಡತಿಗೆ ಹಾಗೂ ಇಬ್ಬರು ಹೆಂಡತಿರ ಮಕ್ಕಳಿಗೂ ಇದ್ದೇ ಇರುತ್ತದೆ.
ಹಾಗಾಗಿ ಅವರೆಲ್ಲರೂ ಕೂಡ ಆ ವ್ಯಕ್ತಿಯು ಮಾಡಿದ್ದ ಸಾಲಕ್ಕೂ ಕೂಡ ಹೊಣೆಗಾರರಾಗಿರುತ್ತಾರೆ, ಯಾವುದೇ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಅವಕಾಶ ಖಂಡಿತ ಇರುವುದಿಲ್ಲ. ಒಂದು ವೇಳೆ ಅವರು ಆಸ್ತಿಯ ಮೇಲಿನ ಅಧಿಕಾರ ಬೇಡ ಎನ್ನುವುದಾದರೆ ಅಥವಾ ತಂದೆಯಿಂದ ಬರಬೇಕಾದ ಆಸ್ತಿಯನ್ನು ಪಡೆದುಕೊಳ್ಳದೆ ಹೋದರೆ ಆಗ ಆ ಸಾಲದ ಹೊಣೆಗಾರಿಕೆ ಬರುವುದಿಲ್ಲ.
ಇಬ್ಬರು ಮಕ್ಕಳು ಕೂಡ ಆಸ್ತಿಯನ್ನು ಸಮಾನವಾಗಿ ಹಂಚಿಕೊಂಡಾಗ ಅದೇ ರೀತಿ ಹೊಣೆಗಾರಿಕೆಯನ್ನು ಕೂಡ ಸಮಾನವಾಗಿ ಹಂಚಿಕೊಂಡು ತಂದೆ ಮಾಡಿದ್ದ ಸಾಲವನ್ನು ತೀರಿಸಬೇಕಾಗುತ್ತದೆ ಎಂದು ಕಾನೂನು ಹೇಳುತ್ತದೆ. ಕುಟುಂಬದಲ್ಲಿ ಮೊದಲಿಗೆ ಕುರಿತು ಮಾತನಾಡಿ ಇದರ ನಿರ್ಧಾರ ತೆಗೆದುಕೊಳ್ಳಬಹುದು ಬಳಿಕ ಅದಕ್ಕೆ ಸಂಬಂಧಪಟ್ಟ ಕ್ರಮ ಕೈಗೊಳ್ಳಬೇಕು.
ಅಥವಾ ಈ ವಿಚಾರದ ಬಗ್ಗೆ ಇನ್ನೂ ಗೊಂದಲಗಳಿದ್ದರೆ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಮಾಹಿತಿ ಪಡೆಯಬಹುದು ಅಥವಾ ಪರಿಚಯದ ವಕೀಲರ ಬಳಿ ಕೇಳಿ ಕಾನೂನಿನ ಸಲಹೆ ತೆಗೆದುಕೊಳ್ಳಬಹುದು. ಈ ರೀತಿ ಕಾನೂನಿನಲ್ಲಿ ಎಲ್ಲಾ ತೊಡಕಿಗೂ ಕೂಡ ಪರಿಹಾರ ಇದ್ದೇ ಇದೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.