ಪುನೀತ್ ರಾಜಕುಮಾರ್ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸು ತುಂಬಾ ಭಾರವಾಗಿ ಬಿಡುತ್ತದೆ ಯಾಕೆಂದರೆ ಚಿಕ್ಕ ವಯಸ್ಸಿನಿಂದಲೂ ಸಹ ತಮ್ಮ ಅದ್ಭುತ ನಟನೆಯಿಂದ ಕನ್ನಡಿಗರ ಎಲ್ಲರ ಮನಸ್ಸನ್ನು ಗೆದ್ದಿದ್ದರು ಅಪ್ಪು, ಈಗಲೂ ಸಹ ತಮ್ಮ ಅಮೋಘ ನಟನೆಯಿಂದ ಮತ್ತು ಉತ್ತಮ ಆದರ್ಶ ಪೂರ್ಣ ವ್ಯಕ್ತಿತ್ವದಿಂದ ಎಲ್ಲರ ಮನಸಲ್ಲೂ ಮನೆ ಮಾಡಿದ್ದರು. ಉತ್ತಮ ಸಂದೇಶವುಳ್ಳ ಸಿನಿಮಾಗಳ ಮೂಲಕ ಹಾಗೂ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಮನೆಮನೆಗಳನ್ನು ಅಪಾರ ಸಂಖ್ಯೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರ ಅಭಿಮಾನಿಗಳು ಆಗಿದ್ದರು. ಅಪ್ಪು ಅವರು ಚಿಕ್ಕವಯಸ್ಸಿನಲ್ಲಿಯೇ ಅವರ ತಂದೆಯ ಜೊತೆ ನಟಿಸಲು ಶುರು ಮಾಡಿ ತುಂಬಾ ಅದ್ಭುತವಾದ ಭಕ್ತ ಪ್ರಹ್ಲಾದ, ಯಾರಿವನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಾಗ್ಯವಂತ ಇನ್ನು ಮುಂತಾದ ಸಿನಿಮಾಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿದ್ದರು.
ಬೆಟ್ಟದ ಹೂವು ಸಿನಿಮಾದ ಉತ್ತಮ ಅಭಿನಯಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ಪುನೀತ್ ರಾಜಕುಮಾರ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅಭಿನಯ ಮಾತ್ರವಲ್ಲದೆ ಡ್ಯಾನ್ಸಿಂಗ್ ಅಲ್ಲಿ ಕೂಡ ಅಪ್ಪು ಅವರ ಮುಂದೆ ಯಾರೂ ಇರಲಿಲ್ಲ ಎನ್ನುವಷ್ಟು ಮಟ್ಟಿಗೆ ಡ್ಯಾನ್ಸಿಂಗ್ ಹಾಗೂ ದೇಹವನ್ನು ದಂಡಿಸುವ ಅಭ್ಯಾಸಗಳಲ್ಲಿ ನಿರತರಾಗಿದ್ದರು. ಆದರೆ ಇಷ್ಟು ಆರೋಗ್ಯಕರ ಜೀವನ ನಡೆಸುತ್ತಿದ್ದ ಪುನೀತ್ ಅವರು ಹೃದಯಾಘಾತದಿಂದ ನಿ’ಧ’ನ’ರಾಗಿದ್ದಾರೆ ಎನ್ನುವ ಸುದ್ದಿಯನ್ನು ಮಾತ್ರ ಇಂದಿಗೂ ಕರುನಾಡಿನ ಜನತೆಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಕಳೆದು ಆರು ತಿಂಗಳು ಮುಗಿದರೂ ಸಹ ಅಂದಿನಿಂದ ಇವತ್ತಿನ ತನಕ ಅಪ್ಪು ಅವರ ಜಪ ಮಾತ್ರ ಕಡಿಮೆಯಾಗಿಲ್ಲ. ನೀವು ಯಾವುದೇ ಊರಿನ ಹಬ್ಬಗಳಿಗೆ ಹೋದರೂ ಅಲ್ಲಿ ಅಪ್ಪು ಮೆರವಣಿಗೆಯು ಸಹ ನಡೆಯುತ್ತಿರುತ್ತದೆ. ಯಾವುದೇ ಊರಿಗೆ ಪ್ರಯಾಣ ಮಾಡಿದರು ದಾರಿಯುದ್ದಕ್ಕೂ ಅವರಿಗೆ ಶ್ರ’ದ್ಧಾಂ’ಜ’ಲಿಯನ್ನು ಸಲ್ಲಿಸಿರುವ ಪೋಸ್ಟರ್ ಗಳನ್ನು ನೋಡುತ್ತೇವೆ.
