ನಮ್ಮ ಸ್ಯಾಂಡಲ್ ವುಡ್ ಗೆ ಅದು ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಕಳೆದ ಎರಡು ಮೂರು ವರ್ಷಗಳಿಂದಲೂ ಕೂಡ ಉದಯೋನ್ಮುಖ ನಟರು ನಮ್ಮನ್ನು ಬಿಟ್ಟು ಅಗಲಿ ಹೋಗಿರುವಂತಹ ಸಾಕಷ್ಟು ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ನಮ್ಮನ್ನು ಬಿಟ್ಟು ಈಗಾಗಲೇ ಯಾರು ಕಲಾವಿದರು ವಿ’ಧಿ’ವಶರಾಗಿದ್ದಾರೆ ಆದರೆ ಸದಾಕಾಲ ನಮ್ಮ ಮನಸ್ಸಿನಲ್ಲಿ ಕಾಡುತ್ತಿರುವಂತಹ ಕಲಾವಿದರು ಯಾರು ಅಂದರೆ ಅದು ಒಂದು ಚಿರಂಜೀವಿ ಸರ್ಜಾ ಮತ್ತೊಂದು ಪುನೀತ್ ರಾಜಕುಮಾರ್ ಅಂತಾನೆ ಹೇಳಬಹುದು. ಇವರಿಬ್ಬರ ಅಕಾಲಿಕ ಮ’ರ’ಣ ನಿಜಕ್ಕೂ ಕೂಡ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪು ಆಗಲಾರದು. ಅಷ್ಟೇ ಅಲ್ಲದೆ ಅಪ್ಪು ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಬಹುದೊಡ್ಡ ನ’ಷ್ಟ ಅಂತ ಹೇಳಬಹುದು.
ಇಷ್ಟು ಚಿಕ್ಕ ವಯಸ್ಸಿಗೆ ಚಿರು ಹಾಗೂ ಅಪ್ಪು ಅವರು ನಮ್ಮನ್ನು ಬಿಟ್ಟು ಹೋದದ್ದು ನಿಜಕ್ಕೂ ಕೂಡ ಶೋಚನೀಯ ಅಂತಾನೆ ಹೇಳಬಹುದು ನಾವು ಒಂದು ದಿನ ಸಿನಿಮಾದಲ್ಲಿ ಅಥವಾ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಇವರ ಮುಖವನ್ನು ನೋಡಿರುತ್ತೇವೆ ನಮಗೆ ಇಷ್ಟು ನೋ’ವು ದುಃ’ಖ ಆಗುತ್ತೆ ಅಂದರೆ. ಇನ್ನು ಸದಾಕಾಲ ಇವರೊಟ್ಟಿಗೆ ಇದ್ದಂತಹ ಅವರ ಕುಟುಂಬಸ್ಥರು ಆಗಿರಬಹುದು ಅಥವಾ ಇವರು ಆಗಿರಬಹುದು ಅಥವಾ ಅವರ ಬಂಧು ಮಿತ್ರರು ಆಗಿರಬಹುದು ಅವರಿಗೆ ಎಷ್ಟು ನೋ’ವು ಉಂಟಾಗಬಹುದು ಎಂಬುವುದನ್ನು ಒಮ್ಮೆ ಊಹೆ ಮಾಡಿಕೊಂಡು ನೋಡಿ. ಹೌದಲ್ವಾ ಇವರ ಮನಸ್ಥಿತಿಯನ್ನು ನಮ್ಮಿಂದ ಅಳತೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಅಷ್ಟೊಂದು ದುಃ’ಖವನ್ನು ಇವರು ಖಂಡಿತವಾಗಿಯೂ ಕೂಡ ಅನುಭವಿಸುತ್ತಿರುತ್ತಾರೆ.
ಕಳೆದ ತಿಂಗಳಷ್ಟೇ ಜೇಮ್ಸ್ ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದು ಹೋಯಿತು ಆದರೆ ಡಬ್ಬಿಂಗ್ ಮಾತ್ರ ಇನ್ನೂ ಆಗಿರಲಿಲ್ಲ ಆದರೆ ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರು ವಿ’ಧಿ’ವ’ಶರಾಗಿದ್ದಾರೆ. ಆ ಸಮಯದಲ್ಲಿ ಪುನೀತ್ ಅವರ ಸಿನಿಮಾಗೆ ಯಾರು ವಾಯ್ಸ್ ನೀಡುತ್ತಾರೆ ಎಂಬ ಪ್ರಶ್ನೆ ಉಂಟಾಯಿತು. ಅದಕ್ಕೆ ಶಿವಣ್ಣ ಅವರು ಮುಂದೆ ನಿಂತ್ಕೊಂಡು ನಾನೇ ಈ ಸಿನಿಮಾಗೆ ವಾಯ್ಸ್ ನೀಡುತ್ತೇನೆ ಅಂತ ನಿಂತುಕೊಳ್ಳುತ್ತಾರೆ. ಅಪ್ಪು ಅವರು ಇಲ್ಲದೆ ಇದ್ದರೂ ಕೂಡ ಅವರ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಈ ಸಿನಿಮಾ ಬಿಡುಗಡೆಯಾಗಿ ತೆರೆಮೇಲೆ ಕಾಣುವವರೆಗೂ ಕೂಡ ಅಪ್ಪು ಅವರ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯಚಟುವಟಿಕೆಗಳನ್ನು ನಾನೇ ಮಾಡುತ್ತೇನೆ ಅಂತ ಶಿವಣ್ಣ ಅವರು ಮುಂದೆ ನಿಂತುಕೊಂಡು ವಾಯ್ಸ್ ಡಬ್ಬಿಂಗ್ ಮಾಡಿ ಚಿತ್ರವನ್ನು ಕೂಡ ಪ್ರದರ್ಶನ ಮಾಡಿದರು.
ಈ ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಹಿಟ್ ಆಯಿತು ಅಪ್ಪು ಅವರು ಕೊನೆಯ ಬೇರೆ ಬೆಳ್ಳಿತೆರೆಯ ಮೇಲೆ ರಾರಾಜಿಸಿ ಹೋದರು ಈ ಸಿನಿಮಾಗೆ ಜೀವ ನೀಡಿದ್ದು ಅಂದರೆ ಅದು ಶಿವಣ್ಣ ಅವರ ವಾಯ್ಸ್ ಅಂತಾನೆ ಹೇಳಬಹುದು. ಸದ್ಯಕ್ಕೆ ಇದೀಗ ಅಂತಹದೇ ಒಂದು ಮನಕಲಕುವಂತ ಘಟನೆ ನಡೆದಿದೆ ಹೌದು ಚಿರು ಅವರು ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳು ಆಯಿತು ಆದರೂ ಕೂಡ ಅವರ ನೆನಪುಗಳು ನಮ್ಮನ್ನು ಕಾಡುತ್ತಿದೆ. ಅಷ್ಟೇ ಅಲ್ಲದೆ ಅವರು ನಟಿಸಿದ ಯಾವುದೇ ಹಾಡುಗಳನ್ನು ಅಥವಾ ಅವರು ನಟಿಸಿದಂತಹ ಸಿನಿಮಾಗಳನ್ನು ನೋಡಿದರೆ ನಿಜಕ್ಕೂ ಕೂಡ ಬಹಳ ದುಃ’ಖವಾಗುತ್ತದೆ. ಇಂತಹ ಅದ್ಭುತ ಕಲಾವಿದ ಇಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟುಹೋಗಿದ್ದು ನಿಜಕ್ಕೂ ಕೂಡ ಹೇಳಲಾಗದಂತಹ ನೋ’ವು ಅಂತ ಹೇಳಬಹುದು. ಇನ್ನು ಚಿರು ಅವರು ನಮ್ಮೆಲ್ಲ ಎಲ್ಲರನ್ನು ಬಿಟ್ಟು ಹೋಗುವಂತಹ ಸಮಯದಲ್ಲಿ ಮೇಘನಾ ಅವರು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರೂ ಈ ಸಮಯದಲ್ಲಿ ನಿಜಕ್ಕೂ ಕೂಡ ಅವರು ಎದುರಿಸಿದಂತಹ ಸವಾಲನ್ನು ನಾವೆಲ್ಲರೂ ಮೆಚ್ಚಲೇಬೇಕು..
