ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಅತ್ಯಂತ ಸರಳ ವ್ಯಕ್ತಿತ್ವದ ಸ್ಟಾರ್ ಅಭಿಮಾನಿಗಳ ಹೃದಯದ ಪ್ರೀತಿಯನ್ನೆಲ್ಲ ಪಡೆದ ರಾಜಕುಮಾರ. ಒಬ್ಬ ಸ್ನೇಹಜೀವಿ, ಕನ್ನಡ ಚಲನಚಿತ್ರರಂಗದ ಹೆಮ್ಮೆಯ ಪುತ್ರ, ರಾಜಕುಟುಂಬದ ಕೀರ್ತಿ ಕಳಸ, ನೊಂದವರ ಪಾಲಿನ ದೇವರು, ಮಕ್ಕಳ ಪ್ರೀತಿಯ ಪವರ್ ಸ್ಟಾರ್, ಹಿರಿಯರಿಗೆ ಆತ್ಮೀಯ ಅಪ್ಪು. ಪುನೀತ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಹಾಗೂ ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹ ಮೇರುವ್ಯಕ್ತಿತ್ವ. ಕರ್ನಾಟಕದ ಕೇವಲ ಕೆಲವೇ ಬೆರಳೆಣಿಕೆಯ ಸೆಲೆಬ್ರಿಟಿಗಳಿಗೆ ಮಾತ್ರ ಈ ಪರಿಯ ಅಭಿಮಾನ ದೊರೆತಿರುವುದು. ಇದಕ್ಕೆ ಕಾರಣ ಅಪ್ಪು ಅವರು ದೊಡ್ಮನೆಯ ಮಗ ಎನ್ನುವುದಲ್ಲ, ಬದಲಾಗಿ ಅಪ್ಪು ಅವರು ಮಾಡಿದ ಸಮಾಜಸೇವೆಯೇ ಇಂದು ಅವರಿಗೆ ಇಷ್ಟು ಗೌರವ ಹಾಗೂ ಪ್ರೀತಿ ಅಭಿಮಾನ ಸಿಗುವುದಕ್ಕೆ ಪ್ರಮುಖ ಕಾರಣ.
ಅಷ್ಟು ಒಳ್ಳೆಯ ವ್ಯಕ್ತಿ ಸದಾ ಚಟುವಟಿಕೆಯಿಂದ ಇರುತ್ತಿದ್ದವರು ಡ್ಯಾನ್ಸಿಂಗ್ ನಲ್ಲಂತೂ ಕನ್ನಡದಲ್ಲಿ ಇವರನ್ನು ಮೀರಿಸಿದ ಮತ್ತೊಬ್ಬರಿಲ್ಲ, ನಟನೆಯಲ್ಲಿ ಬಾಲ್ಯದಲ್ಲೇ ರಾಷ್ಟ್ರಪತಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅಪ್ಪ ಅಮ್ಮನ ಮುದ್ದಿನ ಮಗ, ಸಹೋದರ-ಸಹೋದರಿಯ ಪ್ರೀತಿಯ ಮುತ್ತು. ಮಡದಿ ಮಕ್ಕಳ ಪಾಲಿಗಂತೂ ಎಲ್ಲವೂ ಆಗಿದ್ದರು ಮತ್ತು ಅಭಿಮಾನಿಗಳಿಗೆ ಒಂದು ಆದರ್ಶ. ತಾವು ಮಾಡುವ ಸಿನಿಮಾ ಕಥೆಗಳ ಆಯ್ಕೆಯಲ್ಲಿಯೂ ಪ್ರಬುದ್ಧತೆ ತೋರುತ್ತಾ, ತಾವು ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋಗಳಲ್ಲೂ ಕೂಡ ಬಡಜನರ ಸೇವೆಗೆ ಹೆಚ್ಚಿನ ಆದ್ಯತೆ ಮೀಸಲಿಟ್ಟು, ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುತ್ತಿದ್ದ ಅಪ್ಪು ಅನ್ನು ದೇವರು ಒಂದೇ ಒಂದು ಅವಕಾಶವನ್ನು ಕೊಡದೆ ತನ್ನೆಡೆಗೆ ಕರೆದುಕೊಂಡಿದ್ದು ಮಾತ್ರ ಘೋ’ರ ಅ’ನ್ಯಾ’ಯ. ಅಪ್ಪು ಅವರು ಅಷ್ಟು ಚಿಕ್ಕ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ.