ಇನ್ನೂ ರಥೋತ್ಸವಗಳು ನಡೆಯುವ ಜಾಗದಲ್ಲೊಂದು ಅಪ್ಪು ಮರಳಿ ಹುಟ್ಟಿ ಬರಲೆಂದು ಬಾಳೆಹಣ್ಣಿನ ಮೇಲೆ ಬರೆಯುವವರ ಸಂಖ್ಯೆಯನ್ನು ಕಡಿಮೆ ಇಲ್ಲ, ಇವತ್ತಿಗೂ ಸಹ ಲಕ್ಷಾಂತರ ಜನರ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಅಪ್ಪು ಅವರ ಫೋಟೋಗಳು ಹಾಗೂ ಅವರ ವಿಡಿಯೋಗಳನ್ನು ಸ್ಟೇಟಸ್ ಹಾಕಿ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯಕ್ಕೆ ಪ್ರತಿಯೊಂದು ಸಿಟಿಯಲ್ಲೂ ಸಹ ಪುನೀತ್ ರಾಜಕುಮಾರ್ ಅವರ ಹೆಸರನ್ನು ರಸ್ತೆಗಳಿಗೆ ಇಟ್ಟು ಗೌರವ ಸಲ್ಲಿಸುತ್ತಿದ್ದರೆ ಹಾಗೂ ಈ ಮೂಲಕ ಅವರ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಅದೆಷ್ಟೋ ಸರ್ಕಲ್ ಗಳಲ್ಲಿ ಪುನೀತ್ ರಾಜಕುಮಾರ್ ಅವರ ಸ್ಟ್ಯಾಚು ನಿಂತಿದೆ ಅವರು ನಿ’ಧ’ನ ಹೊಂದಿದ ದಿನದಿಂದ ಹಿಡಿದು ಇವತ್ತಿನ ತನಕವೂ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಲೆಕ್ಕವಿಡಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ದಾಖಲೆಯಾಗಿದೆ. ಇನ್ನು ವಿವಿಧ ರೀತಿಯಲ್ಲಿ ಅಪ್ಪು ಅವರ ಮೇಲಿನ ಅಭಿಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ ರಾಜ್ ಕುಮಾರ್ ಅವರಿಗೆ ಮ’ರ’ಣೋ’ತ್ತ’ರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇದಕ್ಕೆ ಕಾರಣ ಅವರು ನೀಡಿರುವ ಕಲಾಸೇವೆ ಹಾಗೂ ಸಮಾಜ ಸೇವೆ ಪುನೀತ್ ಅವರನ್ನು ಸಿನಿಮಾದಲ್ಲಿ ನೋಡಿ ಇಷ್ಟಪಡುತ್ತಿದ್ದ ಸಂಖ್ಯೆ ಎಷ್ಟಿತ್ತು ಅದಕ್ಕಿಂತಲೂ ಹೆಚ್ಚಾಗಿ ಅವರ ಸಮಾಜಸೇವೆಯನ್ನು ನೋಡಿ ಜನ ಅವರನ್ನು ಮೆಚ್ಚಿಕೊಂಡಿದ್ದರು. ಅವರು ಮಾಡಿದ ಸಮಾಜಸೇವೆಗೆ ಲೆಕ್ಕವೇ ಇಲ್ಲ ಹಾಗೂ ಅವರು ಅದಕ್ಕಾಗಿ ಎಲ್ಲಿಯೂ ಪ್ರಚಾರ ಕೂಡ ಪಡೆದಿಲ್ಲ ಎಂದೇ ಹೇಳಬಹುದು. ಈಗ ಅವರ ಕುಟುಂಬದ ಎಲ್ಲಾ ಸದಸ್ಯರೂ ಕೂಡ ಅಪ್ಪು ಅವರ ದಾರಿಯಲ್ಲಿ ಸಾಗುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಆಸೆ ಪಡುತ್ತಿದ್ದ ರೀತಿ ಅವರ ಕುಟುಂಬವು ಸಹಾ ಸಮಾಜ ಸೇವೆಯಲ್ಲಿ ತೊಡಗುವ ನಿರ್ಧಾರ ಮಾಡಿದೆ. ಅದರಲ್ಲಿ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಪತ್ನಿಯಾದ ಅಶ್ವಿನಿ ಅವರು ಮೊದಲಿನಿಂದಲೂ ಪ್ರಚಾರದಿಂದ ಹಾಗೂ ಮಾಧ್ಯಮಗಳಿಂದ ದೂರವೇ ಉಳಿದಿದ್ದರು.
ಅದರೆ ಅವರ ಪತಿಯ ಎಲ್ಲಾ ಕೆಲಸಗಳಿಗೆ ಬೆನ್ನ ಹಿಂದೆ ದೊಡ್ಡ ಶಕ್ತಿಯಾಗಿ ನಿಂತಿದ್ದರು ಈಗ ಪುನೀತ್ ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಅವರೇ ಪುನೀತ್ ಅವರ ಕನಸುಗಳನ್ನು ಮುಂದೆ ನಡೆಸಿಕೊಂಡು ಹೋಗಬೇಕಾಗಿದೆ. ಇದೇ ದಾರಿಯಲ್ಲಿ ಸಾಗುತ್ತಿರುವ ಅಶ್ವಿನಿ ಅವರು ಮೊನ್ನೆಯಷ್ಟೇ ಡಾಕ್ಟರ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಹುಟ್ಟುಹಬ್ಬದ ದಿನ ಭಾರತಿ ನಗರ ರೆಸಿಡೆನ್ಸ್ ಫೋರಂ ವತಿಯಿಂದ ಬಡ ಮಕ್ಕಳಿಗೆ ಕೇಕು ಹಾಗೂ ಸಿಹಿ ತಿಂಡಿಗಳನ್ನು ಹಂಚಿದ್ದಾರೆ. ಈ ಕೆಲಸಕ್ಕೆ ಕೈ ಜೋಡಿಸಿರುವ ಅಶ್ವಿನಿ ಅವರು ಬಡ ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ತಿನಿಸು ಹಂಚಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಮೂಲಕ ಈ ಸಾಮಾಜಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಮತ್ತೊಂದು ಕಡೆ ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ಸಾವಿರಾರು ಮಕ್ಕಳಿಗೆ ಒಳ್ಳೆಯ ಊಟದ ಜೊತೆ ಉತ್ತಮ ಬಟ್ಟೆ, ಪುಸ್ತಕ, ಅವಶ್ಯಕ ಸಾಮಗ್ರಿಗಳ ಜೊತೆ ಸಿಹಿಯನ್ನು ಹಂಚಿದ್ದಾರೆ. ಅಪ್ಪು ಇಲ್ಲದೆ ಇದ್ದರು ಕೂಡ ಅಪ್ಪು ಅವರ ಸ್ಥಾನದಲ್ಲಿ ನಿಂತು ಅಶ್ವಿನಿ ಅವರು ಈ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಸಂತಸದ ವಿಚಾರವಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.