ಮೇಘನಾ ರಾಜ್ ಅವರು ನಿಜಕ್ಕೂ ಕೂಡ ಗಟ್ಟಿಗಿತ್ತಿ ಹೆಂಗಸು ಅಂತನೇ ಹೇಳಬಹುದು ಏಕೆಂದರೆ ಚಿರು ಅವರು ಅಗಲಿದರು ಕೂಡ ಅವರ ನೆನಪಿನಲ್ಲಿ ಇದೀಗ ಅವರ ಮಗನ ಲಾಲನೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಹತ್ತು ವರ್ಷಗಳು ಪ್ರೀತಿ ಮಾಡಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸುತ್ತಾರೆ ಆದರೆ ವಿಧಿಯ ಆಟ ಹೇಗಿದೆ ನೋಡಿ. ಚಿರು ಅವರು ತಮ್ಮ ಮುದ್ದು ಮಗನನ್ನು ನೋಡದೆ ಇಹಲೋಕವನ್ನು ತ್ಯಜಿಸಿದರು ನಿಜಕ್ಕೂ ಕೂಡ ಈ ದಂಪತಿಗಳ ಮೇಲೆ ಯಾವ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಇವರಿಬ್ಬರೂ ಕೂಡ ಸುಖ ಸಂಸಾರ ನೆಡೆಸಬೇಕಾದಂತಹ ಸಂದರ್ಭದಲ್ಲಿ ವಿಧಿ ಚಿರು ಅವರನ್ನು ದೂರ ಮಾಡಿತು. ಇದು ಒಂದುಕಡೆಯಾದರೆ ಮತ್ತೊಂದು ಕಡೆ ಧ್ರುವ ಸರ್ಜಾಗೆ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅಂದರೆ ಬಹಳ ಇಷ್ಟ ಇವರಿಬ್ಬರ ನಡುವೆ ಅವಿನಾಭಾವ ಸಂಬಂಧವಿತ್ತು. ನಿಜ ಹೇಳಬೇಕು ಅಂದರೆ ಇವರಿಬ್ಬರು ಅಣ್ಣ-ತಮ್ಮಂದಿರ ಮಾದರಿಯ ಇರಲಿಲ್ಲ ಪ್ರಾಣಕ್ಕೆ ಪ್ರಾಣ ನೀಡುವಂತಹ ಸ್ನೇಹಿತರಾಗಿದ್ದರು.
ಚಿರು ಅವರ ಅಗಲಿಕೆಯಿಂದಾಗಿ ದೃವಸರ್ಜಾ ಅವರು ಕೂಡ ಬಹಳನೇ ಕುಗ್ಗಿ ಹೋಗಿದ್ದರು ಅಷ್ಟೇ ಅಲ್ಲದೆ ಇವರ ಸಾ’ವಿನ ವಿಚಾರದಿಂದ ಆಚೆ ಬರಲು ಬಹಳಷ್ಟು ದಿನಗಳು ತೆಗೆದುಕೊಂಡರು ದೃವ ನೊಂ’ದು-ಬೆಂ’ದು ಹೋಗಿದ್ದರು. ಇನ್ನು ಚಿರ ಅವರು ವಿ’ಧಿ’ವ’ಶರಾದಂತಹ ಸಮಯದಲ್ಲಿ ಚಿರು ಅವರು ಬಹಳಷ್ಟು ಸಿನಿಮಾದಲ್ಲಿ ನಟನೆ ಮಾಡಲು ಸಹಿಯನ್ನು ಹಾಕಿದ್ದರು. ಆದರೆ ಕೆಲವು ಸಿನಿಮಾದಲ್ಲಿ ಅವರು ನಟನೆ ಮಾಡಲು ಇಲ್ಲದೆ ಇರುವ ಕಾರಣ ಅವರಿಗೆ ಎಲ್ಲ ಹಣವನ್ನು ಹಿಂದಿರುಗಿಸಿ ಕೊಟ್ಟರು ಆದರೆ “ರಾಜಮಾರ್ತಾಂಡ” ಎಂಬ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಆದರೆ ವಾಯ್ಸ್ ಡಬ್ಬಿಂಗ್ ಮಾತ್ರ ಆಗಿರಲಿಲ್ಲ. ಈ ಸಿನಿಮಾ ಇದೀಗ ಬಿಡುಗಡೆ ಮಾಡಬೇಕು ಅಂತ ಚಿತ್ರತಂಡದವರು ಅಂದುಕೊಳ್ಳುತ್ತಾರೆ. ಆದರೆ ಚಿರಂಜೀವಿ ಸರ್ಜಾ ಅವರ ಬದಲಾಗಿ ಅವರಿಗೆ ದ್ವನಿಯನ್ನು ಯಾರು ನೀಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆ ಸಮಯದಲ್ಲಿ ದೃವಸರ್ಜಾ ಅವರು ಮುಂದೆ ನಿಂತುಕೊಂಡು ನಮ್ಮ ಅಣ್ಣನ ಕೊನೆಯ ಸಿನಿಮಾಗೆ ನಾನೇ ವಾಯ್ಸ್ ಅನ್ನು ನೀಡುತ್ತೇನೆ ಅಂತ ಮುಂದೆ ಬರುತ್ತಾರೆ.