ಯಾಕೆಂದರೆ ಜಿಮ್ ವರ್ಕೌಟ್ ವ್ಯಾಯಮ ಡಯಟ್ ಎಂದು ಒಳ್ಳೆಯ ಜೀವನಶೈಲಿಯನ್ನೇ ಅಭ್ಯಾಸ ಮಾಡಿಕೊಂಡು ಬಂದಿದ್ದ ಅಪ್ಪು ಅವರು ದಿಢೀರೆಂದು ಹೃದಯಾಘಾತಕ್ಕೆ ಒಳಗಾದರು. ಅವರು ಸಾ’ಯು’ವ ಹಿಂದಿನ ದಿನವೂ ಸಹ ಗುರುಕಿರಣ್ ಅವರ ಪತ್ನಿಯ ಹುಟ್ಟುಹಬ್ಬಕ್ಕೆ ಹೋಗಿ ನಗುನಗುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೊಡನೆ ಹಾಡುತ್ತ ಕುಣಿಯುತ್ತ ಭಾಗಿಯಾಗಿದ್ದರು. ಅಂತಹ ವ್ಯಕ್ತಿ ದಿಢೀರೆಂದು ಬೆಳಗ್ಗೆ ಸಾವನಪ್ಪಿದ್ದಾರೆ ಎಂದರೆ ಅಭಿಮಾನಿಗಳಿಗೆ ನಂಬಲು ಸಾಧ್ಯವಿಲ್ಲ. ಇನ್ನೂ ಅವರ ಕುಟುಂಬದ ಪರಿಸ್ಥಿತಿ ಅಂತೂ ಹೇಳುವುದೇ ಬೇಡ. ಪುನೀತ್ ರಾಜ್ ಕುಮಾರ್ ಅವರು ಅವರ ತಂದೆ-ತಾಯಿ ಇದ್ದ ದಿನದಿಂದಲೂ ಕೂಡ ಕುಟುಂಬವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರ ಎಲ್ಲ ಸಹೋದರ-ಸಹೋದರಿ ಎಂದರೆ ಅಪ್ಪುವಿಗೆ ತುಂಬಾ ಪ್ರೀತಿ. ಅವರಿಗೂ ಅಷ್ಟೇ ಅಪ್ಪು ಅವರು ಕೊನೆಯ ಮಗನಾದ ಕಾರಣ ಎಲ್ಲರಿಗಿಂತ ತುಂಬಾ ಚಿಕ್ಕವರು ಆಗಿದ್ದರು ಹೀಗಾಗಿ ಅವರೆಲ್ಲರೂ ಪುನೀತ್ ಅವರನ್ನು ಮಗನೆಂದೇ ಭಾವಿಸುತ್ತಿದ್ದರು.
ಪುನೀತ್ ರಾಜಕುಮಾರ್ ಅವರ ಮದುವೆ ವಿಷಯಕ್ಕೆ ಬರುವುದಾದರೆ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ರಾಜಕುಮಾರ್ ಅವರಿಗೂ ಜಿಮ್ ಗೂ ಯಾವುದೋ ಅನುಬಂಧ ಇರಬೇಕು. ಹೀಗಾಗಿ ಅವರ ಜೀವನದಲ್ಲಿ ಜಿಮ್ ತುಂಬಾನೇ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಪುನೀತ್ ಅವರ ಪ್ರೇಮ ಕಥೆಯಲ್ಲಿ ಕೂಡ ಜಿಮ್ ಒಂದು ಭಾಗ. ಏಕೆಂದರೆ ಪುನೀತ್ ಅವರು ಯಾವ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಿದ್ದರೋ ಅಶ್ವಿನಿ ಅವರು ಕೂಡ ಅದೇ ಜಿಮ್ಗೆ ಬರುತ್ತಿದ್ದರು. ಹೀಗಾಗಿ ಅಲ್ಲಿಂದಲೇ ಅವರಿಬ್ಬರ ಸ್ನೇಹ ಶುರುವಾಗಿತ್ತು ನಂತರ ಆ ಸ್ನೇಹವು ಪ್ರೀತಿಯಾಗಿ ಬದಲಾಗಲು ಹೆಚ್ಚಿನ ದಿನ ಬೇಕಾಗಲಿಲ್ಲ. ಒಂದು ದಿನ ಪುನೀತ್ ಅವರು ತಮ್ಮ ಪ್ರೇಮ ನಿವೇದನೆಯನ್ನು ಅಶ್ವಿನಿ ಅವರಿಗೆ ಮಾಡಿಬಿಟ್ಟರು. ಅಲ್ಲಿಂದ ಎಲ್ಲಾ ಪ್ರೇಮಕಥೆಗಳಲ್ಲೂ ಇರುವಂತೆ ಇದರ ಪ್ರೇಮಕಥೆಯಲ್ಲೂ ಕೂಡ ಯಾವ ಸಿನಿಮಾ ಕಥೆಗಳಲ್ಲೂ ಇರದಷ್ಟು ಟ್ವಿಸ್ಟ್ ಗಳು ಆರಂಭವಾದವು.
ತುಂಬಾ ಯೋಚಿಸಿ ಕೊನೆಗೊಂದು ದಿನ ಒಪ್ಪಿಕೊಂಡ ಅಶ್ವಿನಿ ಅವರು ಅವರ ಕುಟುಂಬದಲ್ಲಿ ಈ ವಿಷಯ ತಿಳಿಸಿದಾಗ ಕುಟುಂಬಸ್ಥರು ಒಪ್ಪಲಿಲ್ಲವಂತೆ. ಹೀಗಾಗಿ 1999ರಲ್ಲಿ ಈ ವಿಷಯ ಬಹಳ ಸುದ್ದಿಯಾಗಿತ್ತು. ನಂತರ ಪುನೀತ್ ಕುಟುಂಬದವರು ಹೋಗಿ ಅಶ್ವಿನಿ ಅವರ ಕುಟುಂಬದ ಮನವೊಲಿಸಿದರಂತೆ. ಕೊನೆಗೆ ಹಿರಿಯರೆಲ್ಲರ ಸಮ್ಮುಖದಲ್ಲಿ ಅಶ್ವಿನಿ ಮತ್ತು ಪುನೀತ್ ಅವರ ವಿವಾಹವು ಡಿಸೆಂಬರ್ 1, 1999ರಲ್ಲಿ ಜರುಗಿತು. ಇದಾದ ನಂತರವೇ ಪುನೀತ್ ಅವರು ಮತ್ತೆ ಸಿನಿಮಾರಂಗವನ್ನು ಪ್ರವೇಶಿಸಿದ್ದು. ಇನ್ನು ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರ ನಡುವೆ ತುಂಬಾ ಒಳ್ಳೆಯ ಬಾಂಧವ್ಯವಿದ್ದು ಯಾವ ಒಂದು ಚಿಕ್ಕ ಗಾಸಿಪ್ ಕೂಡ ಮಾಡಿಕೊಳ್ಳದಂತೆ ಆದರ್ಶ ಜೀವನ ನಡೆಸಿದ್ದರು. ಪುನೀತ್ ರಾಜಕುಮಾರ್ ಅವರ ಎಲ್ಲಾ ಕೆಲಸಗಳನ್ನು ಕೂಡ ಅಶ್ವಿನಿ ಅವರ ತುಂಬಾ ಸಪೋರ್ಟ್ ಆಗಿದ್ದರು. ಇವರಿಬ್ಬರದೂ ಹೆಚ್ಚುಕಡಿಮೆ ಒಂದೇ ರೀತಿಯ ವ್ಯಕ್ತಿತ್ವ ಇಬ್ಬರು ಕೂಡ ಕಷ್ಟದಲ್ಲಿದ್ದವರಿಗೆ ಕರುಣೆ ತೋರುವ ಹೃದಯವಂತರು.
ಇಬ್ಬರೂ ಕೂಡ ಯಾವಾಗಲೂ ಹಸನ್ಮುಖಿ ಗಳು. ಇಬ್ಬರದೂ ತುಂಬಾ ಸರಳ ವ್ಯಕ್ತಿತ್ವ. ಪುನೀತ್ ರಾಜಕುಮಾರ್ ಹೇಗೆ ತಾನೊಬ್ಬ ದೊಡ್ಡ ಸ್ಟಾರ್ ಮಗ ದೊಡ್ಮನೆ ಮಗ ಎನ್ನುವುದನ್ನು ತಲೆಗೆ ಹತ್ತಿಸಿ ಕೊಳ್ಳಲಿಲ್ಲವೋ ಹಾಗೆ ಅಶ್ವಿನಿ ಅವರ ಕೂಡ ಪವರ್ ಸ್ಟಾರ್ ಪುನೀತ್ ಅವರ ಪತ್ನಿ ಅಂತಾಗಲಿ ಅಥವಾ ದೊಡ್ಮನೆ ಸೊಸೆ ಅಂತಾಗಲಿ ಹಮ್ಮುಬಿಮ್ಮು ತೋರಿದವರಲ್ಲ. ಇವರಿಬ್ಬರ ವಯಸ್ಸಿನ ವಿಚಾರಕ್ಕೆ ಬರುವುದಾದರೆ ಅಶ್ವಿನಿ ಅವರು ಪುನೀತ್ ಅವರಿಗಿಂತ ಕೇವಲ ಎರಡು ವರ್ಷ ಚಿಕ್ಕವರು. ಪುನೀತ್ ರಾಜಕುಮಾರ್ ಅವರು ಮಾರ್ಚ್ 17, 1975 ರಲ್ಲಿ ಜನಿಸಿದರೆ, ಅಶ್ವಿನಿ ಅವರು ಮಾರ್ಚ್ 14 1977 ರಲ್ಲಿ ಜನಿಸಿದ್ದಾರೆ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಧೃತಿ ಮತ್ತು ವಂದನ ಎನ್ನುವ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.