ಚಿರು ಮೇಲೆ ಇರುವಂತಹ ಪ್ರೀತಿ ಹಾಗೂ ಅಣ್ಣನ ಕೊನೆಯ ಸಿನಿಮಾಗೆ ಸದಾಕಾಲ ನನ್ನ ಧ್ವನಿ ಇರಬೇಕು ಎಂಬ ಕಾರಣದಿಂದಾಗಿ ಧ್ರುವ ಸರ್ಜಾ ಅವರು ಇಂತಹದೊಂದು ನಿರ್ಧಾರವನ್ನು ಮಾಡಿದರು. ಸದ್ಯಕ್ಕೆ ಚಿರಂಜೀವಿ ಸರ್ಜಾ ಅವರ “ರಾಜ ಮಾರ್ತಾಂಡ” ಚಿತ್ರದ ಸಂಪೂರ್ಣ ವಾಯ್ಸ್ ಡಬ್ಬಿಂಗ್ ಕೆಲಸವನ್ನು ಧೃವ ಸರ್ಜಾ ಅವರೆ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹಳಷ್ಟು ವಾಯ್ಸ್ ಡಬ್ಬಿಂಗ್ ಕೆಲಸವನ್ನು ಮುಕ್ತಾಯ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಧ್ವನಿಯನ್ನು ನೀಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಧ್ಯಕ್ಕೆ ಧೃವ ಅವರು ಅಣ್ಣನಿಗಾಗಿ ವಾಯ್ಸ್ ಡಬ್ಬಿಂಗ್ ಮಾಡುತ್ತಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚಿಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ ನಿಜಕ್ಕೂ ಕೂಡ ಶಿವಣ್ಣ ಹಾಗೂ ಧ್ರುವ ಸರ್ಜಾ ಇಬ್ಬರೂ ಕೂಡ ತುಂಬಾನೇ ಒಳ್ಳೆಯ ಸದ್ಗುಣಗಳನ್ನು ಒಳಗೊಂಡಿರುವಂತಹ ವ್ಯಕ್ತಿ ಅಂತನೇ ಹೇಳಬಹುದು.
ಧ್ರುವ ತನ್ನ ಅಣ್ಣನಿಗಾಗಿ ಶಿವಣ್ಣ ತನ್ನ ತಮ್ಮನಿಗಾಗಿ ಇಂತಹಾ ಕೆಲಸ ಮಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಎಲ್ಲರೂ ಇವರನ್ನು ನೋಡಿ ಕಲಿಯಬೇಕು ಅಂತ ಅನಿಸುತ್ತದೆ. ಏಕೆಂದರೆ ಹುಟ್ಟುತ್ತಾ ಅಣ್ಣತಮ್ಮಂದಿರಾಗಿ ಹುಟ್ಟುತ್ತಾರೆ ಬೆಳೆಯುತ್ತಾ ದಾಯಾದಿಗಳು ಆಗಿ ಕಿತ್ತಾಡುತ್ತಾರೆ ಅಂತಹ ಸಮಾಜದಲ್ಲಿ ಅಣ್ಣತಮ್ಮಂದಿರು ಅಂದರೆ ಹೇಗಿರಬೇಕು ಎಂಬುದಕ್ಕೆ ಇವರು ಉತ್ತಮ ಮಾದರಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಧೃವ ಮಾಡುತ್ತಿರುವಂತಹ ಈ ಕೆಲಸ ನಿಮಗೆ ಇಷ್ಟವಾದರೆ ಧೃವ ಎಂದು ನಮಗೆ ತಪ್ಪದೆ